»   » ಬಾಕ್ಸಾಫೀಸ್ ಸುಲ್ತಾನ 'ಐರಾವತ', ನ್ಯೂ ಲುಕ್ ಪೋಸ್ಟರ್ ಔಟ್

ಬಾಕ್ಸಾಫೀಸ್ ಸುಲ್ತಾನ 'ಐರಾವತ', ನ್ಯೂ ಲುಕ್ ಪೋಸ್ಟರ್ ಔಟ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನ ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಮಿಸ್ಟರ್ ಐರಾವತ' ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಅಕ್ಟೋಬರ್ ತಿಂಗಳಿನಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ.

ಈಗಾಗಲೇ ದರ್ಶನ್ ಅವರ 'ಐರಾವತ' ಸಾಮಾಜಿಕ ಜಾಲಾತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಕೆಲವು ಬಲ್ಲ ಮಾಹಿತಿಗಳ ಪ್ರಕಾರ ಚಿತ್ರದ ವಿತರಣೆ ಗಳಿಕೆಯಲ್ಲಿ ದಾಖಲೆಯನ್ನು ಸೃಷ್ಟಿಸಿದೆಯಂತೆ. ಸುಮಾರು 25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ನಿರ್ಮಾಪಕ ಸಂದೇಶ್ ನಾಗಾರಾಜ್ ಅವರಿಗೆ ಹೂಡಿದ್ದ ಬಂಡವಾಳವನ್ನು ವಾಪಸ್ ತಂದುಕೊಟ್ಟಿದೆಯಂತೆ.


ಇದೀಗ 'ಅದ್ದೂರಿ' ನಿರ್ದೇಶಕ ಎ.ಪಿ ಅರ್ಜುನ್ ಅವರು ಆಕ್ಷನ್-ಕಟ್ ಹೇಳಿರುವ 'ಐರಾವತ' ಚಿತ್ರದ ಹೊಚ್ಚ ಹೊಸ ಪೋಸ್ಟರ್ ಒಂದು ರಿಲೀಸ್ ಆಗಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ಕ್ ಹಾಗೂ ಟ್ವಿಟ್ಟರ್ ನಲ್ಲಿ ಈ ಪೋಸ್ಟರ್ ಭಾರಿ ಓಡಾಡುತ್ತಿದೆ.[ದರ್ಶನ್ ಅಭಿನಯದ 'ಐರಾವತ' ಆಡಿಯೋ ವಿಮರ್ಶೆ]


Darshan

ಇನ್ನು ಈ ಪೋಸ್ಟರ್ ನಲ್ಲಿ ದರ್ಶನ್ ಅವರ ನಗುಮುಖ ಸಖತ್ ಹೈಲೈಟ್ ಆಗುತ್ತಿದ್ದು, ಪೋಸ್ಟರ್ ನಲ್ಲಿ 'ಕಮಿಂಗ್ ಸೂನ್' ಅಂತ ಬರೆದುಕೊಂಡಿದೆ.


ಈಗಾಗಲೇ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ ಇನ್ನೂ ಅಧಿಕೃತವಾಗಿ ಚಿತ್ರ ಬಿಡುಗಡೆ ದಿನಾಂಕ ಮಾತ್ರ ಇನ್ನೂ ಘೋಷಣೆಯಾಗಿಲ್ಲ. ಚಿತ್ರದಲ್ಲಿ ಬಹುಭಾಷಾ ತಾರೆ ಊರ್ವಶಿ ರೌಟೇಲ ಅವರು ದರ್ಶನ್ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ.


ಜೊತೆಗೆ ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೈಲರ್, ಟೀಸರ್ ಹಾಗೂ ಚಿತ್ರದ ಸುಂದರವಾದ ಹಾಡುಗಳು ದರ್ಶನ್ ಅಭಿಮಾನಿಗಳಿಂದ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.[ಮುಂಬೈನಲ್ಲಿ 'ಜಗ್ಗು ದಾದಾ' ದರ್ಶನ್ ಜೊತೆ ಸೃಜ ಮಜಾ]


Darshan

ನಿರ್ದೇಶಕ ಎ.ಪಿ ಅರ್ಜುನ್ ಅವರು ಆಕ್ಷನ್-ಕಟ್ ಹೇಳಿರುವ ಕೆಲವಾರು ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡಿದ್ದು, 'ಐರಾವತ'ದ ಚಿತ್ರದ ಬಗ್ಗೆಯೂ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮೊದಲು ಚಿತ್ರ ಆಗಸ್ಟ್ ತಿಂಗಳಿನಲ್ಲಿ ಬಿಡುಗಡೆಯಾಗುತ್ತದೆ ಎಂದು ಗಾಂಧಿನಗರದಲ್ಲಿ ಸುದ್ದಿಯಾಗಿದ್ದರೂ ಕೂಡ ಇದೀಗ ಚಿತ್ರದ ಕೆಲವು ಕೆಲಸಗಳು ಬಾಕಿ ಇರುವುದರಿಂದ ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ನಲ್ಲಿ ತೆರೆ ಮೇಲೆ ಅಪ್ಪಳಿಸಲಿದೆ.


ಅಂತೂ ಇಂತೂ ದರ್ಶನ್ ಅಭಿಮಾನಿಗಳಿಗೆ ಥಿಯೇಟರ್ ನಲ್ಲಿ ಮತ್ತೊಮ್ಮೆ ಹಬ್ಬ ಆಚರಿಸುವ ಸಂದರ್ಭಗಳು ಒದಗಿ ಬರಲಿದ್ದು, ಅದಕ್ಕಾಗಿ ಈಗಿನಿಂದಲೇ ಸಂಭ್ರಮದ ತಯಾರಿ ನಡೆಸಿಕೊಳ್ಳುತ್ತಿದ್ದಾರೆ ಅಂದ್ರು ತಪ್ಪಾಗ್ಲಿಕ್ಕಿಲ್ಲ.

English summary
Mr Airavata is again making huge rounds at social networking sites from its newly released, promising poster. In the poster Box Office Sultan, Darshan looks dashing with a wide smile on his face. The poster also has, 'coming soon' written on it. 'Airavata' features Kannada Actor Darshan, Actress Urvashi Rautela in the lead role. The movie is directed by AP Arjun.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada