For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ಗೆಲುವನ್ನು ಪಂಜುರ್ಲಿ,ಗುಳಿಗ ದೈವಗೆ ಅರ್ಪಿಸಿದ ರಿಷಬ್ ಶೆಟ್ಟಿ: 50 ದಿನದಲ್ಲಾದ ಕಲೆಕ್ಷನ್ ಇಷ್ಟು!

  |

  ಇಂಡಿಯನ್ ಬಾಕ್ಸಾಫೀಸ್‌ಗೆ ಕಿಚ್ಚು ಹಚ್ಚಿದ 'ಕಾಂತಾರ' ಏಳು ವಾರಗಳನ್ನು ಯಶಸ್ವಿಯಾಗಿ ಪೂರೈಸಿದೆ. ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ್ದ 'ಕಾಂತಾರ' ಇಂದು (ನವೆಂಬರ್ 18) ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿ ಮುನ್ನುಗುತ್ತಿದೆ. ಈ ಖುಷಿಯನ್ನು ರಿಷಬ್ ಶೆಟ್ಟಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

  50 ದಿನಗಳನ್ನು ಪೂರೈಸಿದ ಸಂದರ್ಭದಲ್ಲೂ 'ಕಾಂತಾರ' ಸಿನಿಮಾದ ಕಲೆಕ್ಷನ್ ಕೋಟಿ ಲೆಕ್ಕದಲ್ಲಿಯೇ ಇದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲೂ 'ಕಾಂತಾರ' ಕಲೆಕ್ಷನ್ ಅದ್ಭುತವಾಗಿದ್ದು, ಪ್ರತಿವಾರ ಬಾಕ್ಸಾಫೀಸ್‌ನಲ್ಲಿ ದಾಖಲೆ ನಿರ್ಮಿಸುತ್ತಿದೆ.

  'ಕಾಂತಾರ' ಗೆಟಪ್‌ನಲ್ಲಿ ತಹಶೀಲ್ದಾರ್ ಪ್ರತ್ಯಕ್ಷ: ಜಿಲ್ಲಾಧಿಕಾರಿ ಕಂಗಾಲು!'ಕಾಂತಾರ' ಗೆಟಪ್‌ನಲ್ಲಿ ತಹಶೀಲ್ದಾರ್ ಪ್ರತ್ಯಕ್ಷ: ಜಿಲ್ಲಾಧಿಕಾರಿ ಕಂಗಾಲು!

  ಏಳನೇ ವಾರವೂ (50 ದಿನ ಕಂಡ ವಾರ) 'ಕಾಂತಾರ' ಸಿನಿಮಾ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿದೆ. ಎಲ್ಲಾ ಭಾಷೆಗಳಿಂದಳೂ ಸುಮಾರು 24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಇದೇ ಖುಷಿಯಲ್ಲೇ ರಿಷಬ್ ಶೆಟ್ಟಿ ಖುಷಿಯಲ್ಲಿ ಟ್ವೀಟ್ ಮಾಡಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

  ರಿಷಬ್ ಶೆಟ್ಟಿ ಫುಲ್ ಖುಷ್

  ರಿಷಬ್ ಶೆಟ್ಟಿ ಫುಲ್ ಖುಷ್

  'ಕಾಂತಾರ' ಸಿನಿಮಾ 50 ದಿನಗಳನ್ನು ಪೂರೈಸಿದ ಬೆನ್ನಲ್ಲೇ ರಿಷಬ್ ಶೆಟ್ಟಿ ಫುಲ್ ಖುಷಿಯಾಗಿದ್ದಾರೆ. ಈ ಅಭೂತಪೂರ್ವ ಯಶಸ್ಸನ್ನು ನೀಡಿದ್ದಕ್ಕೆ ಜನತೆಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಹಾಗೇ ಪಂಜೂರ್ಲಿ ಹಾಗೂ ಗುಳಿಗ ದೈವವನ್ನು ಸ್ಮರಿಸಿದ್ದಾರೆ. " ಇದು ನಮ್ಮ ಪಾಲಿಗೆ ದೈವ ಭಾವನೆಯುಳ್ಳ ಸಂಭ್ರಮ. ವಿಶ್ವದಾದ್ಯಂತ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನಾವೆಲ್ಲರೂ ಈ ಗೆಲುವನ್ನು ಗಳಿಸಿ, ಒಪ್ಪಿಕೊಂಡು ಬದುಕುತ್ತಿದ್ದೇವೆ. ನಾವು ಪಂಜುರ್ಲಿ ಹಾಗೂ ಗುಳಿಗ ದೈವದ ಆಶೀರ್ವಾದಕ್ಕೆ ಭಾಜನರಾಗಿದ್ದೇವೆ. ಈ ಕ್ರೋಧವನ್ನು ಭೇದಿಸಲು ಸಾಧ್ಯವೇ ಇಲ್ಲ." ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

  'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?

  'ಕಾಂತಾರ' ಬಾಕ್ಸಾಫೀಸ್‌ನಲ್ಲಿ ಗಳಿಸಿದ್ದೆಷ್ಟು?

  ಇಲ್ಲಿವರೆಗೂ 'ಕಾಂತಾರ' ಗಳಿಕೆಯನ್ನು ಕಂಡು ಬೇರೆ ಬೇರೆ ಚಿತ್ರರಂಗವೇ ಬೆಚ್ಚಿಬಿದ್ದಿದೆ. ಭಾರತದಲ್ಲಿ ಈ ಸಿನಿಮಾ 350 ಕೋಟಿ ರೂ. ಸಮೀಪದಲ್ಲಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಕಾಂತಾರ' ಇದೂವರೆಗೂ 344 ಕೋಟಿ ರೂ. ಗಳಿಸಿದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಈ ಸಿನಿಮಾ ಬರೀ ಭಾರತದಲ್ಲಿಯೇ 350 ಕೋಟಿ ರೂ. ಗಡಿಯನ್ನು ದಾಟಲಿದೆ. ಐದು ಭಾಷೆಗಳಲ್ಲಿ ಕರ್ನಾಟಕದ ಪಾಲು ಹೆಚ್ಚಿದ್ದು, ಕೆಲವೇ ದಿನಗಳಲ್ಲಿ 'ಕೆಜಿಎಫ್ 2' ದಾಖಲೆಯನ್ನು ಮುರಿಯಬಹುದು ಎಂದು ಅಂದಾಜಿಸಲಾಗಿದೆ.

  'ಕಾಂತಾರ' ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟು?

  'ಕಾಂತಾರ' ವರ್ಲ್ಡ್‌ವೈಡ್ ಕಲೆಕ್ಷನ್ ಎಷ್ಟು?

  ರಿಷಬ್ ಶೆಟ್ಟಿ ಈಗ ನ್ಯಾಷನಲ್ ಸ್ಟಾರ್. ದಕ್ಷಿಣದಿಂದ ಹಿಡಿದು ಉತ್ತರದವರೆಗೂ ಎಲ್ಲೆಡೆ 'ಕಾಂತಾರ' ಜಪ ಇನ್ನೂ ಮುಂದುವರೆದಿದೆ. ಯುಎಇಯಲ್ಲಿ 'ಕಾಂತಾರ' ನವೆಂಬರ್ 13ರವರೆಗೆ ಸುಮಾರು 6.50 ಕೋಟಿ ಕಲೆ ಹಾಕಿದೆ. ಹಾಗೇ ಓವರ್‌ಸೀಸ್ ಕಲೆಕ್ಷನ್ 33 ಕೋಟಿ ರೂ. ಕಲೆಕ್ಷನ್ ಆಗಿದೆ. ಭಾರತದಲ್ಲಿ ಸುಮಾರು 344 ಕೋಟಿ ರೂ. ಕಲೆಕ್ಷನ್ ಆಗಿದ್ದರೆ, ಓವರ್‌ಸೀಸ್ ಕಲೆಕ್ಷನ್ 33 ಕೋಟಿ ರೂ. ಒಟ್ಟು 377 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಿನಿಮಾ 400 ಕೋಟಿ ಕ್ಲಬ್ ಸೇರಲಿದೆ ಅನ್ನೋ ಲೆಕ್ಕಾಚಾರ ಹಾಕಲಾಗುತ್ತಿದೆ.

  'ಕಾಂತಾರ' ಕರ್ನಾಟಕದ ಗಳಿಕೆ ಎಷ್ಟು?

  'ಕಾಂತಾರ' ಕರ್ನಾಟಕದ ಗಳಿಕೆ ಎಷ್ಟು?

  ಕರ್ನಾಟಕದಲ್ಲಿ 377 ಕೋಟಿ ರೂ. ಕಲೆಕ್ಷನ್‌ನಲ್ಲಿ 'ಕಾಂತಾರ' ಅತೀ ಹೆಚ್ಚು ಗಳಿಕೆ ಕಂಡಿದೆ. ಇಲ್ಲಿವರೆಗೂ ರಾಜ್ಯದಲ್ಲಿ ಸುಮಾರು 168 ಕೋಟಿ ರೂ. ಕಲೆಕ್ಷನ್ ಮಾಡಿದೆ. 'ಕೆಜಿಎಫ್ 2' ಸಿನಿಮಾಗಿಂತ ಕೇವಲ 3.50 ಕೋಟಿ ಹಿಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಈ ದಾಖಲೆಯನ್ನು ಮುರಿಯಲಿದೆ ಅನ್ನೋ ಮಾತು ಕೇಳಿಬರುತ್ತಿದೆ. ಓಟಿಟಿಗೆ ಲಗ್ಗೆ ಇಡುವುದಕ್ಕೂ ಮುನ್ನ ಬಾಕ್ಸಾಫೀಸ್ ಎಷ್ಟು ಗಳಿಸುತ್ತೆ ಅನ್ನೋದನ್ನು ಕುತೂಹಲದಿಂದ ನೋಡುತ್ತಿದೆ.

  English summary
  Rishab Shetty Reaction About Kantara 50 Days And Box Office Collection Report, Know More.
  Friday, November 18, 2022, 14:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X