ರವಿಚಂದ್ರನ್ ಮಗನ ಬಹುಭಾಷಾ ಚಿತ್ರದ ಹೆಸರೇನು?
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಎರಡನೇ ಮಗ ವಿಕ್ರಮ್ ಅಭಿನಯಿಸಲಿರುವ ಬಹುಭಾಷಾ ಚಿತ್ರಕ್ಕೆ ಸದ್ದಿಲ್ಲದೆ ತಯಾರಿ ನಡೆಯುತ್ತಿದೆ. ನಾಯಕಿಯ ಹುಡುಕಾಟದಲ್ಲಿರುವ ಚಿತ್ರತಂಡ ಈಗ ಚಿತ್ರದ ಶೀರ್ಷಿಕೆ ಅಂತಿಮಗೊಳಿಸಿದೆ.
ವಿಕ್ರಮ್ ರವಿಚಂದ್ರನ್ ಅವರ ಚೊಚ್ಚಲ ಸಿನಿಮಾ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ತಯಾರಾಗ್ತಿದೆ. ಕನ್ನಡದಲ್ಲಿ ಈ ಚಿತ್ರಕ್ಕೆ 'ನಾನು ಅವಳು' ಎಂದು ಹೆಸರಿಡಲಾಗಿದೆ. ತಮಿಳಿನಲ್ಲಿ 'ಅವಳುಂ ನಾನುಂ ಅಲೆಯುಂ ಕಡಲಂ' ಎಂದಿದ್ದರೆ, ತೆಲುಗಿನಲ್ಲಿ 'ಅಪ್ಪುಡಪ್ಪುಡು' ಹಾಗೂ ಮಲಯಾಳಂನಲ್ಲಿ 'ನಾನುಂ ಅವಳುಂ' ಎಂಬ ಟೈಟಲ್ ಫೈನಲ್ ಆಗಿದೆ.

ಈ ಚಿತ್ರದಲ್ಲಿ ವಿಕ್ರಮ್ ಗೆ ನಾಯಕಿಯಾಗಿ ಕಮಲ್ ಹಾಸನ್ ಪುತ್ರಿ ಅಕ್ಷರ ಹಾಸನ್ ಜೋಡಿಯಾಗಲಿದ್ದಾರೆ ಎನ್ನಲಾಗಿದೆ. ಆದ್ರೆ, ಇದು ಖಚಿತವಾಗಿಲ್ಲ. ಇನ್ನು ನಾಗಶೇಖರ್ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದು ಡೈರೆಕ್ಷನ್ ಮಾಡುತ್ತಿದ್ದಾರೆ.
ಉಳಿದಂತೆ ಅರ್ಜುನ್ ಜನ್ಯ ಸಂಗೀತ, ಸತ್ಯ ಹಗೆಡೆ ಛಾಯಗ್ರಾಹಣ ನಿರ್ವಹಿಸುತ್ತಿದ್ದಾರೆ. ಉತ್ತರ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಸುಮಾರು 50 ದಿನಗಳ ಕಾಲ ಚಿತ್ರೀಕರಣ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ. ನಂತರ ಎರಡನೇ ಹಂತದಲ್ಲಿ ಸ್ಕಾಟ್ಲೆಂಡ್ ಹಾಗೂ ಐರ್ಲೆಂಡ್ ನಲ್ಲಿ ಶೂಟಿಂಗ್ ಮಾಡಲಿದೆ.


Click it and Unblock the Notifications











