»   » ಅಣ್ಣನ 'ಸಾಹೇಬ' ಸಿನಿಮಾ ನೋಡಿ ಕ್ರೇಜಿ ಸ್ಟಾರ್ ಪುತ್ರಿ ಹೀಗೆ ಹೇಳಿದ್ರು!

ಅಣ್ಣನ 'ಸಾಹೇಬ' ಸಿನಿಮಾ ನೋಡಿ ಕ್ರೇಜಿ ಸ್ಟಾರ್ ಪುತ್ರಿ ಹೀಗೆ ಹೇಳಿದ್ರು!

Posted By:
Subscribe to Filmibeat Kannada
Ravichandran Childrens Rare Unseen Photos | Filmibeat Kannada

ನಟ ರವಿಚಂದ್ರನ್ ಪುತ್ರ ಮನೋರಂಜನ್ ಅವರ ಮೊದಲ ಸಿನಿಮಾ 'ಸಾಹೇಬ' ಕಳೆದ ಶುಕ್ರವಾರ ರಿಲೀಸ್ ಆಗಿದ್ದು, ಎಲ್ಲೆಡೆ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದಿದೆ. ಈ ಸಿನಿಮಾ ಸ್ವತಃ ರವಿಚಂದ್ರನ್ ಅವರ ಕುಟುಂಬಕ್ಕೆ ಕೂಡ ತುಂಬ ಸಂತೋಷವನ್ನು ನೀಡಿದೆ.

'ಸಾಹೇಬ' ಸಿನಿಮಾವನ್ನು ರವಿಚಂದ್ರನ್ ಅವರು, ತಮ್ಮ ಪತ್ನಿ ಸುಮತಿ, ಮಗ ಮನೋರಂಜನ್, ವಿಕ್ರಮ್ ಮತ್ತು ಮಗಳು ಗೀತಾಂಜಲಿ ಜೊತೆ ವೀಕ್ಷಿಸಿದರು. ಚಿತ್ರ ನೋಡಿದ ಬಳಿಕ ರವಿಚಂದ್ರನ್ ಮಾಧ್ಯಮದ ಜೊತೆ ತಮ್ಮ ಅಭಿಪ್ರಾಯವನ್ನ ಹಂಚಿಕೊಂಡರು.

ವಿಶೇಷ ಅಂದರೆ ರವಿಚಂದ್ರನ್ ತಮ್ಮ ಮಾತು ಮುಗಿಸಿ ಮೇಲೆ ಎದ್ದು, ಮತ್ತೆ 'ನನ್ನ ಮಗಳ ಬಗ್ಗೆ ನಾನು ಹೇಳಲೇಬೇಕು' ಅಂತ ತಮ್ಮ ಮಗಳ ಬಗ್ಗೆ ಮಾತು ಶುರು ಮಾಡಿದರು. ಮುಂದೆ ಓದಿ...

ಮೊದಲು ಸಿನಿಮಾ ನೋಡಿದ್ದು ಮಗಳು

ರವಿಚಂದ್ರನ್ ಅವರ ಮನೆಯಲ್ಲಿ ಮೊದಲು 'ಸಾಹೇಬ' ಸಿನಿಮಾವನ್ನು ನೋಡಿದ್ದು, ಅವರ ಮಗಳು ಗೀತಾಂಜಲಿ ಅಂತೆ. ಬಿಡುಗಡೆಯಾದ ದಿನ ಸಂಜೆ ಚಿತ್ರದ ವಿಶೇಷ ಪ್ರದರ್ಶನ ಇದ್ದರೂ, ಬೆಳ್ಳಗೆನೇ ಅಣ್ಣನ ಚಿತ್ರವನ್ನು ಕ್ರೇಜಿ ಸ್ಟಾರ್ ಪುತ್ರಿ ನೋಡಿದ್ದಾರೆ.

'ಸಿನಿಮಾ ಚೆನ್ನಾಗಿದೆ, ಆದರೆ...'

ಸಿನಿಮಾ ನೋಡಿ ಬಂದ ಗೀತಾಂಜಲಿ ರವಿಚಂದ್ರನ್ ಬಳಿ ಬಂದು ''ಡ್ಯಾಡಿ ಸಿನಿಮಾ ಚೆನ್ನಾಗಿದೆ. ಆದರೆ ಫಸ್ಟ್ ಆಫ್ ಯಾಕೋ ಸ್ವಲ್ಪ ಲ್ಯಾಗ್ ಅನಿಸುತ್ತೆ'' ಅಂತ ಭಯದಿಂದ ಹೇಳಿದರಂತೆ.

ಮಗನ 'ಸಾಹೇಬ' ಸಿನಿಮಾ ನೋಡಿ ರವಿಚಂದ್ರನ್ ಕೊಟ್ಟ ರಿವ್ಯೂ ಹೀಗಿದೆ

ಧೈರ್ಯ ಹೇಳಿದ ರವಿಚಂದ್ರನ್

ಆಗ ರವಿಚಂದ್ರನ್ ನಗುತ ಮಗಳಿಗೆ ''ಭಯ ಇದ್ದರೇ ಹಾಗೆ ಅನಿಸುತ್ತದೆ. ಮೊದಲ ದಿನ ಹಬ್ಬ ಇರುವುದರಿಂದ ಜನ ಕಡಿಮೆ ಆಗಿದ್ದಾರೆ. ಅದನ್ನು ನೋಡಿ ನಿನಗೆ ಹಾಗೆ ಎನಿಸಿರಬೇಕು'' ಅಂತ ಧೈರ್ಯ ತುಂಬಿದರಂತೆ.

ಆತಂಕ ದೂರ ಮಾಡಿದ ಕ್ರೇಜಿಸ್ಟಾರ್

ಬಳಿಕ ಮಗಳಿಗೆ ''ಇದೆಲ್ಲ ಏನು ತೊಂದರೆ ಇಲ್ಲ. 'ಪುಟ್ನಂಜ' ಸಿನಿಮಾ ಕೂಡ ಮೊದಲ ಮೂರು ದಿನ ಚಿತ್ರಮಂದಿರ ಖಾಲಿ ಇತ್ತು. 'ಪ್ರೇಮಲೋಕ' ಸಿನಿಮಾ ಕೂಡ 100 ದಿನ ಆದ ನಂತರ ಗೆದಿದ್ದು'' ಅಂತ ಹೇಳಿ ಮಗಳ ಆತಂಕವನ್ನು ದೂರ ಮಾಡಿದರಂತೆ.

ಶೋ ಮ್ಯಾನ್ ರವಿಚಂದ್ರನ್ ಮಕ್ಕಳಿಗೆ ಡಿಮ್ಯಾಂಡಪ್ಪೋ... ಡಿಮ್ಯಾಂಡು!

ರವಿಚಂದ್ರನ್ ರಿವ್ಯೂ

ಇದೇ ವೇಳೆ ಸಿನಿಮಾ ನೋಡಿದ ರವಿಚಂದ್ರನ್ ''ಮನೋರಂಜನ್ ಒಂದು ಒಳ್ಳೆಯ ಕಥೆ ಆಯ್ಕೆ ಮಾಡಿದ್ದಾನೆ. ಅವನ ಬಗ್ಗೆ ಹೆಮ್ಮೆ ಪಡುತ್ತೇನೆ. ಈ ಚಿತ್ರದಿಂದ ನನ್ನ ಮಗ ಈಶ್ವರಿ ಸಂಸ್ಥೆಯನ್ನು ಚೆನ್ನಾಗಿ ಮುಂದುವರೆಸಿಕೊಂಡು ಹೋಗುತ್ತಾನೆ ಎನ್ನುವ ನಂಬಿಕೆ ನನಗೆ ಬಂದಿದೆ'' ಅಂತ ಹೇಳಿದ್ದರು.

ರವಿಚಂದ್ರನ್ ಪುತ್ರ ವಿಕ್ರಮ್ ಮೊದಲ ಸಿನಿಮಾದ ಟೀಸರ್ ರಿಲೀಸ್

English summary
Actor Ravichandran's daughter Geethanjali spoke about his brother Manoranjan's 'Saheba' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada