»   » ಕೆ.ಪಿ.ಜೆ.ಪಿಗೆ ಉಪೇಂದ್ರ ಗುಡ್ ಬೈ: ಹೊಸ 'ಪ್ರಜಾಕೀಯ' ಪಕ್ಷ ಕಟ್ಟಲು ನಿರ್ಧಾರ!

ಕೆ.ಪಿ.ಜೆ.ಪಿಗೆ ಉಪೇಂದ್ರ ಗುಡ್ ಬೈ: ಹೊಸ 'ಪ್ರಜಾಕೀಯ' ಪಕ್ಷ ಕಟ್ಟಲು ನಿರ್ಧಾರ!

Posted By:
Subscribe to Filmibeat Kannada
ಕೆ.ಪಿ.ಜೆ.ಪಿಗೆ ಉಪೇಂದ್ರ ಗುಡ್ ಬೈ: ಹೊಸ 'ಪ್ರಜಾಕೀಯ' ಪಕ್ಷ ಕಟ್ಟಲು ನಿರ್ಧಾರ | Filmibeat Kannada

'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ'ಗೆ ರಿಯಲ್ ಸ್ಟಾರ್ ಉಪೇಂದ್ರ 'ದೊಡ್ಡ ನಮಸ್ಕಾರ' ಹಾಕಿದ್ದಾರೆ. ಕೆ.ಪಿ.ಜೆ.ಪಿ ಪಕ್ಷದಿಂದ ಹೊರಬರಲು ಉಪೇಂದ್ರ ನಿರ್ಧಾರ ಮಾಡಿದ್ದಾರೆ.

ಕನಸಿನ ಕರ್ನಾಟಕ ಕಟ್ಟಲು, ಭವ್ಯ ಭಾರತ ನಿರ್ಮಾಣ ಮಾಡಲು ರಾಜಕೀಯ ಅಲ್ಲ.. ಅಲ್ಲ... 'ಪ್ರಜಾಕೀಯ'ಕ್ಕೆ 'ಬುದ್ಧಿವಂತ' ಉಪೇಂದ್ರ ಧುಮುಕಿದರು. ಸ್ವತಂತ್ರ ಪಕ್ಷ ಸ್ಥಾಪನೆ ಮಾಡುವುದಾಗಿ ಮೊದಲು ಘೋಷಿಸಿದ್ದ ಉಪೇಂದ್ರ, ನಂತರ ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಅದಾಗಲೇ ನೋಂದಣಿ ಆಗಿದ್ದ 'ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ'ಗೆ ರಾಷ್ಟ್ರೀಯ ಅಧ್ಯಕ್ಷ ಆದರು.

ಕೆ.ಪಿ.ಜೆ.ಪಿ ಪಕ್ಷದಿಂದ ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿರುವಾಗಲೇ, ಕೆ.ಪಿ.ಜೆ.ಪಿ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಅಭ್ಯರ್ಥಿಗಳಿಗೆ ಬಿ-ಫಾರ್ಮ್ ಹಂಚಿಕೆ ಮಾಡಲು ಸೈನಿಂಗ್ ಅಥಾರಿಟಿಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉಪೇಂದ್ರ ಹಾಗೂ ಪಕ್ಷದ ಸಂಸ್ಥಾಪಕ ಮಹೇಶ್ ಗೌಡ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿತ್ತು.

ಈ ಹಿನ್ನಲೆಯಲ್ಲಿ ಇಂದು ರುಪ್ಪೀಸ್ ರೆಸಾರ್ಟ್ ನಲ್ಲಿ ಉಪೇಂದ್ರ ಅಭ್ಯರ್ಥಿಗಳೊಂದಿಗೆ ಸಭೆ ನಡೆಸಿದರು. ಸಭೆ ನಡೆಸಿದ ಬಳಿಕ ಕೆ.ಪಿ.ಜೆ.ಪಿ ಪಕ್ಷಕ್ಕೆ ರಾಜೀನಾಮೆ ನೀಡಲು ಒಮ್ಮತ ನಿರ್ಣಯ ತೆಗೆದುಕೊಳ್ಳಲಾಗಿದೆ. ಮುಂದೆ ಓದಿರಿ...

'ಕೆ.ಪಿ.ಜೆ.ಪಿ'ಗೆ ಉಪೇಂದ್ರ ಗುಡ್ ಬೈ

''ಇವತ್ತು ನಾವೆಲ್ಲರೂ ಸೇರಿ ಒಂದು ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ. ಅದೇನು ಅಂದ್ರೆ, ಇವತ್ತು ನಾನು ಮತ್ತು ನನ್ನೊಂದಿಗೆ ಇರುವ ನಾಲ್ಕೈದು ಜನ ಕೆ.ಪಿ.ಜೆ.ಪಿಗೆ ರಾಜೀನಾಮೆ ನೀಡಿ, ಕೈಮುಗಿಯುತ್ತೇವೆ. ಇನ್ಮೇಲೆ ನಮಗೂ-ಕೆ.ಪಿ.ಜೆ.ಪಿ ಪಕ್ಷಕ್ಕೂ ಸಂಬಂಧ ಇರಲ್ಲ'' - ಉಪೇಂದ್ರ

ಕೆಪಿಜೆಪಿ ವಿವಾದದ ಬಗ್ಗೆ ಉಪೇಂದ್ರ ಏನಂತಾರೆ.? ಸೈನಿಂಗ್ ಅಥಾರಿಟಿ ಯಾಕ್ಬೇಕು.?

ಹೊಸ ಪಕ್ಷ ಸ್ಥಾಪನೆಗೆ ನಿರ್ಧಾರ

''ನಾವೆಲ್ಲರೂ ಸೇರಿ ಇನ್ನೊಂದು ತೀರ್ಮಾನಕ್ಕೆ ಬಂದಿದ್ದೇವೆ. ಅದೇನು ಅಂದ್ರೆ, ನಾವೇ 'ಪ್ರಜಾಕೀಯ' ಕಾನ್ಸೆಪ್ಟ್ ನ ಇಟ್ಟುಕೊಂಡು ಇವತ್ತಿಂದಲೇ ಹೊಸ ಪಕ್ಷ ಸ್ಥಾಪನೆ ಮಾಡಲು ರೆಡಿ ಆಗುತ್ತೇವೆ. ನಮ್ಮ ಪಕ್ಷದ ಮೂಲಕ 'ಪ್ರಜಾಕೀಯ'ವನ್ನ ಜನರಿಗೆ ತಲುಪಿಸುತ್ತೇವೆ'' - ಉಪೇಂದ್ರ

ಭಿನ್ನಮತ ಸ್ಫೋಟ: ಕೆಪಿಜೆಪಿ ಪಕ್ಷದಿಂದ ಹೊರಬರ್ತಾರಾ ಉಪೇಂದ್ರ.?

ಪಾರದರ್ಶಕ ಸರ್ಕಾರ ತರಲು ಪ್ರಯತ್ನ

''ನಾವು ಮಾಡಿರುವ ಮ್ಯಾನಿಫೆಸ್ಟೋ, ನಮಗೆ ಬೇಕಾಗಿರುವ ಬದಲಾವಣೆ, ಪಾರದರ್ಶಕ ಸರ್ಕಾರವನ್ನ ತರಲು ನಾವು ಪ್ರಯತ್ನ ಪಡುತ್ತೇವೆ. ಇಂದಿರಾ ಕ್ಯಾಂಟೀನ್ ಮೂಲಕ ಜನರಿಗೆ ಊಟ ಸಿಗುತ್ತಿದೆ. ಮೂರು ತಿಂಗಳಲ್ಲಿ ಇಂದಿರಾ ಕ್ಯಾಂಟೀನ್ ಮಾಡಿದ್ದಾರೆ. ಇದೇ ತರಹ ಸರ್ಕಾರಿ ಶಾಲೆ ಯಾಕೆ ಮಾಡಬಾರದು.? ಇಂತಹ ಡಿಮ್ಯಾಂಡ್ ನ ನಾವು ಇಡುತ್ತಲೇ ಇರುತ್ತೇವೆ'' - ಉಪೇಂದ್ರ

ಪ್ರತ್ಯೇಕ ಹೊಸ ಪಕ್ಷ ಕಟ್ಟಲು ಉಪೇಂದ್ರ ಮಾಡಿರುವ ಮಾಸ್ಟರ್ ಪ್ಲಾನ್ ಇದು.?

ಆದಷ್ಟು ಬೇಗ 'ಪ್ರಜಾಕೀಯ' ಸ್ಥಾಪನೆ

''ಆದಷ್ಟು ಬೇಗ 'ಪ್ರಜಾಕೀಯ' ಪಕ್ಷ ಸ್ಥಾಪನೆ ಮಾಡುತ್ತೇವೆ. ಆದರೆ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಇಲ್ಲಾಂದ್ರೆ, ಮುಂಬರುವ ಕಾರ್ಪೊರೇಶನ್, ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ಸ್ಪರ್ಧಿಸುತ್ತೇವೆ. ನಮ್ಮ ಪ್ರಯತ್ನ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಯಾವುದೇ ಕಾರಣಕ್ಕೂ ನಾನು ಪ್ರಜಾಕೀಯ ಬಿಟ್ಟು ರಾಜಕೀಯ ಮಾಡಲ್ಲ'' - ಉಪೇಂದ್ರ

ಚಿಹ್ನೆ ಸಿಕ್ಕರೆ, ಬರುವ ಚುನಾವಣೆಯಲ್ಲಿ ಸ್ಪರ್ಧೆ

''ಪಕ್ಷ ಸ್ಥಾಪನೆ ಮಾಡಿ, ಚಿಹ್ನೆ ಸಿಕ್ಕರೆ, ಈ ಚುನಾವಣೆಯಲ್ಲೇ ನಾವು ಸ್ಪರ್ಧಿಸುತ್ತೇವೆ. ಈಗಲೇ ಪಕ್ಷ ಸ್ಥಾಪನೆ ಮಾಡುವ ಬಗ್ಗೆ ನಾವು ವಕೀಲರ ಬಳಿ ಮಾತುಕತೆ ನಡೆಸಿದ್ದೇನೆ. ಒಂದಲ್ಲ ಒಂದು ಬರುತ್ತೆ, ಪ್ರಜೆಗಳೇ ರಾಜ್ಯ ಆಳುತ್ತಾರೆ'' - ಉಪೇಂದ್ರ

English summary
Followed by KPJP Crisis, Upendra to give resignation to KPJP Party and launch new party.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada