»   » ಕನ್ನಡ ಚಿತ್ರರಂಗಕ್ಕೆ 'ಒಂದು ಮೊಟ್ಟೆಯ ಕಥೆ' ಹೇಳಿದ ಪಾಠ ಇದು

ಕನ್ನಡ ಚಿತ್ರರಂಗಕ್ಕೆ 'ಒಂದು ಮೊಟ್ಟೆಯ ಕಥೆ' ಹೇಳಿದ ಪಾಠ ಇದು

Posted By:
Subscribe to Filmibeat Kannada

ಕನ್ನಡ ಸಿನಿಮಾರಂಗ ಈಗ ನಿಜಕ್ಕೂ ಹೊಸ ಹೊಸ ಪ್ರಯೋಗಳಿಗೆ ಸಾಕ್ಷಿ ಆಗುತ್ತಿದೆ. ವಿಭಿನ್ನ ರೀತಿಯ ಸಿನಿಮಾಗಳ ಮೂಲಕ ಹೊಸ ಚಿತ್ರತಂಡಗಳು ಗಮನ ಸೆಳೆಯುತ್ತಿವೆ. ಸದ್ಯ 'ಒಂದು ಮೊಟ್ಟೆಯ ಕಥೆ' ಸಿನಿಮಾ ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ.

ಮಾತಿನಿಂದಲೇ ಗೆದ್ದಿತು, ಮಾತಿಲ್ಲದೇನೇ ನೀತಿಹೇಳಿತು!

ಒಂದು ಒಳ್ಳೆಯ ಸಿನಿಮಾದ ಗೆಲುವು ಅನೇಕ ಸಿನಿಮಾಗಳಿಗೆ ಸ್ಫೂರ್ತಿ ನೀಡುತ್ತದೆ. ಅದೇ ರೀತಿ 'ಒಂದು ಮೊಟ್ಟೆಯ ಕಥೆ' ಚಿತ್ರ ಕೂಡ ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಲು ಹೊರಟವರಿಗೆ ಧೈರ್ಯ ತುಂಬಿದೆ. ಅಬ್ಬರ ಆಡಂಬರ ಇಲ್ಲದ ಒಂದು ಸರಳ ಸುಂದರ ಸಿನಿಮಾ ಈ 'ಒಂದು ಮೊಟ್ಟೆಯ ಕಥೆ'. ಇಂತಹ ಸಿನಿಮಾ ಈಗ ಇಡೀ ಕನ್ನಡ ಸಿನಿಮಾರಂಗಕ್ಕೆ ಒಂದು ಪಾಠ ಹೇಳಿದೆ. ಮುಂದೆ ಓದಿ...

ಚಿತ್ರಮಂದಿರದ ಕೊರತೆ

ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರದ ಕೊರತೆ ಎನ್ನುವ ಮಾತು ಕೇಳಿ ಕೇಳಿ ಸಾಕಾಗಿ ಹೋಗಿದೆ. ಆದರೆ ಯಾವುದೇ ಸ್ಟಾರ್ ಇಲ್ಲದ 'ಒಂದು ಮೊಟ್ಟೆಯ ಕಥೆ' ಸಿನಿಮಾ ಇನ್ನೂ ಚಿತ್ರಮಂದಿರದಲ್ಲಿ ಭದ್ರವಾಗಿ ನಿಂತಿದೆ.

ಮಲ್ಟಿಪ್ಲೆಕ್ಸ್ ನಲ್ಲಿ ಹೌಸ್ ಫುಲ್

ಕನ್ನಡ ಚಿತ್ರಗಳಿಗೆ ಮಲ್ಟಿಪ್ಲೆಕ್ಸ್ ನಲ್ಲಿ ಸರಿಯಾದ ಸ್ಕ್ರೀನ್ ಗಳು ಸಿಗುವುದಿಲ್ಲ ಎಂಬುದು ಅನೇಕರ ಆರೋಪ. ಆದರೆ 'ಒಂದು ಮೊಟ್ಟೆಯ ಕಥೆ' ಸಿನಿಮಾ ಇನ್ನೂ ಬೆಂಗಳೂರಿನ 15ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ ನಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಅಮೆರಿಕಾದಲ್ಲಿ 'ಒಂದು ಮೊಟ್ಟೆಯ ಕಥೆ' ಸಿನಿಮಾದ ಹವಾ

ವಿದೇಶಿ ಮಾರುಕಟ್ಟೆ

ಬರಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಅಮೇರಿಕಾದಲ್ಲಿಯೂ 'ಒಂದು ಮೊಟ್ಟೆಯ ಕಥೆ' ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಜೊತೆಗೆ ಲಂಡನ್ ಹಾಗೂ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಸಿನಿಮಾ ಪ್ರದರ್ಶನವಾಗಿದೆ.

'ಒಂದು ಮೊಟ್ಟೆಯ ಕಥೆ' ಸಿನಿಮಾ ನೋಡಿ ಪುನೀತ್ ಕೊಟ್ಟ ರಿವ್ಯೂ ಹೀಗಿದೆ

ಕಥೆಯೇ ಸ್ಟಾರ್

ಒಂದು ಸಿನಿಮಾದ ನಿಜವಾದ ಸ್ಟಾರ್ ಅಂದರೆ ಕಥೆ. ಒಳ್ಳೆಯ ಕಥೆ.. ಒಳ್ಳೆಯ ಸಿನಿಮಾ.. ಮಾಡಿದರೆ ಖಂಡಿತ ಗೆದ್ದೇ ಗೆಲ್ಲುತ್ತದೆ. ಹಾಗೆ ಕಥೆ ನಂಬಿ ಸಿನಿಮಾ ಮಾಡಿದರೆ 'ಒಂದು ಮೊಟ್ಟೆಯ ಕಥೆ' ರೀತಿಯ ಅದ್ಭುತ ಸಿನಿಮಾಗಳನ್ನು ಮಾಡಬಹುದು.

ಒಂದು ಮೊಟ್ಟೆಯ ಕಥೆ : ಡಬ್ಬಲ್ ಮೀನಿಂಗ್ ಇಲ್ಲದ ಕಾಶೀನಾಥ್ ಚಿತ್ರ

English summary
Reason behind success of Kannada movie 'Ondu Motteya Kathe'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada