For Quick Alerts
  ALLOW NOTIFICATIONS  
  For Daily Alerts

  ಥಿಯೇಟರ್‌ ಸಿಗದೆ ಒದ್ದಾಡುತ್ತಿದ್ದಾಗ ನೆರವಾಗಿದ್ದ ಆರ್‌ಜೆ: ದುಬೈಗೆ ಹೋಗಿ ಸಂದರ್ಶನ ನೀಡಿದ ರಿಷಬ್!

  |

  ರಿಷಬ್ ಶೆಟ್ಟಿ ಕೂಡ ಈಗ ನ್ಯಾಷನಲ್ ಸ್ಟಾರ್. ದೇಶದ ಮೂಲೆ ಮೂಲೆಯಲ್ಲಿ 'ಕಾಂತಾರ' ಸಿನಿಮಾದ ಆರ್ಭಟ ಜೋರಾಗಿದೆ. ಸಿನಿಮಾ ರಿಲೀಸ್ ಆಗುತ್ತಿದ್ದಂತೆ ರಿಷಬ್ ಶೆಟ್ಟಿ ರೇಂಜ್ ಬದಲಾಗಿದೆ. 'ಕಾಂತಾರ' ಬಿಡುಗಡೆ ಬಳಿಕವೂ ರಿಷಬ್ ಶೆಟ್ಟಿ ಪ್ರಚಾರ ಮಾಡೋದನ್ನು ಮಾತ್ರ ನಿಲ್ಲಿಸಿಲ್ಲ.

  ಈ ಸಕ್ಸಸ್ ಕಾಣುವುದಕ್ಕೆ ರಿಷಬ್ ಶೆಟ್ಟಿ ಹಲವು ವರ್ಷ ಕಾದಿದ್ದಾರೆ. ಯಶಸ್ಸು ಅಷ್ಟು ಸುಲಭಕ್ಕೆ ಇವರ ಕೈ ಸೇರಿಲ್ಲ ಅನ್ನೋದು ಈಗಾಗಲೇ ಗೊತ್ತೇ ಇದೆ. ಸಿನಿಮಾ ರಿಲೀಸ್ ಮಾಡೋಕೆ ಪರದಾಡಿದ್ದರಿಂದ 'ಕಾಂತಾರ' ಯಶಸ್ಸಿನವರೆಗೆ ದೊಡ್ಡ ಕಥೆಯೇ ಸಿಗುತ್ತೆ.

  'ಕಾಂತಾರ' ಗೆಟಪ್‌ನಲ್ಲಿ ತಹಶೀಲ್ದಾರ್ ಪ್ರತ್ಯಕ್ಷ: ಜಿಲ್ಲಾಧಿಕಾರಿ ಕಂಗಾಲು!'ಕಾಂತಾರ' ಗೆಟಪ್‌ನಲ್ಲಿ ತಹಶೀಲ್ದಾರ್ ಪ್ರತ್ಯಕ್ಷ: ಜಿಲ್ಲಾಧಿಕಾರಿ ಕಂಗಾಲು!

  ತಮ್ಮ ಸಿನಿಮಾ ಜಗತ್ತಿನ ಜರ್ನಿಯನ್ನು ಈಗಲೂ ರಿಷಬ್ ಶೆಟ್ಟಿ ಮೆಲುಕು ಹಾಕುತ್ತಲೇ ಇರುತ್ತಾರೆ. ಅದಕ್ಕೆ ಕಷ್ಟದ ಸಮಯದಲ್ಲಿ ನೆರವಾದವರನ್ನು ಭೇಟಿ ಮಾಡಿದ್ದಾರೆ. ಸದ್ಯ ರಿಷಬ್ ಶೆಟ್ಟಿ ದುಬೈನಲ್ಲಿದ್ದು, ಅಲ್ಲಿ ತಮ್ಮ ಬದುಕಿನ ಬಂದಿದ್ದ ಪ್ರಮುಖ ವ್ಯಕ್ತಿಯನ್ನು ಭೇಟಿ ಮಾಡಿದ್ದಾರೆ. ಅಷ್ಟಕ್ಕೂ ಅವರು ಮತ್ಯಾರೂ ಅಲ್ಲ ದುಬೈನಲ್ಲಿ ನೆಲೆಸಿರೋ ಆರ್‌ ಜೆ ಎರೋಲ್.

  ದುಬೈನಲ್ಲಿ ರಿಷಬ್ ಶೆಟ್ಟಿ

  ದುಬೈನಲ್ಲಿ ರಿಷಬ್ ಶೆಟ್ಟಿ

  'ಕಾಂತಾರ' ಬಿಡುಗಡೆಯಾಗಿ ಐದಾರು ವಾರ ಆಗಿದ್ದರೂ ರಿಷಬ್ ಶೆಟ್ಟಿ ಸಿನಿಮಾ ಪ್ರಚಾರ ಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ. ಪ್ರತಿ ದಿನ ಬೇರೆ ರಾಜ್ಯಕ್ಕೆ ತೆರಳಿ ಸಂದರ್ಶನವನ್ನು ನೀಡುತ್ತಲೇ ಇದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮೂಲಗಳ ಪ್ರಕಾರ, ರಿಷಬ್ ಶೆಟ್ಟಿ ಹಾಗೂ ಅವರ ಕುಟುಂಬ ದುಬೈನಲ್ಲಿದೆ. 'ಕಾಂತಾರ' ಯಶಸ್ಸಿನ ಬೆನ್ನಲ್ಲೇ ಕುಟುಂಬದ ಪ್ರವಾಸದ ಜೊತೆ ಜೊತೆಗೆ ಪ್ರಚಾರದಲ್ಲೂ ಭಾಗಿಯಾಗಿದ್ದಾರೆ. ಈ ವೇಳೆ ಕಷ್ಟದ ದಿನಗಳಲ್ಲಿ ನೆರವಾಗಿದ್ದ ಆರ್‌ಜೆಯನ್ನು ಭೇಟಿ ಮಾಡಿದ್ದಾರೆ.

  ನೆರವು ನೀಡಿದ್ದ ಆರ್‌ಜೆ ಭೇಟಿ

  ನೆರವು ನೀಡಿದ್ದ ಆರ್‌ಜೆ ಭೇಟಿ

  ರಿಷಬ್ ಶೆಟ್ಟಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಆರಂಭದ ದಿನಗಳಲ್ಲಿ ಸಾಕಷ್ಟು ಒತ್ತಾಟ ನೆಡೆಸಿದ್ದರು. ರಿಷಬ್ ಶೆಟ್ಟಿಯನ್ನು ಸಿನಿಮಾ ಮಂದಿಗೆ ಗಣನೆಗೆ ತೆಗೆದುಕೊಂಡಿರಲಿಲ್ಲ. ಹೀಗೆ ತಮ್ಮ ಸಿನಿಮಾವನ್ನು ಪ್ರದರ್ಶನ ಮಾಡಲು ಮಂಗಳೂರಿನಲ್ಲಿಯೇ ಚಿತ್ರಮಂದಿರ ಸಿಕ್ಕಿರಲಿಲ್ಲವಂತೆ. ಆ ವೇಳೆ ಅಂದು ಮಂಗಳೂರಿನಲ್ಲಿ ಆರ್‌ಜೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎರೋಲ್ ಚಿತ್ರಮಂದಿರದ ಮಾಲೀಕರೊಂದಿಗೆ ಮಾತಾಡಿ ಒಂದು ಶೋ ಕೊಡಿಸಿದ್ದರಂತೆ. ಅದನ್ನೀಗ ನೆನೆಪಿಸಿಕೊಂಡು ಆರ್‌ಜೆಯನ್ನು ಭೇಟಿ ಮಾಡಿದ್ದಾರೆ.

  ಆರ್‌ಜೆಗೊಂದು ಶೋ ಕೊಟ್ಟ ರಿಷಬ್ ಶೆಟ್ಟಿ

  ಆರ್‌ಜೆಗೊಂದು ಶೋ ಕೊಟ್ಟ ರಿಷಬ್ ಶೆಟ್ಟಿ

  ಅಂದು ಕಷ್ಟದಲ್ಲಿದ್ದ ರಿಷಬ್ ಶೆಟ್ಟಿಗೆ ಆರ್ ಎರೋರ್ ನೆರವಾಗಿದ್ದರು. ಆ ಬಳಿಕ ಆರ್‌ಜೆ ದುಬೈಗೆ ಹಾರಿದ್ದು, ಈಗ ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. 'ಕಾಂತಾರ' ಯಶಸ್ಸು ಕಂಡ ಬಳಿಕ ರಿಷಬ್ ಶೆಟ್ಟಿ ದುಬೈ ಪ್ರವಾಸದಲ್ಲಿರುವಾಗಲೇ ಅವರನ್ನು ನೆನೆದು ಸ್ಟುಡಿಯೋಗೆ ಭೇಟಿ ನೀಡಿದ್ದಾರೆ. ಈ ವೇಳೆ " ಕಾಂತಾರ ಸಿನಿಮಾ ರಿಲೀಸ್ ಆದಾಗ, ಬಹಳಷ್ಟು ಜನ ಒಂದು ವಿಷಯ ವೈರಲ್ ಆಗಿರೋ ಬಗ್ಗೆ ಮಾತಾಡಿದ್ದರು. ಈ ವ್ಯಕ್ತಿ ಒಂದು ಕಾಲದಲ್ಲಿ ಸಿನಿಮಾ ಮಾಡಿದ. ಆ ಸಿನಿಮಾ ರಿಲೀಸ್ ಆದಾಗ ಮಂಗಳೂರಿನಲ್ಲೇ ಶೋ ಸಿಕ್ಕಿರಲಿಲ್ಲ ಅಂತ ಹೇಳಿದ್ದರು. ಬಹಳಷ್ಟು ವರ್ಷದ ಹಿಂದಿನ ಪೋಸ್ಟ್ ಒಂದನ್ನು ಹಾಕಿದ್ದೆ.ಥ್ಯಾಂಕ್ಯೂ ಆರ್‌ಜೆ ಎರೋಲ್ ಅಂತ. ಅಂದು ಬಿಗ್ ಸಿನಿಮಾಸ್ ಬಾಲ ಶೆಟ್ಟಿಯವರನ್ನು ಹಿಡಿದು ಆ ಒಂದು ಶೋ ಕೊಡಿಸಿದ್ದು ಆರ್‌ಜೆ ಎರೋಲ್. ಹಾಗಾಗಿ ಇಂದು ಇವರಿಗೆ ನಾನು ಶೋ ಕೊಡುತ್ತಿದ್ದೇನೆ." ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

  ಮಂಗಳೂರಿನಲ್ಲಿ 'ಕಾಂತಾರ' ಹೌಸ್‌ಫುಲ್

  ಮಂಗಳೂರಿನಲ್ಲಿ 'ಕಾಂತಾರ' ಹೌಸ್‌ಫುಲ್

  ಒಂದು ಕಾಲದಲ್ಲಿ ಮಂಗಳೂರಿನಲ್ಲಿಯೇ ಶೋ ಸಿಕ್ಕಿರಲಿಲ್ಲ. ಅದೇ ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ' ಸುಮಾರು 5 ವಾರಗಳ ಕಾಲ 84 ಸ್ಕ್ರೀನ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಇನ್ನು 'ಕಾಂತಾರ' ಅಬ್ಬರ ಎಲ್ಲಾ ಕಡೆ ಇನ್ನೂ ಹಾಗೇ ಇದೆ. ಬಾಕ್ಸಾಫೀಸ್‌ನಲ್ಲಿ ಹೊಸ ಹೊಸ ದಾಖಲೆಗಳನ್ನು ಬರೆಯುತ್ತಿದ್ದು, ಇನ್ನೇನು 400 ಕೋಟಿ ರೂಪಾಯಿ ಕಲೆ ಹಾಕುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

  English summary
  Rishab Shetty Remembered R J Errol Help On Struggling Days In Dubai, Know More.
  Thursday, November 17, 2022, 11:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X