twitter
    For Quick Alerts
    ALLOW NOTIFICATIONS  
    For Daily Alerts

    ₹400 ಕೋಟಿ ಕಲೆಕ್ಷನ್ ಮಾಡೇ ಬಿಡ್ತು ರಿಷಬ್ ಶೆಟ್ಟಿ 'ಕಾಂತಾರ': ಇದರಲ್ಲಿ ಕರ್ನಾಟಕದ ಪಾಲು ಎಷ್ಟು?

    |

    ರಿಷಬ್ ಶೆಟ್ಟಿ ಸಿನಿಮಾ ಪ್ರತಿದಿನ ಏನಾದರೂ ಒಂದು ಸುದ್ದು ಮಾಡುತ್ತಲೇ ಇದೆ. 'ಕಾಂತಾರ' ರಿಲೀಸ್ ಆಗಿ 50 ದಿನಗಳನ್ನು ಪೂರೈಸಿದರೂ ದಾಖಲೆಗಳನ್ನು ಸೃಷ್ಟಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಸದ್ಯ ಈ ಸಿನಿಮಾವೀಗ 400 ಕೋಟಿ ಕ್ಲಬ್ ಸೇರಿ ಹೊಸ ದಾಖಲೆಯನ್ನು ಬರೆದಿದೆ.

    ಸೆಪ್ಟೆಂಬರ್ 30 ರಂದು ವಿಶ್ವದಾದ್ಯಂತ ತೆರೆಕಂಡಿದ್ದ ಸಿನಿಮಾ ಮೊದಲ ದಿನದಿಂದಲೇ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿತ್ತು. ಮೊದಲು ವಿಶ್ವದಾದ್ಯಂತ ಕನ್ನಡದಲ್ಲಿಯೇ ಸಿನಿಮಾ ಬಿಡುಗಡೆ ಮಾಡಲಾಗಿತ್ತು. ಆದರೆ, ಬೇರೆ ಬೇರೆಯಲ್ಲಿ ಡಬ್ ಮಾಡಿ ರಿಲೀಸ್ ಮಾಡುವಂತೆ ಬೇಡಿಕೆ ಬಂದಿದ್ದರಿಂದ ಮತ್ತೆ ನಾಲ್ಕು ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗಿತ್ತು.

    ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ದೃಶ್ಯಂ 2' ಆರ್ಭಟ: 'ಕಾಂತಾರ' ಕಲೆಕ್ಷನ್ ಲೆಕ್ಕಾಚಾರವೇನು?ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 'ದೃಶ್ಯಂ 2' ಆರ್ಭಟ: 'ಕಾಂತಾರ' ಕಲೆಕ್ಷನ್ ಲೆಕ್ಕಾಚಾರವೇನು?

    ಕೇವಲ ಮೌತ್ ಪಬ್ಲಿಸಿಟಿಯಿಂದ ಸಿನಿಮಾವೊಂದು ಈ ಮಟ್ಟಿಗೆ ಸದ್ದು ಮಾಡಬಹುದು ಅನ್ನೋದನ್ನು 'ಕಾಂತಾರ' ತೋರಿಸಿಕೊಟ್ಟಿತ್ತು. ಮೊದಲ ದಿನದಿಂದ ಶುರುವಾಗಿದ್ದ 'ಕಾಂತಾರ' ಆರ್ಭಟ ಇನ್ನೂ ಮುಂದುವರೆಯುತ್ತಲೇ ಇದೆ. ಬಾಕ್ಸಾಫೀಸ್‌ನಲ್ಲಿ ಹೊಸ ಸಿನಿಮಾಗಳೊಂದಿಗೆ ಗುದ್ದಾಡುತ್ತಲೇ ಇದೆ. ಅಷ್ಟಕ್ಕೂ 'ಕಾಂತಾರ' ಎಲ್ಲೆಲ್ಲಿ? ಎಷ್ಟೆಷ್ಟು? ಕಲೆಕ್ಷನ್ ಮಾಡಿದೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

    'ಕಾಂತಾರ' ಕಲೆಕ್ಷನ್ ₹400 ಕೋಟಿ

    'ಕಾಂತಾರ' ಕಲೆಕ್ಷನ್ ₹400 ಕೋಟಿ

    ಕರ್ನಾಟಕದಲ್ಲಿ 'ಕಾಂತಾರ' ಭರ್ಜರಿಯಾಗಿ ಸದ್ದು ಮಾಡುತ್ತಿದ್ದಂತೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಕರ್ನಾಟಕದಲ್ಲಿ ಥಿಯೇಟರ್‌ಗಳು ತುಂಬಿ ತುಳುಕುತ್ತಿದ್ದಂತೆ ಇನ್ನೊಂದು ಕಡೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ಬಾಕ್ಸಾಫೀಸ್ ಲೂಟಿ ಮಾಡುವುದಕ್ಕೆ ಶುರು ಮಾಡಿತ್ತು. ಇನ್ನೇನು 50 ದಿನಗಳನ್ನು ಮುಗಿಸಿ ಮುನ್ನುಗ್ಗುತ್ತಿರುವ ಬೆನ್ನಲ್ಲೇ 'ಕಾಂತಾರ' ವಿಶ್ವದಾದ್ಯಂತ ₹400 ಕೋಟಿ ಕಲೆಕ್ಷನ್ ಮಾಡಿದೆ ಎಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ.

    ₹400 ಕೋಟಿಯಲ್ಲಿ ಕರ್ನಾಟಕದ ಪಾಲು ಎಷ್ಟು?

    ₹400 ಕೋಟಿಯಲ್ಲಿ ಕರ್ನಾಟಕದ ಪಾಲು ಎಷ್ಟು?

    ರಿಷಬ್ ಶೆಟ್ಟಿ ಈ ಹಿಂದಿನ ಸಿನಿಮಾಗಳು ಈ ಮಟ್ಟಿಗೆ ಸದ್ದು ಮಾಡಿರಲಿಲ್ಲ. 'ಕಾಂತಾರ' ರಿಷಬ್ ಸಿನಿಮಾ ಅಷ್ಟೇ ಅಲ್ಲ ಕನ್ನಡ ಎಲ್ಲಾ ಸಿನಿಮಾಗಳ ದಾಖಲೆಯನ್ನೂ ಉಡೀಸ್ ಮಾಡಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸೌಂಡ್ ಮಾಡ್ತಿರೋ 'ಕಾಂತಾರ' ವಿಶ್ವದಾದ್ಯಂತ 400 ಕೋಟಿ ರೂ. ಕಲೆಕ್ಷನ್ ಮಾಡಿದ್ದರೂ, ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ. ಇದೂವರೆಗೂ ರಿಷಬ್ ಸಿನಿಮಾ ಸುಮಾರು 168.50 ಕೋಟಿ ರೂ. ಗಳಿಕೆ ಮಾಡಿದೆ ಎಂದು ವರದಿಯಾಗಿದೆ. ಇದು ಸ್ಯಾಂಡಲ್‌ವುಡ್ ಇತಿಹಾಸದಲ್ಲಿಯೇ ಹೆಚ್ಚು ಎಂದು ಹೇಳಲಾಗುತ್ತಿದೆ.

    4 ಭಾಷೆಗಳಲ್ಲಿ 'ಕಾಂತಾರ' ಗಳಿಕೆ ಎಷ್ಟು?

    4 ಭಾಷೆಗಳಲ್ಲಿ 'ಕಾಂತಾರ' ಗಳಿಕೆ ಎಷ್ಟು?

    ಕರ್ನಾಟಕ ಬಿಟ್ಟರೆ, ಹಿಂದಿ ಬೆಲ್ಟ್‌ನಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ. ಇದೂವರೆಗೂ 'ಕಾಂತಾರ' ಹಿಂದಿ ವರ್ಷನ್ ಸುಮಾರು 80 ಕೋಟಿ ರೂ. ಕಲೆ ಹಾಕಿದೆ ಎನ್ನಲಾಗಿದೆ. ಇದರೊಂದಿಗೆ ಆಂಧ್ರ ಹಾಗೂ ತೆಲಂಗಾಣದಲ್ಲಿ 60 ಕೋಟಿ ರೂ. ತಮಿಳುನಾಡಿನಲ್ಲಿ 12.70 ಕೋಟಿ ರೂ. ಕೇರಳದಲ್ಲಿ 19.20 ಕೋಟಿ ರೂ. ಹಾಗೇ ವಿದೇಶದಲ್ಲಿ ಸುಮಾರು 44.50 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಇವೆಲ್ಲವನ್ನೂ ಸೇರಿಸಿ ಸುಮಾರು 400 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ.

    'ಕೆಜಿಎಫ್ 2' ದಾಖಲೆ ಹಿಂದಿಕ್ಕಿತಾ 'ಕಾಂತಾರ'

    'ಕೆಜಿಎಫ್ 2' ದಾಖಲೆ ಹಿಂದಿಕ್ಕಿತಾ 'ಕಾಂತಾರ'

    ಕನ್ನಡದ ಮೆಗಾ ಬ್ಲಾಕ್‌ಬಸ್ಟರ್ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಈ ವರ್ಷ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದ ಸಿನಿಮಾ. 2022ರಲ್ಲಿ 'ಕೆಜಿಎಫ್ 2' ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿದೆ. 'ಕೆಜಿಎಫ್ 2' ಕರ್ನಾಟಕಕ್ಕಿಂತ ಬಾಲಿವುಡ್‌ನಲ್ಲಿ ಹೆಚ್ಚು ಕಲೆಕ್ಷನ್ ಮಾಡಿತ್ತು. ಸದ್ಯ ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, 'ಕಾಂತಾರ' ಕರ್ನಾಟಕದಲ್ಲಿ 'ಕೆಜಿಎಫ್ 2' ಸಿನಿಮಾವನ್ನು ಹಿಂದಿಕ್ಕಿದೆ ಎಂದು ಹೇಳುತ್ತಿದ್ದಾರೆ. ಆದರೆ, ಅಧಿಕೃತವಾಗಿ ಎರಡೂ ಸಿನಿಮಾಗಳ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಇನ್ನೂ ಈ ಬಗ್ಗೆ ಮಾಹಿತಿಯನ್ನು ರವಾನೆ ಮಾಡಿಲ್ಲ.

    English summary
    Rishab Shetty Sapathami Gowda Movie Kantara Enters 400Cr Club Worldwide Box Office, Know More.
    Tuesday, November 22, 2022, 14:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X