»   » ಜಾಹೀರಾತು ಕ್ಷೇತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕಲರವ

ಜಾಹೀರಾತು ಕ್ಷೇತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕಲರವ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಹಿರಿತೆರೆ ಸೇರಿದಂತೆ ಕಿರುತೆರೆಯಲ್ಲೂ ಕೂಡ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆ ಜೊತೆಗೆ ಇದೀಗ ಹೊಸದಾಗಿ ಜಾಹೀರಾತು ಕ್ಷೇತ್ರಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ಇದೀಗ ಮತ್ತೊಮ್ಮೆ ಜಾಹೀರಾತಿನಲ್ಲಿ ಕಾಣಿಸಿಕೊಂಡು ಸುದ್ದಿಯಲ್ಲಿದ್ದಾರೆ. ಈ ಬಾರಿ ಮೈಸೂರಿನಲ್ಲಿ ಆರಂಭಗೊಳ್ಳಲಿರುವ 'ಗೋಲ್ಡನ್ ಪ್ರಾಪರ್ಟಿ ಕಾಸ್ಟಲ್ ವಸತಿ ಸಮುಚ್ಛಯ'ದ ಬ್ರಾಂಡ್ ಅಂಬಾಸಿಡರ್ ಆಗುವ ಮೂಲಕ ಎರಡನೇ ಬಾರಿಗೆ ಜಾಹೀರಾತು ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ.

Ravichandran to promote 'Golden Property castle Home appliances'

ಜೊತೆಗೆ ಈ ವಸತಿ ಸಮುಚ್ಛಯಗಳ ಪೂರ್ತಿ ಡಿಸೈನಿಂಗ್ ಮುಂತಾದವುಗಳನ್ನು ಸ್ವತಃ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಿರ್ವಹಿಸಲಿದ್ದಾರಂತೆ.[ಕಾಸಿಲ್ಲದೆ ರೋಗ ವಾಸಿ ಮಾಡಲಿದ್ದಾರೆ ರವಿಚಂದ್ರನ್ ಸಾರ್.!]

ಪುನೀತ್ ರಾಜ್ ಕುಮಾರ್, ರಾಧಿಕಾ ಪಂಡಿತ್, ರಚಿತಾ ರಾಮ್, ಉಪೇಂದ್ರ ನಂತರ ಇದೀಗ ನಮ್ಮ ಪ್ರೀತಿಯ ರವಿಮಾಮ ಕೂಡ ಎರಡನೇ ಬಾರಿ ಜಾಹೀರಾತಿನಲ್ಲಿ ಮಿಂಚಿದ್ದಾರೆ.

ಅಂದಹಾಗೆ ಈ ಮೊದಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಮ್ಮಿಕೊಂಡಿದ್ದ ಡೆಂಗ್ಯೂ ಜ್ವರ ಹಾಗೂ ಚಿಕೂನ್ ಗುನ್ಯ ಮುಂತಾದವುಗಳ ಕುರಿತಾಗಿ ಅರಿವು ಮೂಡಿಸುವ ಜಾಹೀರಾತಿನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈಗಾಗಲೇ ಕಾಣಿಸಿಕೊಂಡಿದ್ದರು.

ಒಟ್ನಲ್ಲಿ ಕಿರುತೆರೆ ಕ್ಷೇತ್ರದ ಡಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಜಡ್ಜ್ ಮಾಡುವ ಮೂಲಕ ಎಲ್ಲರ ಮನೆಮಾತಾಗಿರುವ ಕ್ರೇಜಿಸ್ಟಾರ್ ರವಿಮಾಮ ಅವರು ಇದೀಗ ಜಾಹೀರಾತು ಕ್ಷೇತ್ರದಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲರ ಮನೆ-ಮನಗಳಲ್ಲಿ ನೆಲೆಸಲಿದ್ದಾರೆ.

English summary
Kannada Actor Crazy Star Ravichandran to promote Mysore 'Golden Property castle Home appliances'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada