For Quick Alerts
  ALLOW NOTIFICATIONS  
  For Daily Alerts

  ಲಕ್ಷಾನುಗಟ್ಟಲೇ ಬೆಲೆಬಾಳುವ ಸ್ಟೈಲಿಷ್ ಬೈಕ್ ನಲ್ಲಿ ಕಿಚ್ಚನ ಜಾಲಿ ರೈಡ್

  By Suneetha
  |

  ಸ್ವರ್ಗದಲ್ಲಿ ದೇವಾನು-ದೇವತೆಗಳು ಒಂದು ಕಡೆಯಿಂದ ಮತ್ತೊಂದು ಕಡೆ ಚಲಿಸಲು ಪ್ರಾಣಿಗಳನ್ನು ಹಾಗೂ ರಥಗಳನ್ನು ತಮ್ಮ ವಾಹನಗಳನ್ನಾಗಿ ಬಳಸಿಕೊಳ್ಳುತ್ತಾರೆ ಎಂದು ನಾವು ಪುರಾಣಗಳಲ್ಲಿ ಓದಿರುತ್ತೇವೆ, ಕೇಳಿರುತ್ತೇವೆ ಅಲ್ಲವೇ?.

  ಇದೀಗ 'ರನ್ನ' ಖ್ಯಾತಿಯ ನಿರ್ದೇಶಕ ನಂದ ಕಿಶೋರ್ ಅವರು ತಮ್ಮ ಮುಂದಿನ ಹೊಸ ಚಿತ್ರಕ್ಕೆ ದೇವರಾದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗಾಗಿಯೇ ಅಂತ ಭಾರಿ ಬೆಲೆಬಾಳುವ ಬೈಕ್ ಒಂದನ್ನು ವಿಶೇಷವಾಗಿ ತಯಾರಿಸಿ ಸೆಟ್ ಗೆ ತಂದಿದ್ದಾರೆ.[ರಿಯಲ್ ಉಪ್ಪಿ ಹೆಂಡ್ತಿ ಆಗ್ತಾರಂತೆ ನಿಖಿತಾ ತುಕ್ರಾಲ್]

  ಹೌದು ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಒಂದಾಗಿ ಕಾಣಿಸಿಕೊಳ್ಳುತ್ತಿರುವ 'ಮುಕುಂದ ಮುರಾರಿ' ಎಂಬ ಹೊಸ ಚಿತ್ರಕ್ಕೆ ನಿರ್ದೇಶಕರು ಕಾಸ್ಟ್ಲಿ ಬೈಕ್ ಒಂದನ್ನು ತರಿಸಿದ್ದು, ಸದ್ಯಕ್ಕೆ ಆ ಬೈಕ್ ನ ಬಗ್ಗೆಯೇ ಎಲ್ಲಾ ಕಡೆ ಚರ್ಚೆ ಆಗುತ್ತಿದೆ.

  ಹಿಂದಿಯಲ್ಲಿ ಅಕ್ಷಯ್ ಕುಮಾರ್ ಮತ್ತು ಪರೇಶ್ ರಾವಲ್ ಅವರು ಕಾಣಿಸಿಕೊಂಡಿದ್ದ 'ಓ ಮೈ ಗಾಡ್' ಚಿತ್ರದ ರೀಮೆಕ್ ಚಿತ್ರ ಆಗಿರುವ 'ಮುಕುಂದ ಮುರಾರಿ' ಈಗಾಗಲೇ ಬಹುತೇಕ ಶೂಟಿಂಗ್ ಮುಗಿಸಿದೆ.['ಓ ಮೈ ಗಾಡ್' ಕಿಚ್ಚ-ಉಪ್ಪಿ ಚಿತ್ರದ ಟೈಟಲ್ ಮತ್ತೆ ಬದಲಾಯಿತಾ?]

  ಕಿಚ್ಚ ಸುದೀಪ್ ಅವರಿಗಾಗಿ ಭಾರಿ ಬೆಲೆತೆತ್ತು ತಂದಿರುವ ಸ್ಟೈಲಿಷ್ ಕಾಸ್ಟ್ಲಿ ಬೈಕ್ ನ ವಿಶೇಷತೆಗಳನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ದುಬಾರಿ ಬೈಕ್

  ದುಬಾರಿ ಬೈಕ್

  ಸುಮಾರು 25 ಲಕ್ಷ ಕೊಟ್ಟು ಖರೀದಿ ಮಾಡಿರುವ ದುಬಾರಿ ಬೈಕ್ ನಲ್ಲಿ ಶ್ರೀಕೃಷ್ಣ ಪರಮಾತ್ಮನ ಪಾತ್ರ ವಹಿಸಿರುವ ಕಿಚ್ಚ ಸುದೀಪ್ ಅವರು ಝಂ ಅಂತ ಜಾಲಿ ರೈಡ್ ಮಾಡಲಿದ್ದಾರೆ.[ಕಿಚ್ಚ-ಉಪ್ಪಿ ಅವರ ಹೊಸ ಚಿತ್ರದ ಹೆಸರೇನು ಗೊತ್ತಾ?]

  ಸಾಮರ್ಥ್ಯವುಳ್ಳ ಬೈಕ್

  ಸಾಮರ್ಥ್ಯವುಳ್ಳ ಬೈಕ್

  ಬರೋಬ್ಬರಿ 1000 ಸಿಸಿ ಸಾಮರ್ಥ್ಯವುಳ್ಳ ಈ ಬೈಕ್ ಸಖತ್ ಸ್ಟೈಲಿಷ್ ಲುಕ್ ನಲ್ಲಿದ್ದು, ಬೈಕ್ ಪ್ರಿಯರ ಕಣ್ಣು ಕುಕ್ಕುತ್ತಿದೆ.['ಓ ಮೈ ಗಾಡ್', 'ಆರ್ಮುಗಂ' ರವಿಶಂಕರ್ ಸ್ವಾಮೀಜಿ ಆಗ್ತಾರಂತೆ]

  ಕಿಚ್ಚನ ಹೈಟ್ ಗೆ ತಕ್ಕ ಬೈಕ್

  ಕಿಚ್ಚನ ಹೈಟ್ ಗೆ ತಕ್ಕ ಬೈಕ್

  ಕಿಚ್ಚ ಸುದೀಪ್ ಅವರ ಹೈಟ್ ಗೆ ತಕ್ಕಂತೆ ಮ್ಯಾಚ್ ಆಗುವ ಹಾಗೆ ಹೀಗೀಗೇ ಇರಬೇಕು ಅಂತ ಆರ್ಡರ್ ಕೊಟ್ಟು ವಿದೇಶದಿಂದ ಈ ಸ್ಪೆಷಲ್, ಸ್ಟೈಲಿಷ್ ಬೈಕ್ ಅನ್ನು ನಿರ್ದೇಶಕ ನಂದ ಕಿಶೋರ್ ಅವರು ತರಿಸಿದ್ದಾರೆ.

  ಖುಷಿ ವ್ಯಕ್ತಪಡಿಸಿದ ಕಿಚ್ಚ

  ಖುಷಿ ವ್ಯಕ್ತಪಡಿಸಿದ ಕಿಚ್ಚ

  ಈಗಾಗಲೇ 'ಮುಕುಂದ ಮುರಾರಿ' ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡು ಬಹುತೇಕ ತಮ್ಮ ಭಾಗದ ಚಿತ್ರೀಕರಣ ಮುಗಿಸಿಕೊಟ್ಟಿರುವ ನಟ ಕಿಚ್ಚ ಸುದೀಪ್ ಅವರು ರಿಯಲ್ ಸ್ಟಾರ್ ಉಪೇಂದ್ರ ಹಾಗೂ 'ಮುಕುಂದ ಮುರಾರಿ' ಚಿತ್ರತಂಡದವರ ಜೊತೆ ಕೆಲಸ ಮಾಡಿದ್ದು ಸಾಕಷ್ಟು ಖುಷಿ ತಂದಿದೆ ಎಂದು ಟ್ವಿಟ್ಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  10 ದಿನಗಳ ಶೂಟಿಂಗ್ ಬಾಕಿ

  10 ದಿನಗಳ ಶೂಟಿಂಗ್ ಬಾಕಿ

  ಈಗಾಗಲೇ ಸುದೀಪ್ ಅವರ ಭಾಗದ ಶೂಟಿಂಗ್ ಮುಗಿದಿದ್ದು, ಇನ್ನೇನು ಕೇವಲ 10 ದಿನಗಳ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ. ಅದೂ ಉಪೇಂದ್ರ ಅವರ ಭಾಗದ ಶೂಟಿಂಗ್ ಮಾತ್ರ ಬಾಕಿ ಇದೆ. ಅದಾದ ನಂತರ ಚಿತ್ರದ 3 ಹಾಡುಗಳ ಶೂಟಿಂಗ್ ನಡೆಸಲು ನಿರ್ದೇಶಕ ನಂದ ಕಿಶೋರ್ ಯೋಜನೆ ಹಾಕಿಕೊಂಡಿದ್ದಾರೆ.

  ಆಸ್ತಿಕ-ನಾಸ್ತಿಕನ ಕಥೆ

  ಆಸ್ತಿಕ-ನಾಸ್ತಿಕನ ಕಥೆ

  ಭಕ್ತ ಮತ್ತು ದೇವರ ಕಥೆಯಾಧರಿತ ಈ ಚಿತ್ರದಲ್ಲಿ ಪರಮಾತ್ಮನಾಗಿ ಕಿಚ್ಚ ಸುದೀಪ್ ಅವರು ಕಾಣಿಸಿಕೊಂಡಿದ್ದು, ಅವರ ಭಕ್ತನಾಗಿ ಉಪೇಂದ್ರ ಅವರು ಮಿಂಚಿದ್ದಾರೆ. ಚಿತ್ರದಲ್ಲಿ ಉಪ್ಪಿ ಅವರ ಪತ್ನಿ ಕಟ್ಟಾ ದೇವರ ಭಕ್ತೆಯಾಗಿ ನಟಿ ನಿಖಿತಾ ತುಕ್ರಾಲ್ ಅವರು ಮಿಂಚಿದ್ದಾರೆ.

  English summary
  Kannada Movie 'Mukunda Murrari' team have revealed the bike (used as Sudeep's chariot) in the film. The new bike pics from movie sets in making rounds in the social media. Kannada Actor Sudeep, Kannada Actor Upendra in the lead role. The movie is directed by Nanda Kishore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X