Don't Miss!
- Sports
Ind vs NZ1st T20: ವಾಶಿಂಗ್ಟನ್ ಸುಂದರ ಆಟ ವ್ಯರ್ಥ: ಭಾರತಕ್ಕೆ ಮೊದಲ ಪಂದ್ಯದಲ್ಲೇ ಸೋಲಿನ ಆಘಾತ
- News
ಹಂಪಿ ಉತ್ಸವ 2023: ಇತಿಹಾಸ, ಆಕರ್ಷಣೆಗಳು, ಅತಿಥಿಗಳು, ಸ್ಥಳ ಮತ್ತು ತಲುಪುವುದು ಹೇಗೆ ಎಂದು ತಿಳಿಯಿರಿ
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಭರತ ಚಕ್ರವರ್ತಿ' ಶಿವಣ್ಣನ ಸಿನಿಮಾ ಗೆಲ್ಲೋದು ಇದೇ ಕಾರಣಕ್ಕೆ ಇರ್ಬೋದು!
Recommended Video

ನಟ ಶಿವರಾಜ್ ಕುಮಾರ್ 115ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ. ಸತತ 33 ವರ್ಷಗಳಿಂದ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಇಂದಿಗೂ ಮನೆಗಿಂತ ಹೆಚ್ಚು ಸಮಯವನ್ನು ಶಿವರಾಜ್ ಕುಮಾರ್ ಶೂಟಿಂಗ್ ಸೆಟ್ ನಲ್ಲಿ ಕಳೆಯುತ್ತಾರೆ.
ಬೆಳಗ್ಗೆ ಒಂದು ಸಿನಿಮಾ, ಮಧ್ಯಾಹ್ನ ಒಂದು ಸಿನಿಮಾ, ರಾತ್ರಿ ಒಂದು ಸಿನಿಮಾ.. ಹೀಗೆ ಒಂದೇ ದಿನಕ್ಕೆ ಶಿವರಾಜ್ ಕುಮಾರ್ ಮೂರ್ನಾಲ್ಕು ಸಿನಿಮಾದ ಶೂಟಿಂಗ್ ಮಾಡಿದ ಇತಿಹಾಸ ಇದೆ. ಯಾವಾಗಲೂ ಸಿನಿಮಾ ಅಂತ ಜಪಿಸುವ ಶಿವಣ್ಣನಿಗೆ ಸಿನಿಮಾ ಕೂಡ ಕೈ ಬಿಟ್ಟಿಲ್ಲ.
'ಭರತ
ಚಕ್ರವರ್ತಿ'ಯಾದ
ಕರುನಾಡ
ಚಕ್ರವರ್ತಿ
ಶಿವಣ್ಣ
ಶಿವರಾಜ್ ಕುಮಾರ್ ಕನ್ನಡ ಚಿತ್ರರಂಗದ 'ಕಿಂಗ್' ಆಗಿದ್ದಾರೆ. ಇನ್ನು ಇಷ್ಟು ವರ್ಷ ಆದರೂ ಶಿವಣ್ಣ ಸಿನಿಮಾಗಳ ಸಕ್ಸಸ್ ರೇಟ್ ಕಡಿಮೆ ಆಗಿಲ್ಲ. ಹಾಕಿದ್ದ ಬಂಡವಾಳಕ್ಕೆ ಅವರ ಸಿನಿಮಾ ಮೋಸ ಮಾಡಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಇಂದಿಗೂ ಅವರ ಡಿಮ್ಯಾಂಡ್ ಕೊಂಚವು ಕುಗ್ಗಿಲ್ಲ.
'ಫಸ್ಟ್
ಹಾಫ್'ನಲ್ಲಿ
ಶಿವಣ್ಣ
ಕಿಂಗ್:
ಸೆಂಚುರಿ
ಸ್ಟಾರ್
ನ
ಯಾರೂ
ಮುಟ್ಟೋಕೆ
ಆಗಲಿಲ್ಲ.!
ಅಂದಹಾಗೆ, ಇಂತಹ ಯಶಸ್ಸಿಗೆ ಕಾರಣ ಏನು ಅಂತ ಹುಡುಕಿದರೆ ಪಟ್ ಅಂತ ನೆನಪಾಗುವುದು ಈ ಅಂಶಗಳು ಮುಂದೆ ಓದಿ...

ಸೋಲು ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ
ಸಿನಿಮಾಗಳು ಗೆಲ್ಲಬಹುದು.. ಅಥವಾ ಸೋಲಬಹುದು.. ಆದರೆ, ಎಂದಿಗೂ ಶಿವಣ್ಣ ಸೋಲು ಗೆಲುವಿನ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ತಮ್ಮ ಕೆಲಸವನ್ನು ತಾವು ಅಚ್ಚುಕಟ್ಟಾಗಿ ಮಾಡುತ್ತಾರೆ. ಗೆದ್ದಾಗ ಹಿಗ್ಗಲ್ಲ, ಸೋತ್ತಾಗ ಕುಗ್ಗಲ್ಲ. ಇದೇ ಅವರ ಯಶಸ್ಸಿನ ಮಂತ್ರ.!

ಸಮಯಕ್ಕೆ ಬೆಲೆ ಕೊಡುತ್ತಾರೆ
ಶಿವರಾಜ್ ಕುಮಾರ್ ಕೈ ನಲ್ಲಿ ಯಾವಾಗಲೂ ಸಾಲು ಸಾಲು ಸಿನಿಮಾಗಳು ಇರುತ್ತವೆ. ಅಷ್ಟೊಂದು ಸಿನಿಮಾಗಳ ಕೆಲಸಗಳ ಜೊತೆಗೆ ಚಿತ್ರರಂಗದ ಅನೇಕ ಕಾರ್ಯಕ್ರಮಗಳು, ಸಭೆ ಸಮಾರಂಭಗಳು, ಟ್ರೇಲರ್, ಆಡಿಯೋ ಲಾಂಚ್ ಗಳು ಹೀಗೆ ಎಲ್ಲ ಕೆಲಸಗಳನ್ನು ನಿಭಾಯಿಸುತ್ತಾರೆ. ಇರುವ 24 ಗಂಟೆಯನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ.

ನಿರ್ದೇಶಕರ ನಾಯಕ
ಪ್ರತಿ ನಿರ್ದೇಶಕರಿಗೆ ಶಿವರಾಜ್ ಕುಮಾರ್ ಜೊತೆಗೆ ಒಂದು ಸಿನಿಮಾ ಮಾಡಬೇಕು ಎಂಬ ಕನಸು ಇರುತ್ತದೆ. ಶಿವಣ್ಣ ನಿರ್ದೇಶಕರ ನಾಯಕ. ಒಬ್ಬ ನಿರ್ದೇಶಕನ ಕಲ್ಪನೆಗೆ ಅವರು ಬೆಲೆ ನೀಡುತ್ತಾರೆ. ಚಿತ್ರದ ಕಥೆಯಲ್ಲಿ ಮೂಗು ತೂರಿಸುವುದಿಲ್ಲ. ಒಬ್ಬ ಡೈರೆಕ್ಟರ್ ಏನು ಹೇಳಿದರು ಮಾಡಿ ಬಿಡುತ್ತಾರೆ. ಸುಲಭವಾಗಿ ನಿರ್ದೇಶಕರ ಕೈಗೆ ಸಿಗುತ್ತಾರೆ.

ಪ್ರೀತಿ ಇದೆ, ವ್ಯಾಮೋಹ ಇಲ್ಲ
ಶಿವಣ್ಣನಿಗೆ ತಾವು ಮಾಡುವ ಸಿನಿಮಾಗಳ ಬಗ್ಗೆ ಪ್ರೀತಿ ಇದೆ. ಆದರೆ ಅತಿಯಾದ ವ್ಯಾಮೋಹ ಇಲ್ಲ. ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲ, ಅದನ್ನು ಜನರಿಗೆ ತಲುಪಿಸುವವರೆಗೆ ಚಿತ್ರತಂಡ ಜೊತೆಗೆ ಶಿವಣ್ಣ ಇರುತ್ತಾರೆ. ಚಿತ್ರದ ಬಗ್ಗೆ ಎಷ್ಟೇ ಸಂದರ್ಶನ ಆದರೂ ನೀಡುತ್ತಾರೆ. ಫಸ್ಟ್ ಡೇ ಚಿತ್ರಮಂದಿರಕ್ಕೆ ಹೋಗುವುದು ಸೇರಿದಂತೆ ಗೆಲುವವರೆಗೆ ಸಿನಿಮಾದ ಜೊತೆಗೆ ಇರುತ್ತಾರೆ.

ಡೆಡಿಕೇಶನ್
ಸಿನಿಮಾ ಅಂತ ಬಂದರೆ ಶಿವರಾಜ್ ಕುಮಾರ್ ತುಂಬ ಡೆಡಿಕೇಶನ್ ನೀಡುತ್ತಾರೆ. ವಾಚ್ ನೋಡದೆ ಸಿನಿಮಾದ ಕೆಲಸ ಮಾಡುತ್ತಾರೆ. ಒಂದು ಪಾತ್ರಕ್ಕೆ ಬೇಕಾದ ತ್ಯಾಗವನ್ನು ಮಾಡುತ್ತಾರೆ. ಕಥೆ ಮತ್ತು ನಿರ್ದೇಶಕರನ್ನು ನಂಬುತ್ತಾರೆ.

ವರ್ಷಕ್ಕೆ ಮೂರರಿಂದ ನಾಲ್ಕು ಸಿನಿಮಾಗಳು
ಶಿವರಾಜ್ ಕುಮಾರ್ ವರ್ಷಕ್ಕೆ ಮೂರರಿಂದ ನಾಲ್ಕು ಸಿನಿಮಾಗಳನ್ನು ಮಾಡುತ್ತಾರೆ. ಶಿವಣ್ಣ ಇದ್ದರೆ ಬಂಡವಾಳಕ್ಕೆ ಮೋಸ ಆಗಲ್ಲ. ಅವರು ಮಿನಿಮಮ್ ಗ್ಯಾರೆಂಟಿ ಹೀರೋ. ಅದಕ್ಕೂ ಹೆಚ್ಚಾಗಿ ಸ್ಟಾರ್ ಸಿನಿಮಾ ಹೆಚ್ಚಾದಂತೆ ಸಿನಿಮಾವನ್ನೆ ನಂಬಿರುವ ಅದೆಷ್ಟೋ ಕಾರ್ಮಿಕರಿಗೆ ಕೆಲಸ ಸಿಗುತ್ತದೆ.

ಶಿವಣ್ಣ ಅಂದ್ರೆ ಏನರ್ಜಿ
ಶಿವಣ್ಣ ಅಂದ್ರೆ ಏನರ್ಜಿ, ಏನರ್ಜಿ ಅಂದ್ರೆ ಶಿವಣ್ಣ. ಇದು ಶಿವರಾಜ್ ಕುಮಾರ್ ಅವರ ಜೊತೆಗೆ ಕೆಲಸ ಮಾಡಿದ ಪ್ರತಿಯೊಬ್ಬರು ಹೇಳುವ ಮಾತು. ಡ್ಯಾನ್ಸ್, ಫೈಟ್ ನಿಂದ ಹಿಡಿದು ಎಲ್ಲವನ್ನು ಶಿವಣ್ಣ ಸೊಗಸಾಗಿ ಮಾಡುತ್ತಾರೆ. ಈ ವಯಸ್ಸಿನಲ್ಲಿ ಅವರ ಆ ಏನರ್ಜಿ ಮೆಚ್ಚುವಂತದ್ದು. ಇದೆಲ್ಲ ನೋಡಿದ ಮೇಲೆ ಅನಿಸೋದು ಒಂದೇ ಶಿವಣ್ಣ ಎಂಬ ಈ ಜೀವಕ್ಕೆ ದಣಿವಾಗಲ್ಲ.. ಅದು ವಿರಾಮ ಬಯಸಲ್ಲ.