Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ರಮ್ಯಾನೂ ಇಲ್ಲ.. ರಚಿತಾನೂ ಇಲ್ಲ.. ರಶ್ಮಿಕಾನೇ ನಂಬರ್ 1: ಹೆಂಗೆ ಇದೆಲ್ಲಾ?
2022 ಸ್ಯಾಂಡಲ್‌ವುಡ್ ಮಿಂಚಿದ ಹಾಗೇ ಹೀರೊಗಳು ಕೂಡ ಸೌಂಡು ಮಾಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳು ಹಿಟ್ ಲಿಸ್ಟ್ ಸೇರುತ್ತಿದ್ದಂತೆ ಸ್ಟಾರ್‌ಗಳೆಲ್ಲಾ ಸೂಪರ್‌ಸ್ಟಾರ್ ಪಟ್ಟಕ್ಕೇರಿದ್ದಾರೆ. ಕನ್ನಡ ಹೀರೊಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಶೈನ್ ಆಗುತ್ತಿದ್ದಾರೆ. ಹಾಗಿದ್ದಂತೆ ಹೀರೊಯಿನ್‌ಗಳ ಕಥೆಯೇನು?
ಈ ವರ್ಷದ ಇನ್ನೇನು ಮುಗಿಯುತ್ತಿದೆ. ಕೆಲವೇ ದಿನಗಳಲ್ಲಿ ಹೊಸ ವರ್ಷ ಆರಂಭ ಆಗಲಿದೆ. ಈ ಬೆನ್ನಲ್ಲೇ ಓರ್ಮ್ಯಾಕ್ಸ್ ನವೆಂಬರ್ ತಿಂಗಳು ಸದ್ದು ಮಾಡಿದ ಕನ್ನಡದ ನಟಿಯರ ಪಟ್ಟಿಯನ್ನು ರಿಲೀಸ್ ಮಾಡಿದೆ.
ಓರ್ಮ್ಯಾಕ್ಸ್ ಮೀಡಿಯಾ ಪ್ರತಿ ತಿಂಗಳು ಸಿನಿಮಾಗೆ ಸಂಬಂಧ ಪಟ್ಟ ವಿಷಯದಲ್ಲಿ ಸರ್ವೆ ಮಾಡುತ್ತೆ. ಅದೇ ರೀತಿ ನವೆಂಬರ್ ತಿಂಗಳಲ್ಲಿ ಅತೀ ಹೆಚ್ಚು ಬಾರಿ ಸುದ್ದಿಯಲ್ಲಿದ್ದ ಕನ್ನಡದ ನಟಿಯರ ಪಟ್ಟಿಯನ್ನು ಈ ಸಂಸ್ಥೆ ಬಿಡುಗಡೆ ಮಾಡಿದೆ. ಹಾಗಿದ್ರೆ ಕನ್ನಡದ ಯಾವ್ಯಾವ ನಟಿಯರ ಯಾವ್ಯಾವ ಸ್ಥಾನದಲ್ಲಿ ಇದ್ದಾರೆ ಅನ್ನೋ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.

ರಶ್ಮಿಕಾ ಮಂದಣ್ಣ ನಂ 1
ವರ್ಷವಿಡೀ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದ ನಟಿ ರಶ್ಮಿಕಾ ಮಂದಣ್ಣ. ಅದರಲ್ಲೂ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಕೊಡಗಿನ ಕುವರಿಗೆ ನೆಟ್ಟಿಗರು ಕಿರಿಕಿರಿ ಮಾಡಿದ್ದರು. ರಶ್ಮಿಕಾ ಕೊಟ್ಟ ಒಂದೊಂದು ಹೇಳಿಕೆಯನ್ನು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದರು. ಇಷ್ಟೊಂದು ಟೀಕೆಗೆ ಗುರಿಯಾಗಿದ್ದರೂ, ನವೆಂಬರ್ ತಿಂಗಳಲ್ಲಿ ಅತೀ ಹೆಚ್ಚು ಜನಪ್ರಿಯ ನಟಿಯರ ಪಟ್ಟಿಯಲ್ಲಿ ರಶ್ಮಿಕಾ ಮೊದಲ ಸ್ಥಾನದಲ್ಲಿದ್ದಾರೆ.

ರಮ್ಯಾ ನಂ 2
ಮೋಹಕತಾರೆ ರಮ್ಯಾ ನಂಬರ್ 2 ಸ್ಥಾನದಲ್ಲಿ ಇದ್ದಾರೆ. ಸ್ಯಾಂಡಲ್‌ವುಡ್‌ಗೆ ಮತ್ತೆ ಕಮ್ ಬ್ಯಾಕ್ ಮಾಡಿರುವ ರಮ್ಯಾ ಕಳೆದ ತಿಂಗಳಿಂದಲೇ ಸುದ್ದಿಯಲ್ಲಿದ್ದಾರೆ. 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇ ಡಾಲಿ ಧನಂಜಯ್ ಜೊತೆ 'ಉತ್ತರಕಾಂಡ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ರಮ್ಯಾ ಟಾಪ್ 2 ಸ್ಥಾನದಲ್ಲಿದ್ದಾರೆ.

ರಚಿತಾ ರಾಮ್ ಟಾಪ್ 3
ರಚಿತಾ ರಾಮ್ ಸ್ಯಾಂಡಲ್‌ವುಡ್‌ನ ಬ್ಯುಸಿ ನಟಿಯರಲ್ಲಿ ಒಬ್ಬರು. ಬಿಗ್ ಸ್ಕ್ರೀನ್ ಹಾಗೂ ಸ್ಮಾಲ್ ಸ್ಕ್ರೀನ್ ಎರಡರಲ್ಲೂ ರಚಿತಾ ರಾಮ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಕ್ರಾಂತಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಇದೇ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಇದರೊಂದಿಗೆ ಜೀ ಕನ್ನಡದ ರಿಯಾಲಿಟಿ ಶೋನಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರಚಿತಾ ರಾಮ್ ಟಾಪ್ 3 ಸ್ಥಾನದಲ್ಲಿ ಇದ್ದಾರೆ.

ರಾಧಿಕಾ ಪಂಡಿತ್ ಟಾಪ್ 4
ರಾಧಿಕಾ ಪಂಡಿತ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದೆ ಹಲವು ವರ್ಷಗಳೇ ಕಳೆದಿವೆ. ಆದರೂ, ಜನಪ್ರಿಯತೆ ಮಾತ್ರ ಕಡಿಮೆಯಾಗಿಲ್ಲ. ಸೋಶಿಯಲ್ ಮೀಡಿಯಾಗಳಲ್ಲಿ ಸದಾ ತಮ್ಮ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರುತ್ತಾರೆ. ತಮ್ಮ ಮಕ್ಕಳು ಹಾಗೂ ಪತಿ ಜೊತೆ ಫೋಟೊಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಓರ್ಮ್ಯಾಕ್ಸ್ ಸರ್ವೆ ಪ್ರಕಾರ ರಾಧಿಕಾ ಪಂಡಿತ್ ಟಾಪ್ 4ನೇ ಸ್ಥಾನದಲ್ಲಿದ್ದಾರೆ.

ಶ್ರೀನಿಧಿ ಶೆಟ್ಟಿ ಟಾಪ್ 5
'ಕೆಜಿಎಫ್ 2' ಸಿನಿಮಾ ಮೂಲಕ ವಿಶ್ವದಾದ್ಯಂತ ಸದ್ದು ಮಾಡಿದ ಸಿನಿಮಾ ನಟಿ ಶ್ರೀನಿಧಿ ಶೆಟ್ಟಿ. ಇದೇ ವರ್ಷ ತಮಿಳು ಸಿನಿಮಾ 'ಕೋಬ್ರಾ' ಕೂಡ ರಿಲೀಸ್ ಆಗಿತ್ತು. ತಮಿಳು ನಟ ವಿಕ್ರಮ್ ಜೊತೆ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದರು. ಸದ್ಯ ಹೊಸ ಸಿನಿಮಾವನ್ನು ಅನೌನ್ಸ್ ಮಾಡದೇ ಹೋದರೂ ಶ್ರೀನಿಧಿ ಶೆಟ್ಟಿ ಪಾಪುಲಾರಿಟಿ ಮಾತ್ರ ಕಡಿಮೆಯಾಗಿಲ್ಲ. ನವೆಂಬರ್ ತಿಂಗಳಲ್ಲಿ ಈ ನಟಿ 5ನೇ ಸ್ಥಾನದಲ್ಲಿದ್ದಾರೆ.