»   » ರಾಯಲ್ ಸಿನಿಮಾ 'ರಾಜವಂಶ'ದಲ್ಲಿ ಅಂಬರೀಶ್?

ರಾಯಲ್ ಸಿನಿಮಾ 'ರಾಜವಂಶ'ದಲ್ಲಿ ಅಂಬರೀಶ್?

By: ಉದಯರವಿ
Subscribe to Filmibeat Kannada

ತಮ್ಮ ಚಿತ್ರಕ್ಕೆ ಪ್ರಚಾರ ಕೊಡುವುದರಲ್ಲಿ ಅದನ್ನು ಯಶಸ್ಸಿನತ್ತ ಕೊಂಡೊಯ್ಯುವಲ್ಲಿ ನಿರ್ದೇಶಕ ಆರ್ ಚಂದ್ರು ಅವರ ತಂತ್ರಗಾರಿಕೆಯನ್ನು ಮೆಚ್ಚಲೇ ಬೇಕು. 'ಬ್ರಹ್ಮ' ಚಿತ್ರದ ಬಳಿಕ ಅವರು ಮತ್ತೊಂದು ಭರ್ಜರಿ ಚಿತ್ರದೊಂದಿಗೆ ಮರಳಿದ್ದಾರೆ. ಈ ಬಾರಿ ಅವರು ಕೈಗೆತ್ತಿಕೊಂಡಿರುವ ಚಿತ್ರ ರಾಯಲ್ ಆಗಿಯೇ ಇದೆ. ಚಿತ್ರದ ಹೆಸರು ರಾಜವಂಶ.

ಇತ್ತೀಚೆಗೆ ಈ ಚಿತ್ರಕ್ಕೆ ಸಂಬಂಧಿಸಿದ ಶೀರ್ಷಿಕೆಯನ್ನು ಅನಾವರಣ ಮಾಡಲಾಯಿತು. ರಾಜವಂಶ ಚಿತ್ರಕ್ಕೆ ಆರ್ ಚಂದ್ರು ಅವರ ಗೆಳೆಯ ಸೂರ್ಯ ಎಂಬುವವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆರ್ ಚಂದ್ರು ಅವರು ಕಥೆ ಚಿತ್ರಕ್ಕಿದ್ದು ಅವರೇ ರಾಜವಂಶ ಟೈಟಲ್ ಸೂಚಿಸಿದ್ದಾರೆ. [ನಟ ಅಂಬರೀಶ್ ಆರೋಗ್ಯದ ಬಗ್ಗೆ ಮುಚ್ಚಿಟ್ಟ ಸತ್ಯಗಳು]

'ಬ್ರಹ್ಮ' ಚಿತ್ರವನ್ನು ನಿರ್ಮಿಸಿರುವ ಪಿ.ವಿ.ಮಂಜುನಾಥ ಬಾಬು (ಅಮೃತಹಳ್ಳಿ) ಈ ಚಿತ್ರದ ನಿರ್ಮಾಪಕರು. ಬನ್ನಿ ಈ ಚಿತ್ರದ ಟೈಟಲ್ ಅನಾವರಣದ ಜೊತೆಗೆ ಚಿತ್ರದ ಕೆಲವು ಡೀಟೇಲ್ಸ್ ತಿಳಿದುಕೊಳ್ಳೋಣ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಮೂವ್ವರು ಯುವರಾಜರ ಕಥೆ ಇದು

ಚಿತ್ರದ ಹೆಸರೇ ಸೂಚಿಸುವಂತೆ ಇದೊಂದು ರಾಜರ ಕಥೆ. ಆದರೆ ಈ ಚಿತ್ರದಲ್ಲಿ ಒಬ್ಬನೇ ರಾಜನಿರಲ್ಲ ಎಂಬುದನ್ನು ಚಿತ್ರದ ಅಡಿಬರಹ ಹೇಳುತ್ತದೆ. ಅದೇನೆಂದರೆ 'ಮೂವ್ವರು ಯುವರಾಜರು'.

ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯಿಸ್ತಾರಾ?

ಇನ್ನು ಈ ಚಿತ್ರದಲ್ಲಿ ಅಭಿನಯಿಸಲು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅವರನ್ನು ಕೇಳಲಾಯಿದೆಯಂತೆ. ಆದರೆ ಈಗಷ್ಟೇ ಚೇತರಿಸಿಕೊಂಡಿರುವ ಅಂಬಿ ಅಭಿನಯಿಸುತ್ತಾರಾ ಎಂಬುದು.

'ರಾಜವಂಶ' ಕಥೆ ಗುಟ್ಟು ಬಿಟ್ಟುಕೊಡದ ಚಂದ್ರು

ಚಂದ್ರು ಅವರು ತಮ್ಮ 'ಬ್ರಹ್ಮ' ಚಿತ್ರದಲ್ಲಿ ರಾಜವಂಶದ ಬಗ್ಗೆ ಲೈಟ್ ಆಗಿ ತೋರಿಸಿದ್ದರು. ಇದೀಗ ರಾಜವಂಶದಲ್ಲಿ ಸಂಪೂರ್ಣ ರಾಜರ ಕಥೆ ತೆರೆದುಕೊಳ್ಳಲಿದೆ.

ಪಾತ್ರವರ್ಗ ಇನ್ನೂ ಅಂತಿಮವಾಗಿಲ್ಲ

ಒಟ್ಟಾರೆಯಾಗಿ ಸೂರ್ಯ ಚಂದ್ರರ ಕಾಂಬಿನೇಷನ್ ಚಿತ್ರದ ಬಗ್ಗೆ ಸ್ಯಾಂಡಲ್ ವುಡ್ ನಲ್ಲಿ ಕುತೂಹಲವಿದ್ದೇ ಇದೆ. ಇನ್ನು ಚಿತ್ರಕ್ಕೆ ಪಾತ್ರವರ್ಗದಲ್ಲಿ ಯಾರು ಇರಲಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕು.

ಕುಮಾರೇಶ ಬಾಬು ಅವರಿಂದ ಟೈಟಲ್ ಖರೀದಿ

ಇನ್ನು 'ರಾಜವಂಶ' ಎಂಬ ಟೈಟಲ್ ಕುಮಾರೇಶ್ ಬಾಬು ಎಂಬುವವರು ರಿಜಿಸ್ಟರ್ ಮಾಡಿಸಿಕೊಂಡಿದ್ದರು. ಇದೀಗ ಅದೇ ಟೈಟಲನ್ನು ನಿರ್ಮಾಪಕ ಕೆ ಮಂಜು ಅವರ ಮಧ್ಯಸ್ಥಿಕೆಯಲ್ಲಿ ಮಂಜುನಾಥ ಬಾಬು ತಮ್ಮದಾಗಿಸಿಕೊಂಡಿದ್ದಾರೆ.

English summary
According to Sandalwood shu-shu, filmmaker R Chandru wants to cast Abamreesh and his wife Sumalatha Ambareesh in his upcoming film, tentatively titled Rajavamsha. Recently the title launched in 'Brahma' 50 days celebrations.
Please Wait while comments are loading...