For Quick Alerts
  ALLOW NOTIFICATIONS  
  For Daily Alerts

  ನಿರ್ದೇಶಕ ಎ.ಪಿ.ಅರ್ಜುನ್ ರನ್ನ ದೂರ ತಳ್ಳಿದ್ರಾ ದರ್ಶನ್.?

  By Harshitha
  |

  'ಮಿಸ್ಟರ್ ಐರಾವತ' ಚಿತ್ರದ ವಿವಾದಗಳು ಒಂದೆರಡಲ್ಲ. ಮೊದಲು ಹೀರೋಯಿನ್ ಕಾಂಟ್ರವರ್ಸಿಯಿಂದ ಸುದ್ದಿಯಾದ 'ಮಿಸ್ಟರ್ ಐರಾವತ' ನಂತರ ನಿರ್ದೇಶಕ ಎ.ಪಿ.ಅರ್ಜುನ್ ಬುಡಕ್ಕೆ ಬಂತು.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೀಡಿದ ಕಾಲ್ ಶೀಟ್ ನ ಎ.ಪಿ.ಅರ್ಜುನ್ ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ. 'ಮಿಸ್ಟರ್ ಐರಾವತ' ಸೆಟ್ಟೇರಿ ಒಂದು ವರ್ಷವಾದರೂ, ಚಿತ್ರ ಇನ್ನೂ ಕಂಪ್ಲೀಟ್ ಆಗಿಲ್ಲ. ಇದರ ಹೊಣೆ ನಿರ್ದೇಶಕರದ್ದು ಅಂತ ದರ್ಶನ್ ಅವರ ಅಧಿಕೃತ ಅಭಿಮಾನಿ ಬಳಗ 'ಡಿ' ಕಂಪನಿ ನೇರವಾಗಿ ಎ.ಪಿ.ಅರ್ಜುನ್ ವಿರುದ್ಧ ಆರೋಪಿಸಿತ್ತು.

  ಇದರ ಬೆನ್ನಲ್ಲೇ ಎ.ಪಿ.ಅರ್ಜುನ್ ಕೆನ್ನೆಗೆ ನಿರ್ಮಾಪಕರು ಬಾರಿಸಿದ್ದಾರೆ. ದರ್ಶನ್, ಅರ್ಜುನ್ ಅವರಿಗೆ ವಾರ್ನಿಂಗ್ ನೀಡಿದ್ದಾರೆ ಅಂತೆಲ್ಲಾ ಗಾಂಧಿನಗರದಲ್ಲಿ ಗುಲ್ಲೆಬ್ಬಿತ್ತು. ಇದೀಗ ಬಂದಿರುವ ಅಂಥದ್ದೇ ಗಾಳಿ ಸುದ್ದಿ ಪ್ರಕಾರ, ದರ್ಶನ್-ಅರ್ಜುನ್ ನಡುವೆ ಮನಸ್ತಾಪ ತಾರಕಕ್ಕೇರಿ, ನಿರ್ದೇಶಕರನ್ನೇ ಬಿಟ್ಟು ಸಾಂಗ್ ಶೂಟಿಂಗ್ ಗೆ ನಾಯಕ ದರ್ಶನ್ ವಿದೇಶಕ್ಕೆ ಹಾರಿದ್ದಾರೆ.

  ಈ ಸುದ್ದಿ ನಿಜನಾ.? ನಿರ್ದೇಶಕ ಎ.ಪಿ.ಅರ್ಜುನ್ ಫಾರಿನ್ ನಲ್ಲಿ ನಡೆಯುತ್ತಿರುವ ಹಾಡಿನ ಚಿತ್ರೀಕರಣಕ್ಕೆ ಹೋಗದೆ ಇರುವುದಕ್ಕೆ ಕಾರಣ ಏನು ಅನ್ನುವ ಅಸಲಿ ಸಂಗತಿ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

  ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟು ಶೂಟಿಂಗ್ ಶುರುಮಾಡಿದ್ದರು.!

  ವಿವಾದಕ್ಕೆ ಫುಲ್ ಸ್ಟಾಪ್ ಇಟ್ಟು ಶೂಟಿಂಗ್ ಶುರುಮಾಡಿದ್ದರು.!

  ನಿರ್ದೇಶಕ ಎ.ಪಿ.ಅರ್ಜುನ್ ತಡ ಮಾಡಿದರು, ನಿರ್ಮಾಪಕರು ಕೆನ್ನೆಗೆ ಹೊಡೆದರು. ದರ್ಶನ್ ಆವಾಜ್ ಹಾಕಿದರು ಅಂತೆಲ್ಲಾ ಬ್ರೇಕಿಂಗ್ ನ್ಯೂಸ್ ರೌಂಡ್ ಹಾಕಿದ್ಮೇಲೆ 'ಮಿಸ್ಟರ್ ಐರಾವತ' ಚಿತ್ರೀಕರಣ ಮರು ಚಾಲನೆಗೊಂಡಿತ್ತು. [ಕಿರಿಕ್ ನಂತ್ರ 'ನೈಸಾಗಿ' ಶೂಟಿಂಗಿಗೆ ಬಂದ ಐರಾವತ]

  ನೈಸ್ ರೋಡಲ್ಲಿ ಫೈಟಿಂಗ್, ಕೆ.ಜಿ.ಎಫ್ ನಲ್ಲಿ ಡ್ಯಾನ್ಸಿಂಗ್

  ನೈಸ್ ರೋಡಲ್ಲಿ ಫೈಟಿಂಗ್, ಕೆ.ಜಿ.ಎಫ್ ನಲ್ಲಿ ಡ್ಯಾನ್ಸಿಂಗ್

  ಬೆಂಗಳೂರಿನ ಹೊರವಲಯದ ನೈಸ್ ರೋಡ್ ನಲ್ಲಿ 'ಮಿಸ್ಟರ್ ಐರಾವತ' ಚಿತ್ರದ ಆಕ್ಷನ್ ಸೀಕ್ವೆನ್ಸ್ ಶೂಟ್ ಮಾಡಲಾಯ್ತು. ಅಲ್ಲದೇ, 100ಕ್ಕೂ ಹೆಚ್ಚು ನೃತ್ಯಗಾರರ ಜೊತೆ ಕೆ.ಜಿ.ಎಫ್ ನಲ್ಲಿ ದರ್ಶನ್ ಅವರ ಇಂಟ್ರಡಕ್ಷನ್ ಹಾಡಿನ ಚಿತ್ರೀಕರಣ ಇತ್ತೀಚೆಗಷ್ಟೇ ನಡೆಯಿತು. [ವಿವಾದಕ್ಕೆ ಫುಲ್ ಸ್ಟಾಪ್; ಶುರು 'ಐರಾವತ' ಸಾಂಗ್ ಶೂಟ್]

  ಎಲ್ಲದರಲ್ಲೂ ಎ.ಪಿ.ಅರ್ಜುನ್ ಪಾಲ್ಗೊಂಡಿದ್ದರು

  ಎಲ್ಲದರಲ್ಲೂ ಎ.ಪಿ.ಅರ್ಜುನ್ ಪಾಲ್ಗೊಂಡಿದ್ದರು

  ಈ ಎಲ್ಲಾ ಶೂಟಿಂಗ್ ನಲ್ಲೂ ನಿರ್ದೇಶಕ ಎ.ಪಿ.ಅರ್ಜುನ್ ಪಾಲ್ಗೊಂಡಿದ್ದರು. ತಮ್ಮ ಕಲ್ಪನೆಯಲ್ಲಿದ್ದ ಶಾಟ್ ಗಳನ್ನೆಲ್ಲಾ ಅಚ್ಚುಕಟ್ಟಾಗಿ ಡೈರೆಕ್ಟ್ ಮಾಡಿದ್ದರು.

  ಯೂರೋಪ್ ನಲ್ಲಿ ಸಾಂಗ್ ಶೂಟ್

  ಯೂರೋಪ್ ನಲ್ಲಿ ಸಾಂಗ್ ಶೂಟ್

  ಬಾಕಿ ಉಳಿದ 2 ಹಾಡುಗಳ ಚಿತ್ರೀಕರಣ ಯೂರೋಪ್ ನಲ್ಲಿ ನಡೆಯುತ್ತಿದೆ. ನೃತ್ಯ ನಿರ್ದೇಶಕ ಕಾಲೈ ಮಾಸ್ಟರ್ ಸೇರಿದಂತೆ 'ಮಿಸ್ಟರ್ ಐರಾವತ' ತಂಡ ಫ್ಲೈಟ್ ಹತ್ತಿದ್ದಾಗಿದೆ.

  ಸಾಂಗ್ ಶೂಟ್ ಗೆ ಅರ್ಜುನ್ ಹೋಗಿಲ್ಲ.!

  ಸಾಂಗ್ ಶೂಟ್ ಗೆ ಅರ್ಜುನ್ ಹೋಗಿಲ್ಲ.!

  ವಿಚಿತ್ರ ಅಂದ್ರೆ, ಯೂರೋಪ್ ನಲ್ಲಿ ನಡೆಯುತ್ತಿರುವ ಹಾಡಿನ ಚಿತ್ರೀಕರಣದಲ್ಲಿ ನಿರ್ದೇಶಕ ಎ.ಪಿ.ಅರ್ಜುನ್ ಪಾಲ್ಗೊಂಡಿಲ್ಲ. ಕೇವಲ ನೃತ್ಯಗಾರರು, ನಾಯಕ ದರ್ಶನ್, ನಾಯಕಿ ಊರ್ವಶಿ ಸೇರಿದಂತೆ ಕೆಲವೇ ಕೆಲವರು ಯೂರೋಪ್ ಗೆ ತೆರಳಿದ್ದಾರೆ.

   ನಿರ್ದೇಶಕರಿಲ್ಲದೇ ಸಾಂಗ್ ಶೂಟ್ ಹೇಗೆ ಸಾಧ್ಯ?

  ನಿರ್ದೇಶಕರಿಲ್ಲದೇ ಸಾಂಗ್ ಶೂಟ್ ಹೇಗೆ ಸಾಧ್ಯ?

  ಹಾಗ್ನೋಡಿದ್ರೆ, ಸಾಂಗ್ ಶೂಟ್ ನಲ್ಲಿ ನಿರ್ದೇಶಕರಿಗೆ ಅಷ್ಟು ಕೆಲಸವಿರುವುದಿಲ್ಲ. ಹಾಡಿನ ಚಿತ್ರೀಕರಣದ ಸಂಪೂರ್ಣ ಜವಾಬ್ದಾರಿ ನೃತ್ಯ ನಿರ್ದೇಶಕರ ಮೇಲಿರುತ್ತೆ. ನಿರ್ದೇಶಕರ ಪ್ಲಾನ್ ಪ್ರಕಾರ ನೃತ್ಯ ನಿರ್ದೇಶಕರು ಕೆಲಸ ಮಾಡಬೇಕಷ್ಟೆ.

  ಎ.ಪಿ.ಅರ್ಜುನ್ ಯಾಕೆ ಹೋಗಿಲ್ಲ.?

  ಎ.ಪಿ.ಅರ್ಜುನ್ ಯಾಕೆ ಹೋಗಿಲ್ಲ.?

  ಮೂಲಗಳ ಪ್ರಕಾರ, ನಿರ್ದೇಶಕ ಎ.ಪಿ.ಅರ್ಜುನ್ ಮೇಲೆ 'ಮಿಸ್ಟರ್ ಐರಾವತ' ಚಿತ್ರದ ರಿಲೀಸ್ ಪ್ರೆಶರ್ ಜಾಸ್ತಿ ಇದೆ. ಈಗಾಗಲೇ ಚಿತ್ರದ ಶೂಟಿಂಗ್ ಆಮೆ ಗತಿಯಲ್ಲಿ ಸಾಗುತ್ತಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಕೂಡ ಕುಂಟುತ್ತಿದೆ. ಅದಕ್ಕೆ ಸಾಂಗ್ ಶೂಟಿಂಗ್ ಗೆ ತರಳಿ ಅಲ್ಲಿ ಟೈಮ್ ವೇಸ್ಟ್ ಮಾಡುವ ಬದಲು, ಎಡಿಟಿಂಗ್ ನಲ್ಲಿ ಎಚ್ಚರ ವಹಿಸಬೇಕು ಅಂತ ಬೆಂಗಳೂರಲ್ಲೇ ಉಳಿದುಕೊಂಡಿದ್ದಾರೆ ನಿರ್ದೇಶಕ ಎ.ಪಿ.ಅರ್ಜುನ್.

  ಸುದ್ದಿಯಾಗಿರುವುದೇ ಬೇರೆ ವಿಚಾರಕ್ಕೆ

  ಸುದ್ದಿಯಾಗಿರುವುದೇ ಬೇರೆ ವಿಚಾರಕ್ಕೆ

  ಕೆಲಸದ ಕಾರಣದಿಂದ ನಿರ್ದೇಶಕ ಎ.ಪಿ.ಅರ್ಜುನ್ ಬೆಂಗಳೂರಲ್ಲೇ ಉಳಿದುಕೊಂಡಿರಬಹುದು. ಆದ್ರೆ, ಗಾಂಧಿನಗರದ ಕಣ್ಣಿಗೆ ಅದು ಕಾಣುತ್ತಿರುವುದೇ ಬೇರೆ. ಅರ್ಜುನ್ ಮತ್ತು ದರ್ಶನ್ ನಡುವೆ ಮನಸ್ತಾಪ ತಾರಕಕ್ಕೇರಿರುವ ಕಾರಣ, ಅವರಿಲ್ಲದೇ ಸಾಂಗ್ ಶೂಟ್ ಮಾಡುತ್ತಿದ್ದಾರೆ ಅಂತ ಅಂತೆ-ಕಂತೆ ಶುರುವಾಗಿದೆ. ['ಐರಾವತ' ಎಪಿ ಅರ್ಜುನ್ ಗೂಸಾ ತಿಂದದ್ದು ನಿಜಾನಾ?]

  ಭಿನ್ನಭಿಪ್ರಾಯ ಇಲ್ಲ ಅಂತ ಅರ್ಜುನ್ ಸ್ಪಷ್ಟ

  ಭಿನ್ನಭಿಪ್ರಾಯ ಇಲ್ಲ ಅಂತ ಅರ್ಜುನ್ ಸ್ಪಷ್ಟ

  ಈ ಹಿಂದೆ ಇಂತಹ ಗಾಳಿ ಸುದ್ದಿಗಳು ಹಬ್ಬಿದಾಗಲೂ, ತಮ್ಮ ಹಾಗು ದರ್ಶನ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ತಮಗೆ ಆಗದೇ ಇರುವವರು ತಂದಿಡುತ್ತಿದ್ದಾರೆ ಅಂತ ಸಂದರ್ಶನವೊಂದರಲ್ಲಿ ಅರ್ಜುನ್ ಹೇಳಿದ್ದರು. [ದರ್ಶನ್ ಮತ್ತು ಎ.ಪಿ.ಅರ್ಜುನ್ ಮಧ್ಯೆ ತಂದಿಟ್ಟವರಾರು?]

  ಡಿ ಕಂಪನಿ ಸ್ಪಷ್ಟನೆ

  ಡಿ ಕಂಪನಿ ಸ್ಪಷ್ಟನೆ

  ಈ ಬಗ್ಗೆ 'ಡಿ' ಕಂಪನಿ ಕೂಡ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದೆ. ನಿರ್ದೇಶಕ ಎ.ಪಿ.ಅರ್ಜುನ್ ವಿದೇಶಕ್ಕೆ ಹೋಗದೆ ಇರುವುದಕ್ಕೆ ಕಾರಣ ಪೋಸ್ಟ್ ಪ್ರೊಡಕ್ಷನ್ ವರ್ಕ್ ಅಂತ ಅಧಿಕೃತ ಮಾಹಿತಿ ನೀಡಿದೆ. [ಎ.ಪಿ.ಅರ್ಜುನ್ ವಿರುದ್ಧ ತಿರುಗಿಬಿದ್ದ ದರ್ಶನ್ ಕಂಪನಿ]

  'ಮಿಸ್ಟರ್ ಐರಾವತ' ರಿಲೀಸ್ ಯಾವಾಗ?

  'ಮಿಸ್ಟರ್ ಐರಾವತ' ರಿಲೀಸ್ ಯಾವಾಗ?

  ಈಗಾಗಲೇ 'ಮಿಸ್ಟರ್ ಐರಾವತ' ಸಿನಿಮಾ ಲೇಟಾಗಿದೆ. ಆಗಸ್ಟ್ ಹೊತ್ತಿಗೆ ಸಿನಿಮಾ ತೆರೆಗೆ ತರಬೇಕು ಅನ್ನೋದು ಚಿತ್ರತಂಡದ ಪ್ಲಾನ್. ಹಾಡಿನ ಚಿತ್ರೀಕರಣ ಮುಗಿದ್ರೆ, ಶೂಟಿಂಗ್ ಗೆ ಕುಂಬಳಕಾಯಿ ಬೀಳುತ್ತೆ. ಅಲ್ಲಿಂದ ಕೆಲವೇ ದಿನಗಳ ಅಂತರದಲ್ಲಿ 'ಮಿಸ್ಟರ್ ಐರಾವತ' ನಿಮ್ಮೆಲರ ಮುಂದೆ ಬರಲಿದ್ದಾನೆ.

  English summary
  Director A.P.Arjun and Kannada Actor Darshan have made news again. 'Mr.Airavata' director A.P.Arjun has given a miss to the song shooting which is happening in Europe. What is the reason behind the absence of 'Ambari' Director.? Read the article to know the answer

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X