For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ನೋಡಿಲ್ಲ ಎಂದ ರಶ್ಮಿಕಾ: ಉಡಾಫೆ ಎಂದ ನೆಟ್ಟಿಗರು

  |

  ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ 'ಕಾಂತಾರ' ಸಿನಿಮಾ ದಾಖಲೆಗಳ ಮೇಲೆ ದಾಖಲೆ ಬರೆಯುತ್ತಿದೆ. ಚಿತ್ರಮಂದಿರದಲ್ಲಿ ಆ ಸಿನಿಮಾವನ್ನು 'ಕೆಜಿಎಫ್ 2' ಗಿಂತಲೂ ಹೆಚ್ಚು ಜನ ಈಗಾಗಲೇ ವೀಕ್ಷಿಸಿದ್ದಾರೆ.

  ಸಿನಿಮಾ ಪ್ರೇಕ್ಷಕರು ಮಾತ್ರವಲ್ಲ, ಸ್ಟಾರ್ ನಟ-ನಟಿಯರು ಸಹ ವೀಕ್ಷಿಸಿ ಸಿನಿಮಾವನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ರಜನೀಕಾಂತ್ ಅಂತೂ ಸಿನಿಮಾಕ್ಕೆ ಫಿದಾ ಆಗಿದ್ದಲ್ಲದೆ, ರಿಷಬ್ ಶೆಟ್ಟಿಯನ್ನು ಮನೆಗೆ ಆಹ್ವಾನಿಸಿ ಸನ್ಮಾನಿಸಿದ್ದಾರೆ.

  ನಟಿ ಕಂಗನಾ ರನೌತ್, ಸೂಪರ್ ಸ್ಟಾರ್ ನಟ ಪ್ರಭಾಸ್, ಧನುಶ್, ಶಿಲ್ಪಾ ಶೆಟ್ಟಿ, ಬಾಲಿವುಡ್‌ನ ಹಲವು ನಟ, ನಿರ್ದೇಶಕರು, ಕನ್ನಡ ಚಿತ್ರರಂಗದ ಬಹುತೇಕ ಸೆಲೆಬ್ರಿಟಿಗಳು ಸಿನಿಮಾವನ್ನು ನೋಡಿದ್ದಾರೆ. ಆದರೆ ಕನ್ನಡತಿಯೇ ಆಗಿರುವ ರಶ್ಮಿಕಾ ಮಾತ್ರ ತಾವಿನ್ನೂ ಸಿನಿಮಾವನ್ನು ನೋಡಿಲ್ಲ ಎಂದಿದ್ದಾರೆ. ರಶ್ಮಿಕಾರ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೆಲವು ನೆಟ್ಟಿಗರು ಇದು ರಶ್ಮಿಕಾರ ಉಡಾಫೆಯ ಪ್ರದರ್ಶನ ಎಂದಿದ್ದಾರೆ.

  'ಕಾಂತಾರ' ನೋಡಿಲ್ಲ ಎಂದ ರಶ್ಮಿಕಾ ಮಂದಣ್ಣ

  'ಕಾಂತಾರ' ನೋಡಿಲ್ಲ ಎಂದ ರಶ್ಮಿಕಾ ಮಂದಣ್ಣ

  ಮುಂಬೈನಲ್ಲಿ ಪಾಪರಾಜ್ಜಿಗಳಿಗೆ ಫೋಸು ನೀಡುತ್ತಿರುವಾಗ ಅದರಲ್ಲೊಬ್ಬ, 'ರಶ್ಮಿಕಾ ನೀವು 'ಕಾಂತಾರ' ನೋಡಿದಿರಾ?' ಎಂದು ಪ್ರಶ್ನೆ ಮಾಡಿದ್ದಾರೆ, ಅದಕ್ಕೆ ತಮ್ಮ ಎಂದಿನ ನಾಟಕೀಯ ಶೈಲಿಯಲ್ಲಿ, 'ಇನ್ನೂ ನೋಡಿಲ್ಲ' ಎನ್ನುತ್ತಾರೆ ಬಳಿಕ 'ನೋಡುತ್ತೇನೆ, ಈಗಿಲ್ಲ, ಬೆಂಗಳೂರಿಗೆ ಹಿಂತಿರುಗಿದ ಮೇಲೆ ನೋಡುತ್ತೇನೆ' ಎಂದು ಸಫಾಯಿ ಕೊಡುವ ಕೆಲಸವನ್ನೂ ಮಾಡಿದ್ದಾರೆ.

  ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ಮೊದಲ ಅವಕಾಶ

  ರಿಷಬ್ ಶೆಟ್ಟಿ ನಿರ್ದೇಶನದ ಸಿನಿಮಾದಲ್ಲಿ ಮೊದಲ ಅವಕಾಶ

  ಅಸಲಿಗೆ ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಸಿನಿಮಾ ಮೂಲಕವೇ ರಶ್ಮಿಕಾ ಮಂದಣ್ಣ ಚಿತ್ರರಂಗ ಪ್ರವೇಶಿಸಿದ್ದು. ನಟಿಗೆ ಮೊದಲ ಅವಕಾಶ ಕೊಟ್ಟಿದ್ದು ರಿಷಬ್ ಶೆಟ್ಟಿಯೇ. ಅವರ ಹೊಸ ಸಿನಿಮಾ 'ಕಾಂತಾರ'ವನ್ನು ದೇಶವೇ ಮೆಚ್ಚಿದೆ. ಸಿನಿಮಾವು ಹೊಸ ಅಲೆ ಎಬ್ಬಿಸಿದೆ. ಸಿನಿಮಾದಲ್ಲಿ ಹೊಸದೇನಿದೆ ಎಂದು ತಿಳಿದುಕೊಳ್ಳುವ ಆದರೆ ಆ ಕುತೂಹಲಕ್ಕಾದರೂ ಸಿನಿಮಾ ರಂಗದವರೇ ಆದ ರಶ್ಮಿಕಾ ಮಂದಣ್ಣ ನೋಡಬೇಕಿತ್ತು. ಅದೂ ಅಲ್ಲದೆ, ಸಿನಿಮಾ ತಮ್ಮ ನೆಲವಾದ ಕರ್ನಾಟಕದ ಸಿನಿಮಾ ಎಂದು ನೆಟ್ಟಿಗರು ಕೆಲವರು ತರಾಟೆಗೆ ತೆಗೆದುಕೊಂಡಿದ್ದಾರೆ.

  ಶೆಟ್ಟಿ ಗ್ಯಾಂಗ್ ಜೊತೆ ರಶ್ಮಿಕಾ ಮುನಿಸು

  ಶೆಟ್ಟಿ ಗ್ಯಾಂಗ್ ಜೊತೆ ರಶ್ಮಿಕಾ ಮುನಿಸು

  ಇನ್ನು ಕೆಲವರು, ಶೆಟ್ಟಿ ಗ್ಯಾಂಗ್‌ ಜೊತೆಗಿನ ಮುನಿಸಿನ ಕಾರಣದಿಂದಾಗಿ ರಶ್ಮಿಕಾ 'ಕಾಂತಾರ' ನೋಡದೇ ಇರಬಹುದು ಎಂದಿದ್ದಾರೆ. ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾರ ಎಂಗೇಜ್‌ಮೆಂಟ್ ಆಗಿದ್ದು, ಆ ಎಂಗೇಜ್‌ಮೆಂಟ್‌ ಅನ್ನು ರಶ್ಮಿಕಾ ಮಂದಣ್ಣ ಮುರಿದುಕೊಂಡಿದ್ದು ಎಲ್ಲ ಗೊತ್ತಿರುವುದೇ. ಆ ಘಟನೆ ನಡೆದಾಗಿನಿಂದಲೂ ರಶ್ಮಿಕಾ, ಶೆಟ್ಟಿ ಗ್ಯಾಂಗ್‌ನಿಂದ ಹೆಚ್ಚು ಅಂತರ ಕಾಯ್ದುಕೊಂಡಿದ್ದಾರೆ. ಅವರನ್ನು ಪ್ರತಿಸ್ಪರ್ಧಿಗಳಂತೆ, ವಿರೋಧಿಗಳಂತೆ ನೋಡುತ್ತಾರೆ ಎಂಬ ಮಾತಿಗೆ ಹಾಗಾಗಿ ಉದ್ದೇಶಪೂರ್ವಕವಾಗಿ ರಶ್ಮಿಕಾ, 'ಕಾಂತಾರ' ಸಿನಿಮಾ ನೋಡಿಲ್ಲ ಎಂದಿದ್ದಾರೆ ಕೆಲವು ನೆಟ್ಟಿಗರು.

  ದೊಡ್ಡ ಸಿನಿಮಾಗಳ ಆಫರ್‌ಗಳು ರಶ್ಮಿಕಾ ಬಳಿ ಇವೆ

  ದೊಡ್ಡ ಸಿನಿಮಾಗಳ ಆಫರ್‌ಗಳು ರಶ್ಮಿಕಾ ಬಳಿ ಇವೆ

  ಯಾರು ನೋಡಲಿ, ನೋಡದೇ ಇರಲಿ 'ಕಾಂತಾರ' ಸಿನಿಮಾ ಸೂಪರ್ ಹಿಟ್ ಆಗಿದೆ. ರಶ್ಮಿಕಾ ಮಂದಣ್ಣ ನಟನೆಯ 'ಗುಡ್ ಬೈ' ಸಿನಿಮಾ ಸಹ 'ಕಾಂತಾರ' ಬಿಡುಗಡೆ ಆದ ತುಸು ಆಸುಪಾಸಿನಲ್ಲೇ ಬಿಡುಗಡೆ ಆಗಿತ್ತು. ಆದರೆ ಹೀನಾಯವಾಗಿ ನೆಲಕಚ್ಚಿತು. ಆದರೂ ರಶ್ಮಿಕಾ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ವಿಜಯ್ ಜೊತೆ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ 'ಮಿಷನ್ ಮಜ್ನು' ಸಿನಿಮಾದಲ್ಲಿ ನಟಿಸಿದ್ದು, ಅದಿನ್ನೂ ಬಿಡುಗಡೆ ಆಗಿಲ್ಲ. ಸ್ಟಾರ್ ನಟ ರಣ್ಬೀರ್ ಕಪೂರ್ ಜೊತೆ 'ಅನಿಮಲ್' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ 'ಪುಷ್ಪ 2' ಹೀಗೆ ಹಲವು ದೊಡ್ಡ ಸಿನಿಮಾಗಳನ್ನು ರಶ್ಮಿಕಾ ಬಾಚಿಕೊಂಡಿದ್ದಾರೆ.

  English summary
  Actress Rashmika Mandanna said she not yet watched super hit Kannada movie Kantara. She said she will watch when she get back to Bengaluru.
  Monday, October 31, 2022, 10:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X