For Quick Alerts
  ALLOW NOTIFICATIONS  
  For Daily Alerts

  ಕುಲುಮೆ ಕೆಲಸ ಮಾಡಿ ಅಪ್ಪಯ್ಯಂಗೆ ಸಹಾಯ ಮಾಡುತ್ತಿರುವ ರವಿ ಬಸ್ರೂರ್: ವಿಡಿಯೋ ವೈರಲ್

  |

  ಇಡೀ ವಿಶ್ವವೆ ಕಿಲ್ಲರ್ ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿದೆ. ಕೊರೊನಾ ಅಟ್ಟಹಾಸಕ್ಕೆ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿಯೂ ಕರೊನಾ ಭೀತಿ ಹೆಚ್ಚಾಗಿದ್ದು, ಈಗಾಗಲೆ ಸಾವಿರಕ್ಕು ಹೆಚ್ಚು ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಕೊರೊನಾವನ್ನು ಹೇಗಾದರು ಮಾಡಿ ಬಗ್ಗು ಬಡಿಯುವ ನಿಟ್ಟಿನಲ್ಲಿ ಇಡೀ ಭಾರತ ಲಾಕ್ ಡೌನ್ ಆಗಿದೆ.

  ಏಪ್ರಿಲ್ 14ರ ವರೆಗೂ ಸಂಪೂರ್ಣ ಭಾರತ ಸ್ತಬ್ದವಾಗಿದೆ. ಭಾರತ ಲಾಕ್ ಡೌನ್ ಆಗುತ್ತಿರುವ ಸುದ್ದಿ ಹೊರ ಬೀಳುತ್ತಿದ್ದಂತೆ ಕೆಲಸ ಅರಸಿ ಸಿಟಿಗೆ ಬಂದಿದ್ದ ಅನೇಕರು ತಮ್ಮ ತಮ್ಮ ಊರಿಗೆ ಮರಳಿದ್ದಾರೆ. ಸಿಟಿ ಬಿಟ್ಟು ಹಳ್ಳಿ ಸೇರಿದವರಲ್ಲಿ ಕೆಜಿಎಫ್ ಸಿನಿಮಾದ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕೂಡ ಇದ್ದಾರೆ. ಹೌದು, ಸಂಗೀತ ನಿರ್ದೇಶಕ ರವಿ ಬಸ್ರೂರ್ ಊರು ಸೇರಿ ತಮ್ಮ ಹಳೆಯ ಕುಲುಮೆ ವೃತ್ತಿಯನ್ನು ಮುಂದುವರೆಸಿದ್ದಾರೆ. ಮುಂದೆ ಓದಿ...

  ಸಿನಿಮಾ ಚಟುವಟಿಗಳು ಬಂದ್

  ಸಿನಿಮಾ ಚಟುವಟಿಗಳು ಬಂದ್

  ಲಾಕ್ ಡೌನ್ ಹಿನ್ನಲೆ ಇಡೀ ಭಾರತವೆ ಸ್ತಬ್ದವಾಗಿದೆ. ಹಾಗಾಗಿ ಸಿನಿಮಾ ಚಟುವಟಿಕೆಗಳು ನಡೆಯುತ್ತಿಲ್ಲ. ಚಿತ್ರೀಕರಣ, ಚಿತ್ರ ಪ್ರದರ್ಶನ ಸೇರಿದಂತೆ ಎಲ್ಲಾ ಕೆಲಸಗಳು ಬಂದ್ ಆಗಿವೆ. ಈ ಸಮಯದಲ್ಲಿ ಸ್ಯಾಂಡಲ್ ವುಡ್ ಅನೇಕ ಸಿನಿ ಮಂದಿ ತಮ್ಮ ತಮ್ಮ ಊರುಗಳಿಗೆ ಹೋಗಿ ಕುಟುಂಬದ ಜೊತೆ ಸಮಯ ಕಳೆಯುತ್ತಿದ್ದಾರೆ. ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರ್ ಕೂಡ ಸದ್ಯ ತಮ್ಮ ಊರಿನಲ್ಲಿ ನೆಲೆಸಿ ಹಳೆ ವೃತ್ತಿಯನ್ನು ಮುಂದುವರೆಸಿದ್ದಾರೆ.

  ಹುಟ್ಟೂರಿನಲ್ಲಿ ರವಿ ಬಸ್ರೂರ್ ಕುಲುಮೆ ಕೆಲಸ

  ಹುಟ್ಟೂರಿನಲ್ಲಿ ರವಿ ಬಸ್ರೂರ್ ಕುಲುಮೆ ಕೆಲಸ

  ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಸದ್ಯ ತಮ್ಮ ಹುಟ್ಟೂರಿನಲ್ಲಿ ಕಾಲಕಳೆಯುತ್ತಿದ್ದಾರೆ. ಮೂಲತಹ ಕುಂದಾಪುರದವರಾದ ರವಿ ಬಸ್ರೂರ್ ಸಂಗೀತ ನಿರ್ದೇಶಕರಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಆದರೀಗ ಕೊರೊನಾ ವೈರಸ್ ಅವರನ್ನು ಮರಳಿ ಊರು ಸೇರುವಂತೆ ಮಾಡಿದೆ. ಸಂಗೀತದಿಂದ ಕೊಂಚ ಬ್ರೇಕ್ ಪಡೆದು ಈಗ ತಮ್ಮ ಹಳೆಯ ಕುಲುಮೆ ವೃತ್ತಿಯನ್ನು ಮುಂದುವರೆಸಿದ್ದಾರೆ.

  ಅಪ್ಪಯ್ಯನ ಕೆಲಸಕ್ಕೆ ರವಿ ಬಸ್ರೂರ್ ಸಹಾಯ

  ಅಪ್ಪಯ್ಯನ ಕೆಲಸಕ್ಕೆ ರವಿ ಬಸ್ರೂರ್ ಸಹಾಯ

  ಊರಲ್ಲಿ ಕುಲುಮೆ ಕೆಲ ಮಾಡುವ ಮೂಲಕ ಅವರ ಅಪ್ಪಗೆ ಸಹಾಯ ಮಾಡುತ್ತಿದ್ದಾರೆ.

  ಕುಲುಮೆಯಲ್ಲಿ ಸಲಾಕೆ ತಯಾರಿಸುತ್ತಿರುವ ರವಿ ಬಸ್ರೂರ್ ಅಪ್ಪನ ಬಳಿ "ಇದು ಹದ ಸರಿ ಇದೆಯಾ" ಎಂದು ಕೇಳಿಕೊಳ್ಳುತ್ತಾ ಕೆಲಸ ಮಾಡುತ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ತಂದೆಗೆ ನೆರವಾಗಿ ದಿನಕ್ಕೆ 35 ರೂಪಾಯಿ ಸಂಪಾದಿಸಿದ್ದಾರೆ. ಇದರಿಂದ ಅಪ್ಪನಿಗೆ ಕೊಂಚ ನಿರಾಳವಾಗಿದ್ದು, ನನಗೂ ತಲೆಬಿಸಿ ಕಮ್ಮಿ ಆಗಿದೆ ಎಂದು ಹೇಳಿದ್ದಾರೆ. ಜೊತೆಗೆ ಕುಲುಮೆ ಕೆಲಸ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

  ಹಳೆ ನೆನಪುಗಳನ್ನು ನೆನಪಿಸಿದ ಭಗವಂತ

  ಈ ಬಗ್ಗೆ ರವಿ ಬಸ್ರೂರ್ "ಮತ್ತೆ ಹಳೆ ನೆನಪುಗಳನ್ನು ನೆನಪಿಸಿದ ಭಗವಂತ. ಸೂತ್ರಧಾರನವನು ಪಾತ್ರಧಾರಿಗಳು ನಾವು" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಅವರೇ ಮಾಡಿರುವ ಸುಂದರ ಕಲಾಕೃತಿಯ ವಿಡಿಯೋವನ್ನು ಶೇರ್ ಮಾಡಿದ್ದಾರೆ. ರವಿ ಬಸ್ರೂರ್ ಕೆಲಸಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ದಿನಕ್ಕೆ 35 ರುಪಾಯಿ ಸಂಪಾದನೆ

  ಇಡೀ ದೇಶವೆ ನಿಬ್ಬೆರಗಾಗುವಂತಹ ಕನ್ನಡದ ಹೆಮ್ಮೆಯ ಕೆಜಿಎಫ್ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿರುವ ರವಿ ಬಸ್ರೂರ್, ಈಗ ದಿನಕ್ಕೆ 35 ರೂಪಾಯಿಗೆ ಸಂಪಾದನೆ ಮಾಡುತ್ತಿದ್ದಾರೆ. ಈ ಬಗ್ಗೆ ರವಿ ಬಸ್ರೂರ್ "ಇವತ್ 35 ರೂಪಾಯಿ ದುಡಿಮೆ. ತಲಿಬಿಸಿ ಫುಲ್ ಕಮ್ಮಿ ಆಯ್ತ್, ಅಪ್ಪಯ್ಯಂಗೆ ಜೈ" ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ರವಿ ಬಸ್ರೂರ್ ಕೆಲಸ ಮಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

  English summary
  Music Director Ravi basrur turns blacksmith to helps his father due to Corona lock down.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X