»   » ಮಗನ 'ಸಾಹೇಬ' ಸಿನಿಮಾ ನೋಡಿ ರವಿಚಂದ್ರನ್ ಕೊಟ್ಟ ರಿವ್ಯೂ ಹೀಗಿದೆ

ಮಗನ 'ಸಾಹೇಬ' ಸಿನಿಮಾ ನೋಡಿ ರವಿಚಂದ್ರನ್ ಕೊಟ್ಟ ರಿವ್ಯೂ ಹೀಗಿದೆ

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ನಟನೆಯ ಮೊದಲ ಸಿನಿಮಾ 'ಸಾಹೇಬ' ಕಳೆದ ಶುಕ್ರವಾರ ರಿಲೀಸ್ ಆಗಿ ಪ್ರೇಕ್ಷಕರಿಂದ ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಪಡೆದುಕೊಂಡಿದೆ. ಇದರ ಜೊತೆಗೆ ನಟ ರವಿಚಂದ್ರನ್ ಕೂಡ ಮಗನ ಸಿನಿಮಾವನ್ನು ಇದೀಗ ಕಣ್ತುಂಬಿಕೊಂಡಿದ್ದಾರೆ.

'ಸಾಹೇಬ' ಚಿತ್ರವನ್ನು ರವಿಚಂದ್ರನ್ ತಮ್ಮ ಕುಟುಂಬ ಸಮೇತವಾಗಿ ನೋಡಿದರು. ಮಗನನ್ನು ತೆರೆ ಮೇಲೆ ನೋಡಿ ರವಿಚಂದ್ರನ್ ತುಂಬ ಖುಷಿಪಟ್ಟರು. ''ಮನೋರಂಜನ್ ತುಂಬ ಒಳ್ಳೆಯ ಸಿನಿಮಾ ಮಾಡಿದ್ದಾನೆ''. ಅಂತ ಹೇಳಿ ಮಗನ ಯಶಸ್ಸು ಕಂಡು ರವಿಚಂದ್ರನ್ ಸಂಭ್ರಮಪಟ್ಟರು.

ಅಂದಹಾಗೆ, 'ಸಾಹೇಬ' ಚಿತ್ರವನ್ನು ನೋಡಿದ ರವಿಚಂದ್ರನ್ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ ಮುಂದೆ ಓದಿ...

ಅಪ್ಪನಾಗಿ ಮಾತನಾಡುತ್ತಿದ್ದೇನೆ

''ಇಂದು ನಾನು ಕ್ರೇಜಿಸ್ಟಾರ್ ರವಿಚಂದ್ರನ್ ಆಗಿ ಅಲ್ಲದೆ ಅಪ್ಪನಾಗಿ ಮಾತನಾಡುತ್ತಿದ್ದೇನೆ. ಸಾಹೇಬ ಚಿತ್ರವನ್ನು ನೋಡಿದೆ... ಈ ಸಿನಿಮಾದ ಉದ್ದೇಶ ತುಂಬ ಚೆನ್ನಾಗಿದೆ. ಮನೋರಂಜನ್ ಪಾತ್ರ ತುಂಬ ಇಷ್ಟ ಆಗುತ್ತದೆ.'' - ರವಿಚಂದ್ರನ್, ನಟ, ನಿರ್ದೇಶಕ.

ಒಳ್ಳೆಯ ಕಥೆ

''ಮನೋರಂಜನ್ ಒಂದು ಒಳ್ಳೆಯ ಸಿನಿಮಾ ಆಯ್ಕೆ ಮಾಡಿದ್ದಾನೆ. ಇಂತಹ ಚಿತ್ರವನ್ನು ಆಯ್ಕೆ ಮಾಡಿರುವುದಕ್ಕೆ ನಾನು ನನ್ನ ಮಗನ ಬಗ್ಗೆ ಹೆಮ್ಮೆ ಪಡುತ್ತೇನೆ. ಈ ಚಿತ್ರದಿಂದ ನನ್ನ ಮಗ ಈಶ್ವರಿ ಸಂಸ್ಥೆಯನ್ನು ಚೆನ್ನಾಗಿ ಮುಂದುವರೆಸಿಕೊಂಡು ಹೋಗುತ್ತಾನೆ ಎನ್ನುವ ನಂಬಿಕೆ ನನಗೆ ಬಂದಿದೆ.'' - ರವಿಚಂದ್ರನ್, ನಟ, ನಿರ್ದೇಶಕ.

ಅಚ್ಚುಕಟ್ಟು ಸಿನಿಮಾ

''ನಿರ್ದೇಶಕ ಭರತ್ ಕಥೆ ಹೇಳಿದ ರೀತಿ ಅಚ್ಚುಕಟ್ಟಾಗಿ ಸಿನಿಮಾ ಮಾಡಿದ್ದಾರೆ. ಇನ್ನು ಚಿತ್ರದಲ್ಲಿ ಹರಿಕೃಷ್ಣ ಸಂಗೀತ ಅದ್ಬುತವಾಗಿದೆ. ಚಿತ್ರದ ಕೆಲ ದೃಶ್ಯ ಲ್ಯಾಗ್ ಎನಿಸಿದರು ಒಂದು ಒಳ್ಳೆಯ ಸಿನಿಮಾ ನೋಡುವಾಗ ಅದು ಲೆಕ್ಕಕ್ಕೆ ಬರುವುದಿಲ್ಲ.'' - ರವಿಚಂದ್ರನ್, ನಟ, ನಿರ್ದೇಶಕ.

ಇಬ್ಬರು ಒಳ್ಳೆಯ ಜೋಡಿ

''ಸಾಹೇಬ ಒಂದು ಒಳ್ಳೆಯ ಲವ್ ಸ್ಟೋರಿ ಆಗುತ್ತದೆ. ಮನೋರಂಜನ್ ಹಾಗೂ ಶಾನ್ವಿ ಇಬ್ಬರು ಒಳ್ಳೆಯ ಜೋಡಿ. ಪ್ರೇಮಲೋಕ ಚಿತ್ರದಲ್ಲಿ ರವಿಚಂದ್ರನ್ ಮತ್ತು ಜೂಹಿ ಚಾವ್ಲ, ರಣಧೀರ ಚಿತ್ರದಲ್ಲಿ ರವಿಚಂದ್ರನ್ ಮತ್ತು ಖುಷ್ಬು ಇದ್ದ ಹಾಗೆ ಇವರ ಜೋಡಿ ಕೂಡ ಇದೆ''. - ರವಿಚಂದ್ರನ್, ನಟ, ನಿರ್ದೇಶಕ.

ಪಾತ್ರಗಳು ಕಾಣಿಸುತ್ತದೆ

''ಚಿತ್ರದಲ್ಲಿ ಸ್ಟಾರ್ ಅಂತ ಯಾರು ಕಾಣಿಸಿಕೊಳ್ಳುವುದಿಲ್ಲ. ಎಲ್ಲ ಪಾತ್ರಗಳು ಕಾಣಿಸುತ್ತದೆ. ಚಿತ್ರದಲ್ಲಿ ಎಲ್ಲರೂ ಒಳ್ಳೆಯ ಕೆಲಸ ಮಾಡಿದ್ದಾರೆ. ಇಡೀ ಸಿನಿಮಾ ನೀಟ್ ಆಗಿದೆ.'' - ರವಿಚಂದ್ರನ್, ನಟ, ನಿರ್ದೇಶಕ.

English summary
Actor Ravichandran spoke about his son Manoranjan's 'Saheba' movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada