For Quick Alerts
  ALLOW NOTIFICATIONS  
  For Daily Alerts

  ಕೆಲವೇ ದಿನಗಳಲ್ಲಿ 'ಕಾಂತಾರ' 300 ಕೋಟಿ ಕ್ಲಬ್‌ಗೆ ಎಂಟ್ರಿ: ಹೊಸ ದಾಖಲೆ ಬರೆಯೋದು ಗ್ಯಾರಂಟಿ!

  |

  ಯಾವ ಸೂಪರ್‌ಸ್ಟಾರ್ ಸಿನಿಮಾ ಥಿಯೇಟರ್‌ಗೆ ಬಂದರೂ ಅಷ್ಟೇ, 'ಕಾಂತಾರ' ಆರ್ಭಟ ತಡೆಯೋದಕ್ಕೆ ಆಗುತ್ತಿಲ್ಲ. ದಿನದಿಂದ ದಿನಕ್ಕೆ ಸಿನಿಮಾ ಬೇಜಾನ್‌ ಸೌಂಡ್ ಮಾಡುತ್ತಲೇ ಇದೆ. ಹೊಸ ಹೊಸ ದಾಖಲೆಗಳನ್ನು ಬರೆಯುತ್ತಾ ಮುನ್ನುಗ್ಗುತ್ತಿದೆ.

  'ಕಾಂತಾರ' ಹಂತ ಹಂತವಾಗಿ ಬಾಕ್ಸಾಫೀಸ್‌ನಲ್ಲಿ ರೆಕಾರ್ಡ್ ಮಾಡುತ್ತಿದೆ. ಅಕ್ಷಯ್ ಕುಮಾರ್ 'ರಾಮ್‌ ಸೇತು' ಹಾಗೂ ಅಜಯ್ ದೇವಗನ್ 'ಥ್ಯಾಂಕ್ ಗಾಢ್' ಸಿನಿಮಾಗಳು ಗ್ರ್ಯಾಂಡ್ ರಿಲೀಸ್ ಆಗಿದ್ದರೂ, 'ಕಾಂತಾರ'ಗೆ ಏನೂ ಎಫೆಕ್ಟ್ ಆಗಿಲ್ಲ.

  ಹಾಲಿವುಡ್ ಸಿನಿಮಾದ ಕಲೆಕ್ಷನ್ ಅನ್ನೂ ಹಿಂದಿಕ್ಕಿದ 'ಕಾಂತಾರ': 16ನೇ ದಿನದ ಕಲೆಕ್ಷನ್ ಎಷ್ಟು?ಹಾಲಿವುಡ್ ಸಿನಿಮಾದ ಕಲೆಕ್ಷನ್ ಅನ್ನೂ ಹಿಂದಿಕ್ಕಿದ 'ಕಾಂತಾರ': 16ನೇ ದಿನದ ಕಲೆಕ್ಷನ್ ಎಷ್ಟು?

  'ಕಾಂತಾರ' ಈಗಾಗಲೇ ಬಾಕ್ಸಾಫೀಸ್‌ ಹೊಸ ಹೊಸ ಮೈಲಿಗಲ್ಲನ್ನು ಸೃಷ್ಟಿಸುತ್ತಿದೆ. ಈಗಾಗಲೇ ಈ ಸಿನಿಮಾ 200 ಕೋಟಿ ಕ್ಲಬ್ ಸೇರಿದ್ದು ಶೀಘ್ರದಲ್ಲಿಯೇ 300 ಕೋಟಿ ಕ್ಲಬ್‌ಗೂ ಎಂಟ್ರಿ ಕೊಡಲಿದೆ ಅನ್ನೋದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕಾಚಾರ. ಒಂದ್ವೇಳೆ ಈ ದಾಖಲೆನೂ ಮಾಡಿದರೆ, ಹೊಸ ದಾಖಲೆ ಬರೆಯೋದು ಗ್ಯಾರಂಟಿ.

  ತಿಂಗಳ ಬಳಿಕವೂ 'ಕಾಂತಾರ' ಗುಂಗು

  ತಿಂಗಳ ಬಳಿಕವೂ 'ಕಾಂತಾರ' ಗುಂಗು

  ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ' ಕರ್ನಾಟಕದಲ್ಲಿ ರಿಲೀಸ್ ಆಗಿ ಒಂದು ತಿಂಗಳನ್ನು ಯಶಸ್ವಿಯಾಗಿ ಪೂರೈಸಿದೆ. 50 ದಿನಗಳತ್ತ ಮುನ್ನುಗ್ಗುತ್ತಿರುವ 'ಕಾಂತಾರ' ಗುಂಗು ಮಾತ್ರ ಕಮ್ಮಿಯಾಗಿಲ್ಲ. ಇನ್ನು 'ಕಾಂತಾರ' ಹಿಂದಿ ಹಾಗೂ ತೆಲುಗಿನಲ್ಲಿ ಕ್ರೇಜ್ ಹೆಚ್ಚಾಗಿದೆ. ಇನ್ನು ವೀಕೆಂಡ್‌ನಲ್ಲಿ ಮಲಯಾಳಂ ವರ್ಷನ್‌ ಕೂಡ ಸದ್ದು ಮಾಡುತ್ತಿದೆ. ಅತ್ತ ಓವರ್‌ಸೀಸ್‌ನಲ್ಲೂ 'ಕಾಂತಾರ' ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ಮತ್ತೊಂದು ದಾಖಲೆ ಬರೆಯೋದು ಗ್ಯಾರಂಟಿ ಎನ್ನಲಾಗುತ್ತಿದೆ.

  300 ಕೋಟಿ ರೂ. ಗಳಿಕೆಗೆ ಇನ್ನೆಷ್ಟು ಬೇಕು?

  300 ಕೋಟಿ ರೂ. ಗಳಿಕೆಗೆ ಇನ್ನೆಷ್ಟು ಬೇಕು?

  'ಕಾಂತಾರ' ಸಿನಿಮಾ ವಿಶ್ವದಾದ್ಯಂತ ಕಲೆಕ್ಷನ್ ಅದ್ಭುತವಾಗಿದೆ ಅಂತಲೇ ರಿಪೋರ್ಟ್ ಬರುತ್ತಿದೆ. ಇಲ್ಲಿವರೆಗೂ ಕಾಂತಾರ ಸುಮಾರು 289.21 ಕೋಟಿ ರೂ. (ವಿಶ್ವದಾದ್ಯಂತ) ಕಲೆಕ್ಷನ್ ಮಾಡಿದೆ ಎಂದು ಬಾಲಿವುಡ್‌ ವೆಬ್‌ಸೈಟ್ ವರದಿ ಮಾಡಿದೆ. 31 ದಿನಗಳಲ್ಲಿ ಭಾರತದಲ್ಲಿ 'ಕಾಂತಾರ' ಗಳಿಸಿದ್ದು, 268.21 ಕೋಟಿ ರೂ. (ಎಲ್ಲಾ ಭಾಷೆಗಳಿಂದ) ಹಾಗೂ ಓವರ್‌ ಸೀನ್ ಕಲೆಕ್ಷನ್ 21 ಕೋಟಿ ರೂಪಾಯಿ ಎಂದು ವರದಿ ಮಾಡಿದೆ. ಹೀಗಾಗಿ ಈ ವಾರದೊಳಗೆ 'ಕಾಂತಾರ' 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಲಿದೆ ಎನ್ನಲಾಗಿದೆ.

  'ಕಾಂತಾರ' ಸಿನಿಮಾದಿಂದ ಹೊಸ ದಾಖಲೆ

  'ಕಾಂತಾರ' ಸಿನಿಮಾದಿಂದ ಹೊಸ ದಾಖಲೆ

  ರಿಷಬ್ ಶೆಟ್ಟಿಯ 'ಕಾಂತಾರ' ಸಿನಿಮಾ 300 ಕೋಟಿ ಕ್ಲಬ್ ಸೇರಿದರೆ, ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಲಿದೆ. 2022ರಲ್ಲಿ 300 ಕೋಟಿ ಕ್ಲಬ್ ಸೇರಿದ 7ನೇ ಸಿನಿಮಾ ಆಗಲಿದೆ. 2022ರಲ್ಲಿ ಬಿಡುಗಡೆಯಾದ 'ಕೆಜಿಎಫ್ 2' 1230 ಕೋಟಿ ರೂ. ಗಳಿಸಿದೆ. ಅತ್ತ 'RRR' 1144 ಕೋಟಿ ರೂ., 'ಪೊನ್ನಿಯಿನ್ ಸೆಲ್ವನ್' 464.70 ಕೋಟಿ ರೂ. 'ಬ್ರಹ್ಮಾಸ್ತ್ರ' 427.88 ಕೋಟಿ ರೂ. ಕಮಲ್ ಹಾಸನ್ ಸಿನಿಮಾ 'ವಿಕ್ರಂ' 426 ಕೋಟಿ ರೂ. ಹಾಗೂ 'ದಿ ಕಾಶ್ಮೀರ್ ಫೈಲ್ಸ್' 326.95 ಕೋಟಿ ರೂ. ಗಳಿಸಿದೆ. ಹೀಗಾಗಿ ಈ ಸಿನಿಮಾ ಸಾಲಿಗೆ 'ಕಾಂತಾರ' ಶೀಘ್ರದಲ್ಲಿಯೇ ಸೇರಲಿದೆ ಎನ್ನಲಾಗಿದೆ.

  'ರಾಮ್ ಸೇತು' ಸಿನಿಮಾ ಗಳಿಕೆಯಲ್ಲಿ ಏರಿಕೆ

  'ರಾಮ್ ಸೇತು' ಸಿನಿಮಾ ಗಳಿಕೆಯಲ್ಲಿ ಏರಿಕೆ

  ಅಕ್ಷಯ್ ಕುಮಾರ್ ಅಭಿನಯದ 'ರಾಮ್ ಸೇತು' ಸಿನಿಮಾ ಕಳೆದ 5 ದಿನಗಳ ಹಿಂದೆ ರಿಲೀಸ್ ಆಗಿತ್ತು. ಆದರೆ, ಮೊದಲ ನಾಲ್ಕು ದಿನಗಳ ಗಳಿಕೆ ಅಷ್ಟೊಂದು ಚೆನ್ನಾಗಿರಲಿಲ್ಲ. ಆದರೆ, 5 ಹಾಗೂ 6ನೇ ದಿನದ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿದೆ. 5ನೇ ದಿನ 7.30 ಕೋಟಿ ರೂ. ಹಾಗೂ 6ನೇ ದಿನ 7.25 ಕೋಟಿ ರೂ. ಗಳಿಕೆ ಕಂಡಿದೆ. ಈ ಮೂಲಕ 56 ಕೋಟಿ ರೂ. ಕಲೆಕ್ಷನ್ ಆಗಿದೆ. ಇನ್ನು'ಕಾಂತಾರ' ಹಿಂದಿ ವರ್ಷನ್ 42.95 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ತರನ್ ಆದರ್ಶ್ ಟ್ವೀಟ್ ಮಾಡಿದ್ದಾರೆ.

  Breaking: 'ಕಾಂತಾರ'ತಂಡಕ್ಕೆ ಸಂಕಷ್ಟ: 'ವರಹರೂಪಂ' ಹಾಡಿಗೆ ತಡೆ ನೀಡಿದ ಕೇರಳ ಕೋರ್ಟ್!Breaking: 'ಕಾಂತಾರ'ತಂಡಕ್ಕೆ ಸಂಕಷ್ಟ: 'ವರಹರೂಪಂ' ಹಾಡಿಗೆ ತಡೆ ನೀಡಿದ ಕೇರಳ ಕೋರ್ಟ್!

  English summary
  Rishab Shetty Kantara Worldwide Box Office Collection Will Be 300 Crore In Few Days, Know More.
  Monday, October 31, 2022, 16:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X