For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣ ಮುಗಿಸಿದ 'ದೃಶ್ಯ 2': ರಾಜೇಂದ್ರ ಪೊನ್ನಪ್ಪ ಹೇಳಿದ್ದೇನು?

  By ಫಿಲ್ಮಿಬೀಟ್ ಡೆಸ್ಕ್
  |

  ಮಲಯಾಳಂನಲ್ಲಿ ಬಿಡುಗಡೆ ಆಗಿ ದೇಶ, ವಿದೇಶದ ಭಾಷೆಗಳಿಗೂ ರೀಮೇಕ್ ಆದ 'ದೃಶ್ಯಂ' ಸಿನಿಮಾದ ಮುಂದುವರೆದ ಭಾಗ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿತ್ತು. ಆ ಸಿನಿಮಾ ಸಹ ಭಾರಿ ಪ್ರಶಂಸೆಗೆ ಪಾತ್ರವಾಗಿದೆ.

  ಮಲಯಾಳಂನ 'ದೃಶ್ಯಂ' ಸಿನಿಮಾವನ್ನು ಕನ್ನಡದಲ್ಲಿ 'ದೃಶ್ಯ' ಹೆಸರಿನಲ್ಲಿ ರೀಮೇಕ್ ಮಾಡಲಾಗಿತ್ತು. ರವಿಚಂದ್ರನ್, ನವ್ಯಾ ನಾಯರ್, ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್ ನಟಿಸಿದ್ದ ಈ ಸಿನಿಮಾ 2014ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು.

  ಇದೀಗ 'ದೃಶ್ಯಂ' ಸಿನಿಮಾದ ಮುಂದುವರೆದ ಭಾಗ 'ದೃಶ್ಯಂ 2' ಅಮೆಜಾನ್‌ ಪ್ರೈಂನಲ್ಲಿ ಕೆಲ ದಿನಗಳ ಹಿಂದೆ ಬಿಡುಗಡೆ ಆಗಿ ಮತ್ತೆ ಸೂಪರ್ ಹಿಟ್ ಆಗಿದೆ. 'ದೃಶ್ಯಂ 2' ಸಿನಿಮಾವನ್ನು ಕನ್ನಡದಲ್ಲಿ 'ದೃಶ್ಯ 2' ಹೆಸರಿನಲ್ಲಿ ರೀಮೇಕ್ ಮಾಡಿದ್ದು ಸಿನಿಮಾದ ಚಿತ್ರೀಕರಣ ಈಗಷ್ಟೆ ಮುಗಿದಿದೆ. ಚಿತ್ರೀಕರಣ ಮುಗಿದ ಖುಷಿಯಲ್ಲಿ ಇಡೀಯ ಚಿತ್ರತಂಡ ಒಟ್ಟಿಗೆ ಫೊಟೊಕ್ಕೆ ಫೋಸ್ ನೀಡಿದ್ದಲ್ಲದೆ. ರವಿಚಂದ್ರನ್, ನವ್ಯಾ ನಾಯರ್ ಸೇರಿ ಕೆಲವರು ಸಿನಿಮಾದ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

  ಸಿನಿಮಾದ ಚಿತ್ರೀಕರಣ ಮುಗಿಸಿದ 'ದೃಶ್ಯ 2' ಚಿತ್ರತಂಡ

  ಸಿನಿಮಾದ ಚಿತ್ರೀಕರಣ ಮುಗಿಸಿದ 'ದೃಶ್ಯ 2' ಚಿತ್ರತಂಡ

  2014ರಲ್ಲಿ ಬಿಡಗುಡೆ ಆಗಿದ್ದ 'ದೃಶ್ಯ' ಸಿನಿಮಾದಲ್ಲಿ ನಟಿಸಿದ್ದ ಬಹುತೇಕರೇ 'ದೃಶ್ಯ 2' ಸಿನಿಮಾದಲ್ಲಿಯೂ ನಟಿಸಿದ್ದಾರೆ. ರವಿಚಂದ್ರನ್ ಮತ್ತೊಮ್ಮೆ ರಾಜೇಂದ್ರ ಪೊನ್ನಪ್ಪ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಹಿಂದಿನ 'ದೃಶ್ಯ' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಪಿ.ವಾಸು ಅವರೇ 'ದೃಶ್ಯ 2' ಅನ್ನು ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಇಂದಷ್ಟೆ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕಾರ್ಯ ನಡೆಯಲಿದೆ.

  ಚಿತ್ರೀಕರಣ ಮುಗಿದಿದ್ದು ಬೇಸರವಾಗಿದೆ: ರವಿಚಂದ್ರನ್

  ಚಿತ್ರೀಕರಣ ಮುಗಿದಿದ್ದು ಬೇಸರವಾಗಿದೆ: ರವಿಚಂದ್ರನ್

  ಚಿತ್ರೀಕರಣ ಮುಗಿದ ಖುಷಿಯಲ್ಲಿ ಚಿತ್ರತಂಡವು ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ಸಮಯದಲ್ಲಿ ಮಾತನಾಡಿದ ನಟ ರವಿಚಂದ್ರನ್, ''ಈ ಸಿನಿಮಾವು ಕುಟುಂಬವೊಂದರ ಕತೆಯಾಗಿದೆ. ಈ ಕುಟುಂಬದ ಕತೆಯನ್ನು ನಾವು (ಚಿತ್ರತಂಡ) ಒಂದು ಕುಟುಂಬವಾಗಿ ಒಬ್ಬರಿಗೊಬ್ಬರು ಬೆಂಬಲಿಸುತ್ತಾ, ಸಹಾಯ ಮಾಡುತ್ತಾ ಮಾಡಿದ್ದೇವೆ. 'ದೃಶ್ಯ' ಚಿತ್ರತಂಡ ಸ್ವತಃ ಒಂದು ಕುಟುಂಬದಂತೆ ಆಗಿಬಿಟ್ಟಿದೆ. ಚಿತ್ರೀಕರಣ ಮುಗಿದಿದ್ದು ಬೇಸರವೇ ಆಗುತ್ತಿದೆ. ನಾಳೆಯಿಂದ ನಾವುಗಳು ಒಬ್ಬರನ್ನೊಬ್ಬರು ಭೇಟಿ ಆಗುವುದಿಲ್ಲವಲ್ಲ ಎನಿಸುತ್ತಿದೆ. ಈ ಚಿತ್ರತಂಡ ನನ್ನ ಹೃದಯಕ್ಕೆ ಬಹಳ ಹತ್ತಿರವಾದುದು' ಎಂದು ಹಾರೈಸಿದರು.

  ನವ್ಯಾ ನಾಯರ್ ಹೇಳಿದ್ದೇನು?

  ನವ್ಯಾ ನಾಯರ್ ಹೇಳಿದ್ದೇನು?

  ನನಗೆ ಕನ್ನಡ ಅಷ್ಟಾಗಿ ಬರುವುದಿಲ್ಲವೆಂದು ಮಾತು ಆರಂಭಿಸಿದ ನಟಿ ನವ್ಯಾ ನಾಯರ್, ''ರವಿಚಂದ್ರನ್ ಹೇಳಿರುವಂತೆ ನಾವು ಒಂದು ಕುಟುಂಬದಂತೆಯೇ ಆಗಿ ಹೋಗಿದ್ದೀವಿ. ನಟಿಯಾಗಿ ನನಗೆ ಒಂದು ಕಂಫರ್ಟ್ ಭಾವ ದೊರಕದೆ ಇದ್ದರೆ ನಟಿಸುವುದು ಕಷ್ಟ. ಗಂಡ, ಅಪ್ಪ, ಸಹೋದರ, ಪ್ರೇಮಿ ಎದುರಿಗೆ ಯಾವುದೇ ಪಾತ್ರವಾಗಲಿ ಆ ಪಾತ್ರ ನಿಮ್ಮೊಂದಿಗೆ ಆತ್ಮೀಯವಾಗಿ ವರ್ತಿಸಿದರಷ್ಟೆ ನನಗೆ ಅದು ಹೃದಯಕ್ಕೆ ಸೇರಿ ನಾನು ನ್ಯಾಚುರಲ್ ಆಗಿ ನಟಿಸಲು ಸಾಧ್ಯ. 'ದೃಶ್ಯ'ದಲ್ಲಿ ಎಲ್ಲರೂ ಬಹಳ ಆತ್ಮೀಯರು ಮತ್ತು ನನಗೆ ಕಂಫರ್ಟ್‌ ಫೀಲ್ ಮಾಡಿಸುತ್ತಾರೆ ಹಾಗಾಗಿ ನನಗೆ ಈ ಸಿನಿಮಾದಲ್ಲಿ ನಟಿಸುವುದು ಕಷ್ಟ ಎನಿಸುವುದಿಲ್ಲ'' ಎಂದಿದ್ದಾರೆ ನವ್ಯಾ.

  ಅಮೆಜಾನ್‌ನಲ್ಲಿ ಬಿಡುಗಡೆ ಆಗಿದ್ದ 'ದೃಶ್ಯಂ 2'

  ಅಮೆಜಾನ್‌ನಲ್ಲಿ ಬಿಡುಗಡೆ ಆಗಿದ್ದ 'ದೃಶ್ಯಂ 2'

  ಮಲಯಾಳಂನ 'ದೃಶ್ಯಂ 2' ಸಿನಿಮಾ ಫೆಬ್ರವರಿ 19ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಯಿತು. ಸಿನಿಮಾಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆಗಳು ಕೇಳಿ ಬಂದಿತು. 2014ರಲ್ಲಿ ಬಿಡುಗಡೆ ಆಗಿದ್ದ 'ದೃಶ್ಯಂ' ಸಿನಿಮಾದ ಮುಂದುವರೆದ ಭಾಗ ಈ ಸಿನಿಮಾ ಆಗಿದ್ದು, ಮೊದಲ ಸಿನಿಮಾದಲ್ಲಿ ಆಗಿದ್ದ ಕೊಲೆಯ ತನಿಖೆಯೇ ಈ ಸಿನಿಮಾದಲ್ಲಿಯೂ ಮುಂದುವರೆದು ಸಿನಿಮಾದ ನಾಯಕ ಜಾರ್ಜ್ ಕುಟ್ಟಿ ಈ ಬಾರಿ ಹೇಗೆ ತನ್ನ ಕುಟುಂಬವನ್ನು ಪೊಲೀಸರಿಂದ ಕಾಪಾಡಿಕೊಳ್ಳುತ್ತಾನೆ ಎಂಬುದು ಕಥಾ ಹಂದರವಾಗಿದೆ. ಇದೇ ಕತೆಯನ್ನು ಕನ್ನಡದ 'ದೃಶ್ಯ 2' ಸಹ ಹೊಂದಿರಲಿದೆ. 'ದೃಶ್ಯಂ 2' ಸಿನಿಮಾದ ರೀಮೇಕ್ ಕನ್ನಡದಲ್ಲಿ ಮಾತ್ರವೇ ಅಲ್ಲದೆ ತೆಲುಗಿನಲ್ಲಿಯೂ ಆಗುತ್ತಿದೆ. ಅಲ್ಲಿ ಮೂಲ ಸಿನಿಮಾದ ನಿರ್ದೇಶಕ ಜೀತು ಜೋಸೆಫ್ ಅವರೇ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹಿಂದಿಗೂ ಈ ಸಿನಿಮಾ ರೀಮೇಕ್ ಆಗುತ್ತಿದೆ.

  English summary
  Ravichandran & Navya Nair starrer Drishya 2 Movie Shooting Completed. This movie is remake of 'Drishyam 2' Malayalam movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X