For Quick Alerts
  ALLOW NOTIFICATIONS  
  For Daily Alerts

  ಡೈರೆಕ್ಷನ್ ಸಿನಿಮಾ ಸೇರಿದಂತೆ ಉಪ್ಪಿ ಕೈಯಲ್ಲಿರುವ ಚಿತ್ರಗಳ ವಿವರ

  |

  ಸೆಪ್ಟೆಂಬರ್ 18 ರಂದು ರಿಯಲ್ ಸ್ಟಾರ್ ಉಪೇಂದ್ರ ಅವರ ಹುಟ್ಟುಹಬ್ಬ. ಉಪ್ಪಿ ಬರ್ತಡೇಗೆ ಹೊಸ ಸಿನಿಮಾಗಳು ಸೆಟ್ಟೇರಬಹುದು ಎಂಬ ನಿರೀಕ್ಷೆ ಹೆಚ್ಚಿತ್ತು. ವಿಶೇಷವಾಗಿ ಡೈರೆಕ್ಷನ್ ಸಿನಿಮಾದ ಬಗ್ಗೆ ಏನಾದರೂ ಅಪ್‌ಡೇಟ್ ಸಿಗಬಹುದು ಎಂದು ಅಂದಾಜಿಸಲಾಗಿತ್ತು.

  ನಿರೀಕ್ಷೆಯಂತೆ ಕಬ್ಜ ಚಿತ್ರತಂಡ ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಆರ್ ಚಂದ್ರು ನಿರ್ದೇಶನ ಮಾಡ್ತಿರುವ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಿಯಲ್ ಸ್ಟಾರ್ ಅಂಡರ್‌ವರ್ಲ್ಡ್ ಡಾನ್ ಆಗಿ ನಟಿಸುತ್ತಿದ್ದಾರೆ. ಕಿಚ್ಚ ಸುದೀಪ್ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ.

  ಉಪೇಂದ್ರ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಕೊಟ್ಟ ರಾಮ್‌ ಗೋಮಾಲ್ ವರ್ಮಾಉಪೇಂದ್ರ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಕೊಟ್ಟ ರಾಮ್‌ ಗೋಮಾಲ್ ವರ್ಮಾ

  ಕಬ್ಜ ಸಿನಿಮಾ ಬಿಟ್ಟು ಉಪೇಂದ್ರ ಕೈಯಲ್ಲಿ ಇನ್ನು ಹಲವು ಚಿತ್ರಗಳಿವೆ. ಈಗಾಗಲೇ ಎರಡು ಸಿನಿಮಾ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ. ಮತ್ತೆರಡು ಪ್ರಾಜೆಕ್ಟ್ ಶುರುವಾಗಬೇಕಿದೆ.

  - ಉಪೇಂದ್ರ, ವೇದಿಕಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಹೋಮ್ ಮಿನಿಸ್ಟರ್' ಸಿನಿಮಾ ಶೂಟಿಂಗ್ ಮುಗಿಸಿದೆ. ಸುಮನ್, ಅಭಿಮನ್ಯು ಸಿಂಗ್, ತಾನ್ಯಾ ಹೋಪ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಹರಿ ನಾನು ಈ ಚಿತ್ರ ನಿರ್ದೇಶಿಸಿದ್ದು, ಗಿಬ್ರನ್ ಸಂಗೀತ ನೀಡಿದ್ದಾರೆ.

  - ರವಿಚಂದ್ರನ್ ಮತ್ತು ಉಪೇಂದ್ರ ನಟನೆಯ ತ್ರಿಶೂಲಂ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಕನಕಪುರ ಶ್ರೀನಿವಾಸ್ ನಿರ್ಮಾಣದ ಈ ಚಿತ್ರವನ್ನು ಓ ಪ್ರಕಾಶ್ ರಾವ್ ನಿರ್ದೇಶಿಸಿದ್ದಾರೆ. ತೆಲುಗಿನ ಬಲುಪು ಚಿತ್ರದ ರಿಮೇಕ್ ಇದಾಗಿದೆ.

  Realstar Upendra Upcoming Movies List

  - ಕೆ ಮಾದೇಶ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಸಿನಿಮಾ ಲಾಗಮ್. ಉಪೇಂದ್ರ ಜೊತೆ ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದಾರೆ.

  - ಕ್ರಿಸ್ಟಲ್ ಪಾರ್ಕ್ ಬ್ಯಾನರ್‌ ಅಡಿ ಟಿಆರ್ ಚಂದ್ರಶೇಖರ್ ನಿರ್ಮಾಣ ಮಾಡುತ್ತಿರುವ ಸಿನಿಮಾ ಬುದ್ದಿವಂತ 3. ಜಯರಾಂ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಶೂಟಿಂಗ್ ಶುರು ಮಾಡಬೇಕಿದೆ.

  ವೈರಲ್ ಪೋಸ್ಟರ್ ಬಗ್ಗೆ ಕೊನೆಗೂ ಮೌನಮುರಿದ ಉಪೇಂದ್ರ ವೈರಲ್ ಪೋಸ್ಟರ್ ಬಗ್ಗೆ ಕೊನೆಗೂ ಮೌನಮುರಿದ ಉಪೇಂದ್ರ

  - ಹುಟ್ಟುಹಬ್ಬದ ಪ್ರಯುಕ್ತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಉಪೇಂದ್ರ ಜೊತೆ ಆಕ್ಷನ್ ಚಿತ್ರ ಮಾಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.

  - ಇದೆಲ್ಲದರ ಜೊತೆಗೆ ಡೈರೆಕ್ಷನ್ ಸಿನಿಮಾ ಹೆಚ್ಚು ಸದ್ದು ಮಾಡ್ತಿದೆ. ಡೈರೆಕ್ಷನ್ ಸಿನಿಮಾಗಾಗಿ ಸಿದ್ಧತೆ ನಡೆಯುತ್ತಿದ್ದು, ಸ್ಕ್ರಿಪ್ಟ್ ಮುಗಿದಿದೆಯಂತೆ. ಸದ್ಯಕ್ಕೆ ಒಪ್ಪಿಕೊಂಡಿರುವ ಕಮಿಟ್‌ಮೆಂಟ್‌ಗಳನ್ನು ಮುಗಿಸಿ ತಮ್ಮ ಸ್ವಂತ ಬ್ಯಾನರ್‌ನಲ್ಲಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ಹೈ ಹಾಕಲಿದ್ದಾರೆ.

  English summary
  Real Star Upendra Birthday: Here is the Upcoming Movies of superstar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X