»   » ಕಿಚ್ಚನನ್ನು ಹೊಗಳುವ ಭರಾಟೆಯಲ್ಲಿ ಲೆಜೆಂಡ್ ನಟರನ್ನು ಗೇಲಿ ಮಾಡಿದ ವರ್ಮಾ

ಕಿಚ್ಚನನ್ನು ಹೊಗಳುವ ಭರಾಟೆಯಲ್ಲಿ ಲೆಜೆಂಡ್ ನಟರನ್ನು ಗೇಲಿ ಮಾಡಿದ ವರ್ಮಾ

Posted By:
Subscribe to Filmibeat Kannada

ಯಾವಾಗ ಬೇಕು ಆವಾಗ ವಿವಾದಗಳನ್ನು ತಮ್ಮ ಮೈಮೇಲೆ ಎಳೆದುಕೊಳ್ಳುವುದರಲ್ಲಿ ನಿಸ್ಸೀಮರಾಗಿರುವ, ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮತ್ತೆ ಟ್ವಿಟ್ಟರ್ ನಲ್ಲಿ ರಾಡಿ ಎಬ್ಬಿಸಿ, ವಿವಾದ ಸೃಷ್ಟಿಸಿದ್ದಾರೆ.

ಏನಾದರೊಂದು ವಿವಾದ ಎಳೆದುಕೊಂಡು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಈ ಬಾರಿ, ಅಭಿನಯ ಭಾರ್ಗವ ವಿಷ್ಣುವರ್ಧನ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳನ್ನು ಟ್ವಿಟ್ಟರ್ ನಲ್ಲಿ ಕೆಣಕಿದ್ದಾರೆ.[ಇದ್ಬೇಕಿತ್ತಾ? ಸೂಪರ್ ಸ್ಟಾರ್ ರಜನಿ ಬಗ್ಗೆ ಲೇವಡಿ ಮಾಡಿದ ವರ್ಮಾ.!]


ಅಂದಹಾಗೆ ಸಿನಿಮಾಗಳಿಗಿಂತ ಹೆಚ್ಚಾಗಿ ಟ್ವೀಟ್ ಮಾಡಿ ಕಾಮೆಂಟ್ ಮಾಡುವ ಮೂಲಕ ಭಾರಿ ಸುದ್ದಿ ಮಾಡುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಈ ಬಾರಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಮತ್ತು ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಗೇಲಿ ಮಾಡಿದ್ದಾರೆ.[ಸೂಪರ್ ಸ್ಟಾರ್ ರಜನಿ ಬಗ್ಗೆ ರಾಮ್ ಗೋಪಾಲ್ ವರ್ಮಾ ಮತ್ತೆ ಕಾಮೆಂಟ್.!]


ಅಷ್ಟಕ್ಕೂ ವರ್ಮಾ ಮಾಡಿದ ಕೆಲಸವಾದರೂ ಏನು?, ಟ್ವಿಟ್ಟರ್ ನಲ್ಲಿ ನಡೆದಿದ್ದೇನು ಎಂಬುದನ್ನು ತಿಳಿಯಲು ಕೆಳಗಿನ ಸ್ಲೈಡ್ಸ್ ಗಳನ್ನು ಒಂದೊಂದಾಗಿ ಕ್ಲಿಕ್ಕಿಸುತ್ತಾ ಹೋಗಿ.....


'ಕೋಟಿಗೊಬ್ಬ 2' ಮೆಚ್ಚಿದ ವರ್ಮಾ

ಕಳೆದ ಶುಕ್ರವಾರ (ಆಗಸ್ಟ್ 12) ದಂದು ತೆರೆಕಂಡ, ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 2' ಸಿನಿಮಾ ನೋಡಿ ರಾಮ್ ಗೋಪಾಲ್ ವರ್ಮಾ ಅವರು ಬಹಳ ಮೆಚ್ಚಿಕೊಂಡಿದ್ದಾರೆ. 'ಕೋಟಿಗೊಬ್ಬ' ಚಿತ್ರದಲ್ಲಿ ಅಭಿನಯ ಭಾರ್ಗವ ವಿಷ್ಣುವರ್ಧನ್ ನಟಿಸಿದ್ದರು. 'ಕೋಟಿಗೊಬ್ಬ 2' ನಲ್ಲಿ ಸುದೀಪ್ ನಟಿಸಿದ್ದಾರೆ. ಇವರಿಬ್ಬರ ನಟನೆಯನ್ನು ಹೋಲಿಕೆ ಮಾಡಿ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದು ಹೀಗೆ...ಓದಿ ಮುಂದಿನ ಸ್ಲೈಡಿನಲ್ಲಿ.[ವಿಮರ್ಶೆ: ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'.!]


ವಿಷ್ಣುವರ್ಧನ್ ಗೆ ಅಮೆಚ್ಯುರ್ ಎಂದ ವರ್ಮಾ

'ಸುದೀಪ್ ಅವರ 'ಕೋಟಿಗೊಬ್ಬ 2' ಚಿತ್ರ ನೋಡಿದೆ. 'ಕೋಟಿಗೊಬ್ಬ 2' ಚಿತ್ರದಲ್ಲಿ ನಿಮ್ಮ ಅಭಿನಯ ನೋಡಿದರೆ, ವಿಷ್ಣುವರ್ಧನ್ ಅಮೆಚ್ಯುರ್ (ನಟನೆಯಲ್ಲಿ ಎಳಸು) ಅಂತ್ಹೆನಿಸುತ್ತಾರೆ. ಇದನ್ನು ವಿಷ್ಣು ಅವರ ಅಭಿಮಾನಿಗಳು ಒಪ್ಪದಿದ್ದರೂ ಅವರೂ 'ಅಮೆಚ್ಯುರ್' ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.[ಕನ್ನಡ ಚಿತ್ರರಂಗದ ಇತಿಹಾಸದಲ್ಲೇ 'ಕೋಟಿ ಕಿಚ್ಚ'ನ ಹೊಸ ದಾಖಲೆ]


ಸೂಪರ್ ಸ್ಟಾರ್ ಗೆ ಗೇಲಿ ಮಾಡಿದ ವರ್ಮಾ

ಇನ್ನೊಂದು ಟ್ವೀಟ್ ನಲ್ಲಿ 'ಸುದೀಪ್ ನೀವು ನಿದ್ರೆಯಲ್ಲೂ ರೋಬೋ ಆಗಿ ನಟಿಸಬಲ್ಲಿರಿ. ಆದರೆ ರಜನಿ ಮಾತ್ರ ತಮ್ಮ ಕನಸಿನಲ್ಲೂ 'ಈಗ' ಚಿತ್ರದ ಪಾತ್ರ ಮಾಡೋಕೆ ಸಾಧ್ಯವಿಲ್ಲ". ಎಂದು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಈ ರೀತಿ ಟ್ವೀಟ್ ಮಾಡುವ ಮೂಲಕ ಗೇಲಿ ಮಾಡಿದ್ದಾರೆ.


ಹೆಸರು ಬದಲಾಯಿಸಿಕೊಳ್ಳಿ

ಇನ್ನು ತಮ್ಮ ಟ್ವೀಟ್ ರಾದ್ಧಾಂತವನ್ನು ಇಷ್ಟಕ್ಕೆ ನಿಲ್ಲಿಸದ ವರ್ಮಾ ಅವರು "ನಿಜವಾದ ರಿಯಲಿಸ್ಟಿಕ್ ಕಮರ್ಷಿಯಲ್ ವರ್ಸಲಿಟಿಯನ್ನು ನಿಮ್ಮಿಂದ ರಜನಿ ಕಲಿಯಬೇಕಿದೆ. ಇನ್ನುಮುಂದೆ ನಿಮ್ಮ ಹೆಸರನ್ನು ರಜನಿ ಸುದೀಪ್ ಎಂದು ಬದಲಾಯಿಸಿಕೊಳ್ಳಿ" ಎಂದು ಬಿಟ್ಟಿ ಸಲಹೆ ನೀಡಿ ವರ್ಮಾ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ತಿರುಗೇಟು ನೀಡಿದ ಕಿಚ್ಚ

ಆದರೆ ವರ್ಮಾ ಅವರ ಈ ಎಲ್ಲಾ ಕೆಲಸಕ್ಕೆ ಬಾರದ ಟ್ವೀಟ್ ಗಳನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕಡ್ಡಿಮುರಿದಂತೆ ಅಲ್ಲಗಳೆದಿದ್ದಾರೆ. "ನಿಮ್ಮ ಮೆಚ್ಚುಗೆಗೆ ಧನ್ಯವಾದ ಸರ್. ಆದರೆ, ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಅವರಂತಹ ಲೆಜೆಂಡ್ ಗಳ ಜೊತೆ ನನ್ನನ್ನು ಹೋಲಿಸುವುದಿರಲಿ, ಅವರ ಹತ್ತಿರಕ್ಕೂ ನಾನು ಇರಲ್ಲ. ಅವರಿಬ್ಬರಿಗೂ ನಾನು ಸರಿಸಮನಲ್ಲ". ಎಂದು ಬಹಳ ವಿನಯಪೂರ್ವಕವಾಗಿ ಟ್ವೀಟ್ ಮಾಡಿದ್ದಾರೆ.


ವರ್ಮಾಗೆ ಇದೇನು ಹೊಸದಲ್ಲ

ಅಂದಹಾಗೆ ವರ್ಮಾ ಅವರಿಗೆ ಈ ತರ ಟ್ವೀಟ್ ಗಳನ್ನು ಮಾಡಿ ವಿವಾದ ಮಾಡೋದು ಹೊಸ ವಿಚಾರ ಅಲ್ಲ. ಈ ಮೊದಲು ರಜನಿಕಾಂತ್ ಮತ್ತು ಆಮಿ ಜಾಕ್ಸನ್ ಹಾಕಿದ್ದ ಫೋಟೋ ಒಂದಕ್ಕೆ ವರ್ಮಾ ಬಾಯಿಗೆ ಬಂದಂತೆ ಎರ್ರಾ-ಬಿರ್ರಿ ಕಾಮೆಂಟ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.


ಮಮ್ಮುಟ್ಟಿಗೂ ಕಾಮೆಂಟ್

ಜೊತೆಗೆ ಮಲಯಾಳಂ ನಟ ಮಮ್ಮುಟ್ಟಿ ಮತ್ತು ದುಲ್ಕರ್ ಸಲ್ಮಾನ್ ಅವರಿಗೂ ಹೋಲಿಕೆ ಮಾಡಿ ಟ್ವೀಟ್ ಮಾಡಿ ಸುದ್ದಿಯಾಗಿದ್ದರು. ಮಮ್ಮುಟ್ಟಿ ಮಗ ದುಲ್ಕರ್ ಸಿನಿಮಾ ರಂಗಕ್ಕೆ ಬಂದ ಅಲ್ಪ ಸಮಯದಲ್ಲೆ ಸಾಧನೆ ಮಾಡಿದ್ದಾರೆ. ಆದರೆ ಮಮ್ಮುಟ್ಟಿ ಅಷ್ಟೇನು ಮಾಡಿಲ್ಲ. ಅವರಿಗೆ ಬಂದ ಪ್ರಶಸ್ತಿಗಳನ್ನು ವಾಪಸ್ ಮಗ ದುಲ್ಕರ್ ಗೆ ನೀಡಲಿ ಅಂತ ಕಾಮೆಂಟ್ ಮಾಡಿದ್ದರು.


English summary
Director Ram Gopal Varma has heaped praises on Sudeep and his latest movie "Kotigobba 2." The filmmaker Varma on Twitter declared that Kiccha Sudeep is a bigger star than Super Star Rajinikanth and late Kannada Actor Vishnuvardhan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada