»   » ಬೇಲಿ ಹಾರಿದ ಚೆಲ್ಲಾಟದ ಚೆಲುವೆ ರೇಖಾ ವೇದವ್ಯಾಸ್

ಬೇಲಿ ಹಾರಿದ ಚೆಲ್ಲಾಟದ ಚೆಲುವೆ ರೇಖಾ ವೇದವ್ಯಾಸ್

Posted By:
Subscribe to Filmibeat Kannada

ತುಂಟಾಟ, ಹುಡುಗಾಟ, ಚೆಲ್ಲಾಟದ ಚೆಲುವೆ ರೇಖಾ ವೇದವ್ಯಾಸ್ ಬೇಲಿ ಹಾರಿದ್ದಾರೆ. ಅಯ್ಯೋ ಇನ್ನೇನು ಗತಿ ಎಂದು ಹುಬ್ಬೇರಿಸಬೇಡಿ. ರೇಖಾ ಅವರು ನಿಜವಾಗಿಯೂ ಬೇಲಿ ಹಾರಿಲ್ಲ. ಹಾಡಿನಲ್ಲಷ್ಟೇ ಅವರು ಬೇಲಿ ಹಾರಿದ್ದಾರೆ. ಅದು ಐಟಂ ಹಾಡು.

ಕನ್ನಡ ಚಿತ್ರರಂಗದಲ್ಲಿ ಈಗ ಹೊಸ ಟ್ರೆಂಡ್ ಶುರುವಾಗಿದೆ. ಐದೋ ಆರೋ ಹಾಡುಗಳಲ್ಲಿ ಒಂದು ಐಟಂ ಸಾಂಗ್ ಕಡ್ಡಾಯ ಎಂಬಂತಾಗಿದೆ. ಇತ್ತೀಚೆಗಿನ ಶಿವ, ಪ್ರೇಮ್ ಅಡ್ಡ, ಅಗಮ್ಯ, ದೇವ್ರಾಣೆ, ಡೈರೆಕ್ಟರ್ಸ್ ಸ್ಪೆಷಲ್...ಹೀಗೆ ಹನುಮಂತನ ಬಾಲದಂತೆ ಬೆಳೆಯುತ್ತಲೇ ಇದೆ ಐಟಂ ಹಾಡುಗಳ ಪಟ್ಟಿ.

ತಮ್ಮ ಪ್ರಣಯದ ಭಾವ ಮೀಟುವ ಪಾತ್ರಗಳಿಂದ ನವ ಯುವಕರ ನಿದ್ದೆಗೆಡಿಸುತ್ತಿದ್ದ ರೇಖಾ ಸಹ ಈಗ ಐಟಂ ಹಾಡಿಗೆ ಹೆಜ್ಜೆಹಾಕಿದ್ದಾರೆ. ಈ ಮೂಲಕ ಪಡ್ಡೆ ಹುಡುಗರ ಪ್ರಪಂಚಕ್ಕೆ ಅಡಿಯಿಟ್ಟಿದ್ದಾರೆ. ಅರುಣ್ ನಿರ್ದೇಶನದ 'ಲೂಸುಗಳು' ಚಿತ್ರದಲ್ಲಿ ರೇಖಾ ತಮ್ಮ ಸೊಂಟ ಬಳುಕಿಸಿದ್ದಾರೆ.

ಶಾರ್ಟ್ ಸ್ಕರ್ಟ್, ಟೈಟ್ ಟಾಪ್ ಧರಿಸಿ "ಬೇಲಿ ಹಾರಿ ಓಡಿ ಬಂದೆ ಬೇಡ ಅಂದ್ರು ತಂದೆ ತಾಯಿ..." ಎಂಬ ಹಾಡಿಗೆ ಹೆಜ್ಜೆಹಾಕಿದ್ದಾರೆ. ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಈ ಐಟಂ ಹಾಡನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಸಂಗೀತ ವಾಣಿ ಹರಿಕೃಷ್ಣ ಹಾಗೂ ಸಾಹಿತ್ಯ ಅನಿಲ್ ಅವರದು.

ಬೆಳಗ್ಗೆಯಿಂದ ರಾತ್ರಿತನಕ ಈ ಹಾಡನ್ನು ಎಡೆಬಿಡದೆ ಚಿತ್ರೀಕರಿಸಿಕೊಳ್ಳಲಾಗಿದೆ. ಇದೊಂದು ಕ್ರಿಕೆಟನ್ನು ಆಧಾರವಾಗಿಟ್ಟುಕೊಂಡು ಚಿತ್ರೀಕರಿಸಿರುವ ಸಾಂಗ್. ಹಾಗಾಗಿ ಹಾಡಿನಲ್ಲಿ ಬಾಲು, ಬ್ಯಾಟು, ಪ್ಯಾಡು ಎಲ್ಲವೂ ಇದೆಯಂತೆ. ಈ ಹಾಡು ತೀರಾ ಅಶ್ಲೀಲವಾಗಿಯೂ, ಅಸಭ್ಯವಾಗಿಯೂ ಇಲ್ಲ ಎಂಬುದು ನಿರ್ದೇಶಕರ ಹಿತವಚನ.

ಸೈಯದ್ ಹುಸೇನ್, ಜಿಮ್ ರವಿ ಹಾಗೂ ಬಸವರಾಜ್ ಮಾಂಚಯ್ಯ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಶ್ರೀಮುರಳಿ, ರೇಖಾ, ಅಕುಲ್, ಐಶ್ವರ್ಯಾ ನಾಗ್, ಶ್ರೀಕಿ, ಶ್ರಾವ್ಯಾ, ರವಿಚೇತನ್, ಪದ್ಮಜಾರಾವ್, ಮಿಮಿಕ್ರಿ ದಯಾನಂದ್ ಮುಂತಾದವರಿದ್ದಾರೆ. (ಏಜೆನ್ಸೀಸ್)

English summary
Kannada actress Rekha Vedavyas debuts in item number in Kannada film loosugalu. "Beli Haari Bande…." song choreographed by Ramu and directed by Arun.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada