»   » ಕಾಲು ಜಾರಿ ಬಿದ್ದಿದ್ದ 'ಸೈರಾಟ್' ನಾಯಕಿಯ ವಿಡಿಯೋಗೆ ಟ್ವಿಸ್ಟ್.!

ಕಾಲು ಜಾರಿ ಬಿದ್ದಿದ್ದ 'ಸೈರಾಟ್' ನಾಯಕಿಯ ವಿಡಿಯೋಗೆ ಟ್ವಿಸ್ಟ್.!

Posted By:
Subscribe to Filmibeat Kannada

'ಮರಾಠಿ'ಯ ಸೂಪರ್ ಹಿಟ್ ಸಿನಿಮಾ 'ಸೈರಾಟ್' ಚಿತ್ರದ ನಾಯಕಿ 'ರಿಂಕು ರಾಜಗುರು' ಇತ್ತೀಚೆಗಷ್ಟೇ ಚಿತ್ರೀಕರಣದ ವೇಳೆ ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು.

ಆದ್ರೀಗ, ಈ ವಿಡಿಯೋಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಈ ವಿಡಿಯೋ ವಿರುದ್ಧ ರಿಂಕು ರಾಜಗುರು ಅವರ ತಂದೆ ಅಸಮಾಧಾನಗೊಂಡಿದ್ದಾರೆ.

ಹಾಗಿದ್ರೆ, ಆ ವಿಡಿಯೋದಲ್ಲಿ ಅಂತಹದ್ಧೇನಿದೆ? ರಿಂಕು ರಾಜಗುರು ತಂದೆ ಯಾಕೆ ಕೋಪ ಮಾಡಿಕೊಂಡರು? ಎಂದು ತಿಳಿಯಲು ಮುಂದೆ ಓದಿ......

ಆ ವಿಡಿಯೋದಲ್ಲಿ 'ರಿಂಕು' ಇಲ್ಲ.!

ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾದಂತೆ ಚಿತ್ರೀಕರಣದ ವೇಳೆ ಕಾಲು ಜಾರಿ ಬಿದ್ದ ಆ ನಟಿ ರಿಂಕು ರಾಜಗುರು ಅಲ್ಲ. ಇದನ್ನ ರಿಂಕು ರಾಜಗುರು ಅವರ ತಂದೆ ಸ್ಪಷ್ಟಪಡಿಸಿದ್ದಾರೆ.

ಚಿತ್ರೀಕರಣ ವೇಳೆ ಅವಘಡ; 'ಸೈರಾಟ್' ಹುಡುಗಿ 'ರಿಂಕು'ಗೆ ಗಾಯ

ಹಾಗಿದ್ರೆ ಆ ನಟಿ ಯಾರು?

ವೈರಲ್ ಆಗಿದ್ದ ವಿಡಿಯೋದಲ್ಲಿ ಇದ್ದಿದ್ದು ಮಲಯಾಳಂ ನಟಿ ಲಿಂಡಾ ಕುಮಾರ್ ಅಂತೆ. ಮಲಯಾಳಂ ಚಿತ್ರದ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದ್ದು, ಯಾವುದೇ ಆಪಾಯವಾಗಿಲ್ಲವೆಂದು ತಿಳಿದು ಬಂದಿದೆ.

ಕೀರ್ತಿ ಸುರೇಶ್ ಎನ್ನಲಾಗಿತ್ತು.!

ವೈರಲ್ ಆಗಿದ್ದ ಈ ವಿಡಿಯೋದಲ್ಲಿರುವುದು ಮರಾಠಿಯ ರಿಂಕು ರಾಜಗುರು ಎಂದು ಕೆಲವರು ಹೇಳಿದ್ರೆ, ಮತ್ತೆ ಕೆಲವರು ತಮಿಳು ಮತ್ತು ತೆಲುಗು ಚಿತ್ರದಲ್ಲಿ ಗುರುತಿಸಿಕೊಂಡಿರುವ ಕೀರ್ತಿ ಸುರೇಶ್ ಎಂದಿದ್ದರು. ಆದ್ರೆ, ಅದೆಲ್ಲಾ ವದಂತಿಗಳಾಗಿದ್ದು, ಅವರು ಲಿಂಡಾ ಕುಮಾರ್ ಎಂದು ಸ್ವತಃ ಚಿತ್ರತಂಡವೇ ಮಾಹಿತಿ ನೀಡಿದ್ದಾರೆ.

'ರಿಂಕು ರಾಜಗುರು' ಏನ್ಮಾಡ್ತಿದ್ದಾರೆ?

ಇತ್ತೀಚೆಗಷ್ಟೇ 10ನೇ ಕ್ಲಾಸ್ ಪಾಸ್ ಆಗಿದ್ದ ರಿಂಕು ರಾಜಗುರು ಇದುವರೆ 2 ಸಿನಿಮಾದದಲ್ಲಿ ಮಾತ್ರ ನಟಿಸಿದ್ದಾರೆ. ಮರಾಠಿಯ 'ಸೈರಾಟ್' ಹಾಗೂ ಕನ್ನಡದಲ್ಲಿ 'ಮನಸು ಮಲ್ಲಿಗೆ' ಚಿತ್ರದಲ್ಲಿ ಅಭಿನಯಿಸಿದ್ದರು. ಸದ್ಯ, ಹೊಸ ಪ್ರಾಜೆಕ್ಟ್ ನಲ್ಲೂ ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಆದ್ರೆ, ಆ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

English summary
sairat fame Rinku Rajguru's father denied reports of her accident on set.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada