For Quick Alerts
  ALLOW NOTIFICATIONS  
  For Daily Alerts

  'ಯಜಮಾನ'ನ ಜೊತೆಗೆ ಗೂಳಿಗಳು ಇರೋದಕ್ಕೆ ಒಂದು ಕಾರಣ ಇದೆ!

  |
  Yajamana Movie: ಯಜಮಾನ'ನ ಜೊತೆಗೆ ಗೂಳಿಗಳು ಇರೋದಕ್ಕೆ ಒಂದು ಕಾರಣ ಇದೆ! | FILMIBETA KANNADA

  ನಿನ್ನೆ ಬಿಡುಗಡೆಯಾದ 'ಯಜಮಾನ' ಸಿನಿಮಾ ಹಾಡು ಯೂ ಟ್ಯೂಬ್ ನಲ್ಲಿ ದೊಡ್ಡ ಮಟ್ಟದಲ್ಲಿ ಜನ ಮನ್ನಣೆ ಪಡೆದಿದೆ. ಸದ್ಯ ಈ ಹಾಡು ಯೂ ಟ್ಯೂಬ್ ಟ್ರೆಂಡಿಂಗ್ 1 ನಲ್ಲಿದೆ.

  'ಯಜಮಾನ' ಸಿನಿಮಾದ ಪೋಸ್ಟರ್ ಹಾಗೂ ಹಾಡುಗಳಲ್ಲಿ ಗಮನಿಸಿದರೆ, ಅಲ್ಲಿ ಡಿ ಬಾಸ್ ಜೊತೆಗೆ ಗೂಳಿಗಳ ದರ್ಶನ ಸಹ ಆಗುತ್ತದೆ. ಚಿತ್ರದ ಮೊದಲ ಹಾಡು ರಿಲೀಸ್ ಆಗುವ ಒಂದು ದಿನದ ಮುಂಚೆಯೂ ನಾಲ್ಕು ಗೂಳಿಗಳ ನಡುವಿನ ಸಂಭಾಷಣೆಯನ್ನು ಬಳಸಿಕೊಂಡು ಒಂದು ಪ್ರೊಮೋ ವಿಡಿಯೋ ಮಾಡಲಾಗಿತ್ತು.

  'ಯಜಮಾನ'ನ 'ನಂದಿ' ವೇಗಕ್ಕೆ ದಾಖಲೆಗಳು ಧೂಳಿಪಟ

  ಸಿನಿಮಾಗಳ ಪೋಸ್ಟರ್ ಗಳನ್ನು ಸುಮ್ಮನೆ ಮಾಡುವುದಿಲ್ಲ. ಅಲ್ಲಿ ಪ್ರತಿಯೊಂದಕ್ಕೂ ಒಂದು ಅರ್ಥ ಇರುತ್ತದೆ. ಅದೇ ರೀತಿ 'ಯಜಮಾನ'ನ ಜೊತೆಗೆ ಗೂಳಿಗಳು ಇರುವುದಕ್ಕೆ ಸಹ ಒಂದು ಅರ್ಥ ಇದೆ. ಅದೇನು ಎನ್ನುವುದು ಮುಂದಿದೆ ಓದಿ..

  ದರ್ಶನ್ ಪಾತ್ರ ಗೂಳಿಯ ಹಾಗಿದೆ

  ದರ್ಶನ್ ಪಾತ್ರ ಗೂಳಿಯ ಹಾಗಿದೆ

  'ಯಜಮಾನ' ಸಿನಿಮಾದ ಪೋಸ್ಟರ್ ಗಳಲ್ಲಿ ದರ್ಶನ್ ಅವರ ಜೊತೆಗೆ ಗೂಳಿಗಳು ಸಂಕೇತಿಕವಾಗಿವೆಯಂತೆ. ಚಿತ್ರದಲ್ಲಿ ದರ್ಶನ್ ಪಾತ್ರ ಗೂಳಿಗಳ ರೀತಿ ಇದೆ ಎನ್ನುವುದನ್ನು ಈ ರೀತಿಯಲ್ಲಿ ಪ್ರೇಕ್ಷಕರಿಗೆ ತಲುಪಿಸುತ್ತಿದೆ ಚಿತ್ರತಂಡ. ಅದೇ ಕಾರಣಕ್ಕೆ ಪೋಸ್ಟರ್, ಹಾಡಿನ ಪ್ರೊಮೋ ಗಳಲ್ಲಿ ಗೂಳಿಯನ್ನು ಬಳಸಿಕೊಳ್ಳಲಾಗಿದೆಯಂತೆ.

  'ಯಜಮಾನ' ಧರ್ಮದ ಪರ

  'ಯಜಮಾನ' ಧರ್ಮದ ಪರ

  ದರ್ಶನ್ ಪಾತ್ರ ಚಿತ್ರದಲ್ಲಿ ಧರ್ಮದ ಪರ ನಿಲ್ಲುತ್ತದೆಯಂತೆ. ಗೂಳಿಯ ರೀತಿ ಆ ಪಾತ್ರ ಸ್ಟ್ರಾಂಗ್ ಆಗಿದ್ದು, ಅನ್ಯಾಯ ಮತ್ತು ತಪ್ಪುಗಳ ನಡೆದರೆ, ಗೂಳಿಯಂತೆ ನುಗ್ಗಿ ಅದರ ವಿರುದ್ಧ ಹೋರಾಡುವ ಸ್ವಭಾವ ಆ ಪಾತ್ರದಾಗಿದೆಯಂತೆ. ಆದ್ದರಿಂದ ಸಿನಿಮಾದ ಕೆಲವು ದೃಶ್ಯಗಳಲ್ಲಿಯೂ ಗೂಳಿ ಇರುತ್ತದೆ.

  ಯಜಮಾನ' ಬಂದ 'ಶಿವನಂದಿ' ಹಾಡು ತಂದ

  2 ಮಿಲಿಯನ್, ಟ್ರೆಂಡಿಂಗ್ 1

  2 ಮಿಲಿಯನ್, ಟ್ರೆಂಡಿಂಗ್ 1

  'ಯಜಮಾನ' ಸಿನಿಮಾದ ಹಾಡು ಸದ್ಯ ಯೂಟ್ಯೂಬ್ ನಲ್ಲಿ 2 ಮಿಲಿಯನ್ ಹಿಟ್ಸ್ ಪಡೆದುಕೊಂಡು ಮುನ್ನುಗುತ್ತಿದೆ. ನಿನ್ನೆಯಿಂದ ಈ ಹಾಡು ಟ್ರೆಂಡಿಂಗ್ 1 ನಲ್ಲಿದೆ. 1 ಲಕ್ಷ 94 ಸಾವಿರ ಜನರು ಹಾಡು ಇಷ್ಟ ಪಟ್ಟು ಲೈಕ್ ಮಾಡಿದ್ದಾರೆ. ಈ ಹಾಡನ್ನು ಚೇತನ್ ಕುಮಾರ್ ಬರೆದಿದ್ದು, ಹರಿಕೃಷ್ಣ ಸಂಗೀತ ನೀಡಿದ್ದಾರೆ.

  'ಯಜಮಾನ'ನ ಕುಟುಂಬ

  'ಯಜಮಾನ'ನ ಕುಟುಂಬ

  'ಯಜಮಾನ' ದರ್ಶನ್ ಅಭಿನಯದ ಈ ವರ್ಷದ ಬಹು ನಿರೀಕ್ಷಿತ ಸಿನಿಮಾವಾಗಿದೆ. ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಚಿತ್ರದ ನಾಯಕಿಯರಾಗಿದ್ದಾರೆ. ಶೈಲಾಜ ನಾಗ್ ನಿರ್ಮಾಣ ಮಾಡಿದ್ದಾರೆ. ಪಿ ಕುಮಾರ್ ಹಾಗೂ ವಿ ಹರಿಕೃಷ್ಣ ಚಿತ್ರದ ನಿರ್ದೇಶನದ ಜವಾಬ್ದಾರಿ ತೆಗೆದುಕೊಂಡಿದ್ದಾರೆ.

  English summary
  Reason behind bulls in Darshan's 'Yajamana' kannada movie poster.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X