»   » ಸಿಂಗಪುರದಲ್ಲೂ ಅಸ್ತಿತ್ವ ಉಳಿಸಿಕೊಂಡ ಅಂಬಿ ಮೀಸೆ

ಸಿಂಗಪುರದಲ್ಲೂ ಅಸ್ತಿತ್ವ ಉಳಿಸಿಕೊಂಡ ಅಂಬಿ ಮೀಸೆ

By: ಉದಯರವಿ
Subscribe to Filmibeat Kannada

ಆಸರಿಲ್ಲದ ಮನೆ, ಮೀಸೆ ಇಲ್ಲದ ಮೋರೆ ಎರಡೂ ನೋಡಲು ಚೆನ್ನಾಗಿರಲಿಲ್ಲ. ಇನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರ ವಿಚಾರಕ್ಕೆ ಬಂದರೆ ಮೀಸೆಗೆ ಕೊಟ್ಟಷ್ಟು ಇಂಪಾರ್ಟೆನ್ಸ್ ಇನ್ಯಾವುದಕ್ಕೂ ಅಷ್ಟಾಗಿ ಕೊಡಲ್ಲ, ತೆರೆಯ ಮೇಲೆ. ಇದೀಗ ಅವರು ಸಿಂಗಪುರದ ಮೌಂಟ್ ಎಲಿಜೆಬತ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಇದೀಗ ಅವರ ಆರೋಗ್ಯ ಸಹಜ ಸ್ಥಿತಿಗೆ ಮರಳಿದ್ದು ಸಿಂಗಪುರದಲ್ಲೇ ಇನ್ನೂ ಸ್ವಲ್ಪ ಸಮಯ ಇದ್ದು ಬಳಿಕ ತಾಯ್ನಾಡಿಗೆ ಮರಳಿದ್ದಾರೆ. ಸ್ವಲ್ಪ ಸುಸ್ತಾದಂತೆ ಕಂಡರೂ ಅವರ ಮೀಸೆ ಮಾತ್ರ ಹೇಗಿತ್ತೋ ಹಾಗೆಯೇ ಇದೆ. ಅಂಬರೀಶ ಚಿತ್ರಕ್ಕಾಗಿ ಈ ಮೀಸೆಯನ್ನು ಅವರು ಹುರಿಗೊಳಿಸಿದ್ದರು. [ನಟ ಅಂಬರೀಶ್ ಆರೋಗ್ಯದ ಬಗ್ಗೆ ಮುಚ್ಚಿಟ್ಟ ಸತ್ಯಗಳು]

Rebel Star Ambareesh

ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಷ್ಟು ದಿನವೂ ಮೀಸೆಗೂ ಟ್ರಿಮ್ ಮಾಡಿ ಹಾಗೆಯೇ ಉಳಿಸಿಕೊಳ್ಳಲಾಗಿತ್ತು. ಚೇತರಿಸಿಕೊಂಡ ಬಳಿಕ ಅವರು ಟಿವಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, "ಅಂಬರೀಶ ಚಿತ್ರಕ್ಕಾಗಿ ಮೀಸೆಯನ್ನು ಬಹಳ ಕಷ್ಟಪಟ್ಟು ಬೆಳಸಿದ್ದೆ. ಮೀಸೆ ತೆಗೆಯಲು ನಾನು ಬಿಡಲಿಲ್ಲ" ಎಂದಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಇರುವಷ್ಟು ದಿನವೂ ಅವರಿಗೆ ಸಿಂಗಪುರದಲ್ಲಿರುವ ಅರ್ಜುನ್ ಸರ್ಜಾ ಮಗಳ ಮನೆಯಿಂದ ಊಟ ಕಳುಹಿಸಲಾಗುತ್ತಿತ್ತು. ಬೆಳಗ್ಗೆ ಇಡ್ಲಿ ಸಾಂಬಾರ್, ಉಪ್ಪಿಟ್ಟು, ಪೊಂಗಲ್, ಬಿಸಿಬೇಳೆಬಾತ್, ಅಕ್ಕಿರೊಟ್ಟಿ ಸರಬರಾಜಾಗುತ್ತಿತ್ತು.

ದೇವರ ದಯೆಯಿಂದ ಪುನರ್ಜನ್ಮ ಸಿಕ್ಕಿದೆ. ಅಭಿಮಾನಿಗಳ ಪ್ರಾರ್ಥನೆಯಿಂದ ತಾಯ್ನಾಡಲ್ಲಿ ಜೀವನ ನಡೆಸುವ ಅವಕಾಶ ಸಿಕ್ಕಿದೆ. ನಿಮ್ಮ ಪ್ರೀತಿ ಅಭಿಮಾನ ಪೂಜೆ ಪುನಸ್ಕಾರದಿಂದ ಹೊಸ ಚೈತನ್ಯ ಬಂದಿದೆ. ಆದಷ್ಟು ಬೇಗ ನಿಮ್ಮ ಮುಂದೆ ಬರುತ್ತೇನೆ ಎಂದಿದ್ದಾರೆ ಅಂಬರೀಶ್. ಇದೀಗ ಅವರು ಸಿಂಗಪುರದ ಸ್ನೇಹಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ.

English summary
Rebel Star Ambareesh holds back his moustache after he has undergone extensive medical treatment in Singapore Mount Elizabeth Hospital, for breathing problem caused due to lung infection. Now Ambareesh health condition is normal.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada