Don't Miss!
- Automobiles
ಮುಂಬರಲಿರುವ ಹೋಂಡಾ ಬೈಕ್ಗಳಿಗೆ DL ಬೇಡ್ವಂತೆ: 10ಕ್ಕೂ ಹೆಚ್ಚು EV ಬಿಡುಗಡೆಗೆ ಸಿದ್ಧತೆ!
- News
Bengaluru Airport: ವಿಮಾನ ನಿಲ್ದಾಣ ಸ್ಪೋಟಿಸುವುದಾಗಿ ಯುವತಿಯಿಂದ ಬೆದರಿಕೆ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರೇಜಿ ಪುತ್ರ ಮನೋರಂಜನ್ ರವಿಚಂದ್ರನ್!
ಕ್ರೇಜಿಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಕಳೆದ ಕೆಲವು ದಿನಗಳಿಂದ ರವಿಚಂದ್ರನ್ ಮೊದಲ ಪುತ್ರ ಮನೋರಂಜನ್ ಮದುವೆಗೆ ಸಿದ್ಧತೆಗಳು ನಡೆಯುತ್ತಿದ್ದವು. ಸ್ವತ: ರವಿಚಂದ್ರನ್ ಪುತ್ರನ ಮದುವೆ ತಯಾರಿಯಲ್ಲಿ ತೊಡಗಿಸಿಕೊಂಡಿದ್ದರು.
ಎರಡು ದಿನ ಕ್ರೇಜಿ ಪುತ್ರ ಮನೋರಂಜನ್ ಮದುವೆ ನಡೆಯುತ್ತಿದೆ. ನಿನ್ನೆ (ಆಗಸ್ಟ್ 20)ರಂದು ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಇಂದು (ಆಗಸ್ಟ್ 21) ಮನೋರಂಜನ್ ರವಿಚಂದ್ರನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂಗೀತಾರೊಂದಿಗೆ ಹೊಸ ಜೀವನ ಆರಂಭ ಆಗಿದೆ.
ಮನು-
ಸಂಗೀತಾ
ಅದ್ಧೂರಿ
ಆರತಕ್ಷತೆ:
ಶಿವಣ್ಣ,
ರಾಘಣ್ಣ,
ಖುಷ್ಬೂ
ಶುಭ
ಹಾರೈಕೆ
ನಿನ್ನೆ (ಆಗಸ್ಟ್ 20) ನಡಿದಿದ್ದ ಆರತಕ್ಷತೆ ಕಾರ್ಯಕ್ರಮದಲ್ಲಿ ಡಾ. ಶಿವರಾಜ್‌ಕುಮಾರ್, ಅಕುಲ್ ಬಾಲಾಜಿ, ರಾಘವೇಂದ್ರ ರಾಜ್‌ಕುಮಾರ್, ಹಂಸಲೇಖ ಸೇರಿದಂತೆ ಹಲವು ಮಂದಿ ಗಣ್ಯರು ಭಾಗವಹಿಸಿದ್ದರು. ಇಂದು ಇರಡೂ ಕುಟುಂಬಸ್ಥರ ಸಮ್ಮುಖದಲ್ಲಿ ಮನೋರಂಜನ್ ಹಾಗೂ ಸಂಗೀತಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ಮನೋರಂಜನ್
ಮನೋರಂಜನ್ ಮನೆಯಲ್ಲಿ ಹುಡುಕಿದ ಹುಡುಗಿಯನ್ನೇ ಮದುವೆಯಾಗಿದ್ದಾರೆ. ಕೆಲವು ದಿನಗಳ ಹಿಂದೆನೇ ರವಿಚಂದ್ರನ್ ದಂಪತಿ ಮನೋರಂಜನ್‌ಗೆ ಹುಡುಗಿ ಹುಡುಕಿದ್ದರು. ಕಳೆದ ವರ್ಷವೇ ಮನೋರಂಜನ್ ಮದುವೆ ನಡೆಯುತ್ತೆ ಅನ್ನೋ ಮಾತು ಕೂಡ ಕೇಳಿ ಬಂದಿತ್ತು. ಆದರೆ, ಹೆಚ್ಚು ಕಡಿಮೆ ಒಂದು ವರ್ಷ ತಡವಾಗಿ ಮದುವೆಯಾಗಿದ್ದಾರೆ. ಅರೇಂಜ್ಡ್ ಮ್ಯಾರೇಜ್ ಆಗಿದ್ದರೂ, ಒಬ್ಬರನ್ನೊಬ್ಬರು ಅರಿತುಕೊಂಡ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಭಾವಿ
ಪತ್ನಿ
ಬಗ್ಗೆ
ಮಾತನಾಡಿದ
ಮನೋರಂಜನ್
ರವಿಚಂದ್ರನ್!

ಕ್ರೇಜಿ ಪುತ್ರನ ಸಿಂಪಲ್ ಮದುವೆ
ಕ್ರೇಜಿಸ್ಟಾರ್ ರವಿಚಂದ್ರನ್ ಮಗನ ಮದುವೆಯನ್ನು ಸಿಂಪಲ್ ಆಗಿ ಮಾಡುವ ಬಗ್ಗೆ ಈ ಹಿಂದೆ ಹಲವು ಬಾರಿ ಮಾತಾಡಿದ್ದರು. ಅದರಂತೆ ಹೆಚ್ಚು ಆಡಂಬರವಿಲ್ಲದೆ ಮದುವೆ ಮಾಡಿದ್ದಾರೆ. ಬೆಂಗಳೂರಿನ ಪ್ಯಾಲೇಜ್ ಗ್ರೌಂಡ್‌ನಲ್ಲಿ ಸರಳವಾಗಿ ಮನೋರಂಜನ್ ರವಿಚಂದ್ರನ್ ವೈವಾಹಿಕ ಜೀವನಕ್ಕೆ ಇಂದು (ಆಗಸ್ಟ್ 21) ಕಾಲಿಟ್ಟಿದ್ದಾರೆ. ಕೆಲವು ವರ್ಷಗಳ ಹಿಂದಷ್ಟೇ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು. ಆದರೆ, ಸೊಸೆ ಮನೆಯವರಿಗೆ ಆಡಂಬರ ಇಷ್ಟವಿಲ್ಲದ ಕಾರಣ ಸಿಂಪಲ್ ಮದುವೆ ಮುಂದಾಗಿರೋದಾಗಿ ತಿಳಿಸಿದ್ದರು. ಸಿಂಪಲ್ ಆಗಿದ್ದರೂ, ಕಣ್ಣಿಗೆ ಖುಷಿ ಕೊಡುವ ಹಾಗೆ ಮಗನ ಮದುವೆ ಮಾಡಿದ್ದಾರೆ.

ಸಂಬಂಧಿ ಜೊತೆ ಮನೋರಂಜನ್ ಮದುವೆ
ಮನೋರಂಜನ್ ಮದುವೆಯಾಗಿರುವ ಹುಡುಗಿ ಸಂಗೀತಾ ಅವರ ದೂರದ ಸಂಬಂಧಿ. ಮನೆಯವರೇ ನೋಡಿ ಇಬ್ಬರ ಮದುವೆ ನಿಶ್ಚಯ ಮಾಡಿದ್ದರು. ಅವರ ಇಚ್ಚೆಯಂತೆ 34 ವರ್ಷ ಮನೋರಂಜನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹುಡುಗಿ ಒಪ್ಪಿಗೆಯಾದ ಬಳಿಕ ಮನೋರಂಜನ್ ಮದುವೆ ಸ್ವಲ್ಪ ಸಮಯ ತೆಗೆದುಕೊಂಡಿದ್ದರು. ಸಿನಿಮಾರಂಗದಲ್ಲಿ ಇರೋದ್ರಿಂದ ಅವರಿಗೆ ಅರ್ಥ ಮಾಡಿಕೊಳ್ಳಲು ಸಮಯ ನೀಡಿದ್ರು. ಅವರಿಗೂ ಮನೋರಂಜನ್ ಓಕೆ ಅಂತ ಅನಿಸಿದ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕಾಸು
ತಗೊಂಡು
ಸಿನಿಮಾ
ಮಾಡೋ
ವಂಶದಲ್ಲಂತೂ
ನಾವು
ಹುಟ್ಟಿಲ್ಲ:
ರವಿಚಂದ್ರನ್
ಪುತ್ರ
ವಿಕ್ರಮ್!

ಶೀಘ್ರದಲ್ಲೇ ಎರಡು ಸಿನಿಮಾ ಅನೌನ್ಸ್
ಸದ್ಯಕ್ಕೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋ ಮನೋರಂಜನ್ ಕೆಲವು ದಿನ ಸಿನಿಮಾಗೆ ಬ್ರೇಕ್ ನೀಡುತ್ತಿದ್ದಾರೆ. ಈಗಾಗಲೇ ಎರಡು ಸಿನಿಮಾಗಳಿಗೆ ಮನೋರಂಜನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದರಲ್ಲಿ ಒಂದು ಸಿನಿಮಾವನ್ನು ತಮ್ಮ ವಿಕ್ರಮ್ ಮನೋರಂಜನ್ ಅವರೇ ಹ್ಯಾಂಡಲ್ ಮಾಡಲಿದ್ದಾರೆ. ಹೀಗಾಗಿ ವಿವಾಹದ ಬಳಿಕ ಮತ್ತೆ ಎರಡು ವಿಭಿನ್ನ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮತ್ತೆ ಆಕ್ಟಿವ್ ಆಗಲಿದ್ದಾರೆ.