For Quick Alerts
  ALLOW NOTIFICATIONS  
  For Daily Alerts

  ರಿಷಬ್ ಶೆಟ್ಟಿ ಸಿನಿಮಾರಂಗಕ್ಕೆ ಬರಲು ಈ ಹಿರಿಯ ನಟ ಸ್ಪೂರ್ತಿ

  |

  ನಟ-ನಿರ್ದೇಶಕನಾಗಿ ಕಡಿಮೆ ಅವಧಿಯಲ್ಲಿಯೇ ತಮ್ಮದೇ ಛಾಪು ಮೂಡಿಸಿರುವ ರಿಷಬ್ ಶೆಟ್ಟಿ. ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತ ಇರುವ ಪ್ರತಿಭಾವಂತರಲ್ಲಿ ಒಬ್ಬರು.

  ಬಹು ಸಾಮಾನ್ಯ ಹಿನ್ನೆಲೆಯಿಂದ ಕೇವಲ ಪ್ರತಿಭೆಯೊಂದರ ಆಧಾರದಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟು ಈಗ ಏಳಿಗೆಯ ಹಾದಿಯಲ್ಲಿರುವ ರಿಷಬ್ ಶೆಟ್ಟಿ ಚಿತ್ರರಂಗಕ್ಕೆ ಕಾಲಿಡಲು ಹಲವು ಹಿರಿಯ ನಟರು ಸ್ಪೂರ್ತಿಯಂತೆ. ಅದರಲ್ಲಿ ಒಬ್ಬರು ನಟ ಜಗ್ಗೇಶ್.

  ಜಗ್ಗೇಶ್ ಅವರು ಚಿತ್ರರಂಗಕ್ಕೆ ಬಂದು 40 ವರ್ಷ ಪೂರೈಸಿದ ಶುಭ ಸಂದರ್ಭದಲ್ಲಿ ಜಗ್ಗೇಶ್ ಅವರಿಗೆ ಟ್ವೀಟ್ ಮೂಲಕ ಶುಭ ಕೋರಿದ ರಿಷಬ್ ಶೆಟ್ಟಿ. 'ನಾನು ಚಿತ್ರರಂಗಕ್ಕೆ ಬರಲು ನೀವು ಸಹ ಸ್ಪೂರ್ತಿ' ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ಜಗ್ಗೇಶ್.

  ಚಿತ್ರರಂಗಕ್ಕೆ ಬರಲು ಮೂಲ ಪ್ರೇರಣೆಗಳಲ್ಲಿ ನೀವೂ ಒಬ್ಬರು: ರಿಷಬ್

  ಚಿತ್ರರಂಗಕ್ಕೆ ಬರಲು ಮೂಲ ಪ್ರೇರಣೆಗಳಲ್ಲಿ ನೀವೂ ಒಬ್ಬರು: ರಿಷಬ್

  'ಪ್ರೀತಿಯ ಜಗ್ಗಣ್ಣ, ನಾನು ಚಿತ್ರರಂಗಕ್ಕೆ ಬರಲು ಮೂಲ ಪ್ರೇರಣೆಗಳಲ್ಲಿ ನೀವೂ ಒಬ್ಬರು. 40 ವರ್ಷಗಳಿಂದ ನವರಸಗಳನ್ನುಣಿಸುತ್ತಾ ಬಂದಿದ್ದೀರಿ ಆದರೇ ನಮ್ಮ ಹಸಿವು ಇನ್ನೂ ನೀಗಿಲ್ಲ, ನಮ್ಮನ್ನು ಹೀಗೆಯೇ ಮನರಂಜಿಸುತ್ತಾ ಇರಿ' ಎಂದಿದ್ದಾರೆ ನಟ ರಿಷಬ್ ಶೆಟ್ಟಿ.

  ರಿಷಬ್ ಶೆಟ್ಟಿ ಟ್ವೀಟ್‌ಗೆ ಜಗ್ಗೇಶ್ ಪ್ರತಿಕ್ರಿಯೆ

  ರಿಷಬ್ ಶೆಟ್ಟಿ ಟ್ವೀಟ್‌ಗೆ ಜಗ್ಗೇಶ್ ಪ್ರತಿಕ್ರಿಯೆ

  ರಿಷಬ್‌ ಶೆಟ್ಟಿ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನಟ ಜಗ್ಗೇಶ್, 'ಶ್ರದ್ಧಾವಾನ್ ಲಭತೆ ಜ್ಞಾನಂ. ನಿಮ್ಮ ಶ್ರದ್ಧೆ ನಿಮ್ಮ ಕೈ ಹಿಡಿದಿದೆ, ನಿಮ್ಮ ಯಶಸ್ಸಿನ ಕಾಡ್ಗಿಚ್ಚಿಗೆ ನಾನು ಕಿಡಿಯಾಗಿದ್ದರೆ ನನಗೆ ಅದೆ ವಿಶ್ವಮಟ್ಟದ ಪಾರಿತೋಷಕ. ಧನ್ಯವಾದ ಸಹೋದರ' ಎಂದು ಪ್ರತಿಟ್ವೀಟ್ ಮಾಡಿದ್ದಾರೆ.

  ನೀರಿನ ಕ್ಯಾನ್ ಬ್ಯುಸಿನೆಸ್ ಮಾಡುತ್ತಿದ್ದ ರಿಷಬ್ ಶೆಟ್ಟಿ

  ನೀರಿನ ಕ್ಯಾನ್ ಬ್ಯುಸಿನೆಸ್ ಮಾಡುತ್ತಿದ್ದ ರಿಷಬ್ ಶೆಟ್ಟಿ

  ರಿಷಬ್ ಶೆಟ್ಟಿ ಚಿತ್ರರಂಗಕ್ಕೆ ಬರುವ ಮುಂಚೆ ನೀರಿನ ಬ್ಯುಸಿನೆಸ್ ಮಾಡುತ್ತಿದ್ದರಂತೆ. ಮನೆಗಳಿಗೆ ತೆರಳಿ ವಾಟರ್ ಕ್ಯಾನ್ ಹಾಕುವ ಕೆಲಸ ಮಾಡುತ್ತಿದ್ದರಂತೆ. ನಂತರ ದುಬೈ ನಲ್ಲಿ ಕೆಲ ಕಾಲ ಕೆಲಸ ಮಾಡಿದ್ದಾರೆ. ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ.

  ಯಾವ ಭಾಷೆಯಲ್ಲೂ ಇಂತಹ ಧೈರ್ಯ ಯಾರು ಮಾಡಿಲ್ಲ | Pramod Shetty | Filmibeat kannada
  ಹಲವು ಸಿನಿಮಾಗಳಲ್ಲಿ ರಿಷಬ್ ಬ್ಯುಸಿ

  ಹಲವು ಸಿನಿಮಾಗಳಲ್ಲಿ ರಿಷಬ್ ಬ್ಯುಸಿ

  ರಿಷಬ್ ಶೆಟ್ಟಿ ಪ್ರಸ್ತುತ 'ಹರಿಕತೆ ಅಲ್ಲ ಗಿರಿ ಕತೆ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ನಟಿಸಿರುವ ಹೀರೋ ಸಿನಿಮಾ ಬಿಡುಗಡೆ ಆಗಬೇಕಿದೆ. 'ಗರುಡಗಮನ ವೃಷಭವಾಹನ ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬೆಲ್‌ಬಾಟಂ 2 ಸಿನಿಮಾ ಆರಂಭವಾಗಲಿದೆ. ಈ ನಡುವೆ ರುದ್ರಪ್ರಯಾಗ ಹಾಗೂ ಕಿರಿಕ್ ಪಾರ್ಟಿ 2 ಸಿನಿಮಾ ನಿರ್ದೇಶಿಸಲಿದ್ದಾರೆ ರಿಷಬ್.

  English summary
  Rishab Shetty said Jaggesh is one of the reason to him to join movie industry. Recently Jaggesh completed 40 years in Sandalwood

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X