»   » ಕೊಂಚ ಕೊಂಚವೇ ಕೆಣಕುವ ಕ್ರೇಜಿಸ್ಟಾರ್ ಹಾಡು

ಕೊಂಚ ಕೊಂಚವೇ ಕೆಣಕುವ ಕ್ರೇಜಿಸ್ಟಾರ್ ಹಾಡು

Posted By:
Subscribe to Filmibeat Kannada

ಕನ್ನಡ ಚಿತ್ರರಂಗದ ಕನಸುಗಾರ ಸೊಗಸುಗಾರ ರವಿಚಂದ್ರನ್ ಬಹಳ ಗ್ಯಾಪ್ ನ ಬಳಿಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ರವಿಚಂದ್ರನ್ ಚಿತ್ರಗಳೆಂದರೆ ಅದಕ್ಕೊಂದು ಕಲಾತ್ಮಕ ಸ್ಪರ್ಶ ಇದ್ದೇ ಇರುತ್ತದೆ. ಅದರಲ್ಲೂ ಮುಖ್ಯವಾಗಿ 'ಮಲ್ಲ' ಚಿತ್ರದ ಜೋಡಿಯನ್ನು ಬರಮಾಡಿಕೊಳ್ಳಲು ಚಿತ್ರಮಂದಿರಗಳು ಸಜ್ಜಾಗಿವೆ.

ಸರಿಸುಮಾರು ರಾಜ್ಯದಾದ್ಯಂತ 150 ಚಿತ್ರಮಂದಿರಗಳಲ್ಲಿ ಕ್ರೇಜಿಸ್ಟಾರ್ ಚಿತ್ರ ಬಿಡುಗಡೆಯಾಗುತ್ತಿದೆ. ಪ್ರಿಯಾಂಕಾ ಉಪೇಂದ್ರ ಅವರು ಬಹಳ ದಿನಗಳ ಬಳಿಕ ಬಣ್ಣ ಹಚ್ಚಿದ್ದು ಅವರ ಅಭಿಮಾನಿಗಳಲ್ಲೂ ಕಾತುರ ಮನೆಮಾಡಿದೆ. [ಕ್ರೇಜಿಸ್ಟಾರ್ ಚಿತ್ರದ ಕೊಂಚ ಕೊಂಚ ಹಾಡು]


"ಯಮ್ಮೋ ಯಮ್ಮೋ ನೋಡ್ದೆ ನೋಡ್ದೆ..." ಎಂದು 'ಮಲ್ಲ' ಚಿತ್ರದಲ್ಲಿ ಪ್ರಿಯಾಂಕಾ ಹಾಗೂ ರವಿಚಂದ್ರನ್ ಕುಣಿದು ಹತ್ತು ವರ್ಷಗಳೇ ಉರುಳಿ ಹೋಗಿವೆ. ಈಗ ಮತ್ತೊಮ್ಮೆ ಇದೇ ಜೋಡಿ ಪ್ರೇಮಿಗಳನ್ನು ಕೆಣಕಲು ಬರುತ್ತಿದ್ದಾರೆ. ಪ್ರೇಮಿಗಳ ದಿನದಂದೇ ಈ ಜೋಡಿ ಬರುತ್ತಿರುವುದು ವಿಶೇಷಗಳಲ್ಲಿ ವಿಶೇಷ.

ಇನ್ನು ಕ್ರೇಜಿಸ್ಟಾರ್ ಚಿತ್ರದ "ಕೊಂಚ ಕೊಂಚ ಕೊಂಕು ಮಾಡೋ ಕೋಮಲೆ..." ಹಾಡು ರವಿಚಂದ್ರನ್ ಅಭಿರುಚಿಗೆ ಕನ್ನಡಿ ಹಿಡಿಯುತ್ತದೆ. ರವಿಮಾಮನ ಹಾಡುಗಳ ಬಹುತೇಕ ಚಿತ್ರೀಕರಣ ಒಳಾಂಗಣದಲ್ಲೇ ನಡೆಯುತ್ತವೆ. ಕೊಂಚ ಕೊಂಚ ಹಾಡು ಸಹ ಇದಕ್ಕೆ ಹೊರತಾಗಿಲ್ಲ. [ಪ್ರಿಯಾಂಕಾ ಜತೆ ಕ್ರೇಜಿಸ್ಟಾರ್ ರೊಮ್ಯಾಂಟಿಕ್ ಚಿತ್ರಗಳು]

ಕೆಂಪು ಸೀರೆಯಲ್ಲಿ ಕಣ್ಣು ಕುಕ್ಕುವ ಪ್ರಿಯಾಂಕಾ ಅವರ ಜೊತೆಗಿನ ಈ ಹಾಡಿನ ಸಾಹಿತ್ಯವೂ ಸೊಗಸಾಗಿದೆ. ಅದಕ್ಕೆ ತಕ್ಕಂತೆ ಸಂಗೀತವೂ ಲಯಬದ್ಧವಾಗಿ ಪ್ರವಹಿಸಿದೆ. ಕೆನ್ನೆ, ಕುಂಕುಮ, ಸುಕೋಮಲ ಮೈಮಾಟ, ಕಣ್ಣು ಕಾಡಿಗೆ, ವಿರಹ ತಾಪ, ಸ್ಪರ್ಷ ಈ ಹಾಡಿನ ಸಾಹಿತ್ಯದಲ್ಲಿ ನುಸುಳುವ ಪದಗಳು ಕಚಗುಳಿ ಇಡುತ್ತವೆ.

ಮಲಯಾಳಂನ ಯಶಸ್ವಿ ಚಿತ್ರ 'ಟ್ರಾಫಿಕ್' ಚಿತ್ರದ ರೀಮೇಕ್ ಇದಾಗಿದ್ದು ಟ್ರಾಫಿಕ್ ಪೊಲೀಸ್ ಒಬ್ಬನ ಸುತ್ತ ಸುತ್ತುವ ಕಥಹಂದರವನ್ನು ಒಳಗೊಂಡಿದೆ. ಚಿತ್ರದ ಉಳಿದ ಪಾತ್ರವರ್ಗದಲ್ಲಿ ಭಾವನಾ, ನವೀನ್ ಕೃಷ್ಣ, ದಿಲೀಪ್ ರಾಜ್, ಶೋಭರಾಜ್, ನೀತೂ, ಅಕುಲ್ ಬಾಲಾಜಿ ಮುಂತಾದವರಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
The successful pair of Malla - Ravichandran and Priyanka Upendra has been paired again after 10 years for Sandalwood's forthcoming movie Krazy Star.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada