twitter
    For Quick Alerts
    ALLOW NOTIFICATIONS  
    For Daily Alerts

    ನಾನು ರಿಮೇಕ್ ಮಾಡಿಲ್ಲ, ನನ್ನ ಪಾಯಿಂಟ್ ಮಾಡಬೇಡಿ: ರವಿಚಂದ್ರನ್

    |

    ರಿಮೇಕ್ ಸಿನಿಮಾಗಳನ್ನು ವಿರೋಧಿಸುವ ಜನರು ಹೆಚ್ಚು ಇದ್ದಾರೆ. ಬೇರೆ ಭಾಷೆಯಲ್ಲಿ ಹಿಟ್ ಆದ ಚಿತ್ರಗಳನ್ನು ತಂದು ಕನ್ನಡದಲ್ಲಿ ಮಾಡ್ತಾರೆ ಎಂಬ ಟೀಕೆ ಅನೇಕ ನಿರ್ದೇಶಕ-ನಿರ್ಮಾಪಕರ ಮೇಲಿದೆ. ಈಗಲೂ ಅಂತಹ ಟ್ರೆಂಡ್ ಸ್ಯಾಂಡಲ್‌ವುಡ್‌ನಲ್ಲಿ ಜಾಸ್ತಿ ಇದೆ. ಒಂದು ಸಮಯದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸಾಲು ಸಾಲು ರಿಮೇಕ್ ಸಿನಿಮಾಗಳನ್ನು ಮಾಡಿದರು. ಸ್ವತಃ ನಿರ್ದೇಶನ ಮಾಡಿದ ಹಾಗೂ ನಟನೆ ಮಾಡಿದ ಚಿತ್ರಗಳಲ್ಲಿ ರಿಮೇಕ್ ಹೆಚ್ಚಿದ್ದವು.

    ರಿಮೇಕ್ ಎನ್ನುವುದು ಬಿಟ್ಟರೆ ಮೇಕಿಂಗ್ ಸ್ಟೈಲ್, ಸಿನಿಮಾ ತೆರೆಮೇಲೆ ತರುವ ರೀತಿ, ನಾಯಕಿಯರನ್ನು ತೋರಿಸುವ ಶೈಲಿ ರವಿಚಂದ್ರನ್ ಚಿತ್ರಗಳಲ್ಲಿ ಬಹಳ ವಿಶೇಷವಾಗಿ ಮೆಚ್ಚುಗೆ ಪಡೆದುಕೊಂಡಿದೆ. ಆದರೂ, ರವಿಚಂದ್ರನ್ ರಿಮೇಕ್ ಮಾಡ್ತಾರೆ ಎನ್ನುವ ಆಪಾದನೆ ಅವರನ್ನು ಬಿಡಲಿಲ್ಲ. ಕನ್ನಡದಲ್ಲಿ ಹೆಚ್ಚು ರಿಮೇಕ್ ಮಾಡಿರುವ ನಟ ಯಾರೆಂದು ಕೇಳಿದ್ರು ಈಗಲು ರವಿಚಂದ್ರನ್ ಹೆಸರು ಹೇಳುವ ಬಹಳಷ್ಟು ಮಂದಿ ಇದ್ದಾರೆ. ರಿಮೇಕ್ ಚಿತ್ರಗಳನ್ನು ಬರಿ ರವಿಚಂದ್ರನ್ ಮಾತ್ರ ಮಾಡಿಲ್ಲ, ಕನ್ನಡದ ಖ್ಯಾತ ನಟರೆಲ್ಲಾ ರಿಮೇಕ್ ಮಾಡಿದ್ದಾರೆ. ಆದ್ರೆ ಕ್ರೇಜಿಸ್ಟಾರ್ ಕಡೆ ಹಚ್ಚು ಬೆರಳು ಮಾಡಿ ತೋರಿಸುವ ಜನರಿದ್ದಾರೆ.

    ರವಿಚಂದ್ರನ್‌ ವಿರುದ್ಧ ಭುಗಿಲೆದ್ದಿದ್ದ ಪ್ರತಿಭಟನೆ ತಣ್ಣಗಾಗಿಸಿದ ಅಣ್ಣಾವ್ರುರವಿಚಂದ್ರನ್‌ ವಿರುದ್ಧ ಭುಗಿಲೆದ್ದಿದ್ದ ಪ್ರತಿಭಟನೆ ತಣ್ಣಗಾಗಿಸಿದ ಅಣ್ಣಾವ್ರು

    ಈ ಬಗ್ಗೆ ನ್ಯೂಸ್‌ ಫಸ್ಟ್ ಸಂದರ್ಶನದಲ್ಲಿ ಮಾತನಾಡಿರುವ ರವಿಚಂದ್ರನ್, ''ನಾನು ರಿಮೇಕ್ ಮಾಡಿಲ್ಲ, ನನ್ನ ಪಾಯಿಂಟ್ ಮಾಡಬೇಡಿ'' ಎಂದು ಸಮರ್ಥಿಸಿಕೊಂಡಿದ್ದಾರೆ. ಅಷ್ಟಕ್ಕೂ, ಕ್ರೇಜಿಸ್ಟಾರ್ ಹೇಳಿದ್ದೇನು? ಮುಂದೆ ಓದಿ...

    ರಿಮೇಕ್ ಎನ್ನುವುದು ಚಿತ್ರರಂಗದ ಭಾಗ

    ರಿಮೇಕ್ ಎನ್ನುವುದು ಚಿತ್ರರಂಗದ ಭಾಗ

    ''ರಿಮೇಕ್ ಎನ್ನುವುದು ಚಿತ್ರರಂಗದ ಒಂದು ಭಾಗ. ಅದು ಕಳ್ಳತನ ಅಲ್ಲ. ಹಕ್ಕು ತೆಗೆದುಕೊಂಡು ಬಂದು ಯಾರು ಬೇಕಾದರೂ ಮಾಡಬಹುದು. ನಾನು ಹತ್ತು ಸಿನಿಮಾ ಮಾಡಿರಬಹುದು, ಅವರು ಐದು, ಇನ್ನೊಬ್ಬರು ಒಂದು ಸಿನಿಮಾ ಮಾಡಿರಬಹುದು. ಎಲ್ಲರೂ ರಿಮೇಕ್ ಮಾಡಿದ್ದಾರೆ. ನನ್ನ ರಿಮೇಕ್ ನೋಡಿ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ ಬೇರೆ ಇಂಡಸ್ಟ್ರಿಯವರು'' ಎಂದು ರವಿಚಂದ್ರನ್ ಹೇಳಿದ್ದಾರೆ.

    ನಾನು ರಿಮೇಕ್ ಮಾಡಿಲ್ಲ

    ನಾನು ರಿಮೇಕ್ ಮಾಡಿಲ್ಲ

    ''ನಾನು ರಿಮೇಕ್ ಮಾಡಿಲ್ಲ. ರಿಮೇಕ್ ಅಂದ್ರೆ ದೃಶ್ಯದಿಂದ ದೃಶ್ಯವನ್ನು ಕಾಪಿ-ಪೇಸ್ಟ್ ಮಾಡುವುದು. ನನ್ನ ಸಿನಿಮಾ ನೋಡಿ, ಮೂಲ ಚಿತ್ರವನ್ನು ನೋಡಿ. ನಾನು ಯಾವತ್ತೂ ಆ ರೀತಿ ಮಾಡಿಲ್ಲ. ನನಗೆ ಬೇಕಾದ ಹಾಗೆ ಬದಲಾಯಿಸಿಕೊಂಡು ಚಿತ್ರ ಮಾಡಿದ್ದೇನೆ. ಸುಮ್ಮನೆ ನನ್ನ ಪಾಯಿಂಟ್ ಮಾಡಬೇಡಿ'' ಎಂದು ರವಿಚಂದ್ರನ್ ಟೀಕಾಕಾರಿಗೆ ಉತ್ತರಿಸಿದರು.

    'ರಣಧೀರ' ನೋಡಿ ಸುಭಾಷ್ ಗಾಯ್ ಅಚ್ಚರಿ

    'ರಣಧೀರ' ನೋಡಿ ಸುಭಾಷ್ ಗಾಯ್ ಅಚ್ಚರಿ

    ''ರಣಧೀರ ಸಿನಿಮಾ ಹಿಂದಿಯ ಹೀರೋ ಚಿತ್ರದ ರಿಮೇಕ್. ಹಿಂದಿಯ ಹೀರೋ ಹಾಗೂ ಕನ್ನಡದ ರಣಧೀರನಿಗೂ ಬಹಳ ವ್ಯತ್ಯಾಸ ಇದೆ. ಹೀರೋ ಸಿನಿಮಾದ ಬರಹಗಾರ ಸುಭಾಷ್ ಗಾಯ್, ಕನ್ನಡದಲ್ಲಿ ರಣಧೀರ ನೋಡಿ ಅಚ್ಚರಿಯಾಗಿದ್ದಂತೆ. ಇದು ಹೀರೋ ಸಿನಿಮಾನ ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡು ಶಾಕ್ ಆಗಿದ್ದರಂತೆ. ಈಗಲೂ ಸುಭಾಷ್ ಅವರ ಸ್ಟುಡಿಯೋದಲ್ಲಿ ರಣಧೀರ ವಿಡಿಯೋ ಕ್ಯಾಸೆಟ್ ಇದೆ. ಅವರಿಗಿಂತ ನನ್ನ ಚಿತ್ರ ಹತ್ತು ಪಟ್ಟು ಮೇಲಿದೆ ಎಂದು ಅವರೇ ಹೇಳ್ತಾರೆ'' ಎಂದು ಹೇಳಿಕೊಂಡರು.

    'ರಾಮಾಚಾರಿ' ಹಾಡು ಬದಲಿಸಿದ್ದೆ

    'ರಾಮಾಚಾರಿ' ಹಾಡು ಬದಲಿಸಿದ್ದೆ

    'ರಾಮಾಚಾರಿ' ಸಿನಿಮಾ ತಮಿಳಿನ 'ಚಿನ್ನತಂಬಿ' ಚಿತ್ರದ ರಿಮೇಕ್. ಈ ಸಿನಿಮಾ ಹಿಟ್ ಆಗಿದ್ದೇ ಹಾಡುಗಳಿಂದ. ಇಳಯರಾಜ ಸಂಗೀತ ನಿರ್ದೇಶಿಸಿದ್ದರು. ಕನ್ನಡಕ್ಕೆ ಮಾಡುವ ವೇಳೆ ಹಾಡುಗಳನ್ನು ಸಂಪೂರ್ಣವಾಗಿ ಬದಲಿಸಲಾಯಿತು. ಅದಕ್ಕೆ ಇಳಯರಾಜ ಬೈಯ್ದಿದ್ದರಂತೆ. 'ಹಾಡುಗಳಿಂದಲೇ ಹಿಟ್ ಆದ ಚಿತ್ರ, ನೀನು ಸಾಂಗ್ಸ್ ಬದಲಾಯಿಸುತ್ತಿದ್ದಿಯಾ' ಎಂದಿದ್ದರಂತೆ. ಆದರೆ, ರವಿಚಂದ್ರನ್ ತಲೆಕೆಡಿಸಿಕೊಳ್ಳಲಿಲ್ಲ. ನಿರ್ದೇಶಕ ಪಿ ವಾಸು ಕನ್ನಡ ವರ್ಷನ್ ನೋಡಿ ಖುಷಿಯಾಗಿದ್ದರು. 'ಚಿನ್ನತಂಬಿ' ಹಾಡಿಂದ ಹಿಟ್ ಆಯ್ತು ಅಂದ್ರು. ಅದರಲ್ಲೂ ಕಥೆ ಮುಖ್ಯವಾಗಿತ್ತು ಅಂತ ನೀವು ತೋರಿಸಿಕೊಟ್ರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ಕ್ರೇಜಿಸ್ಟಾರ್ ನೆನಪು ಮೆಲುಕು ಹಾಕಿದರು.

    ರಿಮೇಕ್ ಆಗಿದ್ರೂ ವಿಶೇಷ

    ರಿಮೇಕ್ ಆಗಿದ್ರೂ ವಿಶೇಷ

    ಪ್ರೇಮಲೋಕ, ರಣಧೀರ, ಅಂಜದಗಂಡು, ಹಳ್ಳಿಮೇಷ್ಟ್ರು, ಗೋಪಿಕೃಷ್ಣ, ರಾಮಾಚಾರಿ, ಅಣ್ಣಯ್ಯ, ಮನೆದೇವ್ರು, ಚೆಲುವ, ಯಾರೇ ನೀನು ಚೆಲುವೆ, ಮಾಂಗಲ್ಯಂ ತಂತು ನಾನೇನಾ, ಕೋದಂಡ ರಾಮ, ರಾಮಕೃಷ್ಣ, ಸಾಹುಕಾರ, ಮಲ್ಲಿಕಾರ್ಜುನ, ದೃಶ್ಯ, ಹೀಗೆ ರವಿಚಂದ್ರನ್ ಅವರ ಹಲವು ಹಿಟ್ ಸಿನಿಮಾಗಳು ರಿಮೇಕ್ ಆಗಿದೆ. ಆದರೆ, ಯಥಾವತ್ತು ಕಾಪಿ ಮಾಡಿಲ್ಲ ಎನ್ನುವುದು ಕ್ರೇಜಿಸ್ಟಾರ್ ವಿಶೇಷ.

    English summary
    Kannada actor Ravichandran says he didn't do remakes; don't point out to me
    Tuesday, August 17, 2021, 15:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X