»   » ವಿವಾಹ ವಿಚ್ಛೇದನ ಪಡೆದ ಖ್ಯಾತ ತಾರೆ ರೇವತಿ

ವಿವಾಹ ವಿಚ್ಛೇದನ ಪಡೆದ ಖ್ಯಾತ ತಾರೆ ರೇವತಿ

Posted By:
Subscribe to Filmibeat Kannada

ಕನ್ನಡದ 'ಇದು ಸಾಧ್ಯ' (1989) ಹಾಗೂ 'ನಿಶಬ್ಧ' (1997) ಚಿತ್ರಗಳಲ್ಲಿ ಅಭಿನಯಿಸಿದ್ದ ದಕ್ಷಿಣದ ಖ್ಯಾತ ತಾರೆ ರೇವತಿ ಅವರ 26 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ಅಂತ್ಯವಾಗಿದೆ. ವಿವಾಹ ವಿಚ್ಛೇದನಕ್ಕೆ ಕೋರ್ಟ್ ಅನುಮತಿ ನೀಡಿದೆ.

ಇಪ್ಪತ್ತೇಳು ವರ್ಷಗಳ ಹಿಂದೆ ರೇವತಿ ಅವರು ನಿರ್ದೇಶಕ, ಛಾಯಾಗ್ರಾಹಕ ಸುರೇಶ್ ಮೆನನ್ ಕೈಹಿಡಿದಿದ್ದರು. ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇರುವುದೇ ಅವರ ದಾಂಪತ್ಯ ಜೀವನ ಮುರಿದುಬೀಳಲು ಕಾರಣ ಎನ್ನಲಾಗಿದೆ.

Actress Revathi Divorced

ಇಬ್ಬರೂ ವಿಚ್ಛೇದನ ಕೋರಿ ಚೆನ್ನೈನ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇಬ್ಬರ ವಾದ ವಿವಾದಗಳನ್ನು ಆಲಿಸಿದ ಘನ ನ್ಯಾಯಾಲಯ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅವಕಾಶ ನೀಡಿದೆ.

ಆಗತಾನೆ 'ಮೌನರಾಗಂ' ಚಿತ್ರದ ಮೂಲಕ ರೇವತಿ ಜನಪ್ರಿಯರಾಗಿದ್ದರು. ಅದಾದ ಬಳಿಕ ರೇವತಿ ಅವರು ಹೆಚ್ಚಾಗಿ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿಲ್ಲ. ಬಳಿಕ ಅವರು 'ಪುಧಿಯಾ ಮುಗಂ' ಎಂಬ ಚಿತ್ರದ ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ಈ ಚಿತ್ರಕ್ಕೆ ಅವರ ಪತಿ ಮೆನನ್ ನಿರ್ಮಾಪಕರಾಗಿದ್ದರು.

ಕಳೆದ ಕೆಲ ವರ್ಷಗಳಿಂದಲೂ ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. 1988ರಲ್ಲಿ ಸುರೇಶ್ ಚಂದ್ರ ಮೆನನ್ ಅವರ ಕೈಹಿಡಿದಿದ್ದರು ರೇವತಿ. ಮದುವೆಯಾಗಿ 15 ವರ್ಷಕ್ಕೆ ಅವರ ದಾಂಪತ್ಯ ಜೀವನ ಹಳಸಿತ್ತು. ಈಗ ವಿವಾಹ ವಿಚ್ಛೇದನ ಮೂಲಕ ಇಬ್ಬರೂ ಬೇರ್ಪಟ್ಟಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Actress Revathi alias Asha Menon and her husband Suresh Chandra Menon, who have been staying apart for long time, have now officially divorced. It was by mutual consent and a family court in Chennai has granted them divorce considering the fact that they had been living separately for quite some time now. Even after the judicial separation, they would remain good friends. 
Please Wait while comments are loading...