For Quick Alerts
  ALLOW NOTIFICATIONS  
  For Daily Alerts

  ನನ್ನ ದೊಡ್ಡ ಮಗನನ್ನು ಭೇಟಿಯಾದೆ: ಸೆಲ್ಫಿ ಹಂಚಿಕೊಂಡ ರವಿಚಂದ್ರನ್

  |

  ನಟ ರವಿಚಂದ್ರನ್ ತಮ್ಮ ಮಗನನ್ನು ಭೇಟಿಯಾಗಿದ್ದಾರೆ. ಹಾಗೆಂದರೆ ಅವರು ತಮ್ಮ ಪುತ್ರ ಮನೊರಂಜನ್ ಅನ್ನು ಭೇಟಿಯಾಗಿಲ್ಲ ಬದಲಿಗೆ ಮಗನಷ್ಟೇ ಪ್ರೀತಿಯಿಂದ ಕಾಣುವ, ಗೌರವಿಸುವ ಸುದೀಪ್ ಅನ್ನು ರವಿಚಂದ್ರನ್ ಭೇಟಿ ಮಾಡಿದ್ದಾರೆ.

  ಸುದೀಪ್ ಹಾಗೂ ರವಿಚಂದ್ರನ್ ಬಹಳ ದಿನಗಳ ನಂತರ ಭೇಟಿಯಾಗಿದ್ದಾರೆ. ಸುದೀಪ್‌, ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷ ಆದ ಸಂಭ್ರಮಕ್ಕೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ರವಿಚಂದ್ರನ್ ಅತಿಥಿಯಾಗಿ ಭಾಗವಹಿಸಿದ್ದರು. ಅದಾದ ಬಳಿಕ ಈಗ ಮತ್ತೆ ಈ ಇಬ್ಬರೂ ಭೇಟಿಯಾಗಿದ್ದಾರೆ.

  ಸುದೀಪ್ ಹಾಗೂ ರವಿಚಂದ್ರನ್ ಭೇಟಿಯಾಗಿದ್ದರೆಂದರೆ ಏನೋ ವಿಶೇಷ ಇದ್ದೇ ಇದೆ ಎಂದು ಇಬ್ಬರ ಅಭಿಮಾನಿಗಳು ಲೆಕ್ಕ ಹಾಕುತ್ತಿದ್ದಾರೆ. ರವಿಚಂದ್ರನ್, ಸುದೀಪ್ ಇಬ್ಬರೂ ಅಪ್ಪಟ ಸಿನಿಮಾ ಜೀವಿಗಳು ಈ ಇಬ್ಬರು ಸಿನಿಮಾ ಕಾರಣಕ್ಕಲ್ಲದೆ ಬೇರೆ ಕಾರಣಕ್ಕೆ ಭೇಟಿ ಆಗಲು ಸಾಧ್ಯವಿಲ್ಲ ಎಂಬ ಲೆಕ್ಕಾಚಾರ ಕೆಲವು ಅಭಿಮಾನಿಗಳದ್ದು.

  ಸುದೀಪ್, ರವಿಚಂದ್ರನ್ ಭೇಟಿ ಸಮಯದಲ್ಲಿ ನಿರ್ಮಾಪಕ ಜಾಕ್ ಮಂಜು ಸಹ ಹಾಜರಿದ್ದರು. ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದ ಪ್ರೀಮಿಯರ್ ಏನಾದರೂ ಆಯೋಜಿಸಿ ಅದರ ಆಹ್ವಾನ ನೀಡಲು ರವಿಚಂದ್ರನ್ ಅವರನ್ನು ಸುದೀಪ್ ಭೇಟಿಯಾಗಿದ್ದರೆ ಎಂಬ ಅನುಮಾನವಿದೆ. ಅಥವಾ ರವಿಚಂದ್ರನ್ ನಟನೆಯ ಬಹುನಿರೀಕ್ಷಿತ 'ರವಿ ಬೋಪಣ್ಣ' ಸಿನಿಮಾ ಪ್ರೀಮಿಯರ್ ಆಯೋಜನೆಗೊಂಡಿದೆಯೇ ಎಂಬ ಅನುಮಾನವೂ ಇದೆ.

  ರವಿಚಂದ್ರನ್, ಸುದೀಪ್ ಭೇಟಿಯಾಗಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರವಿಚಂದ್ರನ್, ''ಬಹಳ ದಿನಗಳ ನಂತರ ನನ್ನ ದೊಡ್ಡಮಗನೊಂದಿಗೆ, ನಿನಗೆ ಸಾಕಷ್ಟು ಪ್ರೀತಿ'' ಎಂದು ಬರೆದುಕೊಂಡಿದ್ದಾರೆ.

  ಸುದೀಪ್ ನನ್ನ ದೊಡ್ಡ ಮಗನಿದ್ದಂತೆ ಎಂದು ರವಿಚಂದ್ರನ್ ಈ ಹಿಂದೆಯೂ ಕೆಲವು ಬಾರಿ ಹೇಳಿದ್ದರು. ಸುದೀಪ್ ನಿರ್ದೇಶನ ಮಾಡಿದ 'ಮಾಣಿಕ್ಯ' ಸಿನಿಮಾದಲ್ಲಿ ಸುದೀಪ್ ತಂದೆಯ ಪಾತ್ರದಲ್ಲಿ ರವಿಚಂದ್ರನ್ ನಟಿಸಿ, ಆ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸುದೀಪ್-ರವಿಚಂದ್ರನ್ ಜೋಡಿಯನ್ನು ಸಿನಿಪ್ರಿಯರು ಬಹುವಾಗಿ ಮೆಚ್ಚಿಕೊಂಡಿದ್ದರು.

  ಇದೀಗ ಈ ಇಬ್ಬರೂ ಜೊತೆಯಾಗಿರುವುದು ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುತ್ತಿರಬಹುದಾ ಎಂಬ ಅನುಮಾನವೂ ಕಾಣುತ್ತಿದೆ. ನಿರ್ಮಾಪಕ ಜಾಕ್ ಮಂಜು ಸಹ ಜೊತೆಗಿರುವುದರಿಂದ ಈ ಅನುಮಾನಕ್ಕೆ ಇನ್ನಷ್ಟು ಪುಷ್ಠಿಯೂ ದೊರೆತಿದೆ.

  ಸುದೀಪ್ ನಟನೆಯ 'ಕೋಟಿಗೊಬ್ಬ 3' ಮತ್ತು 'ವಿಕ್ರಾಂತ್ ರೋಣ' ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. 'ವಿಕ್ರಾಂತ್ ರೋಣ' ಸಿನಿಮಾವನ್ನು ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಬಗ್ಗೆ ಬಹುದೊಡ್ಡ ನಿರೀಕ್ಷೆಯನ್ನು ಸುದೀಪ್ ಇಟ್ಟುಕೊಂಡಿದ್ದಾರೆ. 'ವಿಕ್ರಾಂತ್ ರೋಣ' ಸಿನಿಮಾವು ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.

  ಇನ್ನು ನಟ ರವಿಚಂದ್ರನ್ ನಟನೆಯ 'ರವಿ ಬೋಪಣ್ಣ' ಬಿಡುಗಡೆ ಹಂತದಲ್ಲಿದೆ. 'ಕನ್ನಡಿಗ' ಮತ್ತು 'ದೃಶ್ಯ 2' ಸಿನಿಮಾಗಳ ಚಿತ್ರೀಕರಣ ಮುಗಿದಿದೆ. ಡಾಲಿ ಧನಂಜಯ್ ನಟಿಸುತ್ತಿರುವ 'ಹೆಡ್ ಬುಷ್' ಸಿನಿಮಾದಲ್ಲಿ ರವಿಚಂದ್ರನ್ ನಟಿಸಲಿದ್ದಾರೆ.

  English summary
  Actor Ravichandran and Sudeep met today. Ravichandran selfie on social media and said met my elder son.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X