For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಶೆಟ್ಟಿಯ ಈ ಚಿತ್ರಕ್ಕಾಗಿ ಕಾಯ್ತಿದ್ದಾರಂತೆ ರಶ್ಮಿಕಾ ಮಂದಣ್ಣ.!

  |

  'ಕಿರಿಕ್ ಪಾರ್ಟಿ' ಜೋಡಿ ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಇಬ್ಬರು ಲವ್ ಮಾಡಿದ್ದು, ನಂತರ ಎಂಗೇಜ್ ಮೆಂಟ್ ಮಾಡಿಕೊಂಡಿದ್ದು, ಅದಾದ ಬಳಿಕ ನಿಶ್ಚಿತಾರ್ಥ ಮುರಿದುಕೊಂಡಿದ್ದು ಈಗ ಎಲ್ಲವೂ ಹಳೆಯ ಕಥೆ.

  ಸದ್ಯ, ಬರಿ ಸಿನಿಮಾ ಬಗ್ಗೆ ಮಾತ್ರ ಯೋಚನೆ ಮಾಡ್ತಿರುವ ಇವರಿಬ್ಬರು ಅವರದ್ದೇ ಜವಾಬ್ದಾರಿ ಮತ್ತು ಅವರವರ ಚಿತ್ರಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದಾರೆ.

  ರಶ್ಮಿಕಾ ಬಗ್ಗೆ ತೆಲುಗು ದೇಶದಿಂದ ಬಂತು ಎರಡು ಸುದ್ದಿ.! ನಿಜಾನಾ, ಸುಳ್ಳಾ..?

  ಹೀಗಿರುವಾಗ, ರಶ್ಮಿಕಾ ಮಂದಣ್ಣ ಅಚ್ಚರಿಯ ಮಾತನ್ನ ಹೇಳಿದ್ದಾರೆ. ರಕ್ಷಿತ್ ಶೆಟ್ಟಿ ಈ ಚಿತ್ರಕ್ಕಾಗಿ ನಾನು ಕಾಯುತ್ತಿದ್ದೀನಿ ಎಂದು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಶಾಕ್ ನೀಡಿದ್ದಾರೆ. ಅಷ್ಟಕ್ಕೂ, ರಶ್ಮಿಕಾ ಹೀಗೆ ಹೇಳಿದ್ದು ಯಾಕೆ.? ಮುಂದೆ ಓದಿ....

  'ಅವನೇ ಶ್ರೀಮನ್ನಾರಾಯಣ' ನೋಡಬೇಕಂತೆ

  'ಅವನೇ ಶ್ರೀಮನ್ನಾರಾಯಣ' ನೋಡಬೇಕಂತೆ

  ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ 'ಅವನೇ ಶ್ರೀಮನ್ನಾರಾಯಣ' ಚಿತ್ರವನ್ನ ನಟಿ ರಶ್ಮಿಕಾ ಮಂದಣ್ಣ ನೋಡಬೇಕು ಎಂದು ಹೇಳಿದ್ದಾರೆ. ಈ ಚಿತ್ರವನ್ನ ನೋಡುವುದಕ್ಕಾಗಿ ನಾನು ಕಾಯುತ್ತಿದ್ದೀನಿ ಎಂದು ಟ್ವೀಟ್ ಮಾಡಿದ್ದಾರೆ. ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಸಿನಿಮಾ ಇದಾಗಿದ್ದು, 'ಕಿರಿಕ್ ಪಾರ್ಟಿ' ನಂತರ ರಕ್ಷಿತ್ ಅಭಿನಯಿಸಿರುವ ಚಿತ್ರವಿದು.

  ಸ್ವೀಡನ್ ನಲ್ಲೂ 'ಯಜಮಾನ'ನಿಗೆ ಕಾಡಿದ ಕಿಡಿಗೇಡಿಗಳು.!

  ಈ ಮಾತು ಹೇಳಿದ್ದು ರಕ್ಷಿತ್ ಗೆ ಅಲ್ಲ

  ಈ ಮಾತು ಹೇಳಿದ್ದು ರಕ್ಷಿತ್ ಗೆ ಅಲ್ಲ

  ಅಂದ್ಹಾಗೆ, ಇದು ರಕ್ಷಿತ್ ಶೆಟ್ಟಿ ನಟನೆಯ ಸಿನಿಮಾ ಎಂದು ರಶ್ಮಿಕಾಗೂ ಗೊತ್ತು. ಆದ್ರೆ, ಈ ಮಾತನ್ನ ಹೇಳಿದ್ದು ರಕ್ಷಿತ್ ಗೆ ಅಲ್ಲ. ಚಿತ್ರದ ನಿರ್ದೇಶಕ ಸಚಿನ್ ಗೆ. ಸಚಿನ್ ಹುಟ್ಟುಹಬ್ಬದ ಪ್ರಯುಕ್ತ ವಿಶ್ ಮಾಡಿದ ರಶ್ಮಿಕಾ, 'ನಿಮ್ಮ ಅವನೇ ಶ್ರೀಮ್ನನಾರಾಯಣ ಚಿತ್ರವನ್ನ ನೋಡಲು ಕಾಯುತ್ತಿದ್ದೇನೆ'' ಎಂದಿದ್ದಾರೆ.

  ರಕ್ಷಿತ್ - ಮೇಘನಾ ಜೋಡಿ : ಇದು ಸ್ನೇಹನಾ? ಪ್ರೀತಿನಾ?

  ರಕ್ಷಿತ್ ಗೆ ವಿಶ್ ಮಾಡಿ

  ರಕ್ಷಿತ್ ಗೆ ವಿಶ್ ಮಾಡಿ

  ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ. ಅವರ ಸಿನಿಮಾವನ್ನ ನೋಡಲು ಕಾಯುತ್ತಿದ್ದೀರಾ. ಆದ್ರೆ, ಅವರ ಹೆಸರನ್ನ ನೀವು ಹೇಳುವುದಿಲ್ಲ. ಇದು ಸರಿಯಲ್ಲ. ದಯವಿಟ್ಟು ರಕ್ಷಿತ್ ಶೆಟ್ಟಿ ಅವರಿಗೂ ವಿಶ್ ಮಾಡಿ ಎಂದು ಅಭಿಮಾನಿಗಳು ರಶ್ಮಿಕಾಗೆ ಕೇಳುತ್ತಿದ್ದಾರೆ.

  ತೆಲುಗು ನಂತರ ಈಗ ತಮಿಳು ಸೂಪರ್ ಸ್ಟಾರ್ ಜೊತೆ ರಶ್ಮಿಕಾ.!

  'ಯಜಮಾನ'ನ ಜೊತೆ ರಶ್ಮಿಕಾ

  'ಯಜಮಾನ'ನ ಜೊತೆ ರಶ್ಮಿಕಾ

  ತೆಲುಗಿನ 'ಗೀತಾ ಗೋವಿಂದಂ', 'ದೇವದಾಸ್' ಚಿತ್ರಗಳ ನಂತರ ದರ್ಶನ್ ಜೊತೆ 'ಯಜಮಾನ' ಸಿನಿಮಾ ಮಾಡ್ತಿರುವ ರಶ್ಮಿಕಾ, ಸದ್ಯ ಹಾಡಿನ ಚಿತ್ರೀಕರಣಕ್ಕಾಗಿ ಸ್ವೀಡನ್ ಗೆ ಹೋಗಿದ್ದಾರೆ. ಅದಾದ ಬಳಿಕ ತಮಿಳಿನ ವಿಜಯ್ ಜೊತೆಯಲ್ಲಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ಅದು ಎಷ್ಟರ ಮಟ್ಟಿಗೆ ನಿಜ ಎಂಬುದು ಮಾಹಿತಿ ಇಲ್ಲ.

  ಅಂತೂ ಇಂತೂ ರಕ್ಷಿತ್ ಶೆಟ್ಟಿ ಜೊತೆಗಿನ ಬ್ರೇಕಪ್ ಬಗ್ಗೆ ಮೌನ ಮುರಿದ ರಶ್ಮಿಕಾ.!

  English summary
  Kannada actress rashmika mandanna has tweet that 'I can’t wait for Avane srimannarayana release'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X