»   » ಅಮೆರಿಕಾದಲ್ಲಿ ತೆರೆಗೆ ಕ್ರೇಜಿಸ್ಟಾರ್ ರವಿಚಂದ್ರನ್ 'ದೃಶ್ಯ'

ಅಮೆರಿಕಾದಲ್ಲಿ ತೆರೆಗೆ ಕ್ರೇಜಿಸ್ಟಾರ್ ರವಿಚಂದ್ರನ್ 'ದೃಶ್ಯ'

Posted By:
Subscribe to Filmibeat Kannada

ಕನಸುಗಾರ, ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಹಾಗೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ 'ದೃಶ್ಯ' ಚಿತ್ರ ಇದೇ ಮೊದಲ ಬಾರಿಗೆ ಯುಎಸ್ಎ ನಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರಲೋಕ ವೆಬ್ ಸೈಟ್ ನ ಸಹಯೋಗದೊಂದಿಗೆ ರವಿ ಪಂಗಲ್ ಅವರು ದೃಶ್ಯ ಚಿತ್ರವನ್ನು ಅಮೆರಿಕಾದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

ಸೆಪ್ಟೆಂಬರ್ 13 ಹಾಗೂ 14ರಂದು ಚಿತ್ರ Towne 3 Cinemas, 1433, The Alameda, San Jose, CAಯಲ್ಲಿ ಪ್ರದರ್ಶನ ಕಾಣಲಿದೆ. ಎರಡು ದಿನಗಳಲ್ಲಿ ನಾಲ್ಕು ಪ್ರದರ್ಶನಗಳು ಇರುತ್ತವೆ. ಎರಡೂ ದಿನಗಳ ಪ್ರದರ್ಶನ ಅಲ್ಲಿನ ಕಾಲಮಾನದ ಪ್ರಕಾರ ಸಂಜೆ 4 ಹಾಗೂ 7 ಗಂಟೆಗೆ ನಡೆಯಲಿದೆ. [ದೃಶ್ಯ ಚಿತ್ರ ವಿಮರ್ಶೆ]


ಟಿಕೆಟ್ ಬೆಲೆ ವಯಸ್ಕರಿಗೆ $10 ಹಾಗೂ ಮಕ್ಕಳಿಗೆ $ 6 ಎಂದು ನಿಗದಿಪಡಿಸಲಾಗಿದೆ. ಈ ಮೂಲಕ ರವಿಚಂದ್ರನ್ ಅವರ ಚಿತ್ರಗಳನ್ನು ಸವಿಯುವ ಅವಕಾಶ ಅನಿವಾಸಿ ಕನ್ನಡಿಗರ ಪಾಲಿಗೆ ಲಭ್ಯವಾಗುತ್ತಿದೆ. ಪಿ.ವಾಸು ಆಕ್ಷನ್ ಕಟ್ ಹೇಳಿರುವ ಈ ಚಿತ್ರ ರವಿಚಂದ್ರನ್ ಅವರ ವೃತ್ತಿಬದುಕಿನಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.

'ಮಾಣಿಕ್ಯ' ಚಿತ್ರದ ಬಳಿಕ ರವಿಚಂದ್ರನ್ ಅಭಿನಯದ 'ದೃಶ್ಯ' ಈ ವರ್ಷದ ಹಿಟ್ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಇಳಯರಾಜಾ ಸಂಗೀತ ಇರುವ ಚಿತ್ರದ ಪಾತ್ರವರ್ಗದಲ್ಲಿ ನವ್ಯಾ ನಾಯರ್, ಆಶಾ ಶರತ್, ಅಚ್ಯುತ ಕುಮಾರ್, ಪ್ರಭು ಗಣೇಶನ್ ಅವರು ಅಭಿನಯಿಸಿದ್ದಾರೆ.

ಚಿತ್ರದ ನಾಯಕ ರಾಜೇಂದ್ರ ಪೊನ್ನಪ್ಪ (ರವಿಚಂದ್ರನ್) ಕೇಬಲ್ ಆಪರೇಟರ್. ಹೆಂಡತಿ ಹಾಗೂ ಇಬ್ಬರು ಹೆಣ್ಣುಮಕ್ಕಳೊಂದಿಗೆ ಹಾಯಾಗಿರುತ್ತಾನೆ. ಓದಿರುವುದು ನಾಲ್ಕನೇ ಕ್ಲಾಸ್ ಆದರೂ ಕೇಬಲ್ ಆಪರೇಟರ್ ಆದ ಕಾರಣ ಹಾಲಿವುಡ್ ನಿಂದ ಕೋಲಿವುಡ್ ತನಕ ಎಲ್ಲಾ ಚಿತ್ರಗಳನ್ನು ನೋಡಿ ಸಾಕಷ್ಟು ಜ್ಞಾನ ಸಂಪಾದಿಸಿರುತ್ತಾನೆ.

ಇಂತಹನ ಕುಟುಂಬದಲಿ ಅಚಾನಕ್ ಆಗಿ ಒಂದು ಕೊಲೆ ನಡೆದುಹೋಗುತ್ತದೆ. ಪೊಲೀಸರು ರಾಜೇಂದ್ರಪ್ಪನ ಬೆನ್ನು ಬೀಳುತ್ತಾರೆ. ಕೊಲೆಯಾದವನು ಸಾಮಾನ್ಯ ಹುಡುಗನಲ್ಲ. ಐಜಿ ಮಗ. ರಾಜೇಂದ್ರಪ್ಪ ಈ ಕೊಲೆ ಪ್ರಕರಣದಿಂದ ಖುಲಾಸೆ ಆಗುತ್ತಾನಾ ಅಥವಾ ಸಿಕ್ಕಿಬೀಳುತ್ತಾನಾ ಎಂಬುದನ್ನು ತೆರೆಯ ಮೇಲೆ ನೋಡಿಯೇ ಸವಿಯಬೇಕು. (ಫಿಲ್ಮಿಬೀಟ್ ಕನ್ನಡ)

English summary
The critically acclaimed and commercial superhit Drishya is releasing in the USA this month. Ravi Pangal in association with Chitraloka is releasing the movie in USA. The film will be screened on September 13 and September 14 at the Towne 3 Cinemas, 1433, The Alameda, San Jose, CA.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada