»   » ಯಶ್, ಪುನೀತ್ ಚಿತ್ರಕ್ಕೆ ರವಿವರ್ಮ ಸಾಹಸ

ಯಶ್, ಪುನೀತ್ ಚಿತ್ರಕ್ಕೆ ರವಿವರ್ಮ ಸಾಹಸ

Posted By:
Subscribe to Filmibeat Kannada

'ಮಾಸ್ತಿ ಗುಡಿ' ಚಿತ್ರದ ಖಳನಟರಾದ ಅನಿಲ್ ಹಾಗೂ ಉದಯ್ ಅವರ ದುರಂತ ಸಾವಿನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ, ಸಾಹಸ ನಿರ್ದೇಶಕ ರವಿವರ್ಮ ಮತ್ತೆ ತಮ್ಮ ಕೆಲಸಕ್ಕೆ ಹಾಜರಾಗಿದ್ದಾರೆ. ಜಾಮೀನಿನ ಮೇಲೆ ಬಂಧಮುಕ್ತರಾಗಿ ಹೊರಬಂದಿರುವ ರವಿವರ್ಮ ಅವರು ಸಾಲು ಸಾಲು ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡುವಲ್ಲಿ ಬ್ಯುಸಿ ಆಗಿದ್ದಾರೆ.[ಕಡೆಗೂ ಪೊಲೀಸರ ಮುಂದೆ ಶರಣಾದ ನಾಗಶೇಖರ್, ರವಿವರ್ಮ.!]

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ನಟನೆಯ 'ರಯೀಸ್' ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿದ್ದ, ರವಿವರ್ಮ ರವರು ಉತ್ತಮ ಪ್ರಶಂಸೆ ಪಡೆದಿದ್ದರು. ಈಗ ಸಾಹಸ ನಿರ್ದೇಶನವನ್ನು ಮತ್ತೆ ಮುಂದುವರೆಸಿರುವ ರವಿವರ್ಮ ರವರು ಸದ್ಯದಲ್ಲೇ ಕನ್ನಡದ ಇಬ್ಬರೂ ಸ್ಟಾರ್ ನಟರ ಚಿತ್ರಕ್ಕೆ ಸ್ಟಂಟ್ ಡೈರೆಕ್ಷನ್ ಮಾಡಲಿದ್ದಾರಂತೆ.

'ನೇನೆ ರಾಜು ನೇನೆ ಮಂತ್ರಿ' ಚಿತ್ರಕ್ಕೆ ರವಿವರ್ಮ ಸಾಹಸ

ಮರಳಿ ತಮ್ಮ ಕೆಲಸಕ್ಕೆ ವಾಪಸ್ ಆಗಿರುವ ಸಾಹಸ ನಿರ್ದೇಶಕ ರವಿವರ್ಮ ಅವರು ಪ್ರಸ್ತುತದಲ್ಲಿ ಟಾಲಿವುಡ್ ನಟ ರಾಣಾ ದಗ್ಗುಬಾಟಿ ಮತ್ತು ಕಾಜಲ್ ಅಗರವಾಲ್ ಅಭಿನಯದ 'ನೇನೆ ರಾಜು ನೇನೆ ಮಂತ್ರಿ' ಸಿನಿಮಾದಲ್ಲಿ ಬ್ಯುಸಿ ಆಗಿದ್ದು, ಈ ಚಿತ್ರಕ್ಕೆ ಫೈಟ್ ಮಾಸ್ಟರ್ ಆಗಿದ್ದಾರೆ.

ಎ ಹರ್ಷ ಸಿನಿಮಾಗೆ ಸಾಹಸ ನಿರ್ದೇಶನ

ಪುನೀತ್ ರಾಜ್ ಕುಮಾರ್ ಅಭಿನಯದಲ್ಲಿ ಮೂಡಿಬರಲಿರುವ ಎ ಹರ್ಷ ಸಿನಿಮಾಗೆ, ರವಿವರ್ಮ ಅವರು ಸಾಹಸ ನಿರ್ದೇಶನ ಮಾಡಲು ಒಪ್ಪಿದ್ದಾರಂತೆ. ಈ ಸಿನಿಮಾದ ಚಿತ್ರೀಕರಣ ಫೆಬ್ರವರಿ 6 ರಿಂದ ಆರಂಭವಾಗಲಿದೆಯಂತೆ.

'ಕೆಜಿಎಫ್‌' ಸಿನಿಮಾಗೆ ಸಾಥ್

ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಿಗ್ ಬಜೆಟ್ ಸಿನಿಮಾ 'ಕೆಜಿಎಫ್' ಚಿತ್ರಕ್ಕೂ ರವಿವರ್ಮ ಸ್ಟಂಟ್ ಡೈರೆಕ್ಟರ್ ಆಗಲಿದ್ದಾರಂತೆ.

ರಯೀಸ್ ಚಿತ್ರಕ್ಕೆ ಪ್ರಶಂಸೆ

ರವಿವರ್ಮ ಅವರು ಶಾರುಖ್ ಖಾನ್ ಅಭಿನಯದ 'ರಯೀಸ್' ಚಿತ್ರಕ್ಕೆ ಸಾಹಸ ನಿರ್ದೇಶನ ಮಾಡಿ, ಬಾಲಿವುಡ್ ನಿಂದ ಉತ್ತಮ ಪ್ರಶಂಸೆ ಪಡೆದಿದ್ದರು.

English summary
Suntmaster Ravi Verma has been signed by the makers of Puneeth Rajkumar upcoming film to be helmed by A Harsha.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada