ಗಣರಾಜ್ಯೋತ್ಸವ : ದೇಶಭಕ್ತಿ ಮೆರೆದ ತಾರೆಯರು
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ನಮ್ಮ ಭಾರತ. ಇಂದಿಗೆ ಭಾರತದ ಸಂವಿಧಾನ ಜಾರಿಗೆ ಬಂದು ಗಣರಾಜ್ಯವಾಗಿ 66 ವರ್ಷಗಳು ಕಳೆದಿವೆ. ಇದೇ ಸಂಭ್ರಮದಲ್ಲಿ ದೇಶದಾದ್ಯಂತ ಗಣರಾಜ್ಯೋತ್ಸವ ಸಡಗರ ಮನೆ ಮಾಡಿದೆ.
ಈ ಸಡಗರದಿಂದ ನಮ್ಮ ಬಣ್ಣದ ಲೋಕದ ತಾರೆಯರು ಕೂಡ ಹೊರತಾಗಿಲ್ಲ. ತೆರೆಮೇಲೆ ದೇಶಭಕ್ತಿಯನ್ನ ಮೆರೆಯೋ ನಮ್ಮ ಸೆಲೆಬ್ರಿಟಿಗಳು, ಇಂದು ಗಣರಾಜ್ಯೋತ್ಸವವನ್ನ ಅಷ್ಟೇ ಹೆಮ್ಮೆಯಿಂದ ಆಚರಿಸುತ್ತಿದ್ದಾರೆ.
ಸ್ಯಾಂಡಲ್ ವುಡ್ ನಿಂದ ಹಿಡಿದು ಬಾಲಿವುಡ್ ವರೆಗೂ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರಿಗೂ ಶುಭಾಶಯ ಕೋರುತ್ತಿದ್ದಾರೆ ಸೆಲೆಬ್ರಿಟಿಗಳು. ಹಾಗಾದ್ರೆ, ಯಾವ್ಯಾವ ಸ್ಟಾರ್ ಗಳು ಏನೇನು ಸ್ಟೇಟಸ್ ಹಾಕಿ ದೇಶ ಭಕ್ತಿ ಮೆರೆದಿದ್ದಾರೆ. ಬನ್ನಿ ನೋಡೋಣ......
ಅಲ್ಲು ಅರ್ಜುನ್
ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಎಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯವನ್ನ ಕೋರಿದ್ದಾರೆ. ಇದರೊಂದಿಗೆ ಅವರ ಫ್ಯಾನ್ ಕ್ಲಬ್ ಎಡಿಟ್ ಮಾಡಿರುವ ಸ್ಪೆಷಲ್ ಫೋಟೋಗಳನ್ನ ಅಪ್ ಲೋಡ್ ಮಾಡಿದ್ದಾರೆ ಅಲ್ಲು ಅರ್ಜುನ್.
ದೀಪಿಕಾ ಪಡುಕೋಣೆ
ಇನ್ನು ತಮ್ಮದೇ ಫೋಟೋದೊಂದಿಗೆ ದೀಪಿಕಾ ಪಡುಕೋಣೆ ರಿಪಬ್ಲಿಕ್ ಡೇ ವಿಶ್ ಮಾಡಿರುವುದು ಹೀಗೆ...
ಕಾಜಲ್ ಅಗರ್ವಾಲ್
ಟಾಲಿವುಡ್ ನ ಹಾಟ್ ಬ್ಯೂಟಿ ಕಾಜಲ್ ಅಗರ್ವಾಲ್ ಕೂಡ ಇದೇ ಲಿಸ್ಟ್ ನಲ್ಲಿದ್ದಾರೆ.
ರಾಕಿಂಗ್ ಸ್ಟಾರ್ ಯಶ್
ತಮ್ಮ ಮುಂದಿನ ಚಿತ್ರ 'ಮಾಸ್ಟರ್ ಪೀಸ್'ನಲ್ಲಿ ದೇಶಭಕ್ತನಾಗಿ ಅಭಿನಯಿಸುತ್ತಿರುವ ಯಶ್, ಅದೇ ಫೋಟೋವನ್ನ ಪೋಸ್ಟ್ ಮಾಡಿ 'ಹ್ಯಾಪಿ ರಿಪಬ್ಲಿಕ್ ಡೇ' ಅಂದಿದ್ದಾರೆ.


Click it and Unblock the Notifications











