For Quick Alerts
  ALLOW NOTIFICATIONS  
  For Daily Alerts

  2010ರಲ್ಲಿ ಇಂಡಸ್ಟ್ರಿಗೆ ಕಾಲಿಟ್ಟ ರಿಷಬ್ ನಾಯಕನಾಗುವ ಮುನ್ನ ಈ 8 ಚಿತ್ರಗಳಲ್ಲಿ ಮಾಡಿದ್ರು ಸೈಡ್ ರೋಲ್!

  |

  ಸದ್ಯ ಎಲ್ಲೆಡೆ ಕಾಂತಾರ ಚಿತ್ರದ ಅಬ್ಬರ ಜೋರಾಗಿದೆ. ಹದಿನಾರು ಕೋಟಿ ವೆಚ್ಚದಲ್ಲಿ ತಯಾರಾದ ಈ ಚಿತ್ರ ಈಗ 400 ಕೋಟಿ ಕ್ಲಬ್ ಸೇರುವ ಹೊಸ್ತಿಲಲ್ಲಿದೆ. ಹೆಚ್ಚೇನೂ ಹೈಪ್ ಇಲ್ಲದೇ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಯಾವುದೇ ಸ್ಟಾರ್ ನಟ ಅಥವಾ ನಟಿಯರಿಲ್ಲದೇ ತೆರೆ ಕಂಡ ಕಾಂತಾರ ಚಿತ್ರ ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಕಾಂತಾರ ಚಿತ್ರ ನಂತರ ಪ್ಯಾನ್ ಇಂಡಿಯಾ ಚಿತ್ರವಾಗಿ ಮಾರ್ಪಟ್ಟು ಸದ್ಯ ಸಾಗರದಾಚೆಗೂ ರೀಚ್ ಆಗಿದೆ.

  ಈ ಮೂಲಕ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಸಪ್ತಮಿ ಗೌಡ ಹಾಗೂ ಚಿತ್ರದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಸದ್ಯ ಪ್ಯಾನ್ ಇಂಡಿಯಾ ಮಟ್ಟಿಗೆ ಗುರುತಿಸಿಕೊಂಡು ದೊಡ್ಡ ಸ್ಟಾರ್‌ಗಳಾಗಿದ್ದಾರೆ. ಸಾಲು ಸಾಲು ಆಫರ್‌ಗಳು ಸಪ್ತಮಿ ಗೌಡ ಹಾಗೂ ರಿಷಬ್ ಶೆಟ್ಟಿ ಅವರನ್ನು ಹುಡುಕಿಕೊಂಡು ಬರುತ್ತಿವೆ. ಅದರಲ್ಲಿಯೂ ನಟನೆ ಜತೆಗೆ ಅತ್ಯದ್ಭುತ ಚಿತ್ರಕಥೆ ಬರಹಗಾರ ಹಾಗೂ ನಿರ್ದೇಶಕನಾಗಿರುವ ರಿಷಬ್ ಶೆಟ್ಟಿಗೆ ದೊಡ್ಡ ಬೇಡಿಕೆ ಮತ್ತು ಮಾರ್ಕೆಟ್ ಸೃಷ್ಟಿಯಾಗಿದೆ.

  ಕಾಂತಾರ ಯಶಸ್ವಿಯಾದ ಬೆನ್ನಲ್ಲೇ ರಿಷಬ್ ಶೆಟ್ಟಿಗೆ ಪರಭಾಷೆ ನಿರ್ಮಾಣ ಸಂಸ್ಥೆಗಳಿಂದ ಹೆಚ್ಚು ಆಫರ್‌ಗಳು ಹುಡುಕಿಕೊಂಡು ಬಂದಿವೆ. ಆದರೆ ನಾನು ಕನ್ನಡದಲ್ಲೇ ಮಾಡಬೇಕಿರುವ ಚಿತ್ರಗಳು ಬಹಳಷ್ಟಿವೆ, ಕನ್ನಡ ಚಿತ್ರರಂಗದಲ್ಲಿಯೇ ಚಿತ್ರಗಳನ್ನು ಮಾಡುವೆ ಎಂದು ರಿಷಬ್ ಶೆಟ್ಟಿ ಓಪನ್ ಹೇಳಿಕೆ ನೀಡಿದ್ದಾರೆ. ಹೀಗೆ ಸದ್ಯಕ್ಕೆ ಸಾಲು ಸಾಲು ಆಫರ್ ಹೊಂದಿರುವ ರಿಷಬ್ ಶೆಟ್ಟಿ ಅವರ ಚಿತ್ರರಂಗದ ಆರಂಭ ಸುಲಭದ್ದಾಗಿರಲಿಲ್ಲ. 2010ರಲ್ಲಿ ಇಂಡಸ್ಟ್ರಿಗೆ ಕಾಲಿಟ್ಟಿದ್ದ ರಿಷಬ್ ಶೆಟ್ಟಿ ನಟನಾಗಿದ್ದು 2019ರಲ್ಲಿ. ಮೊದಲಿಗೆ ಕೆಲ ಚಿತ್ರಗಳಲ್ಲಿ ಸೈಡ್ ರೋಲ್ ಮಾಡಿದ್ದ ರಿಷಬ್ ಶೆಟ್ಟಿ ನಂತರ ನಿರ್ದೇಶಕನಾದರು ಹಾಗೂ ಪೂರ್ಣ ಪ್ರಮಾಣದ ನಟನಾದರು. ಹೀಗೆ ರಿಷಬ್ ಶೆಟ್ಟಿ ಸೈಡ್ ರೋಲ್ ಮಾಡಿದ್ದ ಚಿತ್ರಗಳು ಯಾವುವು ಎಂಬುದರ ಪಟ್ಟಿ ಈ ಕೆಳಕಂಡಂತಿದೆ..

  ಶೆಟ್ರು ಸೈಡ್ ರೋಲ್ ಮಾಡಿದ್ದ ಚಿತ್ರಗಳು

  ಶೆಟ್ರು ಸೈಡ್ ರೋಲ್ ಮಾಡಿದ್ದ ಚಿತ್ರಗಳು

  1. 2010ರಲ್ಲಿ ಅನೀಶ್ ಹಾಗೂ ರಕ್ಷಿತ್ ಶೆಟ್ಟಿ ಅಭಿನಯಿಸಿದ್ದ ನಮ್ ಏರಿಯಾಲ್ ಒಂದಿನ ಚಿತ್ರದಲ್ಲಿ ಹೆಸರಿಲ್ಲದ ಪಾತ್ರದಲ್ಲಿ ನಟಿಸಿದ್ದ ರಿಷಬ್ ಶೆಟ್ಟಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು.

  2. 2012ರಲ್ಲಿ ರಕ್ಷಿತ್ ಶೆಟ್ಟಿ ಅಭಿನಯದ ತುಗಲಕ್ ಚಿತ್ರದಲ್ಲಿ ಹೆಸರಿಲ್ಲದ ಪಾತ್ರದಲ್ಲಿ ರಿಷಬ್ ಶೆಟ್ಟಿ ನಟನೆ.

  3. 2013ರಲ್ಲಿ ಕಿಶೋರ್ ಹಾಗೂ ಅರ್ಜುನ್ ಸರ್ಜಾ ನಟಿಸಿದ್ದ ಅಟ್ಟಹಾಸ ಚಿತ್ರದಲ್ಲಿ ರಿಷಬ್ ಶೆಟ್ಟಿ ಪೊಲೀಸ್ ಪಾತ್ರವೊಂದನ್ನು ನಿರ್ವಹಿಸಿದ್ದರು.

  4. 2013ರಲ್ಲಿ ಬಿಡುಗಡೆಯಾಗಿದ್ದ ಸತೀಶ್ ನೀನಾಸಂ ಅಭಿನಯದ, ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರದಲ್ಲಿ ರಿಷಬ್ ಶೆಟ್ಟಿ ಪೊಲೀಸ್ ಪೇದೆ ಪಾತ್ರ ಮಾಡಿದ್ದರು.

  5. 2014ರಲ್ಲಿ ರಕ್ಷಿತ್ ಶೆಟ್ಟಿ ನಿರ್ದೇಶನದ ಉಳಿದವರು ಕಂಡಂತೆ ಚಿತ್ರದಲ್ಲಿ ರಿಷಬ್ ಶೆಟ್ಟಿ ರಘು ಎಂಬ ಪಾತ್ರದಲ್ಲಿ ನಟಿಸಿದ್ದರು.

  6. 2016ರಲ್ಲಿ ಬಿಡುಗಡೆಗೊಂಡಿದ್ದ ತಮ್ಮದೇ ನಿರ್ದೇಶನದ ಮೊದಲ ಚಿತ್ರ ರಿಕ್ಕಿಯಲ್ಲಿ ಕೂಡ ಹೆಸರಿಲ್ಲದ ಪಾತ್ರವೊಂದನ್ನು ರಿಷಬ್ ಶೆಟ್ಟಿ ಮಾಡಿದ್ದರು.

  7. 2018ರಲ್ಲಿ ಬಿಡುಗಡೆಗೊಂಡ ತಮ್ಮದೇ ನಿರ್ದೇಶನದ ಮೂರನೇ ಚಿತ್ರ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು'ವಿನಲ್ಲಿ ರಿಷಬ್ ಶೆಟ್ಟಿ ಇನ್ಸ್ಪೆಕ್ಟರ್ ಕೆಂಪರಾಜು ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದರು.

  8. 2018ರಲ್ಲಿ ತೆರೆಕಂಡಿದ್ದ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿ ನಿರ್ದೇಶಕನ ಪಾತ್ರ ನಿರ್ವಹಿಸಿದ್ದರು.

  2019ರಲ್ಲಿ ನಾಯಕನಾದ್ರು ರಿಷಬ್ ಶೆಟ್ಟಿ

  2019ರಲ್ಲಿ ನಾಯಕನಾದ್ರು ರಿಷಬ್ ಶೆಟ್ಟಿ

  ಬೇರೆ ನಿರ್ದೇಶಕರ ಚಿತ್ರಗಳಲ್ಲಿ ಹಾಗೂ ತನ್ನ ನಿರ್ದೇಶನದ ಚಿತ್ರಗಳಲ್ಲಿಯೂ ಸೈಡ್ ರೋಲ್‌ಗಳನ್ನು ಮಾಡಿದ್ದ ರಿಷಬ್ ಶೆಟ್ಟಿ 2019ರಲ್ಲಿ ತೆರೆಕಂಡ ಜಯತೀರ್ಥ ನಿರ್ದೇಶನದ ಬೆಲ್ ಬಾಟಂ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕ ನಟನಾಗಿ ಬಡ್ತಿ ಪಡೆದರು. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಡಿಕೆಕ್ಟಿವ್ ದಿವಾಕರ್ ಪಾತ್ರದಲ್ಲಿ ನಟಿಸಿ ಜನರ ಮೆಚ್ಚುಗೆಗೆ ಪಾತ್ರವಾದರು ಹಾಗೂ ಚಿತ್ರವೂ ಸಹ ದೊಡ್ಡ ಮಟ್ಟದ ಗೆಲುವನ್ನು ಸಾಧಿಸಿತು.

  ನಟನಾದ ನಂತರವೂ ಹಲವು ಚಿತ್ರಗಳಲ್ಲಿ ಗೆಸ್ಟ್ ಅಪೀಯರೆನ್ಸ್

  ನಟನಾದ ನಂತರವೂ ಹಲವು ಚಿತ್ರಗಳಲ್ಲಿ ಗೆಸ್ಟ್ ಅಪೀಯರೆನ್ಸ್

  ಇನ್ನು ನಟನಾಗಿ ಮೊದಲ ಚಿತ್ರದಲ್ಲೇ ಗೆದ್ದ ರಿಷಬ್ ಶೆಟ್ಟಿ ನಂತರ ಹೀರೊ, ಕಥಾ ಸಂಗಮ, ಹರಿಕಥೆ ಅಲ್ಲ ಗಿರಿಕಥೆ ಹಾಗೂ ಕಾಂತಾರ ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ. ಇವುಗಳ ನಡುವೆ ಅವನೇ ಶ್ರೀಮನ್ನಾರಾಯಣ ಹಾಗೂ ಶ್ರೀಕೃಷ್ಣ ಜಿಮೇಲ್.ಕಾಂ ಚಿತ್ರಗಳಲ್ಲಿ ರಿಷಬ್ ಶೆಟ್ಟಿ ಗೆಸ್ಟ್ ಅಪೀಯರೆನ್ಸ್ ಮಾಡಿದ್ದರು.

  ತೆಲುಗು ಚಿತ್ರದಲ್ಲೂ ವಿಶೇಷ ಪಾತ್ರ

  ತೆಲುಗು ಚಿತ್ರದಲ್ಲೂ ವಿಶೇಷ ಪಾತ್ರ

  ಇದೇ ವರ್ಷ ( 2022 ) ತೆರೆಕಂಡ ತೆಲುಗಿನ ಮಿಶನ್ ಇಂಪಾಸಿಬಲ್ ಎಂಬ ಚಿತ್ರದಲ್ಲಿ ರಿಷಬ್ ಶೆಟ್ಟಿ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ತಾಪ್ಸಿ ಪಣ್ಣು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ಖಲೀಲ್ ಎಂಬ ಪಾತ್ರ ನಿರ್ವಹಿಸಿದ್ದರು.

  English summary
  Rishab Shetty did side role in 8 movies before he became full fledge actor; here is the full list. Take a look.
  Monday, November 14, 2022, 11:52
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X