ದಸರಾ ಚಲನಚಿತ್ರೋತ್ಸವಕ್ಕೆ ಹೋಗ್ಬೇಕು ಅಂದ್ರೆ ನೋಂದಣಿ ಮಾಡ್ಕೊಳ್ಳಿ.!
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2017ರ ಅಂಗವಾಗಿ ಐನಾಕ್ಸ್ ಚಿತ್ರಮಂದಿರ ಹಾಗೂ ಡಿ.ಆರ್.ಸಿ. ಚಿತ್ರಮಂದಿರದಲ್ಲಿ ಸೆಪ್ಟೆಂಬರ್ 22 ರಿಂದ 28 ರವರೆಗೆ ಚಲನಚಿತ್ರೋತ್ಸವ ಹಮ್ಮಿಕೊಳ್ಳಲಾಗಿದ್ದು, ಈ ಚಿತ್ರೋತ್ಸವದಲ್ಲಿ ಭಾಗವಹಿಸಿಲು ನೋಂದಣಿ ಮಾಡಿಕೊಳ್ಳುಬೇಕು.
ಸೆಪ್ಟೆಂಬರ್ 18 ರಿಂದ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಧನ್ವಂತ್ರಿ ರಸ್ತೆಯಲ್ಲಿರುವ ವಾರ್ತಾ ಭವನದಲ್ಲಿ ನೋಂದಣಿ ಮಾಡಲಾಗುವುದು. 18 ವರ್ಷ ಮೇಲ್ಪಟ್ಟವರಿಗೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ವಯೋಮಿತಿಯ ದಾಖಲಾತಿಗಾಗಿ ಆಧಾರ್ ಕಾರ್ಡ್/ಮತದಾನದ ಗುರುತಿನ ಚೀಟಿ/ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ/ ಅಥವಾ ಇತರೆ ಯಾವುದಾದರೂ ಒಂದು ದಾಖಲಾತಿಯ ಜೆರಾಕ್ಸ್ ಪ್ರತಿ ಹಾಗೂ ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳುವುದು.

ನೋಂದಣಿಗೆ ರೂ.300/- (ಮೂರು ನೂರು ರೂ.) ಗಳಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9448092049/ 8970543203 ನ್ನು ಸಂಪರ್ಕಿಸುವುದು.
ಸೆಪ್ಟೆಂಬರ್ 22 ರಿಂದ 28 ರವರೆಗೆ ಚಲನಚಿತ್ರೋತ್ಸವ ನಡೆಯಲಿದ್ದು, ಡಿ.ಆರ್.ಸಿ ಚಿತ್ರಮಂದಿರದಲ್ಲಿ ಒಟ್ಟು 28 ಕನ್ನಡ ಚಿತ್ರಗಳು ಹಾಗೂ ಐನಾಕ್ಸ್ ಚಿತ್ರಮಂದಿರದಲ್ಲಿ ವಿವಿಧ ಭಾಷೆಗಳ ಒಟ್ಟು 28 ಚಿತ್ರಗಳು ಪ್ರದರ್ಶನವಾಗಲಿದೆ.
ಡಿ.ಆರ್.ಸಿ. ಚಿತ್ರಮಂದಿರಕ್ಕೆ ನೋಂದಣಿಯಅಗತ್ಯವಿಲ್ಲ. ಡಿ.ಆರ್.ಸಿ. ಚಿತ್ರಮಂದಿರದಲ್ಲಿ ನಡೆಯುವ ಪ್ರತಿ ಪ್ರದರ್ಶನಕ್ಕೆ ಸಾರ್ವಜನಿಕರಿಗೆರೂ.30/- ದರ ನಿಗದಿಪಡಿಸಲಾಗಿದೆ. ಡಿ.ಆರ್.ಸಿ. ಚಿತ್ರಮಂದಿರದಲ್ಲಿ ಎಲ್ಲಾ ವಯೋಮಾನದವರಿಗೂ ಪ್ರವೇಶ ಅವಕಾಶ ಕಲ್ಪಿಸಲಾಗುತ್ತದೆ.


Click it and Unblock the Notifications











