»   » 'ಬಾಹುಬಲಿ-2' ಚಿತ್ರಕ್ಕೆ ಕರ್ನಾಟಕ ಮಾತ್ರವಲ್ಲ, ತಮಿಳುನಾಡಿನಲ್ಲೂ ಕಂಟಕ!

'ಬಾಹುಬಲಿ-2' ಚಿತ್ರಕ್ಕೆ ಕರ್ನಾಟಕ ಮಾತ್ರವಲ್ಲ, ತಮಿಳುನಾಡಿನಲ್ಲೂ ಕಂಟಕ!

Posted By:
Subscribe to Filmibeat Kannada

ಅದ್ಯಾಕೋ 'ಬಾಹುಬಲಿ-2' ಚಿತ್ರಕ್ಕೆ ಟೈಮ್ ಸರಿಯಿಲ್ಲ ಅನ್ಸುತ್ತೆ. ಕಟ್ಟಪ್ಪನ ಬೇಜವಾಬ್ದಾರಿ ಹೇಳಿಕೆಯಿಂದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ 'ಬಾಹುಬಲಿ-2' ಕರ್ನಾಟಕದಲ್ಲಿ ಬಿಡುಗಡೆ ಆಗುವುದು ಬಹುತೇಕ ಅನುಮಾನ. ಹೀಗಿರುವಾಗ, ತಮಿಳುನಾಡಿನಲ್ಲೂ ಬಿಡುಗಡೆಯ ವಿಚಾರದಲ್ಲಿ ಮತ್ತೊಂದು ಸಮಸ್ಯೆಗೆ ಸಿಲುಕಿದೆ 'ಬಾಹುಬಲಿ-2'.

ಹೌದು, 'ಬಾಹುಬಲಿ-2' ಚಿತ್ರಕ್ಕೆ ತಮಿಳುನಾಡಿನಲ್ಲಿ ಸಮಸ್ಯೆ ಎದುರಾಗಿದ್ದು, ಚಿತ್ರವನ್ನ ಬಿಡುಗಡೆ ಮಾಡದಂತೆ ವ್ಯಕ್ತಿಯೊಬ್ಬರು ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿದ್ದಾರೆ.['ಕಟ್ಟಪ್ಪನ ವಿವಾದ'ದ ಬಗ್ಗೆ ರಾಜಮೌಳಿ ಹೇಳಿದ್ದೇನು?]

ಅಷ್ಟಕ್ಕೂ, ತಮಿಳುನಾಡಿನಲ್ಲಿ 'ಬಾಹುಬಲಿ-2' ಗೆ ಎದುರಾಗಿರುವ ಸಂಕಷ್ಟವೇನು ಎಂಬುದನ್ನ ಮುಂದೆ ಓದಿ......

'ಬಾಹುಬಲಿ-2' ಚಿತ್ರ ಬಿಡುಗಡೆಗೆ ಸಂಕಟ!

'ಬಾಹುಬಲಿ 2' ತಮಿಳು ಚಿತ್ರವನ್ನು ತಮಿಳುನಾಡಿನ ವಿತರಕರಾದ ಶ್ರೀ ಗ್ರೀನ್ ಪ್ರೊಡಕ್ಷನ್ಸ್ ವಿರುದ್ಧ ಚೆನ್ನೈ ಮೂಲದ ಎಸಿಇ ಮೀಡಿಯಾ ಮದ್ರಾಸ್ ಹೈಕೋರ್ಟ್ ನಲ್ಲಿ ಪ್ರಕರಣ ದಾಖಲು ಮಾಡಿದ್ದು, ಚಿತ್ರವನ್ನ ಬಿಡುಗಡೆ ಮಾಡದಂತೆ ಮನವಿ ಮಾಡಿದೆ.['ಬಾಹುಬಲಿ' ವಿರುದ್ಧ ಕೆರಳಿದ ಕನ್ನಡಿಗರು, ರೀ-ರಿಲೀಸ್ ಗೆ ಬಿಡಲ್ಲ]

ವಿತರಕರ ಸಮಸ್ಯೆ ಏನು?

ಕಳೆದ ಜನವರಿಯಲ್ಲಿ ಶ್ರೀ ಗ್ರೀನ್ ಪ್ರೊಡಕ್ಷನ್ಸ್‌ ಮುಖ್ಯಸ್ಥ ಎಂ ಎಸ್ ಶರವಣನ್, ಎಸಿಇ ಮೀಡಿಯಾ ಅವರಿಂದ 1.8 ಕೋಟಿ ಸಾಲ ಪಡೆದಿದ್ದರಂತೆ. ಚಿತ್ರ ರಿಲೀಸ್ ಆಗುವ ಮುನ್ನ 10 ಲಕ್ಷ ರೂ ಬಡ್ಡಿ ಸೇರಿಸಿ ಎಲ್ಲ ಹಣವನ್ನು ಹಿಂತಿರುಗಿಸುವುದಾಗಿ ಹೇಳಿದ್ದರಂತೆ. ಆದ್ರೀಗ ಚಿತ್ರ ಬಿಡುಗಡೆಯಾದ ಮೇಲೆ ಹಣ ನೀಡುವುದಾಗಿ ಹೇಳುತ್ತಿದ್ದಾರಂತೆ. ಆದ್ದರಿಂದ ಒಪ್ಪಂದದ ಪ್ರಕಾರ ಚಿತ್ರ ಬಿಡುಗಡೆಗೆ ಮುನ್ನ ಹಣ ಪಾವತಿ ಆಗಬೇಕು, ಅಲ್ಲಿಯವರೆಗೂ 'ಬಾಹುಬಲಿ-2' ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಬೇಕು ಎಂದು ನ್ಯಾಯಾಲಯ ಒತ್ತಾಯಿಸಿದ್ದಾರೆ.

ತಡೆಯಾಜ್ಞೆ ನೀಡಲು ಕೋರ್ಟ್ ನಿರಾಕರಣೆ

ಈ ಪ್ರಕರಣವನ್ನ ವಿಚಾರಣೆ ನಡೆಸಿದ ಮದ್ರಾಸ್ ಹೈಕೊರ್ಟ್ 'ಬಾಹುಬಲಿ-2' ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಗ್ರೀನ್ ಪ್ರೊಡಕ್ಷನ್ಸ್‌ನ ಶರವಣನ್ ಗೆ ನೊಟೀಸ್ ಜಾರಿ ಮಾಡಿದೆ.

ಏಪ್ರಿಲ್ 18ಕ್ಕೆ ಮುಂದೂಡಿಕೆ!

ಎಸಿಇ ಮೀಡಿಯಾ ಮಾಡಿದ ಆರೋಪಗಳ ಕುರಿತು ವಿವರಣೆ ಕೇಳಿರುವ ನ್ಯಾಯಾಲಯ ಈ ಪ್ರಕರಣವನ್ನು ಏ.18ಕ್ಕೆ ಮುಂದೂಡಿದೆ. ಹೀಗಾಗಿ, ತಮಿಳುನಾಡಿನಲ್ಲಿ 'ಬಾಹುಬಲಿ-2' ಚಿತ್ರಕ್ಕೆ ಸದ್ಯದ ಮಟ್ಟಿಗೆ ಬಿಗ್ ರಿಲೀಫ್ ಸಿಕ್ಕಿದೆ.

ಕರ್ನಾಟಕದಲ್ಲಿ ರಿಲೀಸ್ ಡೌಟ್!

ಇನ್ನು ನಟ ಸತ್ಯರಾಜ್ ಕನ್ನಡಿಗರ ಬಗ್ಗೆ ಮಾತನಾಡಿರುವ ಅವಹೇಳನಕಾರಿ ಹೇಳಿಕೆಯಿಂದ 'ಬಾಹುಬಲಿ-2' ಚಿತ್ರ ಕರ್ನಾಟಕದಲ್ಲಿ ಬಿಡುಗಡೆ ಆಗುವುದು ಬಹುತೇಕ ಅನುಮಾನ. ಒಂದು ಪಕ್ಷ ಸತ್ಯರಾಜ್ ಕ್ಷಮೆ ಕೇಳಿದ್ರೆ ಸಿನಿಮಾ ರಿಲೀಸ್ ಮಾಡಲು ಅವಕಾಶ ನೀಡಲು ನಿರ್ಧರಿಸಲಾಗಿದೆ.

ಏಪ್ರಿಲ್ 28 ರಂದು 'ಬಾಹುಬಲಿ' ರಿಲೀಸ್

ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ -2' ಏಪ್ರಿಲ್ 28 ರಂದು ವರ್ಲ್ಡ್ ವೈಡ್ 6500ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಪ್ರಭಾಸ್, ರಾಣಾ, ಅನುಷ್ಕ ಶೆಟ್ಟಿ, ತಮನ್ನ, ಸತ್ಯರಾಜ್, ರಮ್ಯಾಕೃಷ್ಣ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಒಂದು ವೇಳೆ 18ನೇ ತಾರೀಖಿನ ವಿಚಾರಣೆಯಲ್ಲಿ ಏನಾದರೂ ವ್ಯತ್ಯಾಸವಾದರೇ, ತಮಿಳುನಾಡಿನಲ್ಲಿ ಸಿನಿಮಾ ರಿಲೀಸ್ ಆಗುವುದು ಅನುಮಾನವಾಗಿದೆ.

English summary
Chennai-based film distributor ACE Media had moved the court seeking a stay on the scheduled April 28 release of the film citing unpaid dues of Rs 1.18 crore to it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada