For Quick Alerts
  ALLOW NOTIFICATIONS  
  For Daily Alerts

  ಅಪ್ಪು ಸಮಾಧಿಗೆ ಭೇಟಿ ನೀಡಿ ಮಹತ್ವದ ನಿರ್ಣಯ ಪ್ರಕಟಿಸಿದ ರೇಣುಕಾಚಾರ್ಯ

  |

  ಮಾಜಿ ಸಚಿವ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಇಂದು ಕುಟುಂಬ ಸಮೇತವಾಗಿ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ, ನಮಿಸಿದರು.

  ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರೇಣುಕಾಚಾರ್ಯ, ''ಅಪ್ಪುವನ್ನು ಮಾದರಿಯನ್ನಾಗಿ ತೆಗೆದುಕೊಂಡು ನಮ್ಮ ಕುಟುಂಬದ ಎಲ್ಲ ಸದಸ್ಯರು ನೇತ್ರದಾನ ಮಾಡುವ ನಿರ್ಣಯ ಮಾಡಿದ್ದೇವೆ'' ಎಂದರು.

  ಪುನೀತ್ ರಾಜ್‌ಕುಮಾರ್ ನಿಧನರಾದಾಗ ನಾನು ಆಸ್ಪತ್ರೆಯಲ್ಲಿದ್ದೆ. ಆರೋಗ್ಯ ಸಮಸ್ಯೆಯಿದ್ದಿದ್ದರಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿ ವಿಶ್ರಾಂತಿಯಲ್ಲಿದ್ದೆ. ಆದರೆ ಅಪ್ಪುವಿನ ಅಂತಿಮ ದರ್ಶನ ಮಾಡಲಾಗಲಿಲ್ಲ, ಸಮಾಧಿಗೆ ಪೂಜೆಯಾದರೂ ಸಲ್ಲಿಸೋಣ ಎಂದು ವಿಶ್ರಾಂತಿ ಬಿಟ್ಟು ಬಂದೆ ಎಂದರು ರೇಣುಕಾಚಾರ್ಯ.

  ''ಅಪ್ಪು ಅವರ ಅಕಾಲಿಕ ಮರಣ ಕುಟುಂಬಕ್ಕೆ, ಕನ್ನಡ ನಾಡಿನ ಜನರಿಗೆ, ಅವರ ಅಭಿಮಾನಿಗಳಿಗೆ ಅಗಾಧ ದುಃಖ ತಂದಿದೆ. ಅವರ ಸಮಾಜ ಸೇವೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಸರ್ಕಾರಿ ಶಾಲೆಗಳು, ಗೋಶಾಲೆಗಳು, ಆಶ್ರಮ, ಬಡವರ ವಿದ್ಯಾಭ್ಯಾಸಕ್ಕೆ ಹಣ ಹೀಗೆ ಅನೇಕ ಸೇವೆಗಳನ್ನು ಮಾಡಿದ್ದಾರೆ. ಅವರ ಮುಂದೆ ನಾವೆಲ್ಲ ಏನೂ ಅಲ್ಲ'' ಎಂದರು ರೇಣುಕಾಚಾರ್ಯ.

  ''ದೀಪಾವಳಿ ಈ ಬಾರಿ ಕರಾಳವಾಗಿದೆ. ಅಪ್ಪು ಅಭಿಮಾನಿಗಳಿಗೆ ದೀಪಾವಳಿ ಎಂಬುದೇ ಇಲ್ಲ. ಎಲ್ಲಿ ನೋಡಿದರೂ ಅಪ್ಪುವಿನ ಚಿತ್ರಗಳನ್ನು ಹಾಕಿದ್ದಾರೆ. ರಾಜ್ಯದಾದ್ಯಂತ ಅಭಿಮಾನಿಗಳು ಕಣ್ಣೀರು ಹಾಕಿದ್ದಾರೆ. ಪುನೀತ್ ಸಹಾಯ ಮಾಡುತ್ತಿದ್ದ ಮೈಸೂರಿನ ಶಕ್ತಿಧಾಮಕ್ಕೆ ಇನ್ನು ಮುಂದೆ ನಾನೂ ಸಹಾಯ ಮಾಡುತ್ತೇನೆ'' ಎಂದು ರೇಣುಕಾಚಾರ್ಯ ಹೇಳಿದರು.

  ರೇಣುಕಾಚಾರ್ಯ ಮಾತ್ರವೇ ಅಲ್ಲ ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಸಾವಿರಾರು ಮಂದಿ ತಮ್ಮ ಕಣ್ಣುಗಳನ್ನು ದಾನ ಮಾಡುವ ನಿರ್ಣಯ ಕೈಗೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ನಿಧನದ ಬಳಿಕ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯ ಆಸ್ಪತ್ರೆಯವರು ಸಂಗ್ರಹಿಸಿ ಅಪ್ಪುವಿನ ಎರಡು ಕಣ್ಣನಿಂದ ನಾಲ್ಕು ಜನರಿಗೆ ದೃಷ್ಟಿ ಮರಳುವಂತೆ ಮಾಡಿದ್ದರು. ಪುನೀತ್ ಅವರ ಈ ನಡೆಯನ್ನು ಆದರ್ಶವಾಗಿ ಭಾವಿಸಿ ಸಾವಿರಾರು ಮಂದಿ ನೇತ್ರದಾನಕ್ಕೆ ಮುಂದಾಗಿದ್ದಾರೆ.

  ಇನ್ನು ಅಪ್ಪು ನಿಧನವಾಗಿ ಏಳು ದಿನಗಳಾದರೂ ಇನ್ನೂ ಜನರು ಅಪ್ಪು ಸಮಾಧಿಗೆ ಆಗಮಿಸುತ್ತಲೇ ಇದ್ದಾರೆ. ಪ್ರತಿ ದಿನ ಸಾವಿರಾರು ಮಂದಿ ಕ್ಯೂನಲ್ಲಿ ಬಂದು ಅಪ್ಪು ಸಮಾಧಿಯ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಸಮಾಧಿ ಬಳಿಯ ವಿಡಿಯೋ ಒಂದು ಇಂದು ಬಿಡುಗಡೆ ಆಗಿದ್ದು, ಭಾರಿ ಮಳೆಯ ನಡುವೆಯೂ ಮಹಿಳೆಯರು, ಮಕ್ಕಳು, ವೃದ್ಧರು ಸಾಲಿನಲ್ಲಿ ಆಗಮಿಸಿ ಅಪ್ಪು ಸಮಾಧಿಗೆ ನಮಿಸಿ ಹೋಗುತ್ತಿದ್ದಾರೆ.

  ಇಂದು ತಮಿಳಿನ ಜನಪ್ರಿಯ ನಟ, ಪುನೀತ್‌ರ ಆತ್ಮೀಯ ಗೆಳೆಯ ಸೂರ್ಯ ಅಪ್ಪು ಸಮಾಧಿಗೆ ಆಗಮಿಸಿದ್ದರು. ತೆಲುಗಿನ ನಟ ರಾಜೇಂದ್ರ ಸಹ ಆಗಮಿಸಿ ಅಪ್ಪು ಸಮಾಧಿಗೆ ನಮಿಸಿದರು. ನಿನ್ನೆ ವಿಜಯ್ ಸೇತುಪತಿ, ಅದಕ್ಕೆ ಹಿಂದಿನ ದಿನ ರಾಮ್ ಚರಣ್ ತೇಜ, ತೆಲುಗು ನಟ ನಾಗಾರ್ಜುನ, ತಮಿಳಿನ ಶಿವಕಾರ್ತಿಕೇಯ ಇನ್ನೂ ಹಲವರು ಆಗಮಿಸಿದ್ದರು.

  English summary
  BJP MLA Renukacharya visited Puneeth Rajkumar's grave with his family today. He said he and his family decided to donate their eyes as Puneeth Rajkumar did.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X