For Quick Alerts
  ALLOW NOTIFICATIONS  
  For Daily Alerts

  ಟಾಲಿವುಡ್ ಡ್ರಗ್ ಮಾಫಿಯಾ: ರವಿತೇಜಾ ಸೇರಿ ಎಲ್ಲಾ ಸ್ಟಾರ್ ಗಳಿಗೂ ಕ್ಲೀನ್ ಚಿಟ್

  |

  2017ರಲ್ಲಿ ಟಾಲಿವುಡ್ ಇಂಡಸ್ಟ್ರಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಕೇಳಿ ಬಂದಿದ್ದ ಎಲ್ಲ ಸೆಲೆಬ್ರಿಟಿಗಳಿಗೆ ಎಸ್ಐಟಿ ಕ್ಲೀನ್ ಚಿಟ್ ನೀಡಿದೆ. ಈ ಮೂಲಕ ಡ್ರಗ್ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದ ತೆಲುಗು ಸಿನಿ ಕಲಾವಿದರು ನಿಟ್ಟುಸಿರು ಬಿಟ್ಟಿದ್ದಾರೆ.

  ತೆಲುಗು ಸ್ಟಾರ್ ನಟ ರವಿತೇಜಾ, ನಟಿ ಚಾರ್ಮಿ ಕೌರ್, ನಿರ್ದೇಶಕ ಪೂರಿ ಜಗನ್ನಾಥ್, ನವದೀಪ್ ಸೇರಿದಂತೆ ಸುಮಾರು 64ಕ್ಕೂ ಹೆಚ್ಚು ಮಂದಿಗೆ ಎಸ್ಐಟಿ ತಂಡ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಿತ್ತು.

  ಡ್ರಗ್ಸ್ ಮಾಫಿಯಾದಲ್ಲಿ ಪುತ್ರನ ಹೆಸರು: ಬೇಸರಗೊಂಡ ರವಿತೇಜಾ ತಾಯಿ.!

  ಇಲ್ಲಿಯವರೆಗೂ ಡ್ರಗ್ ಕೇಸ್ ಗೆ ಸಂಬಂಧಿಸಿದಂತೆ ನಾಲ್ಕು ಬಾರಿ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಿದೆ. ಆದ್ರೆ, ಇದರಲ್ಲಿ ಯಾವುದೇ ಒಬ್ಬ ಸೆಲೆಬ್ರಿಟಿಯ ಹೆಸರು ಕೂಡ ನಮೂದಿಸಿಲ್ಲ. ಕೇವಲ ವಿಚಾರಣೆ ಮಾತ್ರ ಮಾಡಲಾಗಿತ್ತು. ಹಾಗಾಗಿ, ಈ ಪ್ರಕರಣದಲ್ಲಿ ಎಲ್ಲರನ್ನ ಕೈಬಿಡಲಾಗಿದೆ.

  ಡ್ರಗ್ಸ್ ಮಾಫಿಯಾ ಬಯಲಾಗಲು ರವಿತೇಜ ಸಹೋದರನ ಸಾವು ಕಾರಣ.!

  ಇದಕ್ಕೂ ಈ ಮುಂಚೆ ಈ ಡ್ರಗ್ ಪ್ರಕರಣದಲ್ಲಿ ಕೆಲವು ಸೆಲೆಬ್ರಿಟಿಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಆರೋಪಿಗಳ ಜೊತೆ ಕೈ ಜೋಡಿಸಿದ್ದಾರೆ ಎನ್ನಲಾಗಿತ್ತು. ಆದ್ರೀಗ, ಯಾರೊಬ್ಬರ ಮೇಲೂ ಕೇಸ್ ಹಾಕದೆ ಎಲ್ಲರಿಗೂ ಕ್ಲೀನ್ ಚಿಟ್ ನೀಡಿರುವುದು ಎಲ್ಲರ ಕಣ್ಣು ಹುಬ್ಬೇರಿಸುವಂತೆ ಮಾಡಿದೆ.

  English summary
  Ravi teja, charmi kaur, puri jagannath and other celebrities get clean chit in drug scandal case. Many celebrities were interrogated by SIT in this case.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X