For Quick Alerts
  ALLOW NOTIFICATIONS  
  For Daily Alerts

  ರಿಯಲ್ ಸ್ಟಾರ್ ಉಪೇಂದ್ರ 'ಬ್ರಹ್ಮ' ಫಸ್ಟ್ ಲುಕ್ ಔಟ್

  By Rajendra
  |

  ಇದೇ ಮೊದಲ ಬಾರಿಗೆ ಆರ್ ಚಂದ್ರು ಅವರು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆಕ್ಷ ಕಟ್ ಹೇಳುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಚಿತ್ರಕ್ಕೆ 'ಬ್ರಹ್ಮ' ಎಂದು ಹೆಸರಿಟ್ಟಿರುವುದು ಗೊತ್ತೇ ಇದೆ. ಈ ಚಿತ್ರದ ಫಸ್ಟ್ ಲುಕ್ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ.

  ಬುದ್ಧಿವಂತ ನಿರ್ದೇಶಕ ಹಾಗೂ ನಟನೊಬ್ಬನೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ ಎನ್ನುವ ಆರ್ ಚಂದ್ರು ಅವರು, ಈ ಚಿತ್ರದ ಮೂಲಕ ಹೊಸ ಮ್ಯಾಜಿಕ್ ಮಾಡಲು ಮುಂದಾಗಿದ್ದಾರೆ. ಚಾರ್ ಮಿನಾರ್ ಚಿತ್ರದ ಬಳಿಕ ಚಂದ್ರು ನಿರ್ದೇಶಿಸುತ್ತಿರುವ ಚಿತ್ರ ಇದಾಗಿದೆ.

  ಬ್ರಹ್ಮ ಚಿತ್ರವನ್ನು ಮಂಜುನಾಥ ಬಾಬು ಅವರು ಸರಿಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸುತ್ತಿದ್ದಾರೆ. ಅಂದಹಾಗೆ ಇದು ಕನ್ನಡ, ತೆಲುಗಿನ ದ್ವಿಭಾಷಾ ಚಿತ್ರ. 'The Leader' ಎಂಬುದು ಚಿತ್ರದ ಅಡಿಬರಹ.

  ಎರಡು ಭಾಷೆಗೆ ಹೊಂದುವ ಕಲಾವಿದರು

  ಎರಡು ಭಾಷೆಗೆ ಹೊಂದುವ ಕಲಾವಿದರು

  ಕನ್ನಡ, ತೆಲುಗಿನಲ್ಲಿ ಚಿತ್ರ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಎರಡೂ ಭಾಷೆಗಳಿಗೆ ಹೊಂದುವ ಕಲಾವಿದರು ಚಿತ್ರದಲ್ಲಿರುತ್ತಾರೆ. ಇದೊಂದು ಪಕ್ಕಾ ಆಕ್ಷನ್ ಚಿತ್ರ ಎಂದಷ್ಟೇ ಹೇಳಿದ್ದಾರೆ ಚಂದ್ರು. ಚಿತ್ರದ ಫಸ್ಟ್ ಲುಕ್ ಚಿತ್ರಗಳನ್ನು ನೋಡುತ್ತಿದ್ದರೆ ಇದೊಂದು ಸೋಷಿಯೋ ಫ್ಯಾಂಟಸಿ ಚಿತ್ರ ಎಂಬ ಭಾವನೆ ಬರುತ್ತದೆ.

  ಇದೇನಪ್ಪಾ ಇದು ಗೆಟಪ್?

  ಇದೇನಪ್ಪಾ ಇದು ಗೆಟಪ್?

  ಇದೇನಪ್ಪಾ ಇದು ಗೆಟಪ್? ಆದರೆ ಈ ಗೆಟಪನ್ನು ಯಾವುದಾದರೂ ಹಾಡಿನಲ್ಲೂ ಬಳಸಿಕೊಂಡಿರಬಹುದಲ್ಲವೆ? ಚಿತ್ರದ ನಾಯಕಿ ಯಾರು? ಪಾತ್ರವರ್ಗದಲ್ಲಿ ಯಾರು ಇರುತ್ತಾರೆ ಎಂಬ ವಿವರಗಳು ಇನ್ನಷ್ಟೇ ಹೊರಬೀಳಬೇಕು.

  ಇದೇ ಕಥೆ ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಸಿಕ್ಕಿತ್ತಂತೆ

  ಇದೇ ಕಥೆ ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಸಿಕ್ಕಿತ್ತಂತೆ

  ಇದೇ ಕಥೆಯನ್ನು ಆರ್ ಚಂದ್ರು ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಹೇಳಿದ್ದರಂತೆ. ಆದರೆ ಅವರು ಈಗ ಟೈಮಿಲ್ಲ ಎಂದು ಹೇಳಿದ್ದರಂತೆ. ಈಗ ಅದೇ ಕಥೆಗೆ ಹೊಸ ಶೀರ್ಷಿಕೆ ಕೊಟ್ಟು ಉಪ್ಪಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂಬ ಸುದ್ದಿಯೂ ಇದೆ.

  ಶಿವಣ್ಣ ಆಗಲ್ಲ ಎಂದಿದ್ದ ಪ್ರಾಜೆಕ್ಟ್ ಇದು

  ಶಿವಣ್ಣ ಆಗಲ್ಲ ಎಂದಿದ್ದ ಪ್ರಾಜೆಕ್ಟ್ ಇದು

  ಶಿವಣ್ಣ ಜೊತೆಗಿನ ಮೈಲಾರಿ ಚಿತ್ರದ ಬಳಿಕ ಚಂದ್ರು ಇದೇ ಕಥೆಯನ್ನು ಹೇಳಿ ಚಿತ್ರಕ್ಕೆ ಮಲ್ಲೇಶಿ, ದಿ ಲೀಡರ್ ಎಂದು ಹೆಸರಿಟ್ಟಿದ್ದರಂತೆ. ಆದರೆ ಕಾರಣಾಂತಗಳಿಂದ ಶಿವಣ್ಣ ಒಲ್ಲೆ ಎಂದ ಮೇಲೆ ಇದೇ ಪ್ರಾಜೆಕ್ಟ್ ಉಪ್ಪಿ ಮುಂದೆ ಬಂತು ಎಂಬ ಮಾತುಗಳು ಕೇಳಿಬರುತ್ತಿವೆ.

  ಕುತೂಹಲ ಮೂಡಿಸಿರುವ ಚಿತ್ರ

  ಕುತೂಹಲ ಮೂಡಿಸಿರುವ ಚಿತ್ರ

  ಟೋಪಿವಾಲ ಚಿತ್ರದ ಬಳಿಕ ಉಪೇಂದ್ರ ಒಪ್ಪಿಕೊಳ್ಳುತ್ತಿರುವ ಚಿತ್ರ ಇದಾಗಿದೆ. ಟೋಪಿವಾಲ ಚಿತ್ರದ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿತಾದರೂ ಉಪ್ಪಿ ವೃತ್ತಿಜೀವನದಲ್ಲಿ ತಿರುವು ನೀಡುವ ಚಿತ್ರ ಎನ್ನಿಸಿಕೊಳ್ಳಲಿಲ್ಲ. ಈಗ ಬ್ರಹ್ಮ ಚಿತ್ರದ ಬಗ್ಗೆ ಅವರು ಆಸಕ್ತಿ ತೋರಿರುವುದು ಅವರ ಅಭಿಮಾನಿ ವಲಯದಲ್ಲಿ ಕುತೂಹಲ ಕೆರಳಿಸಿದೆ.

  ಗುರುಕಿರಣ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ

  ಗುರುಕಿರಣ್ ಸಂಗೀತ, ಶೇಖರ್ ಚಂದ್ರ ಛಾಯಾಗ್ರಹಣ

  ಈ ಚಿತ್ರದ ಹಾಡುಗಳ ಧ್ವನಿಮುದ್ರಣ ನಡೆದಿದೆ. ಗುರುಕಿರಣ್ ಅವರ ಸಂಗೀತ ಚಿತ್ರಕ್ಕಿರುವುದು ವಿಶೇಷ. ಥ್ರಿಲ್ಲರ್ ಮಂಜು ಅವರ ಸಾಹಸ ಹಾಗೂ ಶೇಖರ್ ಚಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

  English summary
  Real Stare Upendra lead Kannada film 'Brahma' first look is out. The film is directed by Charminar fame R Chandru. It's a Kannada, Telugu bilingual film. The cast and crew yet to be finalised. However the music scores Gurukiran.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X