For Quick Alerts
  ALLOW NOTIFICATIONS  
  For Daily Alerts

  ನಿಮ್ಮ ಹೆಸರು ಕೂಡ ನೆನಪಿರೊಲ್ಲ, ಹಾಗೆ ಆಗ್ತೀರಿ: ಎಚ್ಚರಿಕೆ ನೀಡಿದ ಕ್ರೇಜಿಸ್ಟಾರ್ ರವಿಚಂದ್ರನ್

  |

  ಕೊರೊನಾ ವೈರಸ್ ವಿರುದ್ಧ ಹೋರಾಟ ತೀವ್ರವಾಗಿ ನಡೆಯುತ್ತಿದೆ. ವೈದ್ಯರು, ನರ್ಸ್‌ಗಳು, ಆರೋಗ್ಯ ಕಾರ್ಯಕರ್ತರು, ಪೊಲೀಸರು, ಅಧಿಕಾರಿಗಳು ತಮ್ಮ ಆರೋಗ್ಯ, ಕುಟುಂಬವನ್ನು ಲೆಕ್ಕಿಸದೆ ಹಗಲೂ ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಲಾಕ್‌ಡೌನ್‌ನಲ್ಲಿ ಮನೆಯಲ್ಲಿಯೇ ಇರಿ ಸಾಕು ಎಂದು ಎಷ್ಟೇ ಕೇಳಿಕೊಂಡರೂ, ಶಿಕ್ಷಿಸಿದರೂ ಜನ ಮಾತ್ರ ಕಿವಿಗೊಡುತ್ತಿಲ್ಲ. ಲಾಕ್‌ಡೌನ್ ಉಲ್ಲಂಘಿಸಿ ಪದೇ ಪದೇ ಮನೆಯಿಂದ ಹೊರಬರುತ್ತಿದ್ದಾರೆ. ತಮ್ಮ ಈ ತಪ್ಪು ತಮ್ಮನ್ನು, ತಮ್ಮ ಕುಟುಂಬ ಹಾಗೂ ಸಮುದಾಯವನ್ನು ಬಲಿತೆಗೆದುಕೊಳ್ಳುತ್ತದೆ ಎಂಬ ಅರಿವೂ ಆಗುತ್ತಿಲ್ಲ.

  ಅಭಿನಂದನ್ ವರ್ಧಮಾನ್ ಜೀವನಾಧಾರಿತ ಸಿನಿಮಾದಲ್ಲಿ ಡಿ ಬಾಸ್! | Darshan | Abhinandan | Filmibeat Kannada

  ಅನೇಕ ಸೆಲೆಬ್ರಿಟಿಗಳು ಮನೆಯಲ್ಲಿಯೇ ಇರುವುದು ಏಕೆ ಮುಖ್ಯ ಎಂಬುದನ್ನು ವಿವರಿಸುತ್ತಿದ್ದಾರೆ. ಸಿನಿಮಾ ನಟರಿಂದ ಬಂದ ಮಾತನ್ನಾದರೂ ಅವರ ಅಭಿಮಾನಿಗಳು ಪಾಲಿಸುತ್ತಾರೆ ಎನ್ನುವುದು ಅಧಿಕಾರಿಗಳ ಆಶಯ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ನಾವು ಏನು ಮಾಡಬೇಕು? ನಮ್ಮ ಜವಾಬ್ದಾರಿಗಳೇನು ಎಂದು ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ವಿವರಿಸಿದ್ದಾರೆ. ಬೆಂಗಳೂರು ಸಿಟಿ ಪೊಲೀಸರ ಸಹಯೋಗದಲ್ಲಿ ಸಿದ್ಧಪಡಿಸಿರುವ ವಿಡಿಯೋದಲ್ಲಿ 'ಮಲ್ಲ' ಏನು ಹೇಳಿದ್ದಾರೆ? ಮುಂದೆ ಓದಿ.

  ಡಾ. ರಾಜಕುಮಾರ್ ಆಗ ಹೇಳಿದ್ದ ಮಾತುಗಳು ಈಗಲೂ ಪ್ರಸ್ತುತ, ನೋಡಿ...ಡಾ. ರಾಜಕುಮಾರ್ ಆಗ ಹೇಳಿದ್ದ ಮಾತುಗಳು ಈಗಲೂ ಪ್ರಸ್ತುತ, ನೋಡಿ...

  ದೇವರು ಇಲ್ಲ ಎಂದಲ್ಲ...

  ದೇವರು ಇಲ್ಲ ಎಂದಲ್ಲ...

  ಕೊರೊನಾಗೆ ಬೆಂಕಿ ಹಚ್ಚಬೇಕು ಎಂದರೆ ನಿಮ್ಮನೆ ದೀಪ ಆರಬಾರದು ಎಂದರೆ ನೀವಷ್ಟೂ ಜನ ಮನೆಯಲ್ಲಿರಬೇಕು. ದೇವಸ್ಥಾನಗಳೆಲ್ಲವೂ ಮುಚ್ಚಿದೆ. ಅಂದರೆ ದೇವರು ಇಲ್ಲ ಅಂತಾನಾ? ಡಾಕ್ಟರ್ಸ್‌ಗಳಲ್ಲಿ, ನರ್ಸ್‌ಗಳಲ್ಲಿ, ಪೊಲೀಸರಲ್ಲಿ ಪ್ರತಿಯಬ್ಬರೂ ಸೇವೆ ಮಾಡುತ್ತಿರುವವರಲ್ಲಿ ಆ ದೇವರು ಇದ್ದಾನೆ. ಆ ದೇವರ ಮೇಲೆ ನಿಮಗೆ ನಂಬಿಕೆ ಇದ್ದರೆ ನೀವು ಮಾಡಬೇಕಿರುವುದು ಇಷ್ಟೇ.

  ಅವರ ಋಣ ತೀರಿಸಲಾಗೊಲ್ಲ

  ಅವರ ಋಣ ತೀರಿಸಲಾಗೊಲ್ಲ

  ಅವರಷ್ಟೂ ಜನರಕ್ಕೆ ಒಂದು ಸಲ್ಯೂಟ್, ನಮಸ್ಕಾರ, ಒಂದು ಫ್ಲೈಯಿಂಗ್ ಕಿಸ್ ಕೊಡಿ. ಅವರ ಋಣವನ್ನು ನಾವು ಯಾವತ್ತೂ ತೀರಿಸಲು ಆಗೊಲ್ಲ. ಎಷ್ಟು ಜನ್ಮವೆತ್ತಿದರೂ ತೀರಿಸಲು ಆಗೊಲ್ಲ. ಅದನ್ನು ತೀರಿಸಬೇಕು ಅಂತ ನಿಮಗೆ ಇದ್ದರೆ ನೀವು ಮನೆಯಲ್ಲಿ ಇರಿ. ಅವರನ್ನು ಕೊರೊನಾ ಜತೆ ಹೋರಾಡಲು ಬಿಡಿ. ನಿಮ್ಮ ಜತೆ ಹೋರಾಡುವುದಲ್ಲ ಅವರ ಕೆಲಸ.

  ಸಂಕಷ್ಟದಲ್ಲಿರುವ ಬಡಜನರಿಗೆ ಆಹಾರ ಸಾಮಗ್ರಿ ಹಂಚಿದ ಸಾಧು ಕೋಕಿಲಸಂಕಷ್ಟದಲ್ಲಿರುವ ಬಡಜನರಿಗೆ ಆಹಾರ ಸಾಮಗ್ರಿ ಹಂಚಿದ ಸಾಧು ಕೋಕಿಲ

  ಕೊರೊನಾಗೆ ಅತಿಥಿಯಾಗಬಾರದು

  ಕೊರೊನಾಗೆ ಅತಿಥಿಯಾಗಬಾರದು

  ಕೊರೊನಾಗೆ ತಿಥಿ ಮಾಡಬೇಕು ಎಂದರೆ ನೀವು ಕೊರೊನಾಗೆ ಅತಿಥಿಯಾಗಬಾರದು. ಮನುಷ್ಯನಿಗೆ ಕಷ್ಟ ಬಂದಾಗಲೇ ಅದನ್ನು ಅವನು ಹೇಗೆ ನಿಭಾಯಿಸುತ್ತಾನೆ ಅನ್ನೋದರ ಮೇಲೆ ಅವರ ವ್ಯಕ್ತಿ ವ್ಯಕ್ತಿತ್ವ ಗೊತ್ತಾಗೋದು. ಅಂತಹ ಒಂದು ಪರೀಕ್ಷೆ ನಮ್ಮೆಲ್ಲರಿಗೂ ಬಂದಿದೆ. ಪರೀಕ್ಷೆಯನ್ನು ಪಾಸು ಮಾಡಬೇಕು ಎಂದರೆ ನೀವೆಲ್ಲರೂ ಮನೆಯಲ್ಲಿ ಇರಬೇಕು.

  ಸಿನಿಮಾ ಕಟೌಟ್ ಕಲಾವಿದರ ಮುರಿದ ಬದುಕಿಗೆ ಹೆಗಲು ನೀಡಿದ ಪವರ್ ಸ್ಟಾರ್ಸಿನಿಮಾ ಕಟೌಟ್ ಕಲಾವಿದರ ಮುರಿದ ಬದುಕಿಗೆ ಹೆಗಲು ನೀಡಿದ ಪವರ್ ಸ್ಟಾರ್

  ನಿಮ್ಮ ಹೆಸರು ಪೇಷೆಂಟ್ ನಂಬರ್ ಆಗುತ್ತದೆ

  ಸೋಷಿಯಲ್ ಡಿಸ್ಟೆನ್ಸ್ ಫಾಲೋ ಮಾಡಬೇಕು. ಫೇಲ್ ಆಗಬೇಕು ಎಂದರೆ ನಿಮ್ಮಿಷ್ಟ. ನೀವು ಮನೆಯಿಂದ ಹೊರಬನ್ನಿ. ನಿಮಗೆ ನಿಮ್ಮ ಹೆಸರು ಕೂಡ ನೆನಪಿರೊಲ್ಲ. ಏಕೆಂದರೆ ಅದೊಂದು ಪೇಷೆಂಟ್ ನಂಬರ್ ಆಗಿಬಿಡುತ್ತದೆ. ನೀವು ಪೇಷೆಂಟ್ ಆಗಲು ಬಯಸಿದ್ದೀರಾ ಅಥವಾ ಮನೆಯಲ್ಲಿ ಪೇಷೆನ್ಸ್‌ನಿಂದ ಇರಲು ಬಯಸಿದ್ದೀರಾ?

  ಮತ್ತೊಮ್ಮೆ ನನ್ನ ಕಡೆಯಿಂದ ಸಲ್ಯೂಟ್

  ಮತ್ತೊಮ್ಮೆ ನನ್ನ ಕಡೆಯಿಂದ ಸಲ್ಯೂಟ್

  ಮತ್ತೊಮ್ಮೆ ಡಾಕ್ಟರ್‌ಗಳಿಗೆ, ನರ್ಸ್‌ಗಳಿಗೆ, ಪೊಲೀಸರಿಗೆ, ಅವರ ಕುಟುಂಬದವರಿಗೆ, ಸರ್ಕಾರದವರಿಗೆ ಸೇವೆ ಮಾಡುತ್ತಿರುವ ಪ್ರತಿಯೊಬ್ಬರಿಗೂ ನಮ್ಮ ಕಡೆಯಿಂದೊಂದು ಸಲ್ಯೂಟ್ ಎಂದು ರವಿಚಂದ್ರನ್ ಹೇಳಿದ್ದಾರೆ. ಈ ವಿಡಿಯೋದಲ್ಲಿ ಅವರ ಮಕ್ಕಳಾದ ಮನೋರಂಜನ್ ಮತ್ತು ವಿಕ್ರಂ ಕೂಡ ಕಾಣಿಸಿಕೊಂಡಿದ್ದಾರೆ.

  English summary
  Actor, director V Ravichandran sent a video message to the people to stay at home during the fight against coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X