For Quick Alerts
  ALLOW NOTIFICATIONS  
  For Daily Alerts

  ಹಸೆಮಣೆ ಏರಲು ತಯಾರಾದ 'ರಿಕ್ಕಿ' ನಿರ್ದೇಶಕ ರಿಶಬ್ ಶೆಟ್ಟಿ

  By Suneetha
  |

  ಚೊಚ್ಚಲ ಸಿನಿಮಾ 'ರಿಕ್ಕಿ'ಯಲ್ಲಿ ನಾಯಕ-ನಾಯಕಿ ನಡುವೆ ಪರಿಶುದ್ಧವಾದ ಪ್ರೀತಿ ಚಿಗುರೊಡೆಯುವಂತೆ ಮಾಡಿದ ನಿರ್ದೇಶಕ ರಿಶಬ್ ಶೆಟ್ಟಿ ಅವರು, ನಿಜ ಜೀವನದಲ್ಲಿ ಮಾತ್ರ ಮನೆಯವರು ನೋಡಿದ ಹುಡುಗಿಗೆ ಮಣೆ ಹಾಕಿದ್ದಾರೆ.

  ಹೌದು ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿದ ನಿರ್ದೇಶಕ ರಿಶಬ್ ಶೆಟ್ಟಿ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಆರೇಂಜ್ಡ್ ಮದುವೆ ಆಗುವ ಮೂಲಕ ಧೀರ್ಘ ಕಾಲದ ಬ್ಯಾಚುಲರ್ ಜೀವನಕ್ಕೆ ಟಾಟಾ ಹೇಳೋಕೆ ರಿಶಬ್ ಶೆಟ್ಟಿ ಅವರು ಸಿದ್ಧವಾಗಿದ್ದಾರೆ.[ರಾಕ್ ಸ್ಟಾರ್ ರೋಹಿತ್ ಗೆ ಕೂಡಿ ಬಂತು ಕಂಕಣ ಭಾಗ್ಯ]

  'ಉಳಿದವರು ಕಂಡಂತೆ' ಚಿತ್ರದಲ್ಲಿ ನಟಿಸಿ, 'ರಿಕ್ಕಿ' ಚಿತ್ರಕ್ಕೆ ನಿರ್ದೇಶನ ಮಾಡಿದ್ದ ರಿಶಬ್ ಶೆಟ್ಟಿ ಅವರ ಜೀವನದಲ್ಲಿ ಸಿಹಿಗಾಳಿಯಾಗಿ ಸುಳಿದಾಡಲು ತಯಾರಾದವರು ಯಾರು?, ಏನು?, ಎತ್ತ?, ಎಂಬುದನ್ನು ನೋಡಲು ಮುಂದೆ ಓದಿ....

  ರಿಶಬ್ ಬಾಳ ಸಂಗಾತಿ ಇವರೇ...

  ರಿಶಬ್ ಬಾಳ ಸಂಗಾತಿ ಇವರೇ...

  ನಟರಾಗಿದ್ದು, 'ರಿಕ್ಕಿ' ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾದ ರಿಶಬ್ ಶೆಟ್ಟಿ ಅವರನ್ನು ಕೈ ಹಿಡಿಯಲಿರುವ ಸುಂದರಿ ಇವರೇ. ಹೆಸರು ಪ್ರಗತಿ ಶೆಟ್ಟಿ, ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್.[ಲೂಸ್ ಮಾದ ಯೋಗಿ 'ರಿಯಲ್' ಲವ್ ಸ್ಟೋರಿ ಬಹಿರಂಗ.!]

  ಮನೆಯವರು ನೋಡಿದ ಹುಡುಗಿ

  ಮನೆಯವರು ನೋಡಿದ ಹುಡುಗಿ

  ನಟ-ನಿರ್ದೇಶಕ ರಿಶಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಅವರದು ಆರೇಂಜ್ಡ್ ಮ್ಯಾರೇಜ್. ಬೆಂಗಳೂರಿನ ಪ್ರತಿ‍ಷ್ಠಿತ ಐಬಿಎಮ್ ಕಂಪೆನಿಯಲ್ಲಿ ಪ್ರಗತಿ ಶೆಟ್ಟಿ ಅವರು ಕೈ ತುಂಬಾ ಸಂಪಾದನೆ ಮಾಡುತ್ತಿದ್ದಾರೆ.[ಚಿತ್ರಗಳು: ಸಿಂಗ್ ಜೊತೆ ದಾಂಪತ್ಯಕ್ಕೆ ಕಾಲಿಟ್ಟ ನಟಿ ನಿಖಿತಾ ತುಕ್ರಾಲ್]

  ತಾಯಿಯ ಒತ್ತಾಯಕ್ಕೆ ಮದುವೆ?

  ತಾಯಿಯ ಒತ್ತಾಯಕ್ಕೆ ಮದುವೆ?

  ಪ್ರಗತಿ ಶೆಟ್ಟಿ ಅವರು ರಿಶಬ್ ಅವರ ತಾಯಿಯ ಆಯ್ಕೆ. ಮದುವೆ-ಸಂಸಾರ ಅಂದ್ರೆ ಮಾರು ದೂರ ಓಡುತ್ತಿದ್ದ ರಿಶಬ್ ಶೆಟ್ಟಿ ಅವರಿಗೆ ಅವರ ತಾಯಿ ಒತ್ತಾಯಪೂರ್ವಕವಾಗಿ ಮದುವೆ ಮಾಡುತ್ತಿದ್ದಾರಂತೆ. ಅಂತೂ ತಾಯಿಯ ಒತ್ತಾಯಕ್ಕೆ ಇದೀಗ ಸಂಸಾರಿಯಾಗಲು ರಿಶಬ್ ಅವರು ನಿರ್ಧರಿಸಿದ್ದಾರೆ.['ಬಿಗ್ ಬಾಸ್' ಬೆಡಗಿ ದೀಪಿಕಾ ಕಾಮಯ್ಯ ಕೈಹಿಡಿಯಲಿರುವ ಕುವರ ಇವರೇ...]

  ಯಾವಾಗ ಮದುವೆ?

  ಯಾವಾಗ ಮದುವೆ?

  ಸದ್ಯಕ್ಕೆ ಗಂಡು ಮತ್ತು ಹೆಣ್ಣಿನ ಮನೆಯಲ್ಲಿ ಮದುವೆ ಬಗ್ಗೆ ಮಾತು-ಕತೆ ನಡೆದಿದ್ದು, ಮುಂದಿನ ವರ್ಷ ಫೆಬ್ರವರಿ ಮೊದಲ ವಾರದಲ್ಲಿ ಅದ್ಧೂರಿ ಮದುವೆ ನಡೆಯಲಿದೆ. ರಿಶಬ್ ಅವರ ಹುಟ್ಟೂರಾದ ಕುಂದಾಪುರದಲ್ಲೇ ವಿವಾಹ ಮಹೋತ್ಸವ ಜರುಗಲಿದೆ.

  ತಂಗಿಯಿಂದ ಪ್ರಗತಿ ಪರಿಚಯ

  ತಂಗಿಯಿಂದ ಪ್ರಗತಿ ಪರಿಚಯ

  ರಿಶಬ್ ಶೆಟ್ಟಿ ಅವರ ತಂಗಿ ಪ್ರತಿಭಾ ಅವರಿಂದ ಪ್ರಗತಿ ಶೆಟ್ಟಿ ಅವರ ಪರಿಚಯ ರಿಶಬ್ ಅವರಿಗಿದೆ. ಒಂದು ಬಾರಿ ಪ್ರಗತಿ ಅವರನ್ನು ರಿಶಬ್ ಅವರು ಭೇಟಿ ಮಾಡಿದ್ದಾರಂತೆ.

  ಪ್ರಗತಿ ಶೆಟ್ಟಿ ಬಗ್ಗೆ

  ಪ್ರಗತಿ ಶೆಟ್ಟಿ ಬಗ್ಗೆ

  ಮೂಲತಃ ಉಡುಪಿ ಜಿಲ್ಲೆಯ ಮಂದಾರ್ಥಿಯವರಾಗಿರುವ ಪ್ರಗತಿ ಶೆಟ್ಟಿ ಅವರು ಸದ್ಯಕ್ಕೆ ಶಿವಮೊಗ್ಗದಲ್ಲಿ ನೆಲೆಸಿದ್ದಾರಂತೆ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಗತಿ ತಮ್ಮ ವ್ಯಾಸಂಗ ಮುಗಿಸಿದ್ದು, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿದ್ದಾರೆ.

  'ಕಿರಿಕ್ ಪಾರ್ಟಿ' ಮುಗಿಸಿ ಮದುವೆ

  'ಕಿರಿಕ್ ಪಾರ್ಟಿ' ಮುಗಿಸಿ ಮದುವೆ

  ಸದ್ಯಕ್ಕೆ ರಿಶಬ್ ಶೆಟ್ಟಿ ನಿರ್ದೇಶನದ ರಕ್ಷಿತ್ ಶೆಟ್ಟಿ ನಟನೆಯ 'ಕಿರಿಕ್ ಪಾರ್ಟಿ' ಚಿತ್ರದ ಕೆಲಸಗಳಲ್ಲಿ ರಿಶಬ್ ಅವರು ಬಿಜಿಯಾಗಿರುವ ಪರಿಣಾಮ, ಮುಂದಿನ ವರ್ಷ ಮದುವೆಯಾಗುವ ಪ್ಲ್ಯಾನ್ ಮಾಡಿದ್ದಾರೆ.

  English summary
  Ricky fame Kannada Director Rishab Shetty is set to tie the knot with software professional Pragathi Shetty in the first week of February 2017, in his hometown Kundapura.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X