For Quick Alerts
  ALLOW NOTIFICATIONS  
  For Daily Alerts

  'ಕಠಾರಿವೀರ' ಉಪೇಂದ್ರ ವಿಶೇಷ ಸಂದರ್ಶನ

  |

  ಕಠಾರಿವೀರ ಸುರಸುಂದರಾಂಗಿ ಚಿತ್ರ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ತಮ್ಮ ವೃತ್ತಿ ಜೀವನದ ಭಾರೀ ಬಜೆಟ್ ನ ಚಿತ್ರ ಬಿಡುಗಡೆಗೆ ಮುನ್ನ ದಿನ ರಿಯಲ್ ಸ್ಟಾರ್ ಉಪೇಂದ್ರ ಅವರೊಂದಿಗೆ ಒನ್ಇಂಡಿಯಾದ ಪ್ರಕಾಶ್ ಉಪಾಧ್ಯಾಯ ನಡೆಸಿದ ವಿಶೇಷ ಸಂದರ್ಶನದ ಆಯ್ದ ಭಾಗ ಇಂತಿದೆ:

  ಪ್ರ. ಉಪೇಂದ್ರ ಸ್ಯಾಂಡಲ್ ವುಡ್ ನಲ್ಲಿ ಟ್ರೆಂಡ್ ಸೆಟ್ಟರ್ ಎನ್ನುವ ಮಾತಿದೆ, 3ಡಿ ತಂತ್ರಜ್ಞಾನದ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯಲು ಹೊರಟಿದ್ದೀರಿ. ಈ 3ಡಿ ಚಿತ್ರದ ಕಾನ್ಸೆಪ್ಟ್ ಹೇಗೆ ಬಂತು?

  ಉಪ್ಪಿ: ಮೊದಲು 3ಡಿ ಕಾನ್ಸೆಪ್ಟ್ ಬಗ್ಗೆ ಐಡಿಯಾ ಇರಲಿಲ್ಲ. ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲಂ ಸಿಟಿಯ ಅದ್ದೂರಿ ಸೆಟ್ ಈ ಬಗ್ಗೆ ಆಲೋಚಿಸುವಂತೆ ಮಾಡಿತು. 3ಡಿ ಬಗ್ಗೆ ನಮಗೆ ಮೊದಲು ಐಡಿಯಾ ಕೊಟ್ಟಿದ್ದು ಕ್ಯಾಮಾರಮನ್ ವೇಣು. ವೇಣು ಅವರ ಸಲಹೆಗೆ ನಿರ್ಮಾಪಕ ಮುನಿರತ್ನ ಮತ್ತು ನಿರ್ದೇಶಕ ಸುರೇಶ ಕೃಷ್ಣ ಸಕಾರಾತ್ಮಕವಾಗಿ ಸ್ಪಂದಿಸಿದರು.

  ಪ್ರ: 3ಡಿ, ಅತ್ಯಾಧುನಿಕ ಗ್ರಾಫಿಕ್ಸ್ ಬಗ್ಗೆ ದಕ್ಷಿಣ ಭಾರತ ಚಿತ್ರರಂಗ ಇತ್ತೀಚಿನ ದಿನಗಳಲ್ಲಿ ಹೆಚ್ಚು ಗಮನ ಹರಿಸುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ?

  ಉಪ್ಪಿ: ಜನ ಚೇಂಜ್ ಕೇಳ್ತಾ ಇದ್ದಾರೆ. 3ಡಿ ತಂತ್ರಜ್ಞಾನದ ಮೇಲೆ ಕೆಲಸ ಮಾಡುವುದು ಬಹಳ ಕಷ್ಟ. ಥಿಯೇಟರ್ ಗಳಲ್ಲಿ 3ಡಿ ಪ್ರದರ್ಶಿಸುವ ಸೌಕರ್ಯ ಇರಬೇಕು. ಕೆಲ ಸಿನಿಮಾ ಮಂದಿರಗಳಿಗೆ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲು ನಿರ್ಮಾಪಕ ಮುನಿರತ್ನ ತಮ್ಮ ಜೇಬಿನಿಂದ ಹಣ ನೀಡಿ ಸಹಾಯ ಮಾಡಿದ್ದಾರೆ.

  ಪ್ರ: ಕಠಾರಿವೀರ ಚಿತ್ರದ ಪ್ರೋಮೋ ನೋಡಿದರೆ ಇದು ಮತ್ತೊಂದು ಹಾಸ್ಯ ಪ್ರಧಾನ ಚಿತ್ರ ಎಂದೆನಿಸುತ್ತದೆ. ಇದನ್ನು ರಕ್ತ ಕಣ್ಣೀರು ಚಿತ್ರದ ಮುಂದುವರಿದ ಭಾಗ ಎನ್ನಬಹುದೇ?

  ಉಪ್ಪಿ: ರಕ್ತ ಕಣ್ಣೀರು ಚಿತ್ರದಷ್ಟು ಈ ಚಿತ್ರ ಗಂಭೀರವಾಗಿಲ್ಲ. ಇದೊಂದು ಕಾಮಿಡಿ ಚಿತ್ರ ಅನ್ನೋಕೆ ಅಡ್ಡಿಯಿಲ್ಲ. ಕ್ಲೈಮ್ಯಾಕ್ಸ್ ನಲ್ಲಿ ಒಂದು ಸಂದೇಶ ನೀಡಿದ್ದೇವೆ.

  ಪ್ರ: ಕಠಾರಿವೀರ ಚಿತ್ರದಲ್ಲಿ ನಿಮ್ಮ ಪಾತ್ರದ ಬಗ್ಗೆ?

  ಉಪ್ಪಿ: ದ್ವಿಪಾತ್ರದಲ್ಲಿ ಕಾಣಿಸುತ್ತಿದ್ದೇನೆ. ರಕ್ತ ಕಣ್ಣೀರು ಚಿತ್ರದಲ್ಲಿ ದುರಂತ ಪಾತ್ರದಲ್ಲಿ ಸಾಯುವ ಮೋಹನ್ ಮತ್ತು ಅವನ ಮಗನ ಪಾತ್ರದಲ್ಲಿ. ನರಕದಲ್ಲಿ ಇಬ್ಬರೂ ಮುಖಾಮುಖಿಯಾಗುತ್ತಾರೆ.

  ಪ್ರ: ಉಪೇಂದ್ರ ಅವರ ಚಿತ್ರವೆಂದರೆ ಹೆಚ್ಚಾಗಿ ಡೈಲಾಗ್ ಪ್ರಧಾನ ಚಿತ್ರ. ನಿಮ್ಮ ಇಮೇಜ್ ಗೆ ತಕ್ಕಂತೆ ಚಿತ್ರಕಥೆ ರೂಪಿಸಲಾಗಿದೆಯೇ?

  ಉಪ್ಪಿ: ಎಸ್. ಚಿತ್ರದಲ್ಲಿ ಡೈಲಾಗ್ ಜೀವಾಳ. ಅಭಿಮಾನಿಗಳು ಇದನ್ನು ಇಷ್ಟ ಪಡುತ್ತಾರೆ ಎನ್ನುವ ನಂಬಿಕೆಯಲ್ಲಿದ್ದೇನೆ.

  ಪ್ರ: ಗೌರಮ್ಮ ಚಿತ್ರದ ನಂತರ ರಮ್ಯಾ ಜೊತೆ ಇದು ನಿಮ್ಮ ಎರಡನೇ ಚಿತ್ರ. ರಮ್ಯಾ ಬಗ್ಗೆ ಸ್ವಲ್ಪ ಹೇಳಿ.

  ಉಪ್ಪಿ: ಈ ಚಿತ್ರದಲ್ಲಿ ರಮ್ಯಾ ಬಹಳ ಸುಂದರವಾಗಿ ಕಾಣಿಸಿದ್ದಾರೆ. ಅವರೊಬ್ಬರು ಪ್ರತಿಭಾನ್ವಿತ ನಟಿ.

  ಪ್ರ: ಅಂಬರೀಷ್ ಮತ್ತು ದೊಡ್ಡಣ್ಣ ಬಗ್ಗೆ?

  ಉಪ್ಪಿ: ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಯಮಧರ್ಮ ಮತ್ತು ಚಿತ್ರಗುಪ್ತನ ಪಾತ್ರದಲ್ಲಿ ನಟಿಸಿದ್ದಾರೆ. ಎರಡೂ ಪಾತ್ರ ಇಬ್ಬರಿಗೂ ಚೆನ್ನಾಗಿ ಒಗ್ಗುತ್ತೆ.

  ಪ್ರ: ಮುತ್ತಪ್ಪ ರೈ ರೋಲ್ ಬಗ್ಗೆ?

  ಉಪ್ಪಿ: ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿಗೆ ತಿಳಿಯಬೇಕಿದ್ದರೆ ಚಿತ್ರ ನೋಡಿ.

  ಪ್ರ: ನಿರ್ದೇಶಕರ ಬಗ್ಗೆ ಮತ್ತು ನಿರ್ದೇಶನದಲ್ಲಿ ಕೈಯಾಡಿಸಿದ್ದೀರಾ?

  ಉಪ್ಪಿ: ಸುರೇಶ್ ಕೃಷ್ಣ ಗ್ರೇಟ್ ಡೈರೆಕ್ಟರ್. ಅವರು, ಜನಾರ್ಧನ ಮಹರ್ಷಿ ಮತ್ತು ಮುನಿರತ್ನ ಡೈಲಾಗ್, ಚಿತ್ರಕಥೆ ಹಣೆದಿದ್ದಾರೆ. ನಾನು ಕೆಲವೊಂದು ಸಲಹೆ ನೀಡಿದ್ದೇನೆ.

  ಪ್ರ: ಕೊನೆಯದಾಗಿ ಕನ್ನಡಿಗರಿಗೆ ಮತ್ತು ನಿಮ್ಮ ಅಭಿಮಾನಿಗಳಿಗೆ ಏನು ಹೇಳಲು ಬಯಸುತ್ತೀರಿ?

  ಉಪ್ಪಿ: ಕನ್ನಡದಲ್ಲಿ ಇದೊಂದು ವಿನೂತನ ಪ್ರಯೋಗ. ನಿಮಗೆ ಚಿತ್ರ ಎಲ್ಲೂ ಬೋರ್ ಹೊಡೆಯೋಲ್ಲಾ. ಚಿತ್ರಮಂದಿರಕ್ಕೆ ಕುಟುಂಬ ಸಮೇತ ಬಂದು ಸಿನಿಮಾ ನೋಡಿ. ನಿಮ್ಮ ಪ್ರೀತಿ, ಅಭಿಮಾನವೇ ನಮಗೆ ಶ್ರೀರಕ್ಷೆ. ಕನ್ನಡ ಚಿತ್ರವನ್ನು ಮತ್ತು ಚಿತ್ರರಂಗವನ್ನು ಬೆಳೆಸಿ..

  ಪ್ರ: ಕಠಾರಿವೀರ ಚಿತ್ರಕ್ಕೆ ಒಳ್ಳೆದಾಗಲಿ. ಆಲ್ ದಿ ಬೆಸ್ಟ್..

  ಉಪ್ಪಿ: ಥ್ಯಾಂಕ್ಸ್

  English summary
  Real Star Upendra speaks about much awaited 3D Kannada movie Katari Veera Surasundarangi in an exclusive interview with our reporter Prakash Upadhyaya. Katari Veera Surasundarangi set to release on May 10, 2012. Upendra, Ramya, Ambareesh are in the lead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X