»   » 'ಕೃಷ್ಣ'ನ ಪಾತ್ರಕ್ಕಾಗಿ ರವಿಚಂದ್ರನ್ ಏನೆಲ್ಲಾ ಮಾಡಿದ್ದಾರೆ ನೋಡಿ?

'ಕೃಷ್ಣ'ನ ಪಾತ್ರಕ್ಕಾಗಿ ರವಿಚಂದ್ರನ್ ಏನೆಲ್ಲಾ ಮಾಡಿದ್ದಾರೆ ನೋಡಿ?

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಮೊಟ್ಟ ಮೊದಲ ಪೌರಾಣಿಕ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮುನಿರತ್ನ ನಿರ್ಮಾಣ ಮಾಡುತ್ತಿರುವ 'ಕುರುಕ್ಷೇತ್ರ' ಸಿನಿಮಾದಲ್ಲಿ ಕೃಷ್ಣನ ಪಾತ್ರ ನಿರ್ವಹಿಸುತ್ತಿದ್ದಾರೆ. 'ಕುರುಕ್ಷೇತ್ರ' ಚಿತ್ರದಲ್ಲಿ ರವಿಚಂದ್ರನ್ ಕೃಷ್ಣ ಎಂದಾಕ್ಷಣ ಸಂತೋಷಕ್ಕಿಂತ ಅನೇಕರಿಗೆ ಆಶ್ಚರ್ಯ ಉಂಟಾಯಿತು.

ಯಾಕಂದ್ರೆ, ರವಿಚಂದ್ರನ್ ಅವರು ಈ ಪಾತ್ರಕ್ಕಾಗಿ ದೈಹಿಕವಾಗಿ ನ್ಯಾಯ ಓದಗಿಸಬಲ್ಲರಾ ಎಂಬ ಪ್ರಶ್ನೆ ಕಾಡಿತ್ತು. ಆದ್ರೆ, ಈ ಸವಾಲನ್ನ ದಿಟ್ಟೆಯಿಂದ ಸ್ವೀಕರಿಸಿದ ರವಿಚಂದ್ರನ್ ಕೃಷ್ಣನಾಗಲು ಒಪ್ಪಿಗೆ ಕೊಟ್ಟು, ಪೂರ್ತಿ ತಯಾರಿ ಮಾಡಿಕೊಂಡು ಈಗ 'ಕುರುಕ್ಷೇತ್ರ' ಅಖಾಡಕ್ಕೆ ಧುಮುಕಿದ್ದಾರೆ.

ಇದೇ ತಿಂಗಳಿನಿಂದ ಕುರುಕ್ಷೇತ್ರ ಚಿತ್ರೀಕರಣದಲ್ಲಿ ಭಾಗಿಯಾಗಲಿರುವ ರವಿಚಂದ್ರನ್ ತಮ್ಮ ಪಾತ್ರಕ್ಕಾಗಿ ಹೇಗೆ ಸಿದ್ದವಾಗಿದ್ದಾರೆ ಗೊತ್ತಾ? ಮುಂದೆ ಓದಿ.....

ಆಗಸ್ಟ್ 28ಕ್ಕೆ ಶೂಟಿಂಗ್ ಗೆ ಹಾಜರು

ಹೈದರಾಬಾದ್ ನಲ್ಲಿ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ದುರ್ಯೋಧನ ಪಾತ್ರಧಾರಿ ದರ್ಶನ್, ಹರಿಪ್ರಿಯಾ ಸೇರಿದಂತೆ ಹಲವು ಕಲಾವಿದರು ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಆದ್ರೆ, ಕೃಷ್ಣನ ಪಾತ್ರಧಾರಿ ರವಿಚಂದ್ರನ್ ಇದೇ ತಿಂಗಳು ಆಗಸ್ಟ್ 28ರಂದು ಕುರುಕ್ಷೇತ್ರ ಚಿತ್ರತಂಡ ಸೇರಿಕೊಳ್ಳಲಿದ್ದಾರೆ.

ಕುರುಕ್ಷೇತ್ರದಲ್ಲಿ 'ದ್ರೌಪದಿ ವಸ್ತ್ರಾಪಹರಣ' ಮಾಡುವ ದುಶ್ಯಾಸನ ಯಾರು?

25 ದಿನಗಳ ಚಿತ್ರೀಕರಣ

ರವಿಚಂದ್ರನ್ ಅವರ ಕೃಷ್ಣನ ಪಾತ್ರದ್ದು 25 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಈಗಾಗಲೇ ಕುರುಕ್ಷೇತ್ರ ಸ್ಕ್ರಿಪ್ಟ್ ಪಡೆದುಕೊಂಡಿರುವ ಕ್ರೇಜಿಸ್ಟಾರ್ ಡೈಲಾಗ್ ಅಭ್ಯಾಸ ಕೂಡ ಮಾಡಿಕೊಂಡಿದ್ದಾರಂತೆ.

'ಕುರುಕ್ಷೇತ್ರ'ದಲ್ಲಿ ಕಾಣಿಸದ ಕನ್ನಡದ ಸ್ಟಾರ್ ನಟರು: ಅಸಲಿ ಕಾರಣ ಕೊಟ್ಟ ಮುನಿರತ್ನ!

ಮೀಸೆಯಿಲ್ಲದೇ ರವಿಚಂದ್ರನ್.!

ರವಿಚಂದ್ರನ್ ಅವರು ಮೀಸೆಯಿಲ್ಲದೆ ಇದುವರೆಗೂ ಪಾತ್ರಗಳು ಮಾಡಿಲ್ಲ. ಹೀಗಾಗಿ, ಮೊದಲ ಬಾರಿಗೆ ಮೀಸೆಯಿಲ್ಲದೇ ಕೃಷ್ಣನ ಪಾತ್ರವನ್ನ ಮಾಡಬೇಕಿದೆ. ಆದ್ರೆ, ಮೀಸೆ ತೆಗೆಯಲು ಹಿಂಜರಿಯದ ಕ್ರೇಜಿಸ್ಟಾರ್ ಎದೆ ಮೇಲಿನ ಕೂದಲನ್ನ ಕಳೆದುಕೊಳ್ಳಲು ಬೇಸರವಿದೆ ಎಂದಿದ್ದಾರೆ.

'ಕುರುಕ್ಷೇತ್ರ' ಚಿತ್ರದ ಯಾವ್ಯಾವ ಪಾತ್ರಗಳಲ್ಲಿ ಯಾವ್ಯಾವ ನಟರು ಮಿಂಚಲಿದ್ದಾರೆ ನೋಡಿ..

8 ಕೆ.ಜಿ ತೂಕ ಕಮ್ಮಿ

ಕೃಷ್ಣನ ಪಾತ್ರಕ್ಕಾಗಿ ಎಲ್ಲ ರೀತಿಯ ತಯಾರಿ ನಡೆಸಿರುವ ರವಿಚಂದ್ರನ್ ಸುಮಾರು 8 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ.

'ಬಾಹುಬಲಿ'ಯನ್ನ ಮೀರಿಸುವಂತಿದೆ 'ಕುರುಕ್ಷೇತ್ರ'ದ ಫಸ್ಟ್ ಲುಕ್ ಟೀಸರ್

ಮಾಂಸಹಾರ, ಕಾಫಿ ಬಿಟ್ಟಿದ್ದಾರೆ

ತಮ್ಮ ಹೊಟ್ಟೆಯನ್ನ ಕರಗಿಸಿಕೊಳ್ಳುವ ಸಲುವಾಗಿ ಮಾಂಸಹಾರ ಸೇವನೆ ಮಾಡುತ್ತಿಲ್ಲವಂತೆ. ಅದರ ಜೊತೆಗೆ ಕಾಫಿ ಕುಡಿಯುವ ಅಭ್ಯಾಸವನ್ನ ಕೂಡ ಬಿಟ್ಟಿದ್ದಾರಂತೆ.

ಮೊದಲ ಪೌರಾಣಿಕ ಚಿತ್ರ

ರವಿಚಂದ್ರನ್ ಅವರು ಕನ್ನಡ ಮತ್ತು ಇತರೆ ಭಾಷೆಗಳಲ್ಲಿ ಸೇರಿದಂತೆ ಸುಮಾರು 100 ಸಿನಿಮಾ ಮಾಡಿದ್ದಾರೆ. ಆದ್ರೆ, ಇದುವರೆಗೂ ಪೌರಾಣಿಕ ಪಾತ್ರವನ್ನ ನಿಭಾಯಿಸಿರಲಿಲ್ಲ. ಈಗ ಕೃಷ್ಣನ ಪಾತ್ರ ಮಾಡುವ ಮೂಲಕ ತಮ್ಮ ವೃತ್ತಿ ಜೀವನದಲ್ಲಿ ವಿಶಿಷ್ಟ ಕ್ಷಣವನ್ನ ಅನುಭವಿಸುತ್ತಿದ್ದಾರೆ.

ಕುರುಕ್ಷೇತ್ರ ಮುಗಿಸಿ 'ರಾಜೇಂದ್ರ ಪೊನ್ನಪ್ಪ'

ರವಿಚಂದ್ರನ್ ನಟಿಸಿ, ನಿರ್ದೇಶನ ಮಾಡುತ್ತಿರುವ 'ರಾಜೇಂದ್ರ ಪೊನ್ನಪ್ಪ' ಚಿತ್ರದ ಫಸ್ಟ್ ಶೆಡ್ಯೂಲ್ ಮುಗಿದಿದೆ. ಈಗ 'ಕುರುಕ್ಷೇತ್ರ'ದಲ್ಲಿ ಪಾಲ್ಗೊಳ್ಳಲಿರುವ ಕ್ರೇಜಿಸ್ಟಾರ್ ಪೌರಾಣಿಕ ಚಿತ್ರದ ನಂತರ 'ರಾಜೇಂದ್ರ ಪೊನ್ನಪ್ಪ' ಸೆಕೆಂಡ್ ಹಾಫ್ ಚಿತ್ರೀಕರಣ ಮಾಡಲಿದ್ದಾರೆ.

English summary
ravichandran talk about krishna role in kurukshetra. He will be joining the sets in Hyderabad from August 28 for shooting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada