For Quick Alerts
  ALLOW NOTIFICATIONS  
  For Daily Alerts

  'ತ್ರಿವಿಕ್ರಮ' ಪ್ರೀ-ರಿಲೀಸ್ ಇವೆಂಟ್‌ನಲ್ಲಿ ತಾರೆಯರ ಸಂಗಮ: ಇಲ್ಲಿದೆ ಲಿಸ್ಟ್

  |

  ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ಸ್ಯಾಂಡಲ್‌ವುಡ್ ಎಂಟ್ರಿಗೆ ಬೃಹತ್ ವೇದಿಕೆ ರೆಡಿಯಾಗುತ್ತಿದೆ. ವಿಕ್ರಮ್ ಅಭಿನಯದ ಸಿನಿಮಾ ಮೊದಲ ಸಿನಿಮಾ 'ತ್ರಿವಿಕ್ರಮ' ಬಿಡುಗಡೆಗೂ ಮುನ್ನ ಗ್ರ್ಯಾಂಡ್ ಪ್ರೀ-ರಿಲೀಸ್‌ ಇವೆಂಟ್‌ಗಾಗಿ ಸ್ಯಾಂಡಲ್‌ವುಡ್ ಸಜ್ಜಾಗುತ್ತಿದೆ.

  'ತ್ರಿವಿಕ್ರಮ್' ಸಿನಿಮಾ ಜೂನ್ 24ರಂದು ಬಿಡುಗಡೆಯಾಗಲಿದ್ದು, ಅದಕ್ಕೂ ಮುನ್ನ ಪ್ರೀ-ರಿಲೀಸ್ ಇವೆಂಟ್ ಅನ್ನು ಹಮ್ಮಿಕೊಂಡಿದೆ. ಈ ಬೃಹತ್‌ ಸಮಾರಂಭ ಜೂನ್ 19ರಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್‌ನ ತಾರೆಯರು ಭಾಗವಹಿಸಲಿದ್ದಾರೆ.

  ರವಿಚಂದ್ರನ್ 2ನೇ ಪುತ್ರನಿಗಾಗಿ ಒಂದಾಗಲಿದೆ ಕನ್ನಡ ಚಿತ್ರರಂಗ: ತ್ರಿವಿಕ್ರಮ್ ಹೈಲೈಟ್ ಏನು? ರವಿಚಂದ್ರನ್ 2ನೇ ಪುತ್ರನಿಗಾಗಿ ಒಂದಾಗಲಿದೆ ಕನ್ನಡ ಚಿತ್ರರಂಗ: ತ್ರಿವಿಕ್ರಮ್ ಹೈಲೈಟ್ ಏನು?

  ತ್ರಿವಿಕ್ರಮ್ ಪ್ರೀ-ರಿಲೀಸ್ ಇವೆಂಟ್‌ಗೆ ತಾರೆಯರ ದಂಡು

  ವಿಕ್ರಮ್‌ ಮೊದಲ ಸಿನಿಮಾ 'ತ್ರಿವಿಕ್ರಮ್‌'ಗೆ ಶುಭ ಹಾರೈಸಲು ವೇದಿಕೆ ಮೇಲೆ ತಾರಾಲೋಕ ಸೃಷ್ಟಿಯಾಗಲಿದೆ. ಈ ಮ್ಯೂಸಿಕಲ್ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ತಾರೆಯರು ಆಗಮಿಸಲಿದ್ದಾರೆ. ಕೇಜಿಸ್ಟಾರ್ ದ್ವಿತೀಯ ಪುತ್ರನಿಗೆ ಇಡೀ ಚಂದನವನ ಶುಭಾಶಯಗಳನ್ನು ತಿಳಿಸಲಿದೆ. ಜೂನ್ 19ರಂದು ನಾಯಂಡಹಳ್ಳಿ ಬಳಿಯಿರುವ ನಂದಿ ಲಿಂಕ್ಸ್ ಗ್ರೌಂಡ್'ನಲ್ಲಿ ಕಾರ್ಯಕ್ರಮ ಜರುಗಲಿದ್ದು ತಾರೆಯರೊಂದಿಗೆ ಸಾರ್ವಜನಿಕರಿಗೂ ಉಚಿತವಾಗಿ ಭಾಗವಹಿಸಬಹುದಾಗಿದೆ.

  ಕ್ರೇಜಿ಼ಸ್ಟಾರ್ ರವಿಚಂದ್ರನ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್, 'ಡಾಲಿ' ಧನಂಜಯ್, ನಿರ್ದೇಶಕ ಪ್ರೇಮ್, ರಕ್ಷಿತಾ ಪ್ರೇಮ್, ಶರಣ್, ನೀನಾಸಂ ಸತೀಶ್, ಲೂಸ್ ಮಾದ ಯೋಗಿ, ಅಜೇಯ್ ರಾವ್, ಡಾರ್ಲಿಂಗ್ ಕೃಷ್ಣ, ತಾರಾ, ಶೃತಿ, ವಸಿಷ್ಠ ಸಿಂಹ, ನಿಶ್ವಿಕಾ ನಾಯ್ಡು ಹಾಗೂ ಮನುರಂಜನ್ ಸೇರಿದಂತೆ ಇನ್ನೂ ಅನೇಕರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

  ಸಿನಿಮಾ ಬಿಡುಗಡೆಗೆ 20 ದಿನ ಮುನ್ನ ಕೊನೆಯ ಸಾಂಗ್ ಶೂಟ್ ಮುಗಿಸಿದ 'ತ್ರಿವಿಕ್ರಮ್'! ಸಿನಿಮಾ ಬಿಡುಗಡೆಗೆ 20 ದಿನ ಮುನ್ನ ಕೊನೆಯ ಸಾಂಗ್ ಶೂಟ್ ಮುಗಿಸಿದ 'ತ್ರಿವಿಕ್ರಮ್'!

  'ತ್ರಿವಿಕ್ರಮ್' ಹಾಡುಗಳು ಸೂಪರ್‌ ಹಿಟ್

  'ತ್ರಿವಿಕ್ರಮ್' ಸಿನಿಮಾದ ಹಾಡುಗಳ ಮೂಲಕವೇ 'ತ್ರಿವಿಕ್ರಮ' ಸಿನಿಮಾ ಬೇಜಾನ್ ಸದ್ದು ಮಾಡಿದೆ. 'ತ್ರಿವಿಕ್ರಮ್' ಸಿನಿಮಾ ಟ್ರೈಲರ್ ಅನ್ನು ಪ್ರೇಕ್ಷಕರ ಸಮ್ಮುಖದಲ್ಲಿ ಜೂನ್ 19ರಂದು ನಡೆಯಲಿರುವ ಅದ್ಧೂರಿ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಿದೆ ಚಿತ್ರತಂಡ.

  Ravichandran Son Vikram Starrer Trivikram Pre-Release Event Here Is The List

  'ತ್ರಿವಿಕ್ರಮ'ನಿಗೆ ಸಹನಾ ಮೂರ್ತಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸೋಮಣ್ಣ ಟಾಕೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ರಾಮ್ಕೋ ಸೋಮಣ್ಣ ನಿರ್ಮಾಪಕರು. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಈಗಾಗಲೇ 'ಪ್ಲೀಸ್ ಮಮ್ಮಿ', 'ಹನಿ ಬನಿ ಫೀಲ್ ಮೈ ಲವ್' ಹಾಗೂ 'ಶಕುಂತಲಾ ಶೇಕ್ ಯುವರ್ ಬಾಡಿ ಪ್ಲೀಸ್...' ಹಾಡುಗಳು ಟ್ರೆಂಡಿಂಗ್‌ನಲ್ಲಿವೆ.

  'ವಿಕ್ರಮ್' ಜೊತೆ ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ನಟಿಸಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ.

  English summary
  Ravichandran Son Vikram Starrer Trivikram Pre-Release Event Here Is The List, Know More.
  Saturday, June 18, 2022, 9:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X