For Quick Alerts
  ALLOW NOTIFICATIONS  
  For Daily Alerts

  ಮುಂದಿನ ಪಂದ್ಯದಲ್ಲಿ ಆರ್.ಸಿ.ಬಿ ಗೆಲ್ಲೊ ಲಕ್ಷಣಗಳಿವೆ: ಸುನಿ ಭವಿಷ್ಯ

  |
  IPL Cricket 2019: RCB ಬಗ್ಗೆ ಭವಿಷ್ಯ ನುಡಿದ ಫೇಮಸ್ ನಿರ್ದೇಶಕ | Oneindia Kannada

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿನ ಆಟ ಮುಂದುವರಿದಿದೆ. ಈ ಆವೃತ್ತಿಯಲ್ಲಿ ಮೊದಲ ನಾಲ್ಕು ಪಂದ್ಯವನ್ನ ಕೈಚೆಲ್ಲಿರುವ ಆರ್.ಸಿ.ಬಿ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

  ಚೆನ್ನೈ, ಮುಂಬೈ, ಹೈದ್ರಾಬಾದ್, ರಾಜಸ್ತಾನ ತಂಡಗಳ ವಿರುದ್ಧ ಸೋತಿರುವ ಆರ್.ಸಿ.ಬಿ ತಂಡ ಬಗ್ಗೆ ಅಭಿಮಾನಿಗಳು ಕೂಡ ನಂಬಿಕೆ ಕಳೆದುಕೊಂಡಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಈ ಸಲ ಕಪ್ ನಮ್ದೆ ನಮ್ದೆ ಎನ್ನುತ್ತಿದ್ದ ಬೆಂಗಳೂರಿಯನ್ಸ್ ಈಗ ಈ ಸಲನೂ ಕಪ್ ನಮ್ದಲ್ಲ ಎನ್ನುವಂತಾಗಿದೆ.

  ಮುಂಬೈ ವಿರುದ್ಧ ಸೋತ RCB ತಂಡದ ಹಣೆಬರಹ ಹೇಳಿದ ಸಿಂಪಲ್ ಸುನಿ

  ಇಂತಹ ಆರ್.ಸಿ.ಬಿ ತಂಡದ ಅಪ್ಪಟ ಅಭಿಮಾನಿಯಲ್ಲೊಬ್ಬರು ನಿರ್ದೇಶಕ ಸಿಂಪಲ್ ಸುನಿ. ಆರ್.ಸಿ.ಬಿ ಎಷ್ಟೇ ಪಂದ್ಯ ಸೋತರು, ನಮ್ಮ ಒಲವು ನಮ್ಮ ತಂಡಕ್ಕೆ ಮಾತ್ರ' ಎಂಬ ವಿಶ್ವಾಸದಲ್ಲಿರುವ ಸುನಿ, 'ಮುಂದಿನ ಪಂದ್ಯದಲ್ಲಿ ಆರ್.ಸಿ.ಬಿ ಗೆಲ್ಲೊ ಲಕ್ಷಣಗಳಿವೆ' ಎಂದು ಭವಿಷ್ಯ ನುಡಿದಿದ್ದಾರೆ.

  ಈ ಸಿನಿಮಾ ನೋಡಿ ಸುನಿ ಹೆದರಿದ್ರಂತೆ, ಆಶ್ಚರ್ಯವಾದರಂತೆ

  ಸುನಿ ಅವರ ಈ ಮಾತಿಗೆ ರಾಯಲ್ ಚಾಲೆಂಜರ್ಸ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದು, ಈ ಮಾತು ನಿಜ ಆಗ್ಲಿ ಎಂದು ಆಶಯ ವ್ಯಕ್ತಪಡಿಸುತ್ತಿದ್ದಾರೆ. ಸತತ 4 ಪಂದ್ಯ ಸೋತು ನಿರಾಸೆಯಲ್ಲಿರುವ ಆರ್.ಸಿ.ಬಿ ಮುಂದಿನ ಇಂದಿನಿಂದ ಗೆಲುವಿನ ದಾರಿಗೆ ಮರುಳಲಿದೆ ಎಂಬ ನಿರೀಕ್ಷೆ ಹೆಚ್ಚಾಗಿದೆ.

  ನಾಳೆ ರಾತ್ರಿ 8 ಗಂಟೆಗೆ ಕೆಕೆಆರ್ ವಿರುದ್ಧ ಆರ್.ಸಿ.ಬಿ ಐದನೇ ಪಂದ್ಯವಾಡಲಿದೆ. ಸುನಿ ಅವರು ಮಾತು ನಿಜಾ ಆಗುತ್ತಾ ಅಥವಾ ಮತ್ತೆ ಅದೇ ಸೋಲಿನಿಂದ ಅಭಿಮಾನಿಗಳನ್ನ ನಿರಾಸೆ ಮಾಡುತ್ತಾ ಕಾದು ನೋಡೋಣ.

  English summary
  Kannada director simple suni has taken his twitter account to express his opinion about royal challengers bangalore team. RCB will win matches from today says suni.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X