For Quick Alerts
  ALLOW NOTIFICATIONS  
  For Daily Alerts

  ರಾಜ್‌ ಬಿ ಶೆಟ್ಟಿಯ ನಿಜ ರೂಪ ಬಯಲು: ಶಿವನ ವೇಷದಲ್ಲಿ ರಾಜ್‌ ಮಾಡಿದ್ದೇನು

  |

  ಒಂದು ಮೊಟ್ಟೆಯ ಕಥೆ ಸಿನಿಮಾ ಖ್ಯಾತಿಯ ರಾಜ್‌ ಬಿ ಶೆಟ್ಟಿ ನಿರ್ದೇಶನದ ಎರಡನೇ ಸಿನಿಮಾ ಗರುಡ ಗಮನ ವೃಷಭ ವಾಹನ. ಈ ಸಿನಿಮಾ ನಿರ್ದೇಶನ ಮಾಡಿ ಮುಗಿಸಿದ್ದಾರೆ ರಾಜ್‌ ಬಿ ಶೆಟ್ಟಿ. ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದೇ ನವೆಂಬರ್ 19ಕ್ಕೆ ಸಿನಿಮಾ ರಿಲೀಸ್‌ ಮಾಡುವ ಯೋಜನೆಯಲ್ಲಿದೆ ಚಿತ್ರ ತಂಡ. ಈಗಾಗಲೇ ರಿಲೀಸ್‌ ಆಗಿರುವ ಈ ಚಿತ್ರದ ಟ್ರೈಲರ್ ಕೂಡ ಸಂಚಲನ ಮೂಡಿಸಿದೆ. ಈಗ ಚಿತ್ರ ತಂಡ ನಟ ನಿರ್ದೇಶಕ ರಾಜ್‌ ಬಿ ಶೆಟ್ಟಿ ಬಗ್ಗೆ ಹೊಸ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಈತ ಎಲ್ಲರೂ ಅಂದು ಕೊಂಡ ಹಾಗೆ ಅಲ್ಲ. ಈತನಿಗೆ ಇನ್ನೊಂದು ಮುಖ ಇದೆ ಅಂತ ಚಿತ್ರ ತಂಡದ ಹಲವರು ಹೇಳುತ್ತಿದ್ದಾರೆ.

  ರಿಲೀಸ್‌ ಆಗಿರುವ ಚಿತ್ರದ ಮೇಕಿಂಗ್‌ನಲ್ಲಿ ಶಿವನ ಅವತಾರ ತಾಳಿರುವ ರಾಜ್‌ ಬಿ ಶೆಟ್ಟಿಯ ನಿಜ ರೂಪ ರಿವೀಲ್‌ ಆಗಿದೆ. ರಾಜ್ ಶೆಟ್ಟಿ ಶಿವನಾಗಿ ಹೇಗೆ ಇರುತ್ತಾರೆ. ಇನ್ನು ಶೂಟಿಂಗ್ ಸಂದರ್ಭದಲ್ಲಿ ಶಿವನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ರಾಜ್‌ ಥೇಟ್‌ ಆ ಪರಶಿವನಂತೆ ರುದ್ರಾವತಾರ ತಾಳುತ್ತಿದ್ದರು ಎನ್ನುವುದನ್ನು ಚಿತ್ರ ತಂಡ ಸುಳಿವು ಕೊಟ್ಟಿದೆ. ಒಮ್ಮೆ ರಾಜ ಶೆಟ್ಟಿ ಶಿವನ ಪಾತ್ರದ ಒಳಗೆ ಹೊಕ್ಕಿ ಬಿಟ್ಟರೆ ಇಡೀ ದಿನ ಅದೇ ಪಾತ್ರದ ಗುಂಗಿನಲ್ಲಿ ಇದ್ದು ಬಿಡುತ್ತಿದ್ದರಂತೆ. ಅವರನ್ನು ಮಾತು ಆಡಿಸಲು ಕೂಡ ಚಿತ್ರ ತಂಡ ಹೆದರುತ್ತಿತ್ತು. ಅಷ್ಟರಮಟ್ಟಿಗೆ ಆರ್ಭಟ ಮಾಡುತ್ತಿದ್ದರಂತೆ ರಾಜ್. ಈ ಎಲ್ಲಾ ವಿಚಾರಗಳನ್ನು ಕೂಡ ಮೇಕಿಂಗ್ ವಿಡಿಯೋನಲ್ಲಿ ರಿವೀಲ್ ಮಾಡಲಾಗಿದೆ.

  ಶಾಂತ ಮೂರ್ತಿ ಅಂತೆ ಕಾಣುವ ರಾಜ್ ಬಿ ಶೆಟ್ಟಿ ಶಿವನಾಗಿ ಹೇಗೆ ಅಬ್ಬರಿಸುತ್ತಾರೆ ಅನ್ನೋದು ಚಿತ್ರ ತಂಡ ಹಂಚಿಕೊಂಡಿದೆ. ಹಾಗಂತ ರಾತ್ರಿ ಶೆಟ್ಟಿ ಇರುವುದೆ ಹಾಗಲ್ಲ. ರಾಜ್ ಶಾಂತ ಮೂರ್ತಿ ಆದರೆ ಪಾತ್ರಕ್ಕಾಗಿ ಮಾತ್ರ ಹಾಗೆ ಬದಲಾಗಿ ಬಿಡುತ್ತಾರೆ. ಆ ಪಾತ್ರದ ಗುಂಗು ಮಾತ್ರ ಹೆಚ್ಚು ಕಾಲ ಅವರಲ್ಲಿ ಇರುತ್ತ ಇತ್ತು.

  ಈ ಚಿತ್ರದಲ್ಲಿ ರಾಜ್‌ಶೆಟ್ಟಿ ಶಿವನಾಗಿ ಕಾಣಿಸಿಕೊಂಡರೆ, ರಿಷಬ್ ಶೆಟ್ಟಿ ಹರಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದಕ್ಷಿಣ ಕನ್ನಡ ಸೊಗಡಿನ ಡೈಲಾಗ್‌ಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಯಾಕೆಂದರೆ ಮಂಗಳೂರಿನ ಭೂಗತ ಜಗತ್ತಿನ ಸುತ್ತ ಹೆಣೆದಿರುವ ಕಥೆ ಇದು. ಇದರಲ್ಲಿ ಗರುಡಗಮನ ಅಂದರೆ ವಿಷ್ಣು. ಒಬ್ಬನಿಗೆ ವಿಷ್ಣುವಿನ ಸಂಯಮ ಸ್ವಭಾವ ಇದ್ದರೆ, ಇನ್ನೊಬ್ಬ ವೃಷಭ ವಾಹನ ಅಂದರೆ ಶಿವ. ಆತನು ನಿಯಂತ್ರಣ ಇಲ್ಲದೆ ವಿಪರೀತ ಆರ್ಭಟಿಸುವ ಸ್ವಭಾವ ಉಳ್ಳವನು. ಇಂತಹ ಸ್ವಭಾವದ ಇಬ್ಬರು ರೌಡಿಸಂ ನಲ್ಲಿ ಹೇಗೆ ಸೌಂಡ್ ಮಾಡುತ್ತಾರೆ ಎನ್ನುವ ಕಥೆಯೇ ಗರುಡಗಮನ ವೃಷಭ ವಾಹನ.

  ಹಲವು ಸಿನಿಮಾಗಳಲ್ಲಿ ರಾಜ್ ಬಿ ಶೆಟ್ಟಿ ಅವರು ಹಾಸ್ಯ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ಆದರೆ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಶಿವನಾಗಿ ಚಾಕು ಹಿಡಿದು ಆರ್ಭಟಿಸುತ್ತಿದ್ದಾನೆ. ಹಾಗಾಗಿ ಈ ಚಿತ್ರ ರಾಜ್‌ ಬಿ ಶೆಟ್ಟಿ ಸಿನಿಮಾ ಜರ್ನಿಯಲ್ಲಿ ಮಹತ್ತರ ತಿರುವು ಕೊಡುವ ಸಾಧ್ಯತೆ ಇದೆ. ಕೇವಲ ಹಾಸ್ಯ ಭರಿತ ಪಾತ್ರಗಳಿಗೆ ಪಾತ್ರ ರಾಜ್‌ ಸೀಮಿತ ಎನ್ನುವಂತೆ ಆಗಿತ್ತು. ಅದನ್ನ ಈ ಚಿತ್ರ ಸಂಪೂರ್ಣವಾಗಿ ಬದಲಾಯಿಸಲಿದೆ. ಇನ್ನು ಇದೇ ಕಾರಣಕ್ಕೆ ರಾಜ್‌ ಬಿ ಶೆಟ್ಟಿಯ ಪಾತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.

  ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಕಾಂಬಿನೇಷನ್‌ನಲ್ಲಿ ಗರುಡ ಗಮನ ವೃಷಭ ವಾಹನ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಕೂಡ ಜೊತೆ ಆಗಿದ್ದಾರೆ. ಹಾಗಾಗಿ ಈ ಚಿತ್ರವನ್ನು ತಮ್ಮ ಪರಂವಃ ಸ್ಟುಡಿಯೋ ಮೂಲಕ ಬಿಡುಗಡೆ ಮಾಡುವುದಾಗಿ ರಕ್ಷಿತ್ ಶೆಟ್ಟಿ ಈ ಹಿಂದೆ ತಿಳಿಸಿದ್ದಾರೆ. ರಾಮ ರಾಮ ರೇ, ಲೂಸಿಯಾ, ದಿಯಾ, ಕವಲುದಾರಿ, ಒಂದು ಮೊಟ್ಟೆಯ ಕಥೆ ಅಂತಹ ಪರಿಣಾಮಕಾರಿಯಾದ ಸಿನಿಮಾ ಗರುಡ ಗಮನ ವೃಷಭ ವಾಹನ. ಈ ಚಿತ್ರವನ್ನು ಪರಂವಃ ಸ್ಟುಡಿಯೋ ಮೂಲಕ ಬಿಡುಗಡೆ ಮಾಡುತ್ತಿದ್ದೇನೆ ಎಂದು ರಕ್ಷಿತ್ ಶೆಟ್ಟಿ ತಿಳಿಸಿದ್ದಾರೆ.

  ಚಿತ್ರದ ಟ್ರೇಲರ್‌ ಇದು ವಿಭಿನ್ನ ಕಥಾ ಹಂದರ ಎನ್ನುವುದನ್ನು ಹೇಳಿತ್ತು. ಈಗ ರಿಲೀಸ್‌ ಆಗಿರುವ ಮೇಕಿಂಗ್‌ ಶಿವನ ಪಾತ್ರಧಾರಿ ರಾಜ್‌ ಬಿ ಶೆಟ್ಟಿ ಮೇಲೆ ಹೆಚ್ಚನ ಕುತೂಹಲ ಮೂಡಿದೆ. ನವೆಂಬರ್‌ 19ಕ್ಕೆ ಸಿನಿಮಾ ತೆರೆಗೆ ಬರಲಿದೆ. ಚಿತ್ರ ರಿಲೀಸ್‌ ಬಳಿಕ ರಾಜ್‌ ಮತ್ತು ರಿಷಬ್‌ ಹಗ್ಗ-ಜಗ್ಗಾಟ ಹೇಗೆ ಇರಲಿದೆ ಎನ್ನುವುದು ತಿಳಿಯಲಿದೆ.

  English summary
  Rishab Shetty And Raj B Shetty Starrer Garuda Gamana Vrishabha Vahana Making video Reveal About Shiva Character

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X