Don't Miss!
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಟಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಹಬ್ಬಿದ ಗಾಸಿಪ್ ಸುಳ್ಳು!
ನಟಿ ರಾಧಿಕಾ ಕುಮಾರಸ್ವಾಮಿ ಬಗ್ಗೆ ಇತ್ತೀಚೆಗೆ ಗಾಂಧಿನಗರದಲ್ಲಿ ಅಂತೆ-ಕಂತೆ ಪುರಾಣಗಳು ಜಾಸ್ತಿ ಆಗಿವೆ. ಒಮ್ಮೆ ಅವರು ಬ್ರೇಕ್ ಅಪ್ ಆಗಿದ್ದಾರೆ ಅಂತ ಗುಲ್ಲೆದ್ದರೆ, ಇನ್ನೊಮ್ಮೆ ಸಿನಿಮಾ ರಂಗದಿಂದ ರಾಧಿಕಾ ಬ್ರೇಕ್ ಪಡೆದಿದ್ದಾರೆ ಅಂತ ಸುದ್ದಿ ಹಬ್ಬಿತ್ತು.
ಯಾವುದಕ್ಕೂ ನಟಿ ರಾಧಿಕಾ ಕುಮಾರಸ್ವಾಮಿ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಈಗ ಅವರು ಎಲ್ಲಿದ್ದಾರೆ ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ! [ರಾಧಿಕಾ ಕುಮಾರಸ್ವಾಮಿ ಬಗ್ಗೆ ಸ್ಫೋಟಗೊಂಡಿರುವ ಸುದ್ದಿ ನಿಜವೇ?]
ಹೀಗಿರುವಾಗಲೇ, ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ 'ನಮಗಾಗಿ' ಶೂಟಿಂಗ್ ನಲ್ಲಿ ಭಾಗವಹಿಸಿದ್ದಾರೆ. ಸದ್ದಿಲ್ಲದೇ 'ನಮಗಾಗಿ' ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ ಅಂತ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಮಾತುಗಳು ಕೇಳಿಬಂದಿದ್ದವು. ಈಗ ಅದೂ ಸುಳ್ಳು ಅಂತ ಗೊತ್ತಾಗಿದೆ. ಮುಂದೆ ಓದಿ....

ರಾಧಿಕಾ ಕುಮಾರಸ್ವಾಮಿ ಬಣ್ಣ ಹಚ್ಚಿಲ್ಲ!
'ರುದ್ರತಾಂಡವ' ಸಿನಿಮಾ ಬಿಡುಗಡೆ ಆದ್ಮೇಲೆ, ನಟಿ ರಾಧಿಕಾ ಕುಮಾರಸ್ವಾಮಿ 'ನಮಗಾಗಿ' ಚಿತ್ರದ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ನೀಡಿದರು. ಒಂದಷ್ಟು ದಿನ ಶೂಟಿಂಗ್ ನಲ್ಲಿ ಭಾಗವಹಿಸಿದರು. ಆಮೇಲೆ ಇದ್ದಕ್ಕಿದ್ದಂತೆ ರಾಧಿಕಾ ಕುಮಾರಸ್ವಾಮಿ ನಾಪತ್ತೆ ಆದರು. [ರೀಲ್ ನಲ್ಲಿ ರಾಧಿಕಾ ಕುಮಾರಸ್ವಾಮಿ 'ರಿಯಲ್' ಲೈಫ್ ಸ್ಟೋರಿ.?]

ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ!
ಒಂದು ವರ್ಷದಿಂದ ನಟಿ ರಾಧಿಕಾ ಕುಮಾರಸ್ವಾಮಿ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಇಲ್ಲ. ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. [ನಟಿ ರಾಧಿಕಾ ಕೆಣಕಿದ್ದಕ್ಕೆ ವಿಜಯ್ ರಾಘವೇಂದ್ರ ಗರಂ]

ಶೂಟಿಂಗ್ ಶುರು ಆಗಿಲ್ಲ ಅಂತಾರೆ ನಿರ್ದೇಶಕ
'ನಮಗಾಗಿ' ಚಿತ್ರದ ಶೂಟಿಂಗ್ ಗೆ ಮರು ಚಾಲನೆ ನೀಡಿಲ್ಲ ಅಂತ 'ಉದಯವಾಣಿ' ದಿನಪತ್ರಿಕೆಗೆ ಚಿತ್ರದ ನಿರ್ದೇಶಕ ರಘುರಾಮ್ ಸ್ಪಷ್ಟ ಪಡಿಸಿದ್ದಾರೆ. [ನಟಿ ರಾಧಿಕಾ ಕುಮಾರಸ್ವಾಮಿ ಸಿಕ್ಕೋದೇ 'ಡೌ'ಟು]

ಏನಂತಾರೆ ನಿರ್ದೇಶಕ ರಘುರಾಮ್?
''ನನಗೆ ಗೊತ್ತಿಲ್ಲದೆ ಚಿತ್ರೀಕರಣ ಶುರು ಆಗಲು ಸಾಧ್ಯವಿಲ್ಲ. ಸದ್ಯಕ್ಕೆ ಸಿನಿಮಾ ನಿಂತು ಒಂದು ವರ್ಷ ಆಗುತ್ತಾ ಬಂತು. ನಾನು ಕೂಡ ಚಿತ್ರದ ಚಿತ್ರೀಕರಣಕ್ಕೆ ಕಾಯುತ್ತಿದ್ದೇನೆ'' ಅಂತ 'ಉದಯವಾಣಿ' ಪ್ರತಿಕೆಗೆ 'ನಮಗಾಗಿ' ನಿರ್ದೇಶಕ ರಘುರಾಮ್ ತಿಳಿಸಿದ್ದಾರೆ.

ರಾಧಿಕಾ ಎಲ್ಲಿ?
''ರಾಧಿಕಾ ಅವರೂ ಕೂಡ ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ಕೆಲ ದಿನಗಳ ಹಿಂದೆ ಅವರ ಸಹೋದರನ ಜೊತೆ ಮಾತನಾಡಿದೆ ಅಷ್ಟೆ. ಸಿನಿಮಾ ಮತ್ತೆ ಯಾವಾಗ ಆರಂಭವಾಗುತ್ತೋ, ಗೊತ್ತಿಲ್ಲ'' ಎಂದಿದ್ದಾರೆ ನಿರ್ದೇಶಕ ರಘುರಾಮ್.

ಮಂಗಳೂರಿನಲ್ಲಿ ರಾಧಿಕಾ?
ಕೆಲ ವರದಿಗಳ ಪ್ರಕಾರ, ನಟಿ ರಾಧಿಕಾ ಕುಮಾರಸ್ವಾಮಿ ಮಂಗಳೂರಿನಲ್ಲಿದ್ದಾರಂತೆ.

ಚಿತ್ರರಂಗದಿಂದ ದೂರ ಉಳಿಯಲು ಕಾರಣ?
ನಟನೆ ಅಂದ್ರೆ ಪಂಚಪ್ರಾಣ ಅಂತ ಹೇಳುವ ನಟಿ ರಾಧಿಕಾ ಕುಮಾರಸ್ವಾಮಿ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರ ಉಳಿಯಲು ಕಾರಣವೇನೆಂಬುದು ಮಾತ್ರ ತಿಳಿದು ಬಂದಿಲ್ಲ.
ವಿಡಿಯೋ ನೋಡಿ...
ನಟಿ ರಾಧಿಕಾ ಕುಮಾರಸ್ವಾಮಿ ಅಭಿನಯದ 'ನಮಗಾಗಿ' ಚಿತ್ರದ ಬಗೆಗಿನ ಲೇಟೆಸ್ಟ್ ಅಪ್ ಡೇಟ್ ಇಲ್ಲಿದೆ. ವಿಡಿಯೋ ನೋಡಿ...