For Quick Alerts
  ALLOW NOTIFICATIONS  
  For Daily Alerts

  'ಬಾಂಡ್ ರವಿ' ಹೀರೊ ರಿಷಬ್ ಶೆಟ್ಟಿಯ ಫೇವರಿಟ್: ಪ್ರಮೋದ್‌ಗೆ 'ಕಾಂತಾರ' ಹೀರೊ ಹೇಳಿದ್ದೇನು?

  |

  'ಕಾಂತಾರ' ಸಿನಿಮಾ ಬಳಿಕ ರಿಷಬ್ ಶೆಟ್ಟಿ ಇಡೀ ಭಾರತದ ಫೇವರೀಟ್ ಹೀರೊ ಆಗಿಸ ಹೊರಹೊಮ್ಮಿದ್ದಾರೆ. ಅದೇ ರಿಷಬ್ ಶೆಟ್ಟಿಗೆ 'ಬಾಂಡ್ ರವಿ' ಸಿನಿಮಾದ ಹೀರೊ ಅಚ್ಚು ಮೆಚ್ಚು. ಈ ಮಾತನ್ನು ಸ್ವತ: ರಿಷಬ್ ಶೆಟ್ಟಿನೇ ಹೇಳಿಕೊಂಡಿದ್ದಾರೆ.

  ನಾಳೆ (ಡಿಸೆಂಬರ್ 9) 'ಬಾಂಡ್ ರವಿ' ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಈಗಾಗಲೇ 'ರತ್ನನ್ ಪ್ರಪಂಚ' ಸಿನಿಮಾದಲ್ಲಿ ಗಮನ ಸೆಳೆದಿದ್ದ ನಟ ಮತ್ತೆ ಸೋಲೊ ಹೀರೊ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಬಾಂಡ್ ರವಿ' ಈಗಾಗಲೇ ಕುತೂಹಲ ಕೆರಳಿಸಿದ್ದು, ಪ್ರೇಕ್ಷಕರ ಮನಗೆಲ್ಲುತ್ತಾ ಅನ್ನೋ ಕುತೂಹಲವಿದೆ.


  'ಬಾಂಡ್ ರವಿ'ಗೆ 'ಕಾಂತಾರ' ಸಿನಿಮಾ ಮೂಲಕ ದೇಶಾದ್ಯಂತ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ ಸಾಥ್ ನೀಡಿದ್ದಾರೆ. 'ಬಾಂಡ್ ರವಿ'ಗೆ ವಿಶ್ ಮಾಡಿ, ಸಿನಿಮಾ ಗೆಲ್ಲಲಿ ಎಂದು ಹಾರೈಸಿದ್ದಾರೆ. ಅಷ್ಟಕ್ಕೂ ಯುವ ನಟ ಪ್ರಮೋದ್‌ ಬಗ್ಗೆ ರಿಷಬ್ ಶೆಟ್ಟಿ ಏನು ಹೇಳಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

  ರಿಷಬ್ ಶೆಟ್ಟಿ ಫೇವರಿಟ್ ಹೀರೊ ಪ್ರಮೋದ್

  ರಿಷಬ್ ಶೆಟ್ಟಿ ಫೇವರಿಟ್ ಹೀರೊ ಪ್ರಮೋದ್

  ಬಾಂಡ್ ರವಿ ತಂಡಕ್ಕೆ ರಿಷಬ್ ಶೆಟ್ಟಿ ಶುಭ ಹಾರೈಸಿದ್ದಾರೆ. ಇದೇ ವೇಳೆ ಸಿನಿಮಾದ ಹೀರೊ ಪ್ರಮೋದ್ ಬಗ್ಗೆನೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. " ಬಾಂಡ್ ರವಿ ನನ್ನ ಫೇವರಿಟ್ ಆಕ್ಟರ್ ಪ್ರಮೋದ್ ಅವರು ನಟಿಸಿರುವಂತಹ ಸಿನಿಮಾ. ಪ್ರಜ್ವಲ್ ಅವರ ಪ್ರಥಮ ಬಾರಿಗೆ ನಿರ್ದೇಶಿಸಿರುವ ಸಿನಿಮಾದೊಂದಿಗೆ ಬರುತ್ತಿದೆ. ಮನೋಮೂರ್ತಿ ಸರ್ ಮ್ಯೂಸಿಕ್ ಮಾಡಿದ್ದಾರೆ. ಟೀಸರ್ ನೋಡಿದೆ ನಾನು. ತುಂಬಾ ಚೆನ್ನಾಗಿ ಬಂದಿದೆ." ಎಂದು ರಿಷಬ್ ಶೆಟ್ಟಿ ಭರವಸೆಯ ಮಾತುಗಳನ್ನು ಆಡಿದ್ದಾರೆ.

  ಕಮರ್ಷಿಯಲ್ ಪ್ಯಾಕೇಜ್ ಸಿನಿಮಾ 'ಬಾಂಡ್ ರವಿ'

  ಕಮರ್ಷಿಯಲ್ ಪ್ಯಾಕೇಜ್ ಸಿನಿಮಾ 'ಬಾಂಡ್ ರವಿ'

  ರಿಷಬ್ ಶೆಟ್ಟಿ ಬಾಂಡ್ ರವಿ ಸಿನಿಮಾವನ್ನು ಮನಸಾರೆ ಹೊಗಳಿ ಶುಭ ಹಾರೈಸಿದ್ದಾರೆ. ಈ ಸಿನಿಮಾ ಟೀಸರ್ ನೋಡಿದ ಬಳಿಕ 'ಬಾಂಡ್ ರವಿ' ಇಷ್ಟ ಆಗಿದೆ. ಹೀಗಾಗಿ ಸಿನಿಮಾವನ್ನು ಮೆಚ್ಚಿಕೊಂಡಿದ್ದು, ಒಳ್ಳೆ ಸಿನಿಮಾ ಅಂತ ಅಭಿಪ್ರಾಯ ಪಟ್ಟಿದ್ದಾರೆ. "ಒಂದೊಳ್ಳೆ ಕಾನ್ಸೆಪ್ಟ್ ಜೊತೆಗೆ ಒಂದು ಕಮರ್ಷಿಯಲ್ ಪ್ಯಾಕೇಜ್ ಮಾಡಿ ಈ ಸಿನಿಮಾವನ್ನು ಹೇಳುವುದಕ್ಕೆ ಹೊರಟಿದ್ದಾರೆ. ಟೀಸರ್ ನೋಡಿದಾಗ ಪ್ರಮೋದ್ ಅವರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ಅನ್ನೋ ಫೀಲ್ ಬರುತ್ತಿದೆ. ಅವರೊಬ್ಬ ಅದ್ಭುತ ಕಲಾವಿದರೂ ಕೂಡ. ಹೆಚ್ಚೆಚ್ಚು ಜನರಿಗೆ ಸಿನಿಮಾವನ್ನು ತಲುಪಿಸಿ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

  ರಿಷಬ್ ಶೆಟ್ಟಿ ಫುಲ್ ಬ್ಯುಸಿ

  ರಿಷಬ್ ಶೆಟ್ಟಿ ಫುಲ್ ಬ್ಯುಸಿ

  ರಿಷಬ್ ಶೆಟ್ಟಿ 'ಕಾಂತಾರ' ಸಿನಿಮಾ ವಿಶ್ವದಾದ್ಯಂತ ಫೇಮಸ್ ಆಗಿದೆ. ಎಲ್ಲಾ ಭಾಷೆಯಲ್ಲೂ ಸಿನಿಮಾ ಗೆದ್ದಿದೆ. 16 ಕೋಟಿ ರೂ. ವೆಚ್ಚದ ಸಿನಿಮಾ 400 ಕೋಟಿ ರೂ. ಗಳಿಸಿದ್ದು ದೊಡ್ಡ ಸಾಧನೆ ಎಂದೇ ಟ್ರೇಡ್ ಎಕ್ಸ್‌ಪರ್ಟ್ಸ್ ಪ್ರಶಂಶಿಸಿದ್ದಾರೆ. ಹೀಗಾಗಿ ರಿಷಬ್ ಶೆಟ್ಟಿ ಈಗ ಬಾಕಿ ಉಳಿಸಿಕೊಂಡಿದ್ದ ಕೆಲಸಗಳನ್ನು ಮುಗಿಸುತ್ತಿದ್ದಾರೆ. ಬಳಿಕ 'ಕಾಂತಾರ 2' ಸಿನಿಮಾದ ಪ್ರೀ ಪ್ರೊಡಕ್ಷನ್‌ನಲ್ಲಿಸ ಬ್ಯುಸಿಯಾಗಲಿದ್ದಾರೆ ಎಂದು ಸ್ಯಾಂಡಲ್‌ವುಡ್‌ನಲ್ಲಿ ಟಾಕ್ ಆಗುತ್ತಿದೆ. ಸದ್ಯ ರಿಷಬ್ ಶೆಟ್ಟಿ 'ಬ್ಯಾಚುಲರ್ ಪಾರ್ಟಿ'ಯಿಂದ ಹೊರಬಂದಿದ್ದು ಇದೇ ಕಾರಣಕ್ಕೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಕೇಳಿದಾಗ, ರಿಷಬ್ ಕಾಲ ಬಂದಾಗಲೇ ಆಗುತ್ತೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ.

  ಹೊಂಬಾಳೆ ಜೊತೆ ಒಪ್ಪಂದ

  ಹೊಂಬಾಳೆ ಜೊತೆ ಒಪ್ಪಂದ

  ಗಾಂಧಿನಗರದಲ್ಲಿ ಹೊಸ ಸುದ್ದಿಯೊಂದು ಓಡಾಡುತ್ತಿದೆ. 'ಕಾಂತಾರ' ಯಶಸ್ಸಿನ ಬಳಿಕ ಹೊಂಬಾಳೆ ಫಿಲ್ಮ್ಸ್ ಜೊತೆನೇ ಸಿನಿಮಾ ಮಾಡುವುದಕ್ಕೆ ರಿಷಬ್ ಶೆಟ್ಟಿ ಸಜ್ಜಾಗಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿದೆ. ಹೊಂಬಾಳೆಗೆ ಕೆಲವು ಪ್ರಾಜೆಕ್ಟ್‌ಗಳನ್ನು ಮಾಡಿಕೊಡುವ ಬಗ್ಗೆನೂ ಮಾತುಕತೆ ನಡೆಯುತ್ತಿದೆ ಅನ್ನೋ ಮಾತಿದೆ. ಆದರೆ, ಇದ್ಯಾವುದರ ಬಗ್ಗೆನೂ ಅಧಿಕೃತ ಮಾಹಿತಿ ಇಲ್ಲ. ಹೊಂಬಾಳೆ ಫಿಲ್ಮ್ಸ್ ಅಥವಾ ರಿಷಬ್ ಶೆಟ್ಟಿ ಮುಂದಿನ ನಡೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಟ್ಟುಕೊಡುತ್ತಿಲ್ಲ.

  English summary
  Rishab Shetty Says Bond Ravi Starrer Pramod Is His Favorite Actor, Know More.
  Thursday, December 8, 2022, 23:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X